

ನಿತ್ಯ ಸತ್ಯ ಸುದ್ದಿಗಳನ್ನು ಕೊಡುವ ಸಾಹಸ ಮಾಡುವ ಸಮಾಜಮುಖಿ.ನೆಟ್ ಕೆಲವು ಸುದ್ದಿಗಳನ್ನು ಸತ್ಯವಲ್ಲ ಎಂದು ಪ್ರಮಾಣಿಕರಿಸಿ ನೀಡುವ ಪ್ರಯತ್ನ ಮಾಡಿದೆ. ವಾಸ್ತವವೆಂದರೆ… ನಿತ್ಯ ಸತ್ಯ ಸುದ್ದಿಗಳಿಗಿಂತ ಈ ಸುಳ್ಳುಸುದ್ದಿಗಳೇ ಹೆಚ್ಚು ಸದ್ದು ಮಾಡುತ್ತಿವೆ.

ನಂ೧- ಚುನಾವಣೆಗೆ ಮನಸ್ಸಿಲ್ಲದ ಭೀಮಣ್ಣ ನಾಯ್ಕ ಯಲ್ಲಾಪುರ ಉಪಚುನಾವಣೆ ನಂತರ ಕಾಂಗ್ರೆಸ್ ನ ಒಮ್ಮತದ ಆಯ್ಕೆಯಾಗಿ ಉತ್ತರ ಕನ್ನಡ ಕ್ಷೇತ್ರದ ವಿ.ಪ. ಕಾಂಗ್ರೆಸ್ ಅಭ್ಯರ್ಥಿಯಾಗಿ ತುರುಸಿನ ಸ್ಫರ್ಧೆ ನೀಡಿದ್ದಾರೆ. ಭೀಮಣ್ಣನವರ ಆಯ್ಕೆ ಗ್ಯಾರಂಟಿ ಎನ್ನುತ್ತಿರುವ ಸಾರ್ವಜನಿಕರು ಈ ಚುನಾವಣೆ, ರಾಜಕಾರಣಕ್ಕೆ ಸಂಬಂಧಿಸಿದ ಅನೇಕ ರೂಮರ್ ಗಳನ್ನು ಹರಿಬಿಡುತಿದ್ದಾರೆ.
ನಂ೨- ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಸುಪ್ರಿಮೋ ಹಳಿಯಾಳದ ಆರ್.ವಿ.ದೇಶಪಾಂಡೆ ಕಳೆದ ತಿಂಗಳು ವಿದೇಶದಲ್ಲಿದ್ದರು. ರಾಜಕೀಯದಿಂದ ದಣಿದಿರುವ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ವಿದೇಶದಿಂದ ಮರಳಿ ಮಣ್ಣಿಗೆ ಸೇರುವ ಮೊದಲು ಅವರ ಶಿಷ್ಯ ಭೀಮಣ್ಣರನ್ನು ವಿ.ಪ. ಅಭ್ಯರ್ಥಿಮಾಡಿ ಮಾಜಿ ಶಾಸಕರೆಲ್ಲ ದೇಶಪಾಂಡೆಯವರಿಗೆ ಇರಿಸು ಮುರಿಸು ಮಾಡದಿದ್ದರೆ ಅಂಕೋಲಾದ ರವಿ ನಾಯ್ಕ ಯಾನೆ ಎ. ರವೀಂದ್ರ, ಸಾಯಿ ಗಾಂವ್ಕರ್ ಬದಲು ಸಿದ್ಧಾಪುರದ ಕೆ.ಜಿ. ನಾಗರಾಜ್ ಉತ್ತರ ಕನ್ನಡದ ವಿಧಾನ ಪರಿಷತ್ ಅಭ್ಯರ್ಥಿಯಾಗಿರುತಿದ್ದರು ಎನ್ನುವ ಮಾತು ಬಹಿರಂಗ ಗುಟ್ಟಾಗಿ ಚರ್ಚೆಯಾಗುತ್ತಿದೆ.




ನಂ೩- ಹಿಂದುತ್ವ,ರಾಷ್ಟ್ರೀಯತೆ ಎಂದು ಜಾತೀಯತೆಯ ಚುನಾವಣೆ ಮಾಡುವ ಉತ್ತರ ಕನ್ನಡ ಸಂಸದ ಮತ್ತು ಸ್ಪೀಕರ್ ಕಾಗೇರಿ ಕಾರವಾರದ ಗಣಪತಿ ಉಳ್ವೇಕರ್ ಬಿ.ಜೆ.ಪಿ. ವಿ.ಪ. ಅಭ್ಯರ್ಥಿಯಾಗಲು ಅಡ್ಡಗಾಲು ಹಾಕಿದ್ದರಂತೆ! ಜಾತಿ ಇಲ್ಲ ಹಣ ಎನ್ನುವ ಈ ನಾಯಕರಿಗೆ ಟಾಂಗ್ ನೀಡಿ ವಿ.ಪ. ಚುನಾವಣೆಯಲ್ಲಿ ಉಳ್ವೇಕರ್ ರನ್ನು ಪ್ರಬಲ ಸ್ಫರ್ಧಿ ಮಾಡಿರುವ ಹೆಬ್ಬಾರ್ ಬಗ್ಗೆ ದಾಯಾದಿ ಮತ್ಸರ ಇಟ್ಟುಕೊಂಡಿರುವ ಈ ನಾಯಕರು ಚುನಾವಣೆ ಎನೋ ಆಯಿತು. ಆದರೆ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೆಬ್ಬಾರ್ ರಿಗೆ ಕೆಣಕಿದ್ದಾರಂತೆ. ಈ ಸಂಕಟದ ಆತ್ಮಾವಲೋಕನಕ್ಕೆ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿರುವ ಹೆಬ್ಬಾರ್ ಎಷ್ಟು ವರ್ಷ ಹಿಂದುತ್ವ, ರಾಷ್ಟ್ರೀಯತೆ, ದೇಶಪ್ರೇಮ ಎಂದು ಸುಳ್ಳುಹೇಳುತ್ತೀರಿ. ಚುನಾವಣೆಗಳೇನೋ ಆಗೊಮ್ಮೆ ಈಗೊಮ್ಮೆ ಬರುತ್ತವೆ ಅದಕ್ಕೆ ಆತ್ಮಾವಲೋಕನ ಕಷ್ಟವಲ್ಲ ಆದರೆ ಸುಳ್ಳು-ನಾಟಕಗಳ ನಿಮ್ಮ ಕಾಲುಶತಮಾನದ ಹಿಂದುತ್ವ, ರಾಷ್ಟ್ರೀಯತೆ, ದೇಶಪ್ರೇಮದ ಬಗ್ಗೆ ಆತ್ಮಾವಲೋಕನ ಮಾಡಕೊಳ್ಳಲು ನೀವು ನಿವೃತ್ತರಾಗುವುದೊಳ್ಳೆಯದು. ಇಲ್ಲದಿದ್ದರೆ ನಿಮಗೆ ಜನ ಕಡ್ಡಾಯ ನಿವೃತ್ತಿ ಮಾಡಿ ಆತ್ಮಾವಲೋಕನಕ್ಕೆ ಅವಕಾಶ ಮಾಡಿಕೊಡುತ್ತಾರೆ ಎಂದು ಖಾಸಗಿಯಾಗಿ ಹೇಳಿದ್ದಾರಂತೆ.

ನಂ೪- ಕಳೆದ ವಿ.ಪ. ಚುನಾವಣೆಯಲ್ಲಿ ಅರೆ ಮನಸ್ಸಿನಿಂದ ಕೆಲಸ ಮಾಡಿದ ಮಾಜಿ ಸಚಿವ ಆರ್. ವಿ. ದೇಶಪಾಂಡೆ ಉತ್ತರ ಕನ್ನಡಕ್ಕೆ ಮಧು ಬಂಗಾರಪ್ಪ, ಬಿ.ಕೆ. ಹರಿಪ್ರಸಾದ್ ಯಾಕೆ? ಭೀಮಣ್ಣರನ್ನು ವಿಧಾನಸಭೆಗೆ ಕಳುಹಿಸುವ ತಾಕತ್ತೂ ನಮಗಿದೆ. ಈಗ ನೀವೆಲ್ಲಾ ಸೇರಿ ಜಾತ್ಯಾತೀತ ಕಾಂಗ್ರೆಸ್ ಕಟ್ಟಿದರೆ ನಾನು ಸಿದ್ಧಾಪುರದ ಶಶಿಭೂಷಣ ಹೆಗಡೆ, ನನ್ನ ಮಗ ಪ್ರಶಾಂತ್ ರನ್ನು ಘಟ್ಟದ ಮೇಲೆ ಅಭ್ಯರ್ಥಿಗಳನ್ನಾಗಿಸಿ ನನ್ನ ಸಾಂಪ್ರದಾಯಿಕ ವಿರೋಧಿಗಳಾದ ಆಳ್ವ, ರೆಡ್ಡಿ, ಚೆಡ್ಡಿಗಳನ್ನೆಲ್ಲಾ ಸೇರಿಸಿ ನಿಮಗೇ ಛೂ ಬಿಟ್ಟೇನು ಹುಷಾರ್ ಎಂದಿದ್ದಾರಂತೆ! ಈ ಮಾತು ಕೇಳಿ ಎಂದಿನಂತೆ ಒಳಗೊಳಗೇ ನಕ್ಕ ಭೀಮಣ್ಣ ಅದಕ್ಕೆ ನಂದೂ ಬೆಂಬಲ ಉಂಟು ಶಿರಸಿಯನ್ನು,ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಮಧುಬಂಗಾರಪ್ಪ, ಬಿ.ಕೆ. ಹರಿಪ್ರಸಾದ್ ರಿಗೆ ಕೊಟ್ಟು ನಿಮಗೂ ಬುದ್ಧಿ ಕಲಿಸುವುದು ಗೊತ್ತು ಎಂದು ಒಳಗೊಳಗೇ ಗುಡುಗಿದ್ದಾರಂತೆ!
ನಂ೫-ಕಾಂಗ್ರೆಸ್ ನಿಂದ ಭಕ್ಷೀಸು ಪಡೆದು ಭೀಮಣ್ಣರಿಗೆ ಕೈಕೊಟ್ಟಿರುವ ಕೆಲವು ಬಿ.ಜೆ.ಪಿ.ಗಳು,ಜಾ.ದಳದ ಕಲಿಗಳು ಎರಡೆರಡು ಕಡೆ ಹಣ ಪಡೆದು ದಿಢೀರ್ ಶ್ರೀಮಂತ ರಾಗಿರುವುದನ್ನು ನೋಡಿದ ನಿಷ್ಠಾವಂತ ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಗಳು ಯಾರದೋ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತೆ ಎಡಬಿಡಂಗಿಗಳಾಗಿ ಲಾಭ ಮಾಡಿಕೊಳ್ಳುವ ಮಜಾ ಈ ಸಿದ್ದಾಂತ, ಪಕ್ಷ,ವ್ಯಕ್ತಿ ನಿಷ್ಠೆಗಳಿಗಿಲ್ಲ ಎಂದು ಗೋಗರೆದು ಎಡಬಿಡಂಗಿಗಳಾಗಲು ಮತ್ತೊಂದು ಚುನಾವಣೆಗೆ ಕಾಯುತಿದ್ದಾರೆ ಎನ್ನುವ ಚರ್ಚೆ ರಾಜ್ಯದಾದ್ಯಂತ ವೈರಲ್ ಸಮಾಚಾರ ಆಗಿದೆಯಂತೆ!
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






