ಇಂದಿನ ಮಹತ್ವದ ಸುದ್ದಿಗಳು- important news of the day! ಸರ್ಕಾರಿ ನೌಕರರು ಓದಲೇಬೇಕಾದ ವಿಶೇಶ ಸುದ್ದಿ

ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸರ್ಕಾರಿ ನೌಕರರ ಒಂದು ತಿಂಗಳ ವೇತನವನ್ನು ಕೋವಿಡ್ ಸಾಂಕ್ರಾಮಿಕ ನಿರ್ವಹಣೆಗೆ ಬಳಸಿಕೊಳ್ಳುವ ಮಹತ್ವದ ತೀರ್ಮಾನಕ್ಕೆ ರಾಜ್ಯ ಸರ್ಕಾರ ಬಂದಿದ್ದು ಸಚಿವರು, ಶಾಸಕರು, ವಿ.ಪ.ಸದಸ್ಯರು ಸೇರಿದಂತೆ ಸರ್ಕಾರದ ಲಾಭದಾಯಕ ಹುದ್ದೆಯಲ್ಲಿರುವ ಎಲ್ಲರೂ ತಮ್ಮ ಒಂದು ತಿಂಗಳ ವೇತನ ಬಿಟ್ಟುಕೊಡಲು ಸರ್ಕಾರ ಮನವಿ ಮಾಡಿಕೊಂಡಿದೆ ಎನ್ನಲಾಗಿದೆ.

ಇಂದು ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಮಾಡಿದ್ದು ಇದರೊಂದಿಗೆ ನಾಳೆ ಏ.27 ರಿಂದ ಮೇ.10 ನೇ ತಾರೀಖಿನ ವರೆಗೆ ಜನತಾಕರ್ಫ್ಯೂ ಘೋಶಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎನ್ನಲಾಗಿದೆ.

ದಾರುಣ ಘಟನೆ: ಕೋವಿಡ್ ಸೋಂಕಿತ ಪತ್ನಿಯ ಕತ್ತು ಸೀಳಿದ ರೈಲ್ವೆ ಉದ್ಯೋಗಿ, ನಂತರ ತಾನೂ ಆತ್ಮಹತ್ಯೆಗೆ ಶರಣು!

ಪೂರ್ವ ಸೆಂಟ್ರಲ್ ರೈಲ್ವೆ(ಇಸಿಆರ್) ಉದ್ಯೋಗಿಯೊಬ್ಬರು ತಮ್ಮ ಕೋವಿಡ್ ಸೋಂಕಿತ ಹೆಂಡತಿಯನ್ನು ಕೊಂದು ನಂತರ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಾಟ್ನಾದಲ್ಲಿ ವರದಿಯಾಗಿದೆ.

For representational purposes

ಪಾಟ್ನಾ: ಪೂರ್ವ ಸೆಂಟ್ರಲ್ ರೈಲ್ವೆ(ಇಸಿಆರ್) ಉದ್ಯೋಗಿಯೊಬ್ಬರು ತಮ್ಮ ಕೋವಿಡ್ ಸೋಂಕಿತ ಹೆಂಡತಿಯನ್ನು ಕೊಂದು ನಂತರ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಾಟ್ನಾದಲ್ಲಿ ವರದಿಯಾಗಿದೆ. 

ಉದ್ಯೋಗಿ ಅತುಲ್ ಲಾಲ್, ಮೊದಲು ತಮ್ಮ ಪತ್ನಿ ತುಲಿಕಾ ಕುಮಾರಿಯವರ ಕತ್ತು ಸೀಳಿ ನಂತರ ಮನೆಯ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದು ಈ ಹೃದಯ ಕದಡುವ ಘಟನೆ ಚಿತ್ರಗುಪ್ತನಗರದಲ್ಲಿ ನಡೆದಿದೆ.

ಕೆಲ ಕುಟುಂಬ ಸಮಸ್ಯೆಗಳ ಬಗ್ಗೆ ಗಂಡ ಮತ್ತು ಹೆಂಡತಿ ಜಗಳವಾಡಿದ್ದರು. ಮಹಿಳೆಗೆ ಕೋವಿಡ್ ಸೋಂಕು ತಗುಲಿರುವುದರಿಂದ ತಮಗೂ ಬರಬಹುದು ಎಂಬ ಆತಂಕದಿಂದ ನೆರೆಹೊರೆಯವರು ಸಮಾಧಾನಪಡಿಸಲು ಪ್ರಯತ್ನಿಸಲಿಲ್ಲ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

ಜಗಳದಿಂದ ಕೋಪಗೊಂಡಿದ್ದ ಅತುಲ್ ಲಾಲ್ ತನ್ನ ಹೆಂಡತಿಯ ಗಂಟಲನ್ನು ಬ್ಲೇಡ್‌ನಿಂದ ಸೀಳಿದ್ದಾನೆ. ಇದನ್ನು ಕಂಡ ಸುಮಾರು 6 ಮತ್ತು 9 ವರ್ಷ ವಯಸ್ಸಿನ ಮಕ್ಕಳು ಕೂಗಾಡಿದ್ದು ಇದರಿಂದ ಹೆದರಿದ ಅತುಲ್ ಲಾಲ್ ಐದನೇ ಮಹಡಿಯಿಂದ ಹಾರಿ  ಸಾವನ್ನಪ್ಪಿದರು. ದಂಪತಿಗಳು ಅರಾ ಜಿಲ್ಲೆಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *