

ಗೋಮಾಳ ಭೂಮಿ ಸಕ್ರಮಗೊಳಿಸಲು ಕಾನೂನು ತಿದ್ದುಪಡಿ: ಬೊಮ್ಮಾಯಿ
ಆಡಳಿತವನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರದಂದು ಸರಮಾಲೆ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ಅಕ್ರಮ ಗೋಮಾಳ ಹಾಗೂ ಬಗರ್ಹುಕುಂ ಸಾಗುವಳಿದಾರರ ಜಮೀನು ಸಕ್ರಮಗೊಳಿಸಲು ಅಗತ್ಯ ಕಾನೂನು ತಿದ್ದುಪಡಿ ಮಾಡುವುದು ಸೇರಿದೆ.


ಬೆಂಗಳೂರು: ಆಡಳಿತವನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರದಂದು ಸರಮಾಲೆ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ಅಕ್ರಮ ಗೋಮಾಳ ಹಾಗೂ ಬಗರ್ಹುಕುಂ ಸಾಗುವಳಿದಾರರ ಜಮೀನು ಸಕ್ರಮಗೊಳಿಸಲು ಅಗತ್ಯ ಕಾನೂನು ತಿದ್ದುಪಡಿ ಮಾಡುವುದು ಸೇರಿದೆ.
ಶುಕ್ರವಾರ ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಗೋಮಾಳ, ಬಗರ್ಹುಕುಂ ಪ್ರದೇಶಗಳ ವ್ಯಾಜ್ಯಗಳಿಗೆ ಕಾನೂನು ಪರಿಹಾರ ನೀಡಬೇಕು. 53 ಹಾಗೂ 57ನೇ ನಮೂನೆಯಡಿ ಅರ್ಜಿ ಸಲ್ಲಿಸಿರುವ ಅಕ್ರಮ ಗೋಮಾಳ ಹಾಗೂ ಬಗರ್ಹುಕುಂ ಸಾಗುವಳಿದಾರರ ಜಮೀನು ಸಕ್ರಮಗೊಳಿಸಲು ಅಗತ್ಯ ಕಾನೂನು ತಿದ್ದುಪಡಿ ಮಾಡಲಾಗುವುದು. ಈ ಬಗ್ಗೆ ಕಾನೂನು ಇಲಾಖೆಯೊಂದಿಗೆ ಸಭೆ ನಡೆಸಿ ಚರ್ಚಿಸಿ ಅಂತಿಮ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.


ಗ್ರಾಮೀಣ ಭಾಗದಲ್ಲಿರುವ ರೈತರ ಪೋಡಿ ಮತ್ತಿತರ ಕಂದಾಯ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರವು ಸ್ವಾಮಿತ್ವ ಎಂಬ ಯೋಜನೆ ಜಾರಿಗೆ ತಂದಿದೆ. ಯೋಜನೆಯಡಿ ಎಲ್ಲಾ ಕಂದಾಯ ಸಮಸ್ಯೆಗಳಿರುವ ಭೂಮಿಯನ್ನು ಡ್ರೋನ್ ಮೂಲಕ ಸರ್ವೆ ನಡೆಸಲು ತಿಳಿಸಲಾಗಿದೆ. ಈಗಾಗಲೇ ಶೇ.59ರಷ್ಟುಸಾಧನೆ ನಡೆಸಿದ್ದು, ತ್ವರಿತಗತಿಯಲ್ಲಿ ಸರ್ವೆ ಪೂರ್ಣಗೊಳಿಸಲು 20 ಕೋಟಿ ರು. ವೆಚ್ಚದಲ್ಲಿ ಹೆಚ್ಚುವರಿ ಡ್ರೋನ್ಗಳ ಮೂಲಕ ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
‘ಅಕ್ರಮ-ಸಕ್ರಮ’ ಯೋಜನೆಯಡಿ ಹಲವಾರು ವರ್ಷಗಳಿಂದ ರೈತರು ನಡೆಸುತ್ತಿರುವ ಗೋಮಾಳ ಜಮೀನು ಸಕ್ರಮಕ್ಕೆ ಅರಣ್ಯ ಇಲಾಖೆಯು ತನ್ನ ವ್ಯಾಪ್ತಿಗೆ ಬರುವ ಕಂದಾಯ ಭೂಮಿಯನ್ನು ಗುರುತಿಸಿರುವಲ್ಲಿ ತಡವಾಗುತ್ತಿದೆ. ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಉಪಕ್ರಮವನ್ನು ತೆಗೆದುಕೊಳ್ಳಬೇಕು. ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರೊಂದಿಗೆ ಒಂದು ದಶಕದಿಂದ ಬಾಕಿ ಉಳಿದಿರುವ ಸಾವಿರಾರು ಕಂದಾಯ ಪ್ರಕರಣಗಳನ್ನು ವಿಲೇವಾರಿ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು. ಫಾಸ್ಟ್ ಟ್ರ್ಯಾಕ್ನಲ್ಲಿ ಫೈಲ್ಗಳನ್ನು ತೆರವುಗೊಳಿಸಲು ಹೆಚ್ಚುವರಿ ಸಹಾಯಕ ಸಿಬ್ಬಂದಿಯನ್ನು ಒದಗಿಸುತ್ತೇವೆಂದು ಮಾಹಿತಿ ನೀಡಿದ್ದಾರೆ. (kpc)
ಜಯಂತ ಕಾಯ್ಕಿಣಿ ಅಪ್ಪಟ ಪ್ರತಿಭೆ- ಮಾರುತಿ
ಸಿದ್ದಾಪುರ
ಜಯಂತ ಕಾಯ್ಕಿಣಿ ಸಾಹಿತ್ಯ, ಸಿನೆಮಾ, ದೂರದರ್ಶನ ಮುಂತಾದ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಅಪ್ಪಟ ಬಹುಮುಖ ಪ್ರತಿಭೆ ಉಳ್ಳ ವಿಶಿಷ್ಠ ವ್ಯಕ್ತಿ ಎಂದು ಹಿರಿಯ ಕಥೆಗಾರ ಮಾರುತಿ ಅಂಕೋಲೆಕರ ಶಿರಸಿ ಹೇಳಿದರು.
ಅವರು ಒಡ್ಡೋಲಗ ರಂಗ ಪರ್ಯಟನ ತಂಡ ಸಂಸ್ಕೃತಿ ಸಂಪದದ ಸ್ಥಾನಿಕ ನೆರವು, ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಪ್ರದರ್ಶಿಸಿದ ಜಯಂತ ಕಾಯ್ಕಿಣಿ ಅವರ ಕಥೆ ಆಧಾರಿತ ಕೋಮಲ ಗಾಂಧಾರ ನಾಟಕ ಪ್ರದರ್ಶನದ ಮುನ್ನ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚಲನಶೀಲ ವ್ಯಕ್ತಿತ್ವದ ಜಯಂತ ಕಾಯ್ಕಿಣಿ ಬದುಕಿನ ಕುರಿತಾಗಿ ನೋಡುವ ನೋಟ ಆಪ್ತವಾದದ್ದು. ಬದುಕಿನ ಮಿಡಿತವನ್ನು ಹತ್ತಿರದಿಂದ, ಸೂಕ್ಷ್ಮ ವಾಗಿ ಗಮನಿಸುತ್ತಾರೆ.ಅನೇಕ ಪ್ರಶಸ್ತಿಗಳು ಬಂದರೂ ಸ್ನೇಹಜೀವಿಯಾಗೇ ಇರುವ ಅವರ ಹೆಚ್ಚುಗಾರಿಕೆ. ಜನರನ್ನ ತಲುಪುವದೇ ಆಧ್ಯಾತ್ಮ ಎನ್ನುವದು ಅವರ ನಿಲುವು. ಕಥೆ, ಕವಿತೆ,ಅಂಕಣ,ನಾಟಕ ಮುಂತಾಗಿ ಅವರ ಬರೆಹಗಳು ಸಮೃದ್ಧ ಭಾಷೆ, ಲಾಲಿತ್ಯ, ತೀವ್ರತೆಗಳನ್ನು ಸಹಜವಾಗೇ ಒಳಗೊಂಡಿವೆ. ಈ ಜಗತ್ತಿನಿಂದ ಇನ್ನೊಂದು ಜಗತ್ತಿಗೆ ಕರೆದುಕೊಂಡು ಹೋಗುವ ಶಕ್ತಿ ಅವರ ಬರೆಹಗಳಲ್ಲಿದೆ. ಕಲೆ, ವ್ಯಕ್ತಿತ್ವ, ಪ್ರಸಿದ್ಧಿಗಳಲ್ಲಿ ಅವರು ಮೀರಿಸಲಾಗದ ವ್ಯಕ್ತಿ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕವಿ, ಕಥೆಗಾರ ಉಪನ್ಯಾಸಕ ಡಾ|ರಾಜು ಹೆಗಡೆ ಮಾತನಾಡಿ ಜಯಂತ ಕಾಯ್ಕಿಣಿ ಕೇವಲ ಜಿಲ್ಲೆಯ ಕವಿಯಲ್ಲ, ನಾಡಿನ ಕವಿ.ಕಾಣದೇ ಇರಬಹುದಾದ ಸಂಗತಿಗಳನ್ನು ಕಾಣುವ ಒಳನೋಟ ಅವರದ್ದು. ಯುವ ಜನಾಂಗ ಇಷ್ಟಪಡುವ ಸಿನೆಮಾ ಹಾಡುಗಳ ಮೂಲಕ ಜನಪ್ರಿಯವಾಗಿದ್ದಾರೆ ಅನ್ನಿಸಿದರೂ ತಮ್ಮ ಕಥೆ, ಕವಿತೆಗಳ ಮೂಲಕ ಸಾಕಷ್ಟು ಪ್ರಸಿದ್ಧರಾದವರು. ಮೂಲತ: ಕವಿ ಮನಸ್ಸಿನ ಜಯಂತರ ಕಥೆಗಳು, ಅಂಕಣಗಳು ಕಾವ್ಯದ ಇನ್ನೊಂದು ಆವೃತ್ತಿ. ಅವರ ಆರಂಭದ ಬರೆಹಗಳು ವ್ಯಕ್ತಿ ಕೇಂದ್ರಿತವಾಗಿದ್ದು ನಂತರದಲ್ಲಿ ಗ್ರಹಿಕೆಯ ಕ್ರಮ ಬದಲಾಗಿರುವದನ್ನು ಕಾಣಬಹುದಾಗಿದೆ. ಕಾವ್ಯ ಅಂದರೆ ಅನುಭವ ಎಂದು ತಿಳಿದ ಜಯಂತರ ಎಲ್ಲ ಬರೆಹಗಳೂ ಮನುಷ್ಯಪರವಾಗಿ ಮೂಡಿಬಂದಿವೆ. ಅವರ ಬರವಣಿಗೆಯ ಹಾಗೇ ಹೊಸ ಜನಾಂಗವನ್ನು ಸ್ಪರ್ಶಿಸುವ ಗುಣ ಸಾಹಿತ್ಯ, ನಾಟಕಗಳಿಗೆ ಅಗತ್ಯವಾಗಿದೆ ಎಂದರು.
ಒಡ್ಡೋಲಗ ರಂಗತಂಡದ ಮುಖ್ಯಸ್ಥ ಗಣಪತಿ ಬಿ.ಹಿತ್ಲಕೈ ಸ್ವಾಗತಿಸಿದರು. ಪ್ರೊ|ಎಂ.ಕೆ.ನಾಯ್ಕ ಹೊಸಳ್ಳಿ ನಿರೂಪಿಸಿ,ವಂದಿಸಿದರು.
ನಂತರ ಜಯಂತ ಕಾಯ್ಕಿಣಿ ರಚನೆಯ, ಗಣಪತಿ ಬಿ.ಹಿತ್ಲಕೈ ನಿರ್ದೇಶನದ, ಪ್ರಸನ್ನ ವೈದ್ಯ ಹೆಗ್ಗಾರು ಸಂಗೀತ ಸಂಯೋಜನೆಯ, ವಿಜಯ ಹೆಗಡೆ ದೊಡ್ಮನೆ ಪ್ರೇರಣೆ, ಗಂಗಾಧರ ಕೊಳಗಿ ಸಾಹಿತ್ಯ ಸಲಹೆಯ ಕೋಮಲ ಗಾಂಧಾರ ನಾಟಕ ಪ್ರದರ್ಶನಗೊಂಡಿತು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






