ಶಿರಸಿಯಲ್ಲಿ ಮೂರು ಹಾವುಗಳೊಂದಿಗೆ ಆಟ ಆಡಿದ ಭೂಪ!

ಮೂರು ಹಾವುಗಳ ಜೊತೆ ಚೆಲ್ಲಾಟ: ಸಾವಿರಾರು ಉರಗಗಳ ರಕ್ಷಕ ಎಡವಟ್ಟಿನಿಂದ ಆಸ್ಪತ್ರೆ ಸೇರಿದ

Snake bites an youth in Sirsi: ನಾಗರ ಹಾವಿನೊಂದಿಗಿನ ಆಟವೆಂದರೆ ಜೀವವನ್ನು ಪಣಕ್ಕಿಡುವ ಆಟ ಎಂದೇ ಜನ ಹೇಳುತ್ತಾರೆ. ಆದರೆ, ಈ ಯುವಕ ಮೊದಲಿನಿಂದಲೂ ನಾಗರಹಾವನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದ. ಹಾಗೆ 3 ಸಾವಿರಕ್ಕೂ ಅಧಿಕ ಉರಗಗಳನ್ನು ಕೂಡ ರಕ್ಷಿಸಿದ್ದಾನೆ. ಆದ್ರೆ ಈಗ ಭಂಡ ಧೈರ್ಯದಿಂದ ಎಡವಟ್ಟು ಮಾಡಿಕೊಂಡಿದ್ದಾನೆ.

ಶಿರಸಿ: ನಮ್ಮ ಮುಂದೆ ಒಂದು ಸಣ್ಣ ಹಾವಿನ ಮರಿ ಕಂಡರೆ ಸಾಕು ಕಿರುಚಾಡಿಕೊಂಡು ಸ್ಥಳದಿಂದ ಕಾಲ್ಕಿಳುವವರ ಮಧ್ಯೆ ಈ ಯುವಕ ಭಿನ್ನ. ಕಾರಣ ಮೂರು ಹಾವುಗಳೊಂದಿಗೆ ಆಟ ಆಡುತ್ತಿದ್ದ ಯುವಕ ಹಾವಿನ ಕಡಿತಕ್ಕೆ ಒಳಗಾಗಿದ್ದಾನೆ. ಈ ಆಟದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ನಾಗರ ಹಾವಿನೊಂದಿಗಿನ ಆಟವೆಂದರೆ ಜೀವವನ್ನು ಪಣಕ್ಕಿಡುವ ಆಟ ಎಂದೇ ಜನ ಹೇಳುತ್ತಾರೆ. ಆದರೆ, ಈ ಯುವಕ ಮೊದಲಿನಿಂದಲೂ ನಾಗರಹಾವನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದ. ಹಾಗೆ 3 ಸಾವಿರಕ್ಕೂ ಅಧಿಕ ಹಾವುಗಳ ರಕ್ಷಣೆ ಕೂಡ ಮಾಡಿದ್ದಾನೆ. ಆದ್ರೆ ಈ ಬಾರಿ ಭಂಡ ಧೈರ್ಯ ತೋರಿ ಎಡವಟ್ಟು ಮಾಡಿಕೊಂಡಿದ್ದಾನೆ.

ಸಾವಿರಾರು ಉರಗಗಳ ರಕ್ಷಕ ಎಡವಟ್ಟಿನಿಂದ ಆಸ್ಪತ್ರೆ ಸೇರಿದ

ಶಿರಸಿಯ ಮುಸ್ಲಿಂ ಗಲ್ಲಿಯ ಸೈಯದ್ (20) ಎಂಬ ಯುವಕ ಹಾವಿನ ಕಡಿತಕ್ಕೆ ಒಳಗಾಗಿ ಆಸ್ಪತ್ರೆ ಸೇರಿರುವ ಯುವಕ. ದೇವಿದ ಕೆರೆ ಕಾಡಿನಲ್ಲಿ ಈ ಘಟನೆ ಜರುಗಿದೆ. ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, 3 ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದಾನೆ.

ಸಾವಿರಾರು ಹಾವುಗಳ ರಕ್ಷಣೆ ಮಾಡಿದ್ದ ಯುವಕ ಈಗ ಆಸ್ಪತ್ರೆಯಲ್ಲಿ

ಸಾವಿರಾರು ಹಾವುಗಳ ರಕ್ಷಣೆ ಮಾಡಿದ್ದ ಯುವಕ ಈಗ ಆಸ್ಪತ್ರೆಯಲ್ಲಿ

ವಿಡಿಯೋದಲ್ಲಿ ಕಾಣುವಂತೆ 3 ಹಾವುಗಳೊಂದಿಗೆ ಆಟ ಆಡುವಾಗ ಒಂದು ಹಾವು ಈತನ ಕಾಲಿಗೆ ಕಚ್ಚಿದೆ. ಘಟನೆ ಸಂಬಂಧ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಟ್ವೀಟ್ ಮಾಡಿ ಈ ರೀತಿಯಾಗಿ ಯುವಕ ಮಾಡಿದ್ದನ್ನು ವಿರೋಧಿಸಿದ್ದಾರೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಚಾಮರಾಜನಗರ ಜಿಲ್ಲೆಯ ಪರಿಸರ ಹೋರಾಟಗಾರ ಜೋಸೆಫ್​ ಅವರು, ಅರಣ್ಯ ಇಲಾಖೆ ಇಂತಹವರ ಬಗ್ಗೆ ನಿಗಾ ಇಡಬೇಕು. ವನ್ಯ ಜೀವಿಗಳನ್ನು ಮುಟ್ಟುವ ಹಾಗಿಲ್ಲ ಎಂಬ ಆದೇಶ ಹೊರಡಿಸಬೇಕು. ಕೆಲವರು ಪಬ್ಲಿಷಿಟಿಗೆ ಏನೇನೋ ಸ್ಟಂಟ್​ ಮಾಡಲು ಹೋಗಿ ಈ ರೀತಿಯ ಅಚಾತುರ್ಯಗಳು ನಡೆಯುತ್ತವೆ ಎಂದಿದ್ದಾರೆ. https://59837408381f38a60271467c36d8d45e.safeframe.googlesyndication.com/safeframe/1-0-38/html/container.htmlhttps://prod.suv.etvbharat.com/v2/smart_urls/623358d771d60097bf975951/embedplayer1?

ಪರಿಸರ ಹೋರಾಟಗಾರರ ಅಭಿಪ್ರಾಯ

ಇನ್ನು ಉರುಗ ಪ್ರೇಮಿ ಮಹೇಶ್ ಮಾತನಾಡಿ, ವಿಡಿಯೋಗಳನ್ನು ನೋಡಿ ಹಾವುಗಳ ಜೊತೆ ಆಟವಾಡುವುದು ಮತ್ತು ತರಬೇತಿ ಇಲ್ಲದೇ ಹಾವುಗಳ ಸಂರಕ್ಷಣೆ ಮಾಡುವುದು ಅಪಾಯಕರ. ಈ ರೀತಿ ಯಾರೂ ಮಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ. (ಈಟಿಬಿಕೆ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *