ಮಳೆಹಾನಿಯಿಂದ ಕಂಗೆಟ್ಟ ರೈತ,ವಿಶೇಶ ಪ್ಯಾಕೇಜ್‌ ಗೆ ಆಗ್ರಹ

ಅರ್ಧಕ್ಕರ್ಧ ನಾಟಿ ಮಾಡದ ಭತ್ತದ ಪ್ರದೇಶ, ಮದ್ದು ಕಾಣದ ಅಡಿಕೆ ತೋಟ, ಮಳೆಯಿಂದ ಆನೆ ಹೊಕ್ಕಂತಾದ ಬಾಳೆ ಬೆಳೆಯುವ ಪ್ರದೇಶ ಈ ವಿಚಿತ್ರ ಸನ್ನಿವೇಶಕ್ಕೆ ಮೂಖಾಮುಖಿಯಾದ ರೈತ ಸರ್ಕಾರದ ಬೆಳೆವಿಮೆ,ಹವಾಮಾನ ಆಧಾರಿತ ಬೆಳೆವಿಮೆಯ ಪರಿಹಾರದ ನಿರೀಕ್ಷೆಯಲ್ಲಿದ್ದಾನೆ.

ತುಸು ಕಡಿಮೆಯಾದ ಕರಾವಳಿ,ಮಲೆನಾಡಿನ ಮಳೆ ಸ್ಥಳಿಯರಿಗೆ ಹಿತಾನುಭವ ನೀಡತೊಡಗಿದೆ. ಈ ವರ್ಷಾವಧಿಗೆ ಮೊದಲೇ ಪ್ರಾರಂಭವಾಗಿದ್ದ ಮುಂಗಾರು ಮಳೆ ಕೃಷಿಕರಿಗೆ ಗೊಂದಲ ಹುಟ್ಟಿಸಿತ್ತು. ಬಿತ್ತನೆಗೆ ಅನುಕೂಲವಾಗದೆ ನಂತರ ಮಳೆಯ ಆರ್ಭಟದಲ್ಲಿ ಕೃಷಿಕ್ಷೇತ್ರ ಹಸನು ಮಾಡಲಾರದೆ ಕಂಗೆಟ್ಟಿದ್ದ ರೈತನಿಗೆ ಜುಲೈ,ಆಗಸ್ಟ್‌ ನ ಮಳೆ ಸಂಕಷ್ಟ ತಂದಿಟ್ಟಿತ್ತು.ಜುಲೈ ತಿಂಗಳಲ್ಲಿ ಭತ್ತದ ಬಿತ್ತನೆ, ನಾಟಿ ಕೆಲಸ ಮಾಡುತಿದ್ದ ರೈತರಿಗೆ ಈ ವರ್ಷದ ಮಳೆ ಈ ಕೆಲಸಗಳಿಗೆ ಅನುಕೂಲ ಮಾಡಿಕೊಡಲಿಲ್ಲ.


ಇದೇ ಅವಧಿಯಲ್ಲಿ ಅಡಿಕೆ ಗೊನೆಗಳಿಗೆ ಕೊಳೆ ಮದ್ದು ಸಿಂಪಡಿಸುತಿದ್ದ ಅಡಿಕೆ ಬೆಳೆಗಾರರಿಗೆ ಅವಶ್ಯ ಸಮಯದಲ್ಲಿ ಅಡಿಕೆಗೆ ಮದ್ದು ಸಿಂಪಡನೆ ಮಾಡಲು ಅನುಕೂಲವಾಗಲಿಲ್ಲ. ಆಗಸ್ಟ್‌ ತಿಂಗಳ ಮಧ್ಯಾಂತರದ ನಂತರ ನಿಂತು ನೋಡಿದರೆ ಈ ವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ೨೫ ಶೇ ಕಡಾ ಹೆಚ್ಚುವರಿ ಮಳೆ ಈಗಾಗಲೇ ಸುರಿದಿದೆ. ಪ್ರತಿವರ್ಷ ಈ ಅವಧಿಯಲ್ಲಿ ನೂರಕ್ಕೆ ಪ್ರತಿಶತ ೯೦ ರಷ್ಟು ಬಿತ್ತನೆಯಾಗುತಿದ್ದ ಭತ್ತದ ಬೆಳೆ ಪ್ರದೇಶದಲ್ಲಿ ಈ ವರ್ಷ ಅರ್ಧಕ್ಕರ್ಧ ಬಿತ್ತನೆ,ನಾಟಿ ಕೆಲಸ ಮುಗಿದಿಲ್ಲ.


ಆಗಷ್ಟ್‌ ತಿಂಗಳಲ್ಲಿ ನೂರಕ್ಕೆ ನೂರರಷ್ಟು ಕೊಳೆ ಮದ್ದು ಸಿಂಪಡಿಸುತಿದ್ದ ಅಡಿಕೆ ಬೆಳೆಗಾರ ಈ ವರ್ಷ ಸೂಕ್ತ ಸಮಯದಲ್ಲಿ ಮದ್ದು ಸಿಂಪಡಣೆ ಮಾಡದೆ ಅಡಿಕೆಗೊನೆಗಳು ಕೊಳೆಗೆ ತುತ್ತಾಗಿವೆ.


ಅವಶ್ಯ,ಅಗತ್ಯ ಸಮಯದಲ್ಲಿ ಕೃಷಿ ಚಟುವಟಿಕೆಗಳಿಗೆ ಅಡ್ಡಿ ಮಾಡಿದ ಮಳೆ ಈಗ ತುಸು ನಿಂತಿದೆ. ಆದರೆ ವಿಳಂಬವಾದ ಕೃಷಿ ಚಟುವಟಿಕೆ ಈ ವರ್ಷಕ್ಕೆ ಹಾನಿಯ ಮುನ್ಸೂಚನೆ ನೀಡಿದೆ.
ಬಿತ್ತನೆಯಾಗದ ಭತ್ತ ದ ಗದ್ದೆಗಳು, ಮದ್ದು ಹೊಡೆಯದ  ಅಡಿಕೆ ತೋಟಗಳು ಈ ವರ್ಷ ರೈತನ ಕೈ ಹಿಡಿಯುವ ಸಾಧ್ಯತೆ ಕ್ಷೀಣಿಸಿದೆ.ಹಿಂಗಾರು ಮಳೆಯ ಈ ಅವಧಿಯಲ್ಲಿ ಪ್ರತಿವರ್ಷ ಖುಷಿಯಿಂದ ಇರುತಿದ್ದ ರೈತ ಈ ವರ್ಷ ಮುಂದೇನು ಎನ್ನುವ ಆತಂಕದಲ್ಲಿದ್ದಾನೆ. ವಾರ್ಷಿಕ ಕೃಷಿ ಚಟುವಟಿಕೆಗಳ ಸರಾಸರಿ ಪ್ರಗತಿ ಲೆಕ್ಕದಲ್ಲಿ ಕೂಡಾ ಸರ್ಕಾರದ ವರದಿ ನಿರಾಶಾದಾಯಕವಾಗಿದೆ.


ಅರ್ಧಕ್ಕರ್ಧ ನಾಟಿ ಮಾಡದ ಭತ್ತದ ಪ್ರದೇಶ, ಮದ್ದು ಕಾಣದ ಅಡಿಕೆ ತೋಟ, ಮಳೆಯಿಂದ ಆನೆ ಹೊಕ್ಕಂತಾದ ಬಾಳೆ ಬೆಳೆಯುವ ಪ್ರದೇಶ ಈ ವಿಚಿತ್ರ ಸನ್ನಿವೇಶಕ್ಕೆ ಮೂಖಾಮುಖಿಯಾದ ರೈತ ಸರ್ಕಾರದ ಬೆಳೆವಿಮೆ,ಹವಾಮಾನ ಆಧಾರಿತ ಬೆಳೆವಿಮೆಯ ಪರಿಹಾರದ ನಿರೀಕ್ಷೆಯಲ್ಲಿದ್ದಾನೆ. ಆದರೆ ಈ ವಿಮಾ ಪರಿಹಾರಗಳು ಸಿಗುವುದು ಮುಂದಿನ ವರ್ಷಕ್ಕೆ ಈ ಅನಿವಾರ್ಯತೆಯಲ್ಲಿ ಸರ್ಕಾರ ಬೆಳೆನಷ್ಟದ ಸರ್ಕಾರದ ವಿಶೇಶ ಪ್ಯಾಕೇಜ್‌ ಗೆ ಆಗ್ರಹಿಸಿದ್ದಾನೆ.ಸರ್ಕಾರ ರೈತನ ಸಂಕಷ್ಟ ಅರಿತುಪ್ಯಾಕೇಜ್‌ ನ ಪರಿಹಾರದ ಭರವಸೆ ನೀಡುವುದೇ ಈಗಿರುವ ತಾತ್ಕಾಲಿಕ ಪರಿಹಾರವಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *