5ಲಕ್ಷ ರೂ. ಕೋವಿಡ್ ನಿಧಿ ನೀಡಿದ tms- ಸದಸ್ಯರ ಕ್ಷೇಮನಿಧಿ ಯೋಜನೆ ಉದ್ಘಾಟನೆ

ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಪಾರದರ್ಶಕ,ತ್ವರಿತ,ಸದೃಢಗೊಳಿಸುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ ಎಂದು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಸಿದ್ಧಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘದ ಸದಸ್ಯರ ಕ್ಷೇಮನಿಧಿ ಯೋಜನೆಗೆ ಚಾಲನೆ ನೀಡಿ ರಾಜ್ಯಸರ್ಕಾರಕ್ಕೆ ನೀಡಿದ 5 ಲಕ್ಷ ರೂಪಾಯಿ ಕೋವಿಡ್ ನಿಧಿಯ ಚೆಕ್ ಸ್ವೀಕರಿಸಿ ಮಾತನಾಡಿದ ಅವರು ಉತ್ತರ ಕನ್ನಡದಲ್ಲಿ ಸಹಕಾರಿ ಕ್ಷೇತ್ರ ಸರ್ಕಾರಕ್ಕೆ ಪರ್ಯಾಯವಾಗಿ ಬೆಳೆದಿದೆ. ಆದರೆ ರಾಜ್ಯದ ಇತರ ಭಾಗಗಳಲ್ಲಿ ಈ ಸ್ಥಿತಿ ಇಲ್ಲ ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಕಾಳಜಿಯಿಂದ ಕೆಲಸಮಾಡುತ್ತಿವೆ ಎಂದರು.

ಪ್ರಾಸ್ಥಾವಿಕವಾಗಿ ಮಾತನಾಡಿದ ಟಿ.ಎಂ.ಎಸ್.ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಸಂಸ್ಥೆ ಬೆಳೆದುಬಂದ ದಾರಿ ವಿವರಿಸಿ ಸಂಸ್ಥೆ ಯಿಂದ ಸದಸ್ಯರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿ ಮಾಡುತಿದ್ದೇವೆ. ಕಟ್ಟಡನಿಧಿ ನಿಗದಿಪಡಿಸುವಿಕೆ ಮುಗಿದ ನಂತರ ಸಂಸ್ಥೆಯ ಸ್ವರೂಪವೇ ಬದಲಾಗಲಿದೆ ಎಂದು ತಿಳಿಸಿ ಕೋವಿಡ್ ಸಂಕಷ್ಟಕ್ಕೆ ನೆರವಾಗಲು ಸಂಸ್ಥೆ ಕಳೆದ ವರ್ಷ3ಲಕ್ಷ ರೂಪಾಯಿ ಮತ್ತು ಈ ವರ್ಷ 5 ಲಕ್ಷ ಸೇರಿ ಒಟ್ಟೂ 8 ಲಕ್ಷ ರೂಪಾಯಿ ನೀಡಿದ್ದೇವೆ ಎಂದು ವಿವರಿಸಿದರು.

ಕೃಷಿ ಕ್ಷೇತ್ರದ ಸ್ಟಾರ್ಟ್ ಅಪ್ ಗೆ ಪ್ರಶಸ್ತಿ: ಬೆಂಗಳೂರು ಯುವತಿಯ ಯಶೋಗಾಥೆ!

ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನಸ ಗೊಂಚಿಗರ್ ಅವರು ಯುವ ಜನ ಮತ್ತು ಕ್ರೀಡಾ ಇಲಾಖೆ ಸಚಿವ ಅನುರಾಗ್ ಠಾಕೂರ್ ಅವರಿಂದ ಪ್ರಶಸ್ತಿ ಪಡೆದಿದ್ದಾರೆ.

Manasa Gonchigar

ಬೆಂಗಳೂರು: ಕೃಷಿ ಉದ್ಯಮ ಸವಾಲಿನ 10 ಯುವ ಯಶಸ್ವಿ ಉದ್ಯಮಿ ತಂಡಗಳಲ್ಲಿ ಬೆಂಗಳೂರು ಹುಡುಗಿ ಮಾನಸ ಗೊಂಚಿಗರ್ ಒಬ್ಬರಾಗಿದ್ದಾರೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನಸ ಗೊಂಚಿಗರ್ ಅವರು ಯುವ ಜನ ಮತ್ತು ಕ್ರೀಡಾ ಇಲಾಖೆ ಸಚಿವ ಅನುರಾಗ್ ಠಾಕೂರ್ ಅವರಿಂದ ಪ್ರಶಸ್ತಿ ಪಡೆದಿದ್ದಾರೆ.

25 ವರ್ಷದ ಯುವತಿ ಮಾನಸ, ಆರೋಗ್ಯ ಮಾರುಕಟ್ಟೆ ಬಗ್ಗೆ ತಿಳಿವಳಿಕೆ ಹೊಂದಿದ್ದ ತಮ್ಮ ಕೋ ಫೌಂಡರ್ ಆಯುಷ್ ನಿಗಮ್ ಜತೆ ಸೇರಿ ಸಾಹಸಕೈ ಹಾಕಿದರು. ಎಲ್ಲರ ಕನಸು ಎಂಬಂತೆ  ಪ್ಯೂರ್ ಸ್ಕ್ಯಾನ್ ಎಐ ಸಂಸ್ಥೆ ಆರಂಭವಾಯಿತು. ಆಹಾರದಿಂದ ಆರೋಗ್ಯ ಎನ್ನುವ ಉದ್ದೇಶದೊಂದಿಗೆ ಸಂಸ್ಥೆ ಹೆಜ್ಜೆ ಇಡಲು ಆರಂಭಿಸಿತು. ಈ ವರ್ಷ, ಅಂತರರಾಷ್ಟ್ರೀಯ ಯುವ ದಿನದ ಥೀಮ್ ಆಹಾರ ವ್ಯವಸ್ಥೆಗಳನ್ನು ಪರಿವರ್ತಿಸುವುದರ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದೆ.

ಮೆಕ್ಕೆಜೋಳ ಮತ್ತು ಕಡಲೆಕಾಯಿಗಳಲ್ಲಿ ಶೀಘ್ರವಾಗಿ ಅಫ್ಲಾಟಾಕ್ಸಿನ್ ಹೆಚ್ಚಳ ಹೇಗೆ ಆಗುತ್ತದೆ? ಇದರ ತಡೆಗೆ ಏನು ಮಾಡಬಹುದು?  ಮೆಣಸಿನಕಾಯಿ ಮತ್ತು ಸೂರ್ಯ ಕಾಂತಿ ಬೀಜಗಳಲ್ಲಿ ಈ ಅಂಶ ಇದೆಯೇ? ಎಂಬ ಮಾಹಿತಿಯನ್ನು ಪಡೆದುಕೊಂಡೆ ಎಂದು ತಮ್ಮ ಉದ್ಯಮ ಆರಂಭಕ್ಕೆ ಮುನ್ನ ಮಾಡಿಕೊಂಡ ಸಿದ್ಧತೆಯನ್ನು ತಿಳಿಸಿದ ಅವರು, ಅಪ್ಲಾಟಾಕ್ಸಿನ್ ಅಂಶ ದೇಹದ ಇಮ್ಯುನೊಸಪ್ರೆಸಿವ್ ಆರೋಗ್ಯ ಪರಿಣಾಮಗಳಿಗೆ ಕೊಡುಗೆ ನೀಡುತ್ತದೆ, ಇದು ಕುಂಠಿತ ಬೆಳವಣಿಗೆ ಮತ್ತು ಅಪೌಷ್ಟಿಕತೆಗೆ ಕಾರಣವಾಗುತ್ತದೆ ಎಂದಿದ್ದಾರೆ.

ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡುವ ಕೃಷಿ ಆಧಾರಿತ ವ್ಯಾಪಾರ ಉದ್ಯಮ ನಮ್ಮ ಮೊದಲ ಹೆಜ್ಜೆಯಾಗಿತ್ತು. ಕಡಲೆಕಾಯಿ ಮತ್ತು ಮೆಕ್ಕೆಜೋಳಕ್ಕೆ ಮೊದಲ ಆದ್ಯತೆ ನೀಡಿದೆವು. ಅವುಗಳ ಆಹಾರ ವಸ್ತು ಮಾರುಕಟ್ಟೆ ನಿರ್ಮಾಣ ಮಾಡಿಕೊಂಡು ರೈತ ಗುಂಪುಗಳೊಂದಿಗೆ ಒಪ್ಪಂದ ಮಾಡಿಕೊಂಡು ರಾಸಾಯನಿಕ ರಹಿತ ಬೆಳೆ ಬೆಳೆದು ಅದನ್ನು ಖರೀದಿ ಮಾಡಿ ವ್ಯಾಪಾರಿಗಳಿಗೆ ತಲುಪಿಸುವ ಯೋಜನೆ ಆರಂಭವಾಯಿತು. ಕಡಲೆಕಾಯಿ ಮತ್ತು ಮೆಕ್ಕೆಜೋಳದ ಮಾರುಕಟ್ಟೆ ನಿರ್ಮಾಣವಾಯಿತು. ಇತರೆ ಬೆಳೆಗಳಿಗೆ ವಿಸ್ತರಿಸುವ ಆಲೋಚನೆ ಇದೆ ಎಂದು ಮದ್ರಾಸ್ ಐಐಟಿಯ ಪದವೀಧರೆ ಮಾನಸ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಮಾನಸ ಮತ್ತು ರೈತನ ಮೊಮ್ಮಗಳು, ಅವರು ಕೃಷಿಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿದ್ದರು ಮತ್ತು ಐಐಟಿ-ಮದ್ರಾಸ್‌ನಲ್ಲಿ ಅನ್ವಯಿಕ  ಭೌತಶಾಸ್ತ್ರ ಓದುತ್ತಿದ್ದಾಗ, ಅವರು ಅಂತರಶಿಕ್ಷಣದ ಕೆಲಸದಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡರು.

ಸಹ-ಸಂಸ್ಥಾಪಕ ಆಯುಷ್ ನಿಗಮ್ ಅವರ ಸ್ಟಾರ್ಟ್ಅಪ್ ಸಂಸ್ಥೆ ‘ಡಿಸ್ಟಿಂಕ್ಟ್ ಹಾರಿಜಾನ್ ಮೂಲಕ ಅಗ್ರಿಟೆಕ್ ಜಾಗದಲ್ಲಿ ಪರಿಣತಿ ಮಾನಸ ಅವರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿತು. ಸ್ವಿಟ್ಜರ್‌ಲ್ಯಾಂಡ್‌ನಲ್ಲಿನ ತನ್ನ ಅಕಾಡೆಮಿ ಇಂಡಸ್ಟ್ರಿ ತರಬೇತಿ ಸೇರಿದಂತೆ ತನ್ನ ವ್ಯಾಪಕ ಪ್ರಯಾಣವು ಆಹಾರ ಸುರಕ್ಷತೆಯ ವಿಷಯದಲ್ಲಿ ಭಾರತವು ಹೇಗೆ ಹಿಂದಿನ ಸ್ಥಾನವನ್ನು ಪಡೆದುಕೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು ಎಂದು ಮಾನಸ ಹೇಳುತ್ತಾರೆ. ಇಂದಿನಿಂದ ಐದು ವರ್ಷಗಳ ನಂತರ, ನಾವು ತಿನ್ನುವ ಆಹಾರದ ಗುಣಮಟ್ಟದಲ್ಲಿ ಭಾರೀ ಬದಲಾವಣೆ ತರಲು ಮಾನಸ ತಯಾರಿ ನಡೆಸಿದ್ದಾರೆ. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *