ಕನ್ನಡ ನೆಲದ ಸ್ವಾತಂತ್ರ್ಯ ಹೋರಾಟದ ಸ್ಮರಣೆ

೧೮೫೭ ರ ಸಿಪಾಯಿ ದಂಗೆ ಮೊದಲು ದೇಶದ ಹಲವು ಭಾಗಗಳಲ್ಲಿ ಬ್ರಟೀಷರ ವಿರುದ್ಧ ಬಂಡಾಯವೆದ್ದಿದ್ದ ದೇಶಪ್ರೇಮಿಗಳಲ್ಲಿ ಟಿಪ್ಪುಸುಲ್ತಾನ್‌,ರಾಣಿ ಕಿತ್ತೂರ್‌ ಚೆನ್ನಮ್ಮ ಮತ್ತು ಗಲಗಲಿಯ ಬೇಡರು ಸೇರುತ್ತಾರೆ. ಇದು ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರ ಪ್ರಾಮುಖ್ಯತೆಗೆ ಸಾಕ್ಷಿ ಎಂದು ಪತ್ರಕರ್ತ ಕನ್ನೇಶ್ವರ ನಾಯ್ಕ ಕೋಲಶಿರ್ಸಿ ಹೇಳಿದರು.

ಅವರು ಸಾಗರ ತಾಲೂಕಿನ ಸೈದೂರು ಶಾಂತವೇರಿ ಗೋಪಾಲಗೌಡ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ಅಮೃತಮಹೋತ್ಸವ ವಿಶೇಶ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲಾ ಕಾಲಗಳಲ್ಲೂ ಸತ್ಯ ಹೇಳುವವರು, ಸುಳ್ಳು ಪ್ರಚಾರ ಮಾಡುವವರು ಇರುತ್ತಾರೆ. ಇಂದಿನ ಆಡಳಿತದಲ್ಲಿ ರೈತರು ಹೊಲಮನೆ ರಕ್ಷಣೆಗೆ ಇಟ್ಟುಕೊಳ್ಳುವ ಪರವಾನಗಿ ಸಹಿತ ಬಂದೂಕಿನ ವಾರ್ಷಿಕ ತೆರಿಗೆಯನ್ನು ಹೆಚ್ಚಿಸಲಾಗಿದೆ. ಲೈಸನ್ಸ್‌ ಹೊಂದಿದ ರೈತ ಬಂದೂಕಿನ ಪರವಾನಗಿಯನ್ನು ಪ್ರತಿವರ್ಷ ನವೀಕರಿಸಬೇಕು. ರೈತನ ಭೂಮಿ ಹಕ್ಕು,ಕೃಷಿ ಉತ್ಫನ್ನ ಮಾರುಕಟ್ಟೆ ನಿಯಮಗಳಲ್ಲಿ ಬದಲಾವಣೆ ತಂದು ರೈತರಿಗೆ ದ್ರೋಹ ಬಗೆದು ಉದ್ಯಮಿಗಳಿಗೆ ಸಹಕರಿಸಲಾಗುತ್ತದೆ. ಹಿಂದೆ ಕೂಡಾ ಬ್ರಟೀಷರ ತೆರಿಗೆ ನೀತಿ, ರೈತವಿರೋಧ, ಶಸ್ತ್ರಾಸ್ತ್ರ ಕಾನೂನುಗಳಂಥ ಜನವಿರೋಧಿ ಕಾಯಿದೆ ಕಾನೂನುಗಳ ವಿರುದ್ಧವೇ ಸ್ವಾತಂತ್ರ್ಯ ಹೋರಾಟ ಮೊದಲ್ಗೊಂಡು ಬಲವಾದದ್ದು ಎಂದು ಪ್ರತಿಪಾದಿಸಿದರು.

ಗಾಂಧಿ ಭಾರತಕ್ಕೆ ರಾಷ್ಟ್ರಪಿತ ಆದರೆ ಮಹಾತ್ಮಾಗಾಂಧಿ ಮತ್ತು ಡಾ. ಅಂಬೇಡ್ಕರ್‌ ಅಂತರರಾಷ್ಟ್ರೀ ಯ ನಾಯಕರು ಗಾಂಧಿಜಿ ಜಗತ್ತಿಗೆ ಶಾಂತಿ. ಅಹಿಂಸೆ,ಸತ್ಯಾಗ್ರಹಗಳ ಕೊಡುಗೆ ನೀಡಿದ ವಿಶ್ವನಾಯಕ. ಪ್ರಪಂಚದಲ್ಲಿ ಸತ್ಯ, ಅಹಿಂಸೆ, ಸತ್ಯಾಗ್ರಹಗಳಿಂದ ಸ್ವತಂತ್ರವಾದ ದೇಶ ಭಾರತವೊಂದೇ ಎಂಬುದು ನಮ್ಮ ಹೆಗ್ಗಳಿಕೆ ಎಂದರು.

ಸುರೇಶ್‌ ಕೆ.ಎಚ್.ಸ್ವಾಗತಿಸಿದರು. ಕನ್ನಪ್ಪ ಮಾಸ್ತರ್‌ ಮಾತನಾಡಿದರು,ಶಿವಾನಂದ ಎಚ್.ಕೆ.ನಿರೂಪಿಸಿದರು. ಮುಖ್ಯೋಪಾಧ್ಯಾಯ ಎಸ್.ಕೆ.ನಾಯ್ಕ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮಕ್ಕೆ ಪ್ರೇಮಾ ನಾಯ್ಕ ವಂದಿಸಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *