ಜೀರ್ಣೋದ್ದಾರವಾದ ಚಂಪಕ ಸರಸ್ಸು ಲೋಕಾರ್ಪಣೆ : ರಾಕಿಂಗ್ ಸ್ಟಾರ್ ಯಶ್‌ರ ಯಶೋ ಮಾರ್ಗದಿಂದ ಪುನಶ್ಚೇತನ

Thumbnail image

ಜಲತಜ್ಞ ಶಿವಾನಂದ ಕಳವೆ ಅವರ ಕರೆಯ ಮೇರೆಗೆ ರಾಕಿಂಗ್ ಸ್ಟಾರ್ ಯಶ್ ಅವರು ಕಳೆದ ವರ್ಷ ಡಿಸೆಂಬರ್​ನಲ್ಲಿ ಇದರ ಜೀರ್ಣೋದ್ದಾರ ಕಾರ್ಯಕ್ಕೆ ಕೈ ಹಾಕಲಾಗಿತ್ತು. ಸರಸ್ಸುವಿನಲ್ಲಿ ಗಿಡ-ಗಂಟಿ ಬೆಳೆದು ಸೀಳು ಬಿಟ್ಟು, ಬಿದ್ದು ಹೋಗಿದ್ದ ಕಲ್ಲುಗಳನ್ನು ಸ್ವಚ್ಛಗೊಳಿಸಿ, ಜೀರ್ಣೋದ್ದಾರ ಮಾಡಲಾಗಿದೆ.

ಶಿವಮೊಗ್ಗ : ಪಾಳು ಬಿದ್ದು ಸುಸೈಡ್ ಪಾಯಿಂಟ್ ಆಗಿದ್ದ ಕೆಳದಿ ಅರಸರಿಂದ ನಿರ್ಮಾಣದ ಚಂಪಕ ಸರಸ್ಸುವನ್ನು ನಟ ಯಶ್ ಅವರ ಯಶೋ ಮಾರ್ಗದ ಮೂಲಕ ಜೀರ್ಣೋದ್ಧಾರ ನಡೆಸಿ ಲೋಕಾರ್ಪಣೆ ಮಾಡಲಾಯಿತು. ಸಾಗರ ತಾಲೂಕು ಆನಂದಪುರಂ ಬಳಿ ಚಂಪಕ ಸರಸ್ಸು ಕೆರೆಯನ್ನು ಕೆಳದಿಯ ಸೋಮಶೇಖರ ನಾಯ್ಕ ನಿರ್ಮಿಸಿದರು ಎಂದು ಇತಿಹಾಸ ತಿಳಿಸುತ್ತದೆ. ಸಾಮ್ರಾಜ್ಯ ವಿಸ್ತರಣೆಗಾಗಿ ಬಂದಾಗ ಆನಂದಪುರಂ ಬಳಿ ಮಹಿಳೆಗೆ ಮನಸೋತು ಆಕೆಯನ್ನು ಪ್ರೀತಿಸುತ್ತಾನೆ. ಆಕೆಯ‌ ನೆನಪಿಗೆ ಈ ಚಂಪಕ ಸರಸ್ಸು ನಿರ್ಮಿಸಿದರು ಎಂದು ತಿಳಿದು ಬರುತ್ತದೆ.

ಇದು ಚೌಕಾಕಾರದ ಒಂದು ಸುಂದರ ಕೊಳವಾಗಿದೆ. ಕಲ್ಲಿನಿಂದ ನಿರ್ಮಿಸಲಾದ ಇಲ್ಲಿ ಸುಂದರ ಕೆತ್ತನೆಯನ್ನು ಒಳಗೊಂಡಿದೆ. ಚಂಪಕ ಸರಸ್ಸು ಮುಂಭಾಗ ಎರಡು ಆನೆಗಳು ಸ್ವಾಗತ ನೀಡುತ್ತವೆ. ಇದರ ಮಧ್ಯ ಭಾಗದಲ್ಲಿ ಶಿವನ ಲಿಂಗವಿದೆ. ಅಲ್ಲಿಗೆ ಸಾಗಲು ಕಲ್ಲಿನ ದಾರಿ ಇದೆ. ಅತ್ಯಂತ ಸುಂದರವಾದ ಚಂಪಕ ಸರಸ್ಸು ಆಡಳಿತ ನಡೆಸುವವರ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು.

ಜಲತಜ್ಞ ಶಿವಾನಂದ ಕಳವೆ ಅವರ ಕರೆಯ ಮೇರೆಗೆ ರಾಕಿಂಗ್ ಸ್ಟಾರ್ ಯಶ್ ಅವರು ಕಳೆದ ವರ್ಷ ಡಿಸೆಂಬರ್​ನಲ್ಲಿ ಇದರ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿದ್ದರು. ಸರಸ್ಸುವಿನಲ್ಲಿ ಗಿಡ ಗಂಟಿ ಬೆಳೆದು ಸೀಳು ಬಿಟ್ಟು, ಬಿದ್ದು ಹೋಗಿದ್ದ ಕಲ್ಲುಗಳನ್ನು ಸ್ವಚ್ಛಗೊಳಿಸಿ, ಜೀರ್ಣೋದ್ಧಾರ ಮಾಡಲಾಗಿದೆ. ಈ ಚಂಪಕ ಸರಸ್ಸುವನ್ನು ಇಂದು ಜಲತಜ್ಞರಾದ ಶಿವಾನಂದ ಕಳವೆ ಅವರು ಉದ್ಘಾಟಿಸಿದರು. ಸರಸ್ಸು ಆವರಣದಲ್ಲಿ ಕೆಳದಿ ಅರಸ ಇತಿಹಾಸಗಾರರಾದ ಗುಂಡಾಜೋಯಿಸ ಅವರು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಜೀರ್ಣೋದ್ದಾರವಾದ ಚಂಪಕ ಸರಸ್ಸು ಲೋಕಾರ್ಪಣೆ

ಯಶ್ ಅವರ ದೂರದೃಷ್ಟಿ ಹಾಗೂ ಪರಿಸರ, ಜಲಮೂಲಗಳ ರಕ್ಷಣೆಯ ಬಗ್ಗೆ ಆಸಕ್ತಿಯಿಂದ ಚಂಪಕ ಸರಸ್ಸು ಮತ್ತೆ ನಮಗೆ ಲಭ್ಯವಾಗಿದೆ ಎಂದು ಶಿವಾನಂದ ಕಳವೆ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರಕ್ಕೆ ಸಹಕಾರ ನೀಡಿದ ಇತಿಹಾಸ ಪರಂಪರೆ ಉಳಿಸಿ ಸಮಿತಿ ಅವರಿಗೆ ಸನ್ಮಾನ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಯಶ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸತೀಶ್ ಶಿವಣ್ಣ, ಯಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಜೇಂದ್ರ ಗೌಡ, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್‌ನ ರವಿಕುಮಾರ್ ಬಿ ಡಿ ಇತರರಿದ್ದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *