ಈಗ ರಾಜ್ಯದ ಹಿಂದುಳಿದವರ ಚಾಂಪಿಯನ್‌ ಯಾರು?

ಭಾರತದಂಥ ಬಹುತ್ವದ ದೇಶದಲ್ಲಿ ಪ್ರತಿಯೊಂದು ವ್ಯಕ್ತಿ, ಜಾತಿ,ಧರ್ಮ ಗಳಿಗೆ ತಮ್ಮದೇ ಆದ ಮಹತ್ವ,ಪ್ರಾಮುಖ್ಯತೆಗಳಿವೆ. ಭವ್ಯ ಭಾರತದ ರಾಷ್ಟ್ರಪತಿ ಬ್ರಾಹ್ಮಣನೋ? ದಲಿತರೋ? ಮುಸ್ಲಿಂರೋ ಎನ್ನುವ ಅಂಶ ಕೂಡಾ ಮಹತ್ವದ್ದಾಗುತ್ತದೆ. ಭಾರತದ ಪ್ರಧಾನಿಯಾಗುವವರು ಬ್ರಾಹ್ಮಣರು,ಹಿಂದುಳಿದವರು,ದಲಿತರು, ಮುಸ್ಲಿಂ ಅಥವಾ ಇತರರೇ ಎನ್ನುವುದು ಕೂಡಾ ಚರ್ಚೆಯ ವಿಷಯ. ಭಾರತದ ಪ್ರಧಾನಿ ತನ್ನ ಜಾತಿಯನ್ನು ಬ್ರಾಹ್ಮಣ,ಓ.ಬಿ.ಸಿ. ಎಂದು ಬಿಂಬಿಸಿಕೊಳ್ಳುವುದಕ್ಕೆ ಹಾತೊ ರೆಯುವ ಪರಿಸ್ಥಿತಿ ಭಾರತದ ಜಾತಿ ಮೂಲದ ಮಹತ್ವಕ್ಕೆ ಸಾಕ್ಷಿ.

ಪ್ರಧಾನಿ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗುವಾಗ ಬ್ರಾಹ್ಮಣರಾಗಿದ್ದವರು ಪ್ರಧಾನಿಯಾಗುತ್ತಲೇ ಯಾಕೆ ಹಿಂದುಳಿದ ವರ್ಗದ ಮೂಲದವರಾಗುತ್ತಾರೆ ಎನ್ನುವ ಮಹತ್ವದ ಅಂಶ ಭಾರತದಲ್ಲಿ ಹಿಂದುಳಿದ ವರ್ಗಗಳಿಗೆ ಇರುವ ಶಕ್ತಿಯ ಧ್ಯೋತಕ. ಈ ಅಂಶಗಳ ಹಿನ್ನೆಲೆಯಲ್ಲಿ ಯೋಚಿಸಿದಾಗ ಭಾರತದ ಒಕ್ಕೂಟ ಸರ್ಕಾರದ ಅಧೀನದ ರಾಜ್ಯಗಳು,ಪ್ರಾಂತಗಳು ತಮ್ಮ ಅಸ್ಮಿತೆಯ ಹೋರಾಟದ ಜೊತೆಜೊತೆಗೆ ತಮ್ಮ ಪ್ರಾಂತ್ಯದ ಬಹುಸಂಖ್ಯಾತರ ಪ್ರಾಮುಖ್ಯತೆಯನ್ನು ಕೂಡಾ ಸ್ಪಷ್ಟಪಡಿಸಿವೆ.

https://www.youtube.com/watch?v=EX0SXOOriOM&t=129s

ರಾಜ್ಯದಲ್ಲಿ ಸ್ವಾತಂತ್ರ್ಯೋತ್ತರ ಎರಡು ದಶಕಗಳ ವರೆಗೆ ರಾಜ್ಯದ ಹಿಂದುಳಿದವರು,ದಲಿತರು ತಮ್ಮ ಅಸ್ಮಿತೆಯ ವಿವೇಕವನ್ನು ವ್ಯಕ್ತಪಡಿಸದ ಸಂದರ್ಭಗಳಲ್ಲಿ ಹಿಂದುಳಿದವರು,ದಲಿತರ ಮಹತ್ವವನ್ನು ಸಾರಿದವರು ಜನತಾ ಪರಿವಾರದ ನಾಯಕರು. ರಂಗನಾಥ್‌,ಖರ್ಗೆ, ಜಾಲಪ್ಪ, ಸಿದ್ಧರಾಮಯ್ಯ ಸೇರಿದ ಅನೇಕರು ನಾಯಕರಾಗಿ ಪ್ರಕಟವಾಗುತಿದ್ದಾಗ ಹಿಂದುಳಿದವರ ಚಾಂಪಿಯನ್‌ ಎಂದು ಪ್ರಸಿದ್ಧರಾಗಿದ್ದವರು ಎಸ್.‌ ಬಂಗಾರಪ್ಪ.

ಹೋರಾಟದಿಂದ ನಾಯಕರಾಗಿ ಬೆಳೆದಿದ್ದ ಎಸ್.‌ ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಸೇರಿದ ಅನೇಕರ ನಡುವೆ ತನ್ನ ತಾಕತ್ತು, ನಾಯಕತ್ವಗಳಿಂದ ಹಿಂದುಳಿದ ನಾಯಕರಾಗಿ ಪ್ರತಿಷ್ಠಾಪಿತರಾಗಿದ್ದ ಬಂಗಾರಪ್ಪ ತಮ್ಮ ಓರಿಗೆಯ ದೇವೇಗೌಡ, ಪಟೇಲ್‌,ಹೆಗಡೆ,ವಿಶ್ವನಾಥ್‌ ರಂತಹವರಿಗಿಂತ ತುಸು ಹೆಚ್ಚು ಪ್ರಸಿದ್ಧರಾಗಿ ಜನಮನ್ನಣೆ ಗಳಿಸಿದ್ದರು.

ಬಂಗಾರಪ್ಪ ಅವರ ನಂತರ ಸಿದ್ಧರಾಮಯ್ಯ ಹಿಂದುಳಿದ ನಾಯಕರಾಗಿ ವಿಜೃಂಬಿಸಿದ ನಂತರ ಈಗ ಹಿಂದುಳಿದವರ ನಾಯಕ ಯಾರು ಎನ್ನುವ ವಿಷಯ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ರಾಜ್ಯದ ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಅವರ ಕ್ರೀಯಾಶೀಲತೆ ಎಂದರೆ ಅತಿಶಯೋಕ್ತಿಯಲ್ಲ.

ಕಾಂಗ್ರೆಸ್‌ ರಾಷ್ಟ್ರನಾಯಕರಾಗಿ ಬೆಳೆಯುತಿದ್ದ ಹಿಂದುಳಿದ ವರ್ಗಗಳ ನಾಯಕ ಬಿ.ಕೆ.ಹರಿಪ್ರಸಾದ್‌ ಅನಿರೀಕ್ಷಿತವಾಗಿ ರಾಜ್ಯ ವಿಧಾನಪರಿಷತ್‌ ಪ್ರವೇಶಿಸಿದರು. ವಿಧಾನಪರಿಷತ್‌, ರಾಜ್ಯಸಭೆ ಸದನದ ಒಳಗೆ, ಹೊರಗೆ, ಸಾರ್ವಜನಿಕವಾಗಿ ಕಡಕ್‌ ಆಗಿ ಹೋರಾಡುವ ಯೋಗ್ಯತೆ, ಅರ್ಹತೆ, ಧೈರ್ಯ-ಸ್ಥೈರ್ಯಗಳನ್ನು ಪ್ರಕಟಪಡಿಸುವ ಬಿ.ಕೆ.ಹರಿಪ್ರಸಾದ್‌ ರಾಜ್ಯದ ಮುಖ್ಯಮಂತ್ರಿ, ಕೇಂದ್ರದ ನಾಯಕ, ಸಚಿವ, ಮುಖಂಡರಾಗುವ ಅರ್ಹತೆ ಹೊಂದಿದವರು. ಆದರೆ ಬಿ.ಕೆ. ಹರಿಪ್ರಸಾದ್‌ ಈ ಅಧಿಕಾರ ಹುದ್ದೆಗಳ ಹಿಂದೆ ಬೀಳದೆ ದೇಶದ ಹಿಂದುಳಿದ ವರ್ಗಗಳು, ದಲಿತರು, ದಮನಿತರ ಗಟ್ಟಿಧ್ವನಿಯಾಗಿ ಕೆಲಸ ಮಾಡುತ್ತಾ ಜನಸಾಮಾನ್ಯರ ಧ್ವನಿಯಾಗುತಿದ್ದಾರೆ.

ತನ್ನ ಗಟ್ಟಿತನ,ಜ್ಞಾನ,ಅನುಭವ,ತಾಳ್ಮೆ,ಸಂಯಮಗಳಿಂದ ದೇಶದ ಜನಮಾನಸ ಗೆದ್ದಿರುವ ಬಿ.ಕೆ. ಹರಿಪ್ರಸಾದ್‌ ಆಡಳಿತ ಪಕ್ಷ ಬಿ.ಜೆ.ಪಿ.ಯನ್ನು ಕಂಗೆಡಿಸಿರುವಂತೆ ಸ್ವತ: ಪಕ್ಷ ಕಾಂಗ್ರೆಸ್ ನ ಕೆಲವು ನಾಯಕರಿಗೆ ಇರಿಸು ಮುರಿಸು ಮಾಡಿರುವುದು ಅವರ ಕ್ರೀಯಾಶೀಲತೆ ಮತ್ತು ಗಾಂಧಿ ಕುಟುಂಬದೊಂದಿಗಿನ ಒಡನಾಟ. ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್‌ ಹೈಕಮಾಂಡ್‌ ನೆಚ್ಚಿನ ನಾಯಕರಾಗಿ ಹೊರಹೊಮ್ಮಿರುವ ಹರಿಪ್ರಸಾದ್‌ ರಿಗೆ ಹಿಂದುಳಿದ ವರ್ಗಗಳು ಮತ್ತು ಈಡಿಗರ ನಾಯಕತ್ವವೂ ಅನಾಯಾಸವಾಗಿ ದೊರೆಯುತ್ತಿದೆ. ಒಂದುಕಾಲದ ಕಾಂಗ್ರೆಸ್‌ ಪ್ರೀತಿಯ ನಾಯಕ ಬಂಗಾರಪ್ಪನವರ ನಂತರ ಬಹುಸಂಖ್ಯಾತ ಈಡಿಗರು ಮತ್ತು ಹಿಂದುಳಿದ ವರ್ಗಗಳು ಒಪ್ಪಿಕೊಳ್ಳುವ ಪ್ರಶ್ನಾತೀತ ನಾಯಕರಾಗಿ ಬೆಳೆಯುತ್ತಿರುವ ಹರಿಪ್ರಸಾದ್‌ ಕಾಂಗ್ರೆಸ್‌ ನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಗಳಲ್ಲಿ ಪ್ರಮುಖ ಹೆಸರು ಎನ್ನಲಾಗುತ್ತಿದೆ. ತನ್ನ ಸಮೂದಾಯ, ಅಹಿಂದ್‌ ಸಮೂಹ, ಕಾಂಗ್ರೆಸ್‌, ಒಪ್ಪಿಕೊಳ್ಳುವ ಪ್ರಮುಖ ನಾಯಕರಾಗಿ ಬೆಳೆಯುತ್ತಿರುವ ಹರಿಪ್ರಸಾದ್‌ ಬಂಗಾರಪ್ಪ, ಸಿದ್ಧರಾಮಯ್ಯ ನಂತರ ಎಲ್ಲರೂ ಒಪ್ಪುವ ಜನನಾಯಕ ಎನ್ನುವುದನ್ನೂ ಸಾಬೀತು ಮಾಡುತಿದ್ದಾರೆ. ಹಾಗಾಗಿ ಕರ್ನಾಟಕದ ಈಗಿನ ಹಿಂದುಳಿದವರ ಚಾಂಪಿಯನ್‌ ಏಕೈಕ ನಾಯಕ ಹರಿಪ್ರಸಾದ ಎನ್ನುವ ಸತ್ಯ ಪ್ರಚಾರ ಪಡೆಯುತ್ತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *