‌ ಬಚ್ಚಿಟ್ಟ ಸತ್ಯ ನಂ-೧- ಶಿರಸಿ ಹನಿಟ್ರ್ಯಾಪ್‌ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್…..ಪದ್ಮಜಾ ಜ್ಯೋತಿ ಆಗಿದ್ದೇಕೆ? samajamukhi.net exclusive…

ಶಿರಸಿಯ ಸಂಪನ್ನರ ಸಹಭಾಗಿತ್ವದ ಹನಿಟ್ರ್ಯಾಪ್‌ ಪ್ರಕರಣದ ಹಿಂದೆ ರಾಜ್ಯದ ಪ್ರಭಾವಿಗಳ ಕರಿನೆರಳು ಕಾಣಿಸುತ್ತಿದ್ದು ಸಂಘದೋಷದ ಸಂಪನ್ನರು ಈ ಪ್ರಕರಣವನ್ನು ಹಳ್ಳ ಹಚ್ಚಲು ಪ್ರಯತ್ನಿಸುತ್ತಿರುವ ಬಗ್ಗೆ ಅನುಮಾನಗಳ ಹುತ್ತ ಹುಟ್ಟಲಾರಂಭಿಸಿದೆ.

ಶಿರಸಿಯ ಗಣೇಶ್‌ ನಗರದ ವಿದ್ಯಾವಂತ ಯುವಕ ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯದಲ್ಲಿ ನೌಕರಿ ಸೇರುವ ಆಸೆಯಿಂದ ಹಣ ಕೊಟ್ಟು ನೌಕರಿ ಗಿಟ್ಟಿಸುವ ಪ್ರಯತ್ನ ಮಾಡುತ್ತಾನೆ. ಈ ಯುವಕನಿಗೆ ನೆರವಾದವರು ಹಿಂದುತ್ವವಾದಿಗಳು, ಈ ಹಿಂದುತ್ವವಾದಿಗಳು ಮತೀಯವಾದಿ ಯುವ ಬ್ರಿ ಗೇಡ್‌ ನ ಅಸಲಿ ದಂಧೆಕೋರರನ್ನು ಸಂಪರ್ಕಿಸಿ ಯುವಕನಿಂದ ಹಣಕ್ಕೆ ಬೇಡಿಕೆ ಇಡುತ್ತಾರೆ. ಈ ವ್ಯವಹಾರದಲ್ಲಿ ಭಾಗಿಯಾದವಳು ಒಂದು ಕಾಲದ ನಟಿ, ವಿಶ್ವವಿಖ್ಯಾತ ಪತ್ರಕರ್ತನೊಬ್ಬನ ಸ್ನೇಹಿತೆ, ಪಶ್ಚಿಮಘಟ್ಟದ ಅನಂತ ಪರಿಸರದ ಪರಿಚಾರಕಿ ಪದ್ಮಜಾ!

ಈ ಪದ್ಮಜಾ ಜೋಯೀಸ್‌ ಒಂದು ಕಾಲದಲ್ಲಿ ತೀರ್ಥಳ್ಳಿಯ ಜಮೀನ್ಧಾರರ ಕುಟುಂಬದ ಕಲಾವಿದೆ. ಇವರಿಗೆ ಪರಿಚಯ,ಸಂಪರ್ಕ ಇರುವವರ ಹೆಸರು ಕೇಳಿದರೆ ಸಂಘಕ್ಕೆ ಸಂಘವೇ ನಡುಗಬೇಕು ಅಂಥ ಪ್ರಭಾವಿ ಮಹಿಳೆ ಯುವ ಉಪನ್ಯಾಸಕನಿಗೆ ಹನಿಟ್ರ್ಯಾಪ್‌ ಖೆಡ್ಡಾ ಮಾಡಿ ಕೆಡವಿದ್ದು, ಈ ಹನಿಟ್ರ್ಯಾಪ್‌ ಪ್ರಕರಣದ ಪ್ರಮುಖ ಆರೋಪಿಯ ಹೆಸರು ಪದ್ಮಜಾ ಬದಲು ಜ್ಯೋತಿ ಎಂದು ಬದಲಾದದ್ದು ಎಲ್ಲವೂ ನಿಗೂಢ.

ಆದರೆ ಈ ಜ್ಯೋತಿ ಅಲಿಯಾಸ್‌ ಪದ್ಮಜಾ ಸಾಹಿತಿ, ಸಂಘಟಕಿ, ನಟಿ ಇತ್ಯಾದಿ… ಇಂಥ ಪದ್ಮಜಾ ಭಾಗಿಯಾದ ಹಿಂದುತ್ವವಾದಿಗಳ ಹನಿಟ್ರ್ಯಾಪ್‌ ಪ್ರಕರಣದಲ್ಲಿ ಅಮಾಯಕನೊಬ್ಬನನ್ನು ಬಲಿಪಶು ಮಾಡಿ ನವಟಂಕಿ ಸಂಘದ ಹಲಾಲುಕೋರ ತಲೆಹಿಡುಕರನ್ನು ಬಚಾವು ಮಾಡಲು ಪ್ರಯತ್ನಿಸುತ್ತಿರುವವರು ಮತ್ಯಾರೂ ಅಲ್ಲ ರಾಜ್ಯದ ಗೃಹಮಂತ್ರಿ ಸಾಕ್ಷಾತ್ ಅರಗ ಜ್ಞಾನೇಂದ್ರ ಮತ್ತು ಅವರ ಸಂಘದ ಸದಸ್ಯರು ಎನ್ನುವುದು ಮಾಧ್ಯಮಗಳು ಮತ್ತು ಪೊಲೀಸರು ಮುಚ್ಚಿಟ್ಟ ಸತ್ಯ……

ನೌಕರಿ ಕೊಡಿಸುವ ನೆಪದಲ್ಲಿ ಬಿ.ಜೆ.ಪಿ. ಮತ್ತು ಈಗಿನ ಸರ್ಕಾರದ ಆಪ್ತೆ ಪದ್ಮಜಾ ಜೋಯಿಸ್‌ ತನ್ನನ್ನು ವಿಶ್ವವಿದ್ಯಾಲಯವೊಂದರ ಸಿಂಡಿಕೇಟ್‌ ಸದಸ್ಯೆ ಎಂದು ಗುರುತಿಸಿಕೊಳ್ಳು ತ್ತಾರೆ. ಹೀಗೆ ಸರ್ಕಾರ ಮತ್ತು ಬಿ.ಜೆ.ಪಿ. ಪ್ರಭಾವಿಗಳ ಜೊತೆಗಿನ ಪದ್ಮಜಾ ಸಂಖ್ಯದ ಹಿಂದೆ ಆಕೆ ತನ್ನ ಆಪ್ತರಾಗಿರುವ ಕೆಲವರ ಫೋಟೋಗಳನ್ನು ತೋರಿಸುತ್ತಾರೆ. ಇಂಥ ಚಿತ್ರಗಳಲ್ಲಿ ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷರು, ಮಾಜಿ ಮುಖ್ಯಮಂತ್ರಿಗಳು, ಹಾಲಿ ಸಚಿವರ ಚಿತ್ರಗಳೆಲ್ಲಾ ಇರುತ್ತವೆ. ಇಂಥ ಪೂರಕ ಅಂಶಗಳನ್ನೇ ಗುರಾಣಿ ಮಾಡಿಕೊಂಡ ಸೂಲಿಬೆಲೆ ಚಕ್ರವರ್ತಿಯ ಆಪ್ತರು ನಡೆಸಿದ ಹನಿಟ್ರ್ಯಾಪ್‌ ಗೆ ಬಲಿಯಾಗಿ ಗೋಳಾಡುತ್ತಿರುವವರು ಮಾತ್ರ ಅಮಾಯಕರು! ( ನಿರೀಕ್ಷಿಸಿ…. ಇನ್ನಷ್ಟು ೨ ನೇ ಕಂತಿನಲ್ಲಿ)

ಶಿರಸಿ, ಕಾರವಾರ(ಫೆ. 03): ಶಿರಸಿಯಲ್ಲಿ ಹನಿ ಟ್ರ್ಯಾಪ್ (Honeytrap) ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು (Arrest) ಬಂಧಿಸಲಾಗಿದೆ.  ಹನಿಟ್ರ್ಯಾಪ್ ಮಾಡಿ ಸಂತ್ರಸ್ತನಿಂದ 15 ಲಕ್ಷ ರೂ. ಬೇಡಿಕೆಯಿಟ್ಟಿದ್ದ(Blackmail) ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮಾಹಿತಿ ಗೊತ್ತಾಗಿ 24 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ.  ಶಿರಸಿ (Sirsi)ಉಂಚಳ್ಳಿಯ ಅಜಿತ್ ಶ್ರೀಕಾಂತ್ ನಾಡಿಗ್ (25), ಬನವಾಸಿ ರಸ್ತೆಯ ಗೊಲಕೇರಿ ಓಣಿಯ ಧನುಷ್ಯ ಕುಮಾರ್ ಯಾನೆ ದಿಲೀಪ್ ಕುಮಾರ್ ಶೆಟ್ಟಿ (25) ಹಾಗೂ ಶಿವಮೊಗ್ಗ (Shivamogga)ಗೋಪಾಳ ರಂಗನಾಥ್ ಬಡಾವಣೆಯ ಪದ್ಮಜಾ ಡಿ.ಎನ್. (50) ಬಂಧಿತ ಆರೋಪಿಗಳು.

ಆರೋಪಿ ಅಜಿತ್ ಜತೆ ಸಂತ್ರಸ್ತ ಕಳೆದ 5 ವರ್ಷದಿಂದ ಪರಿಚಯ ಹೊಂದಿದ್ದ ಈ ಕಾರಣದಿಂದ ಸರಕಾರಿ ಖಾಯಂ ಉಪನ್ಯಾಸ ಹುದ್ದೆ ಕೊಡಿಸೋದಾಗಿ  ಸಂತ್ರಸ್ತನನ್ನು  ಆರೋಪಿ ಅಜಿತ್ ಹಾಗೂ ಧನುಷ್ಯ ನಂಬಿಸಿದ್ದರು.

ಜನವರಿ 17ರಂದು ಸಂತ್ರಸ್ತನನ್ನು ಶಿವಮೊಗ್ಗಕ್ಕೆ ಕರೆಯಿಸಿ ಆತನನ್ನು ರೂಂ ಒಂದರಲ್ಲಿ ಕೂಡಿಹಾಕಿದ್ದರು. ಬಳಿಕ ಆತನನ್ನು ನಗ್ನಗೊಳಿಸಿ ಮಹಿಳೆಯ ಜತೆ ರಾಸ ಲೀಲೆ ನಡೆಸಿದಂತೆ ಫೋಟೊ ಹಾಗೂ ವಿಡಿಯೋ ಚಿತ್ರೀಕರಿಸಿದ್ದರು. 15 ಲಕ್ಷ ರೂ.‌ನೀಡದಿದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದರು. ಅಲ್ಲದೇ, ಜನವರಿ 18ರಂದು ಆತನ ತಂದೆಯ ಬಳಿ ತೆರಳಿ ಫೋಟೊ, ವಿಡಿಯೋ ತೋರಿಸಿ ಪುತ್ರ ಜೀವಂತವಾಗಿ ಬೇಕಂದ್ರೆ ಹಣ ನೀಡುವಂತೆ ಧಮ್ಕಿ ಹಾಕಿದ್ದರು.

ಈ ಸಂದರ್ಭದಲ್ಲಿ ಸುಳ್ಳು ಕರಾರು ಪತ್ರ, ಬ್ಲ್ಯಾಂಕ್ ಚೆಕ್ ಕೂಡಾ ಬರೆಯಿಸಿಕೊಂಡ ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಂತ್ರಸ್ತನ ದೂರಿನ ಹಿನ್ನೆಲೆ ತನಿಖೆ ಕೈಗೆತ್ತಿಕೊಂಡಿದ್ದ ಶಿರಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಡಿ.ಎಸ್.ಪಿ. ರವಿ ನಾಯ್ಕ್ ಮಾರ್ಗದರ್ಶನದಲ್ಲಿ ಸಿ.ಪಿ.ಐ. ರಾಮಚಂದ್ರ ನಾಯಕ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಿತಾತಕ ತಾಯಿ -ಮಗಳು:   ತಾಯಿ -ಮಗಳು ಹನಿಟ್ರ್ಯಾಪ್ ದಂಧೆ ಮಾಡ್ತಿದ್ದ ಈ ತಂಡ ಪುರುಷರನ್ನ ಪುಸಲಾಯಿಸಿ ಮೋಸದ ಬಲೆಗೆ ಬೀಳಿಸಿ ನಗ್ನ ವಿಡಿಯೋ ಮಾಡ್ಕೊಂಡು ಯಾಮಾರಿಸುತ್ತಿದ್ದರು ಏಕಾಂತದಲ್ಲಿರುವಾಗ ಎಂಟ್ರಿ ಕೊಡೋ ಯುವಕರು ಪೊಲೀಸರೆಂದು ಹೇಳಿ ಹೆದರಿಸ್ತಿದ್ರು. ಇದು ವೇಶ್ಯಾಗೃಹ. ಎಫ್‍ಐಆರ್ ಹಾಕ್ತೀವಿಅಂತ ಅವಾಜ್ ಹಾಕ್ತಾರೆ. ಸ್ಪಾಟ್ ಸೆಟ್ಲ್‍ಮೆಂಟ್‍ಗೆ ಆಫರ್ ಕೊಡ್ತಾರೆ. ವಿಷ್ಯ ಹೊರಬಂದ್ರೆ ಮರ್ಯಾದೆ ಅಂತ ಕೇಳಿದಷ್ಟು ಹಣ ಕೊಟ್ಟು ಮನೆ ಸೇರ್ತಿದ್ರು ಮೋಸಕ್ಕೊಳಗಾದವರು. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು ನಿಮ್ಮ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕಿ ನಿಮ್ಮ ಕುಟುಂಬದವರಿಗೂ ಕಳಿಸುತ್ತೇವೆಂದು ಹೆದರಿಸುತ್ತಿದ್ರು. ಇದರಿಂದ ಬೇಸತ್ತ ವ್ಯಕ್ತಿಗಳು ಖಾಕಿಗೆ ವಿಚಾರ ಮುಟ್ಟಿಸಿದಾಗ ರಿಯಲ್ ಪೊಲೀಸರು 13 ಜನರನ್ನು ಬಂಧಿಸಿದ್ದ ಪ್ರಕರಣ  ಚಿಕ್ಕಮಗಳೂರಿನಿಂದ ವರದಿಯಾಗಿತ್ತು.

ಈ ಗ್ಯಾಂಗ್ ಹೆಚ್ಚಾಗಿ ಟಾರ್ಗೆಟ್ ಮಾಡ್ತಿದ್ದದ್ದು ಮಧ್ಯ ವಯಸ್ಕ ಹಾಗೂ ಆರ್ಥಿಕವಾಗಿ ಚೆನ್ನಾಗಿರೋ ವ್ಯಕ್ತಿಗಳನ್ನಷ್ಟೆ. ಅವರ ಪರ್ಸನಲ್ ಡೇಟಾವನ್ನ ಕಲೆಹಾಕಿ ಸೈಲೆಂಟಾಗಿ ಹನಿಟ್ರಾಪ್ ದಂಧೆಗೆ  ಕೆಡವಿಕೊಳ್ತಿದ್ರು. ವಿಷಯ ತಿಳಿದ ಕೂಡಲೇ ಕ್ಷಿಪ್ರ ಕಾರ್ಯಚರಣೆ ನಡೆಸಿದ ಕಾಫಿನಾಡ ನಗರ ಖಾಕಿಗಳು 6 ಗಂಡಸರು, 7 ಹೆಂಗಸರು ಸೇರಿದಂತೆ 13 ಜನರನ್ದನು ಬಂಧಿಸಲಾಗಿತ್ತು. ಚಿಕ್ಕಮಗಳೂರು ನಗರ ಸೇರಿದಂತೆ ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಕಿರಾತಕರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ದಂಧೆಯನ್ನು  ತಾಯಿ ಮಗಳು ವ್ಯವಸ್ಥಿತವಾಗಿ ನಿರ್ವಹಿಸಿಕೊಂಡು ಬಂದಿದ್ದರು.  ಇಡೀ ರಾಜ್ಯದಲ್ಲಿ ಜಾಲ ಸಕ್ರಿಯವಾಗಿತ್ತು.  (sn)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *