ಪ್ರವಾಸಿಗರ ಸ್ವರ್ಗಸದೃಶ ದೇವರ ತೋಟ ಇರುವುದೆಲ್ಲಿ ಗೊತ್ತೆ ?

ದೇವರು ರುಜು ಮಾಡಿದನು ಅದನು ಕವಿ ನೋಡಿದನು ಎಂದು ಹೇಳಿದ್ದು ಕವಿ ಕುವೆಂಪು. ಇಂಥ ದೇವರ ರುಜು ಹಕ್ಕಿಗಳ ಹಾರಾಟವನ್ನು ನೋಡಲು ನೀವು ದೇವರ ತೋಟಕ್ಕೆ ಹೋಗಬೇಕು. ಹೌದು ದೇವರ ತೋಟ ಎಲ್ಲಿದೆ? ಏನಿದರ ವಿಶೇಶ ಎಂದು ನೀವೂ ತಲೆಕೆರೆದುಕೊಳ್ಳಬಹುದು. ದೇವರ ತೋಟ ಎಂದರೆ ದೇವಭಾಗ, ಈ ದೇವಭಾಗ ಕರ್ನಾಟಕದ ಕಾಶ್ಮೀರ ಕಾರವಾರದಲ್ಲಿದೆ.

ಗೋವಾ ಮತ್ತು ಕಾರವಾರವನ್ನು ವಾಸ್ತವದಲ್ಲಿ ಕರ್ನಾಟಕ ಮತ್ತು ಗೋವಾವನ್ನು ಜೋಡಿಸುವ ಕಾಳೀ ಸೇತುವೆ ಕಾರವಾರದಲ್ಲಿದೆ. ಅದರ ಮೇಲೆ ವಾಹನದಲ್ಲಿ ಅಥವಾ ಅದರ ಕೆಳಗೆ ದೋಣಿ ಬೋಟ್‌ ಗಳಲ್ಲಿ ಹೋದರೆ ಕಣ್ಣಳತೆ ದೂರದಲ್ಲೇ ಸಿಗುವುದು ದೇವಭಾಗ,
ದೇವಭಾಗ ಎಂದರೆ ಕನ್ನಡದಲ್ಲಿ ದೇವರ ತೋಟ ಎಂದರ್ಥ. ಇಂಥ ದೇವಭಾಗದ ಬಗ್ಗೆ ಅದ್ಭುತ ಕವಿತೆ ಬರೆದಿದ್ದ ಬಂಡಾಯ ಕವಿ ದಿವಂಗತ ಚಂಪಾ ದೇವಭಾಗ ಹೆಸರಿನಲ್ಲೇ ಕವನ ಸಂಕಲನ ಹೊರತಂದಿದ್ದರು.


ಸಾಹಿತಿಗಳು,ಕವಿಗಳು ಸಿನೆಮಾ ತಾರೆಯರು, ಕಲಾವಿದರ ಸೇರಿದ ಎಲ್ಲರನ್ನೂ ಆಕರ್ಷಿಸುವ ದೇವಭಾಗದ ಸೌದರ್ಯವೇ ಆ ತೆರನಾದದ್ದು. ಒಂದೆಡೆ ಸಮುದ್ರಸೇರುವ ಕಾಳಿ ಸಂಗಮ ಅದರ ಪಕ್ಕವೇ ದೇವಘಡ, ಕುರುಮ್ ಘಡಗಳೆನ್ನುವ ದ್ವೀಪಗಳು ಈ ಸ್ವರ್ಗಸದೃಶ ಸೌದರ್ಯ ನೋಡಲು ಕಣ್ಣುಗಳೇ ಸಾಲುವುದಿಲ್ಲ. ಜೊತೆಗೆ ದೋಣಿ ವಿಹಾರ, ಬೋಟಿಂಗ್‌, ಕ್ಯಾಂಪ್ಫೈರ್‌, ರೆಸಾರ್ಟ್‌ ಇಂಥ ವಿರಳ ಸೌಂದರ್ಯ, ಅನುಕೂಲಗಳ ಈ ಪ್ರದೇಶ ಪ್ರವಾಸಿಗರಿಗೆ,ಸ್ಥಳಿಯರಿಗೆ ಮುಕ್ತವಾಗಿದೆ.‌


ಅರಣ್ಯ ಇಲಾಖೆ ಇಲ್ಲಿ ಜಂಗಲ್‌ ಲಾಜ್‌ ರೆಸಾರ್ಟ್‌ ಮಾಡಿ ಜನರನ್ನು ಕರೆಯುತ್ತಿದೆ. ದೂರದೂರದಿಂದ ಇಲ್ಲಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರು ಈ ಸೊಬಗನ್ನು ಸವಿದು ಕತೆ ಬರೆದು,ಕವನ ಹೆಣೆದು ಸುಖಿಸುತ್ತಾರೆ. ದೇವಭಾಗ ಹೆಸರಿಗೆ ತಕ್ಕಂತೆ ದೇವ ರ ತೋಟದಂತಿರುವ ಈ ಪ್ರವಾಸಿಸ್ಥಳದಲ್ಲಿ ತಂಗುವ ಜನರು ಇಲ್ಲಿಂದ ಡಾಲ್ಪಿನ್‌ ವೀಕ್ಷಣೆಗೂ ತೆರಳುತ್ತಾರೆ. ನದಿ,ಕಡಲು ಹರಿದು ಕೂಡಿ ದ್ವೀಪಗಳನ್ನು ಸೃಷ್ಟಿಸಿ ಸ್ವರ್ಗಕ್ಕೇ ಸವಾಲು ಹಾಕುವ ಈ ನಿಸರ್ಗ ಪ್ರತಿಯೊಬ್ಬರೂ ನೋಡಲೇಬೇಕಾದ ಸ್ಥಳ.  ದೇವರತೋಟ ದೇವಭಾಗ ಈಗ ಎಲ್ಲರನ್ನೂ ಕೈ ಬೀಸಿ ಕರೆಯುತ್ತಿದೆ ನೋಡಿ ಬನ್ನಿ.
(ಕನ್ನೇಶ್‌ ಕೋಲಶಿರ್ಸಿ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

teachers elc results… ಶಿಕ್ಷಕರ ಸಂಘ: ಮತ್ತೆ ಗೆದ್ದ ಹಳೆ ತಂಡ

ಸಿದ್ದಾಪುರ, ಇಲ್ಲಿಯ ಶಿಕ್ಷಕರ (ಕ.ರಾ.ಪ್ರಾ.ಶಿ.ಸಂಘ ದ ಸಿದ್ಧಾಪುರ ತಾಲೂಕಾ ಶಾಖೆ) ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಸಂಘದ ನಿರ್ಧೇಶಕರಲ್ಲಿ ಹೆಚ್ಚಿನವರನ್ನು ಸೋಲಿಸಿ ಹಳೆ ತಂಡ...

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

Latest Posts

teachers elc results… ಶಿಕ್ಷಕರ ಸಂಘ: ಮತ್ತೆ ಗೆದ್ದ ಹಳೆ ತಂಡ

ಸಿದ್ದಾಪುರ, ಇಲ್ಲಿಯ ಶಿಕ್ಷಕರ (ಕ.ರಾ.ಪ್ರಾ.ಶಿ.ಸಂಘ ದ ಸಿದ್ಧಾಪುರ ತಾಲೂಕಾ ಶಾಖೆ) ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಸಂಘದ ನಿರ್ಧೇಶಕರಲ್ಲಿ ಹೆಚ್ಚಿನವರನ್ನು ಸೋಲಿಸಿ ಹಳೆ ತಂಡ ಮತ್ತೆ ಗೆಲುವಿನ ನಗೆ ಬೀರಿದೆ. ಶುಕ್ರವಾರ ನಡೆದ ಈ ಚುನಾವಣೆಯ ಮತ ಎಣಿಕೆಯ ಪ್ರಕ್ರೀಯೆ ಸ್ಥಳೀಯ ಬಾಲಿಕೊಪ್ಪ ಶಾಲೆಯಲ್ಲಿ ತಡ ರಾತ್ರಿಯ ವರೆಗೆ ನಡೆದಿತ್ತು. ಹಿಂದಿನ ಅವಧಿಗೆ ಆಯ್ಕೆಯಾಗಿದ್ದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *