ಸಮಗ್ರಕೃಷಿಯ ಸಾಧಕ ಪ್ರಕಾಶ ಹೆಗಡೆ

ಸಮಗ್ರ ಕೃಷಿ ಚಿಕ್ಕ ಹಿಡುವಳಿದಾರರ ಲಾಭದಾಯಕ ವ್ಯವಸಾಯ.ಮಲೆನಾಡು,ಕರಾವಳಿಗಳಲ್ಲಿ ದೊಡ್ಡ ರೈತರಿಗಿಂತ ಚಿಕ್ಕ ಹಿಡುವಳಿದಾರರ ಸಂಖ್ಯೆಯೆ ಹೆಚ್ಚು. ಆಧುನಿಕ ಕೃಷಿ,ಕೃಷಿ ಪ್ರಯೋಗ ಮಾಡದೆ ಚಿಕ್ಕ ಹಿಡುವಳಿಯಲ್ಲಿ ಲಾಭಗಳಿಸುವುದು ಸುಲಭವಲ್ಲ ಆದರೆ ಚಿಕ್ಕ ಹಿಡುವಳಿಯಲ್ಲಿ ಲಾಭಮಾಡುವ ವಿರಳ ಸಾಧಕರಿಗೇನೂ ಕಡಿಮೆ ಇಲ್ಲ.
ನೀವಿಲ್ಲಿ ಓದುತ್ತಿರುವುದು ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಗುಡ್ಡೇಕೊಪ್ಪದ ಪ್ರಕಾಶ ಹೆಗಡೆಯವರ ತೋಟದ ಬಗ್ಗೆ. ಅನಿಶ್ಚಿತ ಮಳೆ, ಅವೈಜ್ಞಾನಿಕ ಬೆಲೆ ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಮಘೇಗಾರಿನ ಗುಡ್ಡೆಕೊಪ್ಪದ ಪ್ರಕಾಶ್‌ ಹೆಗಡೆ ತಮ್ಮ ವಯೋವೃದ್ಧ ತಂದೆಯೊಂದಿಗೆ ಚಿಕ್ಕ ಹಿಡುವಳಿಯಲ್ಲಿ ಕೃಷಿ ಪ್ರಯೋಗ,ಸಂಶೋಧನೆ ಪ್ರಾರಂಭಿಸಿದರು.

ತಮ್ಮ ೨.೫ ಎಕರೆ ಒಣ ಜಮೀನಿನಲ್ಲಿ ಅಡಿಕೆ,ತೆಂಗು ಬಾಳೆಯ ಜೊತೆಗೆ ಪ್ರತ್ಯೇಕವಾಗಿ ಏಲಕ್ಕಿ ಮತ್ತು ಕಬ್ಬನ್ನು ನಾಟಿ ಮಾಡಿದರು.
ಈ ಕೆಲಸದ ಜೊತೆಗೆ ಕೃಷಿ ಕೆಲಸಕ್ಕೆ ಬಳಸುವ ಚೂಳಿ, ಕಲ್ಲಿ ತಯಾರಿಸತೊಡಗಿದರು. ಮಾರುಕಟ್ಟೆಯಿಂದ ತಂತಿ-ರಬ್ಬರ್‌ ಪೈಪ್‌ ತರಿಸಿ ಚೂಳಿಬುಟ್ಟಿಯನ್ನು ತಯಾರಿಸಿದರು. ದಿನವೊಂದಕ್ಕೆ ಎರಡ್ಮೂರು ಚೂಳಿ ತಯಾರಿಸುವ ಹೆಗಡೆ ಈ ಸಿದ್ಧ ವಸ್ತುಗಳನ್ನು ಸ್ಥಳೀಯ ಸಹಕಾರಿ ಸಂಘಗಳ ಮೂಲಕ ಮಾರಾಟ ಮಾಡುತ್ತಾರೆ. ರಬ್ಬರ್‌ ಚೂಳಿ, ಕಲ್ಲಿ ತಯಾರಿಸುವ ಪ್ರಕಾಶ್‌ ಹೆಗಡೆಯವರ ಹವ್ಯಾಸ ಇದಾದರೆ ಕೃಷಿ ಅವರ ವೃತ್ತಿ ಮತ್ತು ಅಭ್ಯಾಸ.

ಕಡಿಮೆ ಜಮೀನಿನಲ್ಲಿ ನೀರಾವರಿ ವ್ಯವಸ್ಥೆ ಮಾಡಿ ವರ್ಷಕ್ಕೆ ಎರಡು ಬಾರಿ ಭತ್ತ ಬೆಳೆಯುವ ಇವರು ಕೆಂಪಕ್ಕಿ ಸಣ್ಣಕ್ಕಿ ಬೆಳೆದು ಜಯಗಳಿಸಿದ್ದಾರೆ.
ಇವರ ಗದ್ದೆಯ ಕುಳಿ ಕಬ್ಬು ಕಡಿಮೆ ಕೆಲಸದಲ್ಲಿ ಹೆಚ್ಚು ಇಳುವರಿ ನೀಡುತ್ತಿದೆ.
ಮಲೆನಾಡಿನ ಕೃಷಿಕರು ಬಿಡುತ್ತಿರುವ ಏಲಕ್ಕಿ ಬೆಳೆಗೆ ಶೇಡ್‌ ನೆಟ್‌ ಮೂಲಕ ವಿನೂತನ ವಿಧಾನ ಪರಿಚಯಿಸಿರುವ ಪ್ರಕಾಶ್‌ ಹೆಗಡೆಯವರ ತೋಟದಲ್ಲಿ ಒಂದು ವರ್ಷದ ಏಲಕ್ಕಿ ಹಿಂಡುಗಳನ್ನು ನೋಡಿದರೆ ಹೀಗೂ ಉಂಟೆ ಎನಿಸದಿರದು.

ಭತ್ತ ಕಬ್ಬು, ಬಾಳೆ ಏಲಕ್ಕಿ ಜೊತೆಗೆ ಅಡಿಕೆ, ಕಾಳು ಮೆಣಸು ಬೆಳೆದಿರುವ ಪ್ರಕಾಶ ಹೆಗಡೆ ಸಮಗ್ರ ಕೃಷಿಯ ಸಾಧಕರಾಗಿ ಹೆಸರು ಮಾಡುತಿದ್ದಾರೆ. ಕೃಷಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಲಾಭದಾಯಕವಾಗದಿದ್ದರೆ ಹೊಸ ವಿಧಾನಗಳ ಮೂಲಕ ಲಾಭಗಳಿಸುವ ತಂತ್ರ ಹುಡಕಬೇಕು ಎನ್ನುವ ಹೆಗಡೆಯವರ ಬಹುಬೆಳೆಯ ಮಾದರಿ ಇತರರಿಗೂ ಅನುಕರಣೀಯವಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *