

ನೀರಜ್ ಚೋಪ್ರಾರ ಸಾಧನೆ ಭಾರತದ ಟ್ರಾಕ್ ಅಂಡ್ ಫೀಲ್ಡ್ ವಿಭಾಗದಲ್ಲಿ ಹೊಸ ಮಿಂಚು ಮೂಡಿಸಲಿದೆ. ನಾವು ಇಂದು ಪಡುತ್ತಿರುವ ಹರ್ಷದ ಹಿಂದೆ ನಮ್ಮ ಶಿರಸಿ ಬೆಂಗಳೆಯ ಕಾಶಿನಾಥ ನಾಯ್ಕರ ಪಾಲೂ ಇದೆ. 2010 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಆ ಮೂಲಕ ಭರ್ಚಿ ಎಸೆತದಲ್ಲಿ ದೇಶಕ್ಕೆ ಪ್ರಥಮ ಪದಕ ಗಳಿಸಿಕೊಟ್ಟ ಕಾಶಿ ನೀರಜರನ್ನು ಆರಂಭದಲ್ಲೇ ಗುರುತಿಸಿ ತರಬೇತಿ ನೀಡಿದ್ದಾರೆ. ಇವರಿಬ್ಬರ ಕಠಿಣ ಪರಿಶ್ರಮದ ಫಲ ಇಂದು ನಮ್ಮ ಮುಂದಿದೆ. ಕಂಗ್ರಾಟ್ಸ ನೀರಜ , ಕಂಗ್ರಾಟ್ಸ ಕಾಶಿ ,ಕಂಗ್ರಾಟ್ಸ ಇಂಡಿಯಾ -ಸುನಿಲ್ ಬಾರ್ಕೂರ್



ಒಲಿಂಪಿಕ್ಸ್ನಲ್ಲಿ ಭಾರತದ 120 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಶತಮಾನದ ಬಳಿಕ #ಒಲಿಂಪಿಕ್ಸ್ನಲ್ಲಿ ಭಾರತಕ್ಕೆ #ಚಿನ್ನದ ಪದಕ ದಕ್ಕಿದೆ. #ಜಾವಲಿನ್ ಥ್ರೋ ನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ನೀರಜ್ ಚೋಪ್ರಾಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆಯ ಕಾಶೀನಾಥ್ ನಾಯ್ಕ ತರಬೇತಿ ನೀಡಿದ್ದರು. ಇಬ್ಬರಿಗೂ ಅಭಿನಂದನೆಗಳು. -ಹರೀಶ್ ಕುಮಾರ್

ಚರಿತ್ರೆ ನಿರ್ಮಾಣವಾಗಿದೆ!ಪ್ರತಿಯೊಬ್ಬ ಭಾರತೀಯರಿಗೂ ಅಭಿನಂದನೆಗಳು!
ಅಥ್ಲೆಟಿಕ್ ಪಂದ್ಯವೊಂದರಲ್ಲಿ (ಜಾವೆಲಿನ್ ಎಸೆತ) ಭಾರತೀಯರಿಗೆ ಮೊತ್ತಮೊದಲ ಬಾರಿಗೆ ಒಲಿಂಪಿಕ್ ಚಿನ್ನದ ಪದಕ!ಅಭಿನವ್ ಭಿಂದ್ರಾ ಬಳಿಕ ವೈಯಕ್ತಿಕ ಸ್ಪರ್ಧೆಯೊಂದರಲ್ಲಿ ಎರಡನೇ ಬಾರಿಗೆ ಒಲಿಂಪಿಕ್ ಚಿನ್ನದ ಪದಕ ಪಡೆದ ನೀರಜ್ ಚೋಪ್ರಾ. -ರಾಜಾರಾಮ್ ತಲ್ಲೂರು
ಮೋದಿ ಯಾವಾಗ ಕ್ರಿಕೆಟ್ ಆಡಿದ್ದರು.? ಭಾರತದ ಮಾಜಿ ಪ್ರಧಾನಿಗಳಾದ ಶ್ರೀ ರಾಜೀವ್ ಗಾಂಧಿ ಅವರ ಹೆಸರಿನಲ್ಲಿ ನೀಡಲಾಗುತ್ತಿದ್ದ ಖೇಲ್ ರತ್ನ ಪ್ರಶಸ್ತಿ ಅನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನಾ ಪ್ರಶಸ್ತಿ ಎಂದು ಮರು ನಾಮಕರಣ ಮಾಡಲಾಗಿದ್ದು ಈ ಬದಲಾವಣೆಯನ್ನು ನಾನು ಸ್ವಾಗತಿಸುತ್ತೇನೆ.ಆದರೆ ಗುಜರಾತ್ ನ ಮೊಟೇರಾ ಕ್ರಿಕೆಟ್ ಸ್ಟೇಡಿಯಂ ಅನ್ನು ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಅಂತ ಬದಲಾಯಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರೇನು ಕ್ರಿಕೆಟ್ ಆಟಗಾರರೇ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ.ಇನ್ನು ಹೆಸರು ಬದಲಾವಣೆ ಮಾಡುವುದೇ ಜೀವನದ ಏಕೈಕ ಸಾಧನೆ ಎಂದುಕೊಂಡಿರುವ ಪ್ರಧಾನಿ ಮೋದಿಯವರು ಇಂತಹ ಹುಸಿ ಪ್ರಚಾರ ತಂತ್ರಗಳನ್ನು ಬದಿಗೊತ್ತಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಆಹಾರ ಸಾಮಾಗ್ರಿಗಳ ಬೆಲೆಯನ್ನು ತಗ್ಗಿಸಿ ತಮ್ಮ ದೇಶಭಕ್ತಿಯನ್ನು ಸಾಬೀತುಪಡಿಸಲಿ ಎಂದು ಈ ಮೂಲಕ ಆಗ್ರಹಿಸುತ್ತೇನೆ! -ಡಾ.ಎಚ್.ಸಿ.ಮಹಾದೇವಪ್ಪ
ಸಂತಾಪ- ಇಂದು ಅಂಕೋಲಾ ಸಮೀಪ ರಸ್ತೆ ಅಪಘಾತದಲ್ಲಿ ಮೃತರಾದ ಸಿದ್ದಾಪುರ ತಾಲೂಕಿನ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ(AEE) ಕಾರ್ಯನಿರ್ವಹಿಸುತ್ತಿರುವ ಶ್ರೀ ಎಮ್. ಹೆಚ್. ಮುದಕಣ್ಣನವರ ಸರ್ ರವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥನೆ. ಒಂ ಶಾಂತಿ
ಅತ್ಯಂತ ಕ್ರಿಯಾಶೀಲ, ದಕ್ಷ, ಬಡವರ ಬಂಧು ಹಾಗೂ ನನ್ನ ಬಹು ಕಾಲದ ಗೆಳೆಯ ಶ್ರೀ ಶಿವರಾಮ ಹೆಬ್ಬಾರ ಅವರು ಎರಡನೇ ಬಾರಿಗೆ ಕರ್ನಾಟಕ ರಾಜ್ಯದ ಸಚಿವರಾಗಿ ಆಯ್ಕೆ ಆಗಿರುವುದು ನನಗೆ ಅತೀವ ಸಂತಸ ತಂದಿದೆ. ಅವರ ರಾಜಕೀಯ ಜೀವನ ಇನ್ನು ಉನ್ನತ ಮಟ್ಟಕ್ಕೆ ಏರಲೆಂದು ಪ್ರಾರ್ಥಿಸುತ್ತೇನೆ. -ಬೀರಣ್ಣ ನಾಯಕ ಮೊಗಟಾ
ಶಿರಸಿಯ ಬೆಂಗಳೆ ಗ್ರಾಮದ ಮಂಟಕಾಲ್ ಎಂಬ ಊರಿನ ಮಹೀಳೆಯಾದ *ಶರಾವತಿ ನಾಗೇಶ ಪೂಜಾರಿ* ವಯಸ್ಸು (35) ಗಂಡ ನಾಗೇಶ ಪೂಜಾರಿ ಮತ್ತು 2 ಹೆಣ್ಣು ಮಕ್ಕಳು(ನೀಶಾ 14 ವರ್ಷ ತ್ರೀಶಾ 9 ವರ್ಷ) ಇವರ ಜೊತೆ ನೆಮ್ಮದಿ ಜೀವನ ನಡೆಸುತ್ತಿದ್ದ ಇವರು ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ ಮತ್ತು ಪತಿ ಕೂಲಿ ಕಾರ್ಮಿಕನಾಗಿದ್ದು ಇದ್ದಿದ್ದರಲ್ಲೇ ಚೊಕ್ಕವಾಗಿ ಬದುಕುವ ಸಂತೃಪ್ತ ಜೀವನ.ಇಂತಹ ಸುಂದರವಾದ ಕುಟುಂಬದ ಮೇಲೆ ವಿಧಿಯ ಕ್ರೂರ ಕಣ್ಣು ಬಿದ್ದಿದ್ದು ಸ್ತನ ಕ್ಯಾನ್ಸರ್ ಎನ್ನುವ ಮಹಾಮಾರಿಯ ಮೂಲಕ. ನಾಲ್ಕು ತಿಂಗಳ ಹಿಂದೆ ಶರಾವತಿ ಅವರ ಆರೋಗ್ಯದಲ್ಲಿ ಏರುಪೇರಾದಾಗ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ತೆರಳಿದ ಶರಾವತಿ ಅವರಿಗೆ ಬರ ಸಿಡಿಲಿನಂತೆ ಬಂದೆರಗಿದ ಆರೋಗ್ಯ ತಪಾಸಣಾ ರಿಪೋರ್ಟ್ ನಲ್ಲಿ ಶರಾವತಿ ಕನಸಿನ ಜೀವನ ಸೌಧವೇ ಕುಸಿದು ಬೀಳುತ್ತಿದೆ ಎನ್ನುವಂತ ಆಘಾತಕಾರಿ ಉತ್ತರ! ಶರಾವತಿ ಅವರಿಗೆ ಸ್ತನ ಕ್ಯಾನ್ಸರ್ ಎನ್ನುವ ಮಹಾಮಾರಿ ಆವರಿಸಿದೆ ಎನ್ನುವುದು.
ಬಡತನದಲ್ಲೆ ಜೀವನ ಸಾಗಿಸುತ್ತಿರುವ ಇವರಿಗೆ ಚಿಕಿತ್ಸೆಗೆ ಲಕ್ಸ್ಶಾಂತರ ರೂಪಾಯಿ ಅವಶ್ಯಕತೆ ಇದ್ದು ಇಗಾಗಲೆ ಬಂದು ಮಿತ್ರರು ಮತ್ತು ಕುಟುಂಬದವರು ಸಹಾಯದಿಂದ ಮತ್ತು ಸಾಲ ಮಾಡಿ 4.5 ಲಕ್ಷ ಖರ್ಚು ಮಾಡಿರುತ್ತಾರೆ ದಿನೆ ದಿನೇ ಇವರ ಆರೋಗ್ಯ ಕ್ಶೀಣಿಸುತ್ತಿದ್ದು ಚಿಕಿತ್ಸೆಗೆ ಅಧಿಕ ಹಣದ ಅವಶ್ಯಕತೆ ಇದ್ದು ದಿಕ್ಕೇ ತೋಚದಂತಾಗಿದೆ. ಈ ಪರಿಸ್ಥಿತಿಯಲ್ಲಿ ಅವರಿಗೆ ಹಣ ಹೊಂದಿಸಲು ಸಾದ್ಯವಿಲ್ಲ ಆದ್ದರಿಂದ ತಾವುಗಳು ತಮ್ಮ ಕೈಲಾದಷ್ಟು ಸಹಾಯಮಾಡಿ ಅವರ ಕುಟುಂಬಕ್ಕೆ ನೇರವಾಗಬೇಕಾಗಿ ತಮ್ಮಲ್ಲಿ ವಿನಂತಿಸಿಕೋಳ್ಳುತ್ತಿದ್ದೆವೇ. ನಾಗೇಶ (ಅವರ ಪತಿ) ಅವರ ಖಾತೆ ಗೆ ಹಣ ಸಂದಾಯ ಮಾಡುವ ಮೂಲಕ ಆ ಒಂದು ಕುಟುಂಬಕ್ಕೆ ದೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ … *ನಾಗೇಶ ಪಂಜು ಪೂಜಾರಿ ಅವರ ಬ್ಯಾಂಕ್ ಖಾತೆ ಸಂಖ್ಯೆ* *333440868880**IFSC code:SBIN0000917* *State Bank india*ಸಂಪರ್ಕ ಸಂಖ್ಯೆ *9480535348’&’72598 49403* ದಯವಿಟ್ಟು ಇವರಿಗೆ ನೆರವಾಗಿ ನೀವು ನೀಡುವ ಪ್ರತಿ ರೂಪಾಯಿಯೂ ಇವರ ಬಾಳಿನಲ್ಲಿ ಬೆಳಕು ಮೂಡಿಸಲಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
