ಪೊಲೀಸರಿಗೆ ತಲೆನೋವಾಗುತ್ತಿರುವ ಪ್ರವಾಸಿಗರಿಗೆ ನಿಯಂತ್ರಿಸಲು ಸಕಲ ವ್ಯವಸ್ಥೆ

ಉರಿಯುವ ಬಿರಿ ಬೇಸಿಗೆ ಮನೆಯಿಂದ ಹೊರಬರದ ಲಾಕ್ಡೌನ್ ನಿಯಮ ಇವುಗಳಿಂದ ಮನೆಯಲ್ಲೇ ಲಾಕ್ ಆಗಿದ್ದ ಜನರಿಗೆ ಈಗ ಪ್ರವಾಸದ ಖಯ್ಯಾಲಿ ಗರಿಗೆದರಿದೆ.ಇದರಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಬರುವವರ ಸಂಖ್ಯೆ ಹೆಚ್ಚಿದೆ. ಪ್ರವಾಸಿ ಸ್ಥಳಗಳಿಗೆ ಬರುವ ಜನರು ಮೋಜುಮಜಾ ಜೊತೆಗೆ ಮಸ್ತಿ ಮಾಡುತ್ತಾ ವಾಹನ ಸವಾರರು, ಸ್ಥಳಿಯರಿಗೆ ತೊಂದರೆ ಮಾಡುತ್ತಿರುವ ಬಗ್ಗೆ ದೂರುಗಳೂ ಬರುತ್ತಿವೆ.

ಸಮೀಪದ ಜೋಗ, ನೈಸರ್ಗಿಕ ಕಲ್ಲಿನ ಸಂಕ, ಜೊತೆಗೆ ಹುಸೂರು ಜಲಪಾತಕ್ಕೆ ಬರುವ ಹೊರಜಿಲ್ಲೆಗಳ ಜನ  ಈಗ ಉತ್ತರ ಕನ್ನಡ ಜಿಲ್ಲೆಗೆ ಇಲ್ಲಿಯ ಪೋಲೀಸ್ ವ್ಯವಸ್ಥೆಗೆ ಕಂಟಕರಾಗಿದ್ದಾರೆ.
ಇದೇ ತಿಂಗಳ ಮೊದಲ ವಾರದಲ್ಲಿ ಹುಸೂರು ಜಲಪಾತದ ಬಳಿ ಅನುಚಿತವಾಗಿ ನಡೆದುಕೊಂಡ ಪ್ರವಾಸಿಗರಿಗೆ ಪೋಲೀಸರು ಏಟುಕೊಟ್ಟ ನಂತರ   ಈಗ ರವಿವಾರ ದಿನ ಜೋಗ ಸಾಗರ ರಸ್ತೆಯಲ್ಲಿ ಶಿವಮೊಗ್ಗದ ಯುವಕರ ತಂಡವೊಂದು ಅನುಚಿತವಾಗಿ ನಡೆದುಕೊಂಡು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. (ಶಿವಮೊಗ್ಗ ನೋಂದಣಿಯ ಕೆಂಪು ಡಿಜಾಯರ್ ವಾಹನದಲ್ಲಿ ಬಂದಿದ್ದ ಖಾಸಗಿ ಕಂಪನಿಯ 5 ಜನ ಉದ್ಯೋಗಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತಿದ್ದಾರೆ.)

ಕಂಪನಿ.ಕಾಲೇಜಿನ ಸ್ನೇಹಿತರೆಂದು ಬರುವ ಪ್ರವಾಸಿಗಳು ಮಾಡುವ ಪುಂಡಾಟಕ್ಕೆ ಬ್ರೇಕ್ ಹಾಕಲು ಉತ್ತರ ಕನ್ನಡ ಪೊಲೀಸ್ ವ್ಯವಸ್ಥೆ ಪ್ರಯತ್ನಿಸುತ್ತಿದೆ. ಇದರ  ಅಂಗವಾಗಿ ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗಗಳ ಗಡಿಭಾಗದ ಮನ್ಮನೆಯಲ್ಲಿ ತಪಾಸಣಾಚೌಕ ನಿರ್ಮಿಸಿರುವ ಪೊಲೀಸ್ ಇಲಾಖೆ ಮಳೆಯಲ್ಲಿ ಕುಡಿದು, ಕುಣಿದು ಸ್ಥಳಿಯರಿಗೆ ತೊಂದರೆಕೊಡುವ ಪ್ರವಾಸಿಗರ ಮೇಲೆ ಕಣ್ಣಿಟ್ಟಿದೆ.


ಕರೋನಾ ಲಾಕ್ಡೌನ್ ಅವಧಿಯಲ್ಲಿ ಲಾಕ್ ಆಗಿದ್ದ ಜನರು  ಈಗ  ಅನ್ ಲಾಕ್ ಲಾಭ ಪಡೆದು ಪ್ರವಾಸಕ್ಕೆ ಬರುವುದು ಹೆಚ್ಚಿದೆ. ಈ ಕಾರಣದಿಂದಾಗಿ ದಿನವಿಡೀ ಓಡಾಡುವ ವಾಹನಗಳಿಂದಲೂ ಸ್ಥಳಿಯರಿಗೆ ತೊಂದರೆ ಆಗಿದೆ. ಈ ತೊಂದರೆ ಬಗೆಹರಿಸಲು ಪ್ರಯತ್ನಿಸುತ್ತಿರುವ ಪೊಲೀಸರು 112,ಪೊಲೀಸ್ ತಪಾಸಣಾ ನಾಕೆಗಳ ಮೂಲಕ ಪ್ರಯತ್ನಿಸುತಿದ್ದಾರೆ. ಅನುಚಿತವಾಗಿ ವರ್ತಿಸಿ ಪೊಲೀಸ್ ಇಲಾಖೆಯಿಂದ  ತೊಂದರೆಗೆ ಒಳಗಾಗುವುದಕ್ಕಿಂತ ಶಿಸ್ತಿನಿಂದ ಪ್ರವಾಸ ಮಾಡಿ ಸುರಕ್ಷಿತವಾಗಿ ಮರಳಲು ಈ ವರದಿ ಸಹಾಯಕವಾಗಲಿ ಎನ್ನುವುದು ನಮ್ಮ ಮುನ್ನೆಚ್ಚರಿಕೆಯ ಸಂದೇಶ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *