ಹಿಂದೂ ಧರ್ಮದ ರಕ್ಷಣೆಗೆ ಯಾರ ಅಗತ್ಯವೂ ಇಲ್ಲ -ಶಶಿಭೂಷಣ ಹೆಗಡೆ

ಕ್ರಿ.ಪೂ.೫೦೦ ವರ್ಷಗಳ ಹಿಂದೆ ಪರ್ಶಿಯನ್‌ ರಾಜ ಭಾರತದ ಮೇಲೆ ದಾಳಿಮಾಡಿದಾಗ ಸಿಂಧೂ ನದಿ ಬಯಲಿನ ಪ್ರದೇಶವನ್ನು ಹಿಂದೂ ಎಂದ ಅಪಭ್ರಂಶ ಹಿಂದೂ ಎಂದಾಯಿತೆ ವಿನ: ಹಿಂದೂ ಎನ್ನುವ ಧರ್ಮ,ಅದರ ಪ್ರವರ್ತಕರು ಯಾರು ಎನ್ನುವುದು ಯಾರಿಗೂ ತಿಳಿದಿಲ್ಲ. ಆದರೂ ಈ ಪುರಾತನ ಧರ್ಮ ಉಳಿದು, ಬೆಳೆದು ಬಂದಿದೆಯೆಂದರೆ ಅದರ ರಕ್ಷಣೆಗೆ ಯಾರ ಅಗತ್ಯವೂ ಇಲ್ಲ ಅಂಥ ಹೆಚ್ಚುಗಾರಿಕೆಯ ಧರ್ಮವನ್ನು ಮಾನವೀಯ ಧರ್ಮ ಎಂದರೆ ತಪ್ಪಿಲ್ಲ ಎಂದು ಸಾಮಾಜಿಕ ಮುಖಂಡ ಡಾ. ಶಶಿಭೂಷಣ ಹೆಗಡೆ ಹೇಳಿದರು.

ಸಿದ್ಧಾಪುರದ ಯುಗಾದಿ ಉತ್ಸವ ಸಮೀತಿ ಆಯೋಜಿಸಿದ್ದ ಯುಗಾದಿ ಶೋಭಾಯಾತ್ರೆ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಈ ಮೇಲಿನ ಅಭಿಪ್ರಾಯ ಮಂಡಿಸಿದರು.

ಈ ಕಾರ್ಯಕ್ರಮಕ್ಕೆ ಕೆ.ಜಿ.ನಾಯ್ಕ ಹಣಜಿಬೈಲ್‌ ಸ್ವಾಗತಿಸಿ, ಪ್ರಾಸ್ಥಾವಿಕ ನುಡಿಗಳನ್ನು ಹೇಳಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಯುಗಾದಿ ಸಾರ್ವಜನಿಕವಾಗಿ ಹೊಸ ವರ್ಷವಾಗಿ ಮನ್ನಣೆ ಪಡೆಯುತ್ತಿದೆ ಎಂದರು.

ಸಿದ್ದಾಪುರ: ತಾಲೂಕಿನ ಬೇಡ್ಕಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಳ್ಳಿ ಗ್ರಾಮದಲ್ಲಿ ಸೋಮವಾರ ಶ್ರೀರಾಮ ಹಾಗೂ ಪರಿವಾರ ದೇವತೆಗಳ ಪ್ರತಿಷ್ಠಾಪನೆ ಹಾಗೂ ಅಷ್ಟಬಂಧ ಮಹೋತ್ಸವದ ಸಮಾರೋಪ ದ ಅಂಗವಾಗಿ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಶಿರಳಗಿ ಅವರ ದಿವ್ಯ ಉಪಸ್ಥಿತಿಯಲ್ಲಿ ಧರ್ಮ ಸಭೆಯನ್ನು ನಡೆಸಲಾಯಿತು
ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಮನೆಗೊಂದು ದೇವರ ಸ್ಥಳ, ಊರಿಗೊಂದು ದೇವಸ್ಥಾನ ಇರಲೇಬೇಕು. ಜಗತ್ತು ಒಂದು ಕುಟುಂಬವಾದರೆ ಭಾರತ ಅದರ ದೇವಾಲಯವಾಗಬೇಕು. ನಮ್ಮ ದೇಶದಲ್ಲಿನ ಕುಟುಂಬ ವ್ಯವಸ್ಥೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ರಾಮಾಯಣ ಪುರಾಣಗಳು ಮತ್ತು ಉಪನ್ಯಾಸಗಳಿಂದ ನಮ್ಮಲ್ಲಿ ಸದ್ಭಾವನೆ ಬೆಳೆಯುತ್ತದೆ. ಪಾಶ್ಚಿಮಾತ್ಯ ದೇಶಗಳು ಸಂಪತ್ತಿನಲ್ಲಿ ಶ್ರೀಮಂತರಾಗಿರಬಹುದು. ಆದರೆ ಭಾರತೀಯರು ಸಂಸ್ಕೃತಿಯಲ್ಲಿ, ಮನ ಶಾಂತಿಯಲ್ಲಿ ಶ್ರೀಮಂತರಾಗಿದ್ದಾರೆ. ಮುಂಬರುವ ಪೀಳಿಗೆಗೆ ಒಳ್ಳೆಯ ಸಂಸ್ಕೃತಿ ಮತ್ತು ಮೌಲ್ಯಾಧಾರಿತ ಶಿಕ್ಷಣ ದೊರೆತಾಗ ಮಾತ್ರ ಭಾರತದ ಭಾರತೀಯತೆ ಉಳಿಯುತ್ತದೆ ಎಂದರು.


ಸಭೆಯಲ್ಲಿ ಉಪಸ್ಥಿತರಿದ್ದ ಸ್ಥಳೀಯ ಮುಖಂಡರು ಕೋಟೆ ಆಂಜನೇಯ ದೇವಸ್ಥಾನದ ಅಧ್ಯಕ್ಷರೂ ಆದ ವಿ.ಎನ್. ನಾಯ್ಕ ಬೇಡ್ಕಣಿ ಮಾತನಾಡಿ ಊರಿನ ಜನರು ಅನ್ಯೋನ್ಯವಾಗಿದ್ದರೆ ಎಂತಹ ಮಹತ್ಕಾರ್ಯವನ್ನಾದರೂ ಸಾಧಿಸಬಹುದು ಎಂಬುದನ್ನು ಈ ಪುಟ್ಟ ಊರಿನ ಜನರು ತೋರಿಸಿಕೊಟ್ಟಿದ್ದಾರೆ. ದೇವಾಲಯಗಳು ಮನಃ ಶಾಂತಿಯ, ಉತ್ತಮ ಸಂಸ್ಕಾರದ ಕೇಂದ್ರವಾಗಬೇಕು. ಹಾಗಿದ್ದಲ್ಲಿ ಮಾತ್ರ ಊರಿನ ಜನರು ಸಂಸ್ಕಾರವಂತರಾಗುತ್ತಾರೆ. ಭಗವಂತನ ಇಚ್ಛೆಯಂತೆ ಶ್ರೀರಾಮನ ದೇವಾಲಯವನ್ನು ನಿರ್ಮಿಸಿದ್ದೇವೆ. ಇನ್ನು ಶ್ರೀರಾಮನಂತೆ ಆದರ್ಶ ಬದುಕನ್ನು ನಡೆಸುತ್ತೇವೆ ಎಂಬ ಸಂಕಲ್ಪವನ್ನು ಮಾಡೋಣ ಎಂದು ಹೇಳಿದರು.
ಪ್ರಾಚಾರ್ಯರಾದ ಎಮ್.ಕೆ.ನಾಯ್ಕ ಹೊಸಳ್ಳಿ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ನೂತನ ವಿಗ್ರಹಗಳನ್ನು ನಿರ್ಮಿಸಿದ ಪ್ರಸಿದ್ಧ ಶಿಲ್ಪಕಾರರು, ಶಿಲ್ಪಕಲಾ ಅಕಾಡೆಮಿಯ ಸದಸ್ಯರೂ ಆದ ಚಂದ್ರಶೇಖರ್ ನಾಯ್ಕ ದಂಪತಿಗಳನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಹರೀಶ್ ನಾಯ್ಕ, ಕಟ್ಟಡ ಸಮಿತಿಯ ಅಧ್ಯಕ್ಷರಾದ ಮಹಾಬಲೇಶ್ವರ ರಾಮಾ ನಾಯ್ಕ, ಕಡ್ಲೆ ಹನುಮಂತ ದೇವಾಲಯದ ಅಧ್ಯಕ್ಷರಾದ ವಿ.ಎಮ್.ಭಟ್ಟ ಡೊಂಬೆಕೈ, ಕುಂಬ್ರಿಗದ್ದೆ ವೀರಭದ್ರೇಶ್ವರ ದೇವಸ್ಥಾನ ಅಧ್ಯಕ್ಷರಾದ ಉಮೇಶ.ವಿ. ನಾಯ್ಕ , ಕಳೂರಿನ ಕಲ್ಲೇಶ್ವರ ದೇವಾಲಯದ ಅಧ್ಯಕ್ಷರಾದ ಈಶ್ವರ ಮಾರ್ಯಾ ನಾಯ್ಕ ಮತ್ತು ಗ್ರಾ.ಪಂ. ಸದಸ್ಯರಾದ ಗೋವಿಂದ ನಾಯ್ಕ ಉಪಸ್ಥಿತರಿದ್ದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

Recommended For You

About the Author: Kanneshwar Naik

Leave a Reply

Your email address will not be published. Required fields are marked *