ಸಾಹಸ,ಕ್ರೀಡೆ, ಟ್ರೆಕ್ಕಿಂಗ್ ಗೆ ಮನಮೋಹಕ ತಾಣ ಹೊನ್ನೇಮರಡು!

ದೈನಂದಿನ ಜಂಜಾಟದಿಂದ ಹೊರಬಂದು ಒಂದೆರಡು ದಿನ  ಹಾಯಾಗಿ ಕಾಲ ಕಳೆಯಬೇಕು ಜೊತೆಗೆ ಒಂದಿಷ್ಟು ಮನಸೋಲ್ಲಾಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಅಂದುಕೊಳ್ಳುವವರಿಗೆ ಶಿವಮೊಗ್ಗ ಜಿಲ್ಲೆಯ ಹೊನ್ನೇಮರಡು ಸುಂದರ ವಾರಾಂತ್ಯದ ರಜೆಯ ತಾಣವಾಗಿದೆ.

Honneramadu1

ಶಿವಮೊಗ್ಗ: ದೈನಂದಿನ ಜಂಜಾಟದಿಂದ ಹೊರಬಂದು ಒಂದೆರಡು ದಿನ ಹಾಯಾಗಿ ಕಾಲ ಕಳೆಯಬೇಕು ಜೊತೆಗೆ ಒಂದಿಷ್ಟು ಮನಸೋಲ್ಲಾಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಅಂದುಕೊಳ್ಳುವವರಿಗೆ ಜಿಲ್ಲೆಯ ಹೊನ್ನೇಮರಡು ವಾರಾಂತ್ಯದ ರಜೆಯ ತಾಣವಾಗಿದೆ.

ಇಲ್ಲಿ ನೀವು ತಂಪಾದ ಕೊಳದಲ್ಲಿ ಈಜಾಡಬಹುದು ಅಥವಾ ದೋಣಿಯಲ್ಲಿ ಸಂಚರಿಸಬಹುದು ಅಥವಾ ನಿಸರ್ಗದ ಸೌಂದರ್ಯ ಸವಿಯುತ್ತ ಚಾರಣ ಮಾಡಬಹುದು. ಸಾಗರದಿಂದ 22 ಕಿಲೋ ಮೀಟರ್ ದೂರದಲ್ಲಿರುವ ಹೊನ್ನೇಮರಡು, ಶರಾವತಿ ಹಿನ್ನೀರಿನ ಪ್ರದೇಶವಾಗಿದೆ. ಸಾಹಸಮಯ ಕ್ರೀಡೆಗೂ ಇದು ಅತ್ಯುತ್ತಮ ಸ್ಥಳವಾಗಿದೆ. 

ಹೊನ್ನೇಮರಡುವಿನ ಅಡ್ವೆಂಚರ್ ಗಳು ಕಾಲೇಜ್ ವಿದ್ಯಾರ್ಥಿಗಳು ಮತ್ತು ಕಾರ್ಪೋರೇಟ್ ಎಕ್ಸಿಕ್ಯೂಟಿವ್ ಗಳಿಗೆ ತರಬೇತಿ ಅಲ್ಲದೇ, ವಿಶೇಷ ಚೇತನ ಮಕ್ಕಳಿಗೆ ಸೇವಾ ಆಧಾರಿತ ಕ್ಯಾಂಪ್ ಗಳನ್ನು ನಡೆಸಲಾಗುತ್ತದೆ. ಇಲ್ಲಿಗೆ ಭೇಟಿ ನೀಡುವ ವಿದ್ಯಾರ್ಥಿಗಳು, ಪ್ರವಾಸಿಗರು ಜಲಕ್ರೀಡೆಗಳು, ಟ್ರೆಕ್ಕಿಂಗ್ ಮತ್ತಿತರ ಸಾಹಸ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಆನಂದಪಡುತ್ತಾರೆ. 

ಹೊನ್ನೇಮರಡುವಿನ ಕೈಗೊಳ್ಳಬಹುದಾದ ಚಟುವಟಿಕೆಗಳು:

ಫೈರ್ ಕ್ಯಾಂಪಿಂಗ್: ಇಲ್ಲಿ ಫೈರ್ ಕ್ಯಾಂಪಿಂಗ್ ಗೆ ಅವಕಾಶ ನೀಡಲಾಗುತ್ತದೆ. ನಿಸರ್ಗಕ್ಕೆ ತೊಂದರೆಯಾಗದ ರೀತಿಯಲ್ಲಿ ಫೈರ್ ಕ್ಯಾಂಪ್ ಮಾಡಲಾಗುತ್ತದೆ. ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ಇದರ ಕೌಶಲ್ಯದ ಬಗ್ಗೆ ತಿಳಿಸಿಕೊಡಲಾಗುತ್ತದೆ. 

ಸ್ವಿಮ್ಮಿಂಗ್:  ಶರಾವತಿ ಹಿನ್ನೀರಿನಲ್ಲಿ ಈಜಾಡಬಹುದು. ಇಲ್ಲಿ 60 ರಿಂದ 140 ಅಡಿ ಅಳದವರೆಗೂ ನೀರು ಇರುತ್ತದೆ. ಲೈಫ್ ಜಾಕೆಟ್ ಕಡ್ಡಾಯವಾಗಿದೆ.

ಕೋರಾಕ್ಲಿಂಗ್: ಇದು ಸ್ಥಳಿಯ ಸಾಂಪ್ರದಾಯಿಕ ತೆಪ್ಪಾದ ರೀತಿಯ ದೋಣಿಯಾಗಿದೆ. 4 ರಿಂದ 6 ಜನರು ಇದರಲ್ಲಿ ತೆರಳಿ ಎಂಜಾಯ್ ಮಾಡಬಹುದು.

ಕ್ಯಾನೋಯಿಂಗ್: ಉದ್ದನೆಯ ಬೋಟ್ ನಲ್ಲಿ ಇಬ್ಬರಿಗೆ ಅವಕಾಶ ನೀಡಲಾಗುತ್ತದೆ. ಮುಂಭಾಗ ಕುಳಿತವರು ರೋಯಿಂಗ್ ಮಾಡಿದರೆ ವೇಗ ಹೆಚ್ಚಾಗುತ್ತದೆ.

ಕಾಯಕಿಂಗ್: ಒಬ್ಬನೇ ವ್ಯಕ್ತಿ  ದೋಣಿಯನ್ನು ಚಲಿಸುತ್ತಾ ನೀರಿನಲ್ಲಿ ಸಂತೋಪಡಬಹುದು ಆದರೆ, ಗಮನ, ತಾಂತ್ರಿಕ ಕೌಶಲ್ಯ ಅಗತ್ಯವಿದೆ. 

ಟ್ರೆಕ್ಕಿಂಗ್: ಬೆಟ್ಟ ಪ್ರದೇಶ ಹತ್ತಿರದಲ್ಲಿರುವುದರಿಂದ ಚಾರಣದ ಮಜಾ ಅನುಭವಿಸಬಹುದು.

ಹೊನ್ನೇಮರಡುವಿನಲ್ಲಿ ಏನನ್ನು ಮಾಡಬಹುದು, ಮಾಡಬಾರದು

ಧೂಮಪಾನ, ಮದ್ಯಪಾನ, ಮಾಂಸಾಹಾರಿ ಆಹಾರ, ಎಲೆಕ್ಟ್ರಾನಿಕ್ ಮ್ಯೂಸಿಕ್ ಬಳಸಬಾರದು, ನಿಮ್ಮ ತ್ಯಾಜ್ಯಕ್ಕೆ ನೀವೆ ಹೊಣೆ. ಆದಾಗ್ಯೂ, ನಿಮ್ಮ ಕುಟುಂಬದವರೊಂದಿಗೆ ಮಾತನಾಡಲು ಮೊಬೈಲ್ ಬಳಸಬಹುದು. ಆದರೆ, ಸಂಗೀತ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ನಿಮ್ಮ ಸ್ವಂತ ತಟ್ಟೆ, ಸ್ಫೂನ್ ಮತ್ತು ಮಗ್ಗುಗಳನ್ನು ತರಬೇಕು. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *