ಪುನೀತ್‌ ನೆನಪಿನ ಸಮರ್ಪಣೆಗೆ ಮೆಚ್ಚುಗೆಯ ಮಹಾಪೂರ

ಕರ್ನಾಟಕ ರತ್ನ, ಯುವರತ್ನ ಪುನೀತ್‌ ರಾಜ್‌ ಕುಮಾರ್‌ ಬದುಕಿದ್ದಾಗ ನಾಯಕನಟನಾಗಿ ಪ್ರಸಿದ್ಧರಾಗಿದ್ದರು. ಅವರ ಸಾವಿನ ನಂತರ ಅವರು ನಿಜಜೀವನದ ಹೀರೋ ಆಗಿದ್ದಕ್ಕೆ ಅನೇಕ ದೃಷ್ಟಾಂತಗಳಿವೆ. ಉತ್ತರ ಕನ್ನಡ ಜಿಲ್ಲೆ ಎಂದರೆ ಪಂಚಪ್ರಾಣವಾಗಿದ್ದ ಅಪ್ಪು ಇಲ್ಲಿಗೆ ಬಂದು ಮರಳಿದ ನಂತರವೇ ಇಲ್ಲಿ ಸುದ್ದಿಯಾಗುತಿತ್ತು. ಈಗ ಪುನೀತ್‌ ನೆನಪಿಗೆ ಅವರ ಸಮಾಜಮುಖಿ ಬದುಕಿಗೆ ಸಮರ್ಪಣೆ ಎನ್ನುವ ವಿನೂತನ ಕಾರ್ಯಕ್ರಮ ಒಂದು ಸಿದ್ಧಾಪುರದಲ್ಲಿ ನಡೆಯಿತು.
ಸಿದ್ಧಾಪುರದ ಶಂಕರಮಠದಲ್ಲಿ ಪರಿವರ್ತನೆ ಟೀಮ್‌ ಮತ್ತು ರಾಜ್ಯ ಬಿ.ಎಸ್.ಎನ್.  .ಡಿ.ಪಿ.‌ ಗಳು ಸ್ಥಳಿಯರ ಜೊತೆಗೂಡಿ ಅಪ್ಪು ಸಮರ್ಪಣೆ ಕಾರ್ಯಕ್ರಮ ಸಂಘಟಿಸಿದ್ದರು. ಈ ಕಾರ್ಯಕ್ರಮದಲ್ಲಿ ಪುನೀತ್‌ ರಿಗೆ ನುಡಿ ನಮನ, ಗೀತ ನಮನಗಳು ನಡೆದವು.

ನೇತ್ರದಾನ,ರಕ್ತದಾನಗಳು ನಡೆದದ್ದು ಈ ಕಾರ್ಯಕ್ರಮದ ವೈಶಿಷ್ಟ್ಯ


ಮನುಷ್ಯ ಬದುಕಿ ಹೋಗುವುದು ಸಾಮಾನ್ಯ ಆದರೆ ಪುನೀತ್‌ ರಾಜ್‌ ಕುಮಾರರಂತೆ ಮಾನವೀಯವಾಗಿ ಬದುಕಿ ಬಾಳುವುದು ಸುಲಭವಲ್ಲ. ಈ ಸಂದೇಶದ ಹಿನ್ನೆಲೆಯಲ್ಲಿ ನಡೆದ ಸಮರ್ಪಣೆಯಲ್ಲಿ ಸೇರಿದ ಅಭಿಮಾನಿಗಳು ಪುನೀತ್‌ ರನ್ನು ನೆನಪಿಸಿ,ಅವರ ಸಾಧನೆ,ಸೇವೆಗಳನ್ನು ಕೊಂಡಾಡಿದರು.
ದೊಡ್ಡ ಕಟೌಟ್‌ ಗಳನ್ನು ಹಾಕಿ, ಅನ್ನಸಂತರ್ಪಣೆ ನಡೆಸಿದ ಈ ವಿನೂತನ ಕಾರ್ಯಕ್ರಮದಲ್ಲಿ ಪುನೀತ್‌ ಬದುಕು ಇತರರಿಗೆ ಮಾದರಿಯಾಗಬೇಕೆಂದು ಆಶಿಸಲಾಯಿತು.
ಈ ಕಾರ್ಯಕ್ರಮದ ಮೊದಲು ಸ್ಥಳೀಯ ಆಡಳಿತಕ್ಕೆ ಸಿದ್ಧಾಪುರದ ಮುಖ್ಯ ರಸ್ತೆಗೆ ಪುನೀತ್‌ ರಾಜ್‌ ಕುಮಾರ ರಸ್ತೆ ಎಂದು ನಾಮಕರಣ ಮಾಡಲು ಮನವಿ ನೀಡಿ ಒತ್ತಾಯಿಸಲಾಯಿತು.


ಸ್ವಯಂ ಪ್ರೇರಣೆಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನೇಕರು ಪುನೀತ್‌ ಸ್ಮರಿಸಿ,ಗೌರವ ಸೂಚಿಸಿದರು. ಬದುಕಿದ್ದಾಗ ಸುದ್ದಿ ಮಾಡದೆ ಬಂದು ತೆರಳುತಿದ್ದ ಪುನೀತ್‌ ಈಗ ಈ ಊರಿಗೆ ಬರದೆ ಸುದ್ದಿಮಾಡಿದ್ದು ವಿಶೇಶವೆನಿಸಿತು. ಪುನೀತ್‌ ರಾಜ್‌ ಕುಮಾರರ ಚಿತ್ರಪಟಗಳನ್ನು ಹಾಕಿ ಶ್ರದ್ಧಾಂಜಲಿ ಅರ್ಪಿಸಿದ್ದು ಮಲೆನಾಡ ಸಿದ್ಧಾಪುರದಲ್ಲಿ ಪುನೀತ್‌ ಬಗ್ಗೆ ಹೊಂದಿದ ಅಭಿಮಾನಕ್ಕೆ ಸಾಕ್ಷಿ ಒದಗಿಸಿದಂತಿತ್ತು.ಪುನೀತ್‌ ಸಾವಿನ ನಂತರ ಇಲ್ಲಿಯ ಪ್ರಚಲಿತ ಅನಾಥಾಶ್ರಮವನ್ನು ಪುನೀತ್‌ ರಾಜ್‌ ಕುಮಾರ್‌ ಅನಾಥಾಶ್ರಮ ಎಂದು ನಾಮಕರಣ ಮಾಡಿದ್ದು ಕೂಡಾ ಈ ಕಾರ್ಯಕ್ರಮದ ಒಂದು ಭಾಗ ಎನ್ನುವುದು ವಿಶೇಶ.

ಪುನೀತ್‌ ಬದುಕಿನಿಂದ ಪ್ರೇರಣೆ ಪಡೆದು ಸಮಾಜದ ಪರವಾಗಿ ಕೆಲಸಮಾಡಲು ಈ ಸಮರ್ಪಣೆ ಅರ್ಪಣೆ. ಪುನೀತ್‌ ರ ಬದುಕು, ಸೇವೆಯ ಬಗ್ಗೆ ತಿಳಿದಷ್ಟೂ ಅವರ ಮೇಲೆ ಹೆಚ್ಚಿನ ಅಭಿಮಾನ ಉಕ್ಕುತ್ತದೆ. ಬದುಕಿದರೆ ಇವರಂತೆ ಬದುಕಿ ಎನ್ನುವುದನ್ನು ಹೇಳುವುದೇ ಈ ಕಾರ್ಯಕ್ರಮದ ಹಿಂದಿನ ಉದ್ದೇಶ.-ಹಿತೇಂದ್ರ ನಾಯ್ಕ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *