ಏನನ್ನೂ ಅಪೇಕ್ಷಿಸದ ಸ್ವಾತಂತ್ರ್ಯ ಸೇನಾನಿಗೆ ಅಭಿಮಾನದ ಸನ್ಮಾನ

ನಾಳೆ ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ. ಭಾ ರತ ಮಾತೆಯನ್ನು ಬ್ರಿಟೀಷರ ಸಂಕೋಲೆಯಿಂದ ಬಿಡಿಸಲು ಹೋರಾಡಿದ ಜನರು ಲಕ್ಷಾಂತರ ಅವರಲ್ಲಿ ಬಹುತೇಕರು ಬ್ರಿಟೀಷರ ದಬ್ಬಾಳಿಕೆ, ಹಿಂಸೆಗೆ ಎದೆಯೊಡ್ಡಿ ಅಮರರಾದರೆ ಕೆಲವರು ಸ್ವಾತಂತ್ರ್ಯಾ ನಂತರ ಸ್ವಾತಂತ್ರ್ಯದ ಸೊಬಗನ್ನು ಕಂಡವರು. ಈ ಸ್ವಾತಂತ್ರ್ಯ ಸೇನಾನಿಗಳಲ್ಲಿ ಈಗಲೂ ಕೆಲವರು ಜೀವಂತವಿರುವುದು ವಿಶೇಶ.
ಸಾವಿರಾರು ಜನರು ಸ್ವಾತಂತ್ರ್ಯ ಹೋರಾಟಗಾರರಿಗೆ ಜನ್ಮ ನೀಡಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿಯ  ಅಂಕೋಲಾ ಮತ್ತು ಮಲೆನಾಡಿನ ಸಿದ್ಧಾಪುರ ಮುಂಚೂಣಿಯಲ್ಲಿದ್ದವು.ಅಂಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹ ಚಲೇಜಾವ್ ಚಳುವಳಿ ಬಿರುಸಾಗಿ ನಡೆದಿದ್ದರೆ ಸಿದ್ಧಾಪುರದಲ್ಲಿ ಕರನಿರಾಕರಣೆ ಚಳುವಳಿ ಪ್ರಖರವಾಗಿ ನಡೆದಿತ್ತು. ಈ ಚಳವಳಿಗಳ ಕತೆ ಹೇಳುವ ಜನರು, ಸ್ವಾ ತಂತ್ರ್ಯ ಸೇನಾನಿಗಳು ಈಗಿಲ್ಲ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಲೂ ಮೂರು ಜನ ಸ್ವಾತಂತ್ರ್ಯ ಹೋರಾಟಗಾರರು ಬುಕಿರುವುದು ವಿಶೇಶ. ಇವರಲ್ಲಿ ಸಿದ್ಧಾಪುರದ ಮನಮನೆಯ ಗಡದ್ ಬಂಗಾರಪ್ಪ ಒಬ್ಬರು.


ಹರೆಯದಲ್ಲಿ ಸ್ವಾತಂತ್ರ್ಯ ಹೋರಾಟದ ಅಂಗವಾಗಿ ಸೇತುವೆ ಮುರಿಯುವುದು, ತಂತಿ ತುಂಡರಿಸುವುದು ಮಾಡಿದ ಈ ಗಡದ್ ಬಂಗಾರಪ್ಪ ಬ್ರಟೀಷರ ವಿರುದ್ಧ ಹೋರಾಟ ಮಾಡಿದ ತಂಡದ ಒಬ್ಬ ಯುವಕ. ಅಧೀಕೃತ ದಾಖಲೆಗಳಿಲ್ಲದ ಬಂಗಾರಪ್ಪ ತಮಗೆ ಈಗ ನೂರು ವರ್ಷ ದಾಟಿದೆ ಎಂದರೂ ನೂರರ ಆಸುಪಾಸಿನಲ್ಲಿರುವ ಬಂಗಾರಪ್ಪ ಕಳೆದ ಕೆಲವು ವರ್ಷಗಳ ಹಿಂದಿನವರೆಗೂ ಸ್ಥಳಿಯ ಗ್ರಾಮ ಪಂಚಾಯತ್, ಪ್ರಾಥಮಿಕ ಶಾಲೆಗಳಿಗೆ ತೆರಳಿ ಸ್ವಾತಂತ್ರ್ಯದ ಸಂಬ್ರಮದಲ್ಲಿ ಪಾಲ್ಗೊಳ್ಳುತಿದ್ದರು.


ಈಗ ವಯೋಸಹಜ ಆಯಾಸ, ಮರೆವಿನಿಂದಾಗಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳಿಗೆ ತೆರಳುತಿಲ್ಲ. ಸ್ವಾತಂತ್ರ್ಯ ಹೋರಾಟಗಾರರ ನೆಲದ ಈ ಹೋರಾಟಗಾರನನ್ನು ಕಂಡು ಸನ್ಮಾನಿಸಲು ಈಗಲೂ ಸರ್ಕಾರದ ಅಧಿಕಾರಿಗಳು, ಸಾರ್ವಜನಿಕರು ಬರುತ್ತಾರೆ. ಈ ವಯಸ್ಸಿನಲ್ಲಿ ಕೂಡಾ ತಮ್ಮ ಹೋರಾಟದ ಘಟನೆಗಳ ಸ್ಮರಣೆ, ಆಗ ಸಂಘಟನೆಗೆ ಬಳಸುತಿದ್ದ ಹಾಡುಗಳನ್ನು ಹಾಡುವ ಈ ಅಜ್ಜ ಏನನ್ನೋ ಮರೆತಂತೆ ಏನನ್ನೋ ಕಳೆದುಕೊಂಡಂತೆ ಭಾವುಕರಾಗುತ್ತಾರೆ.
ಹವ್ಯಾಸಗಳಿಲ್ಲದ ಸರಳ, ಸಹಜ ಬದುಕನ್ನು ಬಾಳುತ್ತಿರುವ ಮನ್ಮನೆ ಬಂಗಾರಪ್ಪ ಸ್ವಾತಂತ್ರ್ಯ ಹೋರಾಟದ ನಂತರ ಸಾಗರ ಕಾಗೋಡಿನಲ್ಲಿ ನಡೆದ ಕಾಗೋಡು ರೈತ ಜನಾಂದೋಲನದಲ್ಲಿ ಪಾಲ್ಗೊಂಡವರು.

ಮಕ್ಕಳು ಮೊಮ್ಮ ಕ್ಕಳ ತುಂಬು ಕುಟುಂಬದ ಈ ಸ್ವಾತಂತ್ರ್ಯ ಸೇನಾನಿ ಈಗ ನಡೆಯುತ್ತಿರುವ ಅಮೃತಮಹೋತ್ಸವದ ವಿಷಯ ತನಗೆ ತಿಳಿದಿಲ್ಲ ಈಗ ಎ ನು ನಡೆಯುತ್ತಿದೆ ಅದೂ ತಿಳಿಯುತ್ತಿಲ್ಲ ಎನ್ನುತ್ತಾರೆ. ಕಳೆದ ಎಪ್ಪತೈದು ವರ್ಷಗಳಲ್ಲಿ ಸ್ವಾತಂತ್ರ್ಯ ಸೇನಾನಿಗಳೇ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡು ತಮ್ಮ ನೆನಪುಗಳನ್ನು ಹಂಚಿಕೊಳ್ಳುವ ಸಂಬ್ರಮವನ್ನು ನಾಡು ನೋಡಿದೆ. ಮುಂದಿನ ದಿನಗಳಲ್ಲಿ ಸ್ವಾತಂತ್ರ್ಯ ಸೇನಾನಿಗಳನ್ನು ಕಾಣಲೂ ಸಿಗದ ಸ್ಥಿತಿಯಲ್ಲಿ ಸ್ವಾತಂತ್ರ್ಯೋತ್ಸವ ನಡೆಯಲಿವೆ. ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವದಲ್ಲಿ ಜೀವಂತವಿರುವ ಸ್ವಾತಂತ್ರ್ಯ ಹೋರಾಟಗಾರರು ಈಗ ಆಕರ್ಷಣೆಯ ಕೇಂದ್ರಬಿಂದುವಾಗಿರುವುದು ಆಶ್ಚರ್ಯವೇನಲ್ಲ.

ಈ ಸ್ವಾತಂತ್ರ್ಯ ಸೇನಾನಿ ಗಡದ್ ಬಂಗಾರಪ್ಪನವರನ್ನು ಕಾಂಗ್ರೆಸ್ ಪಕ್ಷ, ಜಿಲ್ಲಾಡಳಿತ, ಸಿದ್ಧಾಪುರ ತಾಲೂಕಾ ಆಡಳಿತಗಳು ಪ್ರತ್ಯೇಕವಾಗಿ ಸನ್ಮಾನಿಸಿ ಅಭಿನಂದಿಸಿದ್ದು ವಿಶೇಶ.

ಸಿದ್ಧಾಪುರ, ಇಲ್ಲಿಯ ಬೇಡ್ಕಣಿ ಸ್ವ ಸಹಾಯ ಸಂಘಗಳ ಸಂಜೀವಿನಿ ಒಕ್ಕೂಟ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಸ್ವಚ್ಚತಾ ಕಾರ್ಯ ಕ್ರಮ , ವನಮಹೋತ್ಸವ ಮತ್ತು ಸ್ವಸಹಾಯ ಸಂಘದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಬೇಡ್ಕಣಿ ಗ್ರಾಮ ಪಂಚಾಯತ್ ಆವಾರದಲ್ಲಿ ಶನಿವಾರ ನಡೆಸಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಾಸಂತಿ ಹಸ್ಲರ್, ಉಪಾಧ್ಯಕ್ಷೆ ರೇಣುಕಾ ನಾಯ್ಕ, ಸದಸ್ಯರಾದ ಪದ್ಮಪ್ರಿಯಾ ನಾಯ್ಕ, ಒಕ್ಕೂಟ ದ ಅಧ್ಯಕ್ಷ ರಾದ ನಾಗವೇಣಿ ನಾಯ್ಕ, ಒಕ್ಕೂಟ ದ ಮಾಲತಿ ನಾಯ್ಕ ಮತ್ತು ಸ್ವಸಹಾಯ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *