ಕರ್ಮದಿಂದ ಶ್ರೇಷ್ಠ… felicitation for artists

ಸಿದ್ದಾಪುರ: ಜನ್ಮದಿಂದ ಶ್ರೇಷ್ಠರಲ್ಲ, ಕರ್ಮದಿಂದ ಶ್ರೇಷ್ಠರು ಎಂಬ ಪರಂಪರೆ ನಮ್ಮದು. ನಮ್ಮ ಪುರಾಣ, ಇತಿಹಾಸಗಳಲ್ಲಿ ಕಾಣುವ ಪಾತ್ರಗಳು ಯುಗ ಯುಗಾಂತರಗಳಲ್ಲೂ ಉತ್ತಮ ಸಂದೇಶವನ್ನು ನೀಡುತ್ತವೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಗುರುರಾಜ್ ಶಾನಭಾಗ್ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿ ಅವರು ಭಾನುವಾರ ಮಾತನಾಡಿದರು.
ಕಾರ್ಯಕ್ರಮದ ಉಪನ್ಯಾಸಕರಾಗಿ ಮಾತನಾಡಿದ ಜಿಡ್ಡಿ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ವಿಷ್ಣುನಾಯ್ಕ ಸಾರ್ವಕಾಲಿಕವಾಗಿ ಸರಿಹೊಂದುವ ಗ್ರಂಥಗಳನ್ನು ಮಹಾಕಾವ್ಯಗಳು ಎನ್ನಬಹುದು. ವಾಲ್ಮೀಕಿ ವಿರಚಿತ ರಾಮಾಯಣ ಅಂತಹ ಗ್ರಂಥಗಳಲ್ಲೊಂದಾಗಿದೆ. ರಾಮಾಯಣ ಕೇವಲ ಭಾರತದಲ್ಲಲ್ಲದೆ ವಿದೇಶಗಳಲ್ಲೂ ತನ್ನ ಖ್ಯಾತಿಯನ್ನು ಗಳಿಸಿದೆ. ರಾಮ ಎನ್ನುವ ವ್ಯಕ್ತಿತ್ವ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸಿದ ಎಂದರು.


ಪಟ್ಟಣ ಪಂಚಾಯಿತಿ ಸದಸ್ಯ ವೆಂಕೋಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಾಲ್ಮೀಕಿ ಸಮುದಾಯದ ಮುಖಂಡ ರಮೇಶ್ ಬೇಡರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ನಂದನ ಬೋರ್ಕರ್ ವಾಲ್ಮೀಕಿ ಜಯಂತಿಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರರಾದ ಸಂತೋಷ ಭಂಡಾರಿ, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕುಮಾರ್ ನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್ ಪಿ ನರೋನ್ಹಾ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿದ್ದಾಪುರ:  ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ನವರಾತ್ರಿ ಉತ್ಸವದ ದುರ್ಗಾದೇವಿ ಆರಾಧನೆ ಪ್ರಯುಕ್ತ ಇತ್ತೀಚೆಗೆ ಸರ್ವಕಾಲಿಕ ಪ್ರಸಂಗಗಳಲ್ಲೊಂದಾದ ಪೌರಾಣಿಕ ಯಕ್ಷಗಾನ ಪ್ರಸಂಗ ‘ಕರ್ಣಾವಸಾನ'(ಕರ್ಣಾರ್ಜುನ ಕಾಳಗ) ತಾಳಮದ್ದಲೆಯು ವೇ.ಮೂ.ವಿನಾಯಕ ಸು ಭಟ್ಟ ಮತ್ತಿಹಳ್ಳಿ ಅವರ ದಿವ್ಯ ಉಪಸ್ಥಿತಿಯಲ್ಲಿ ಜರುಗಿತು.
ಪದ್ಮಶ್ರೀ ರಾಮಚಂದ್ರ ಹೆಗಡೆ ಚಿಟ್ಟಾಣಿ ವೇದಿಕೆಯಲ್ಲಿ, ದಿ. ಶ್ರೀ ಗಣೇಶ್ ಗಣಪತಿ ಹೆಗಡೆ ಸೂರನ್ ಸವಿ ನೆನಪಿನಲ್ಲಿ , ಶ್ರೀ ನಟರಾಜ್ ಎಂ. ಹೆಗಡೆ ಮತ್ತು ಗೆಳೆಯರ ಬಳಗ (ಯಕ್ಷಮಿತ್ರ ಬಳಗ) ನಾಣಿಕಟ್ಟಾ ಇವರ ಸಂಯೋಜನೆಯಲ್ಲಿ, ಉಪೇಂದ್ರ ಪೈ ಸೇವಾ ಟ್ರಸ್ಟ್ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ,ದಕ್ಷಿಣೋತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ತಾಳಮದ್ದಲೆಯು ಅದ್ದೂರಿಯಾಗಿ  ನಡೆಯಿತು.

ಹಿಮ್ಮೇಳದಲ್ಲಿ ಗಾನ ಸಾರಥಿ,ಗಾನ ಸಾಮ್ರಾಟ- ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ ಇವರ ಸುಮಧುರ ಹಾಡಿಗೆ, ನಾದಶಂಕರ ಶಂಕರ ಭಗವತ್ ಮದ್ದಲೆ ವಾದನದಲ್ಲಿ ಹಾಗೂ ಚಂಡೆಯಲ್ಲಿ ಯುವ ಕಲಾವಿದ,ಚಂಡೆ ಸಾರಥಿ ಪ್ರಸನ್ನ ಹೆಗ್ಗಾರ್ ಸಹಕರಿಸಿದರು.
ಭಾವನಾತ್ಮಕವಾಗಿ ಕರ್ಣನ ಪಾತ್ರದಲ್ಲಿ ಡಾ. ಪ್ರೊ‌. ವಿನಾಯಕ ಭಟ್ಟ, ಶಲ್ಯನ ಪಾತ್ರದಲ್ಲಿ ಪ್ರೋ. ಪವನ್ ಕಿರಣಕೆರೆ, 1 ನೇ ಕೃಷ್ಣನಾಗಿ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ,ಮತ್ತು 2 ನೇ ಭಾಗದ ಕೃಷ್ಣನಾಗಿ ವಿದ್ವಾನ್ ಶ್ರೀ ಚಂದ್ರಶೇಖರ್ ಭಟ್ ಗಾಳಿಮನೆ, ಅರ್ಜುನನಾಗಿ ಪ್ರೋ.ಅರುಣ್ ಶಿವಮೊಗ್ಗ, ಸರ್ಪಾಸ್ತ್ರ ಪಾತ್ರದಲ್ಲಿ ಶ್ರೀ ಮಹಾಬಲೇಶ್ವರ್ ಭಟ್ಟ ಇಟಗಿ ಸಮರ್ಥವಾಗಿ ನಿರ್ವಹಿಸಿದರು.ಸೇರಿದ ಐದನೂರಕ್ಕೂ ಹೆಚ್ಚಿನ ಪ್ರೇಕ್ಷಕರು ಸಾಕ್ಷಿಯಾದರು..


ಈ ಸಂದರ್ಭದಲ್ಲಿ ಯಕ್ಷಗಾನದ ಅಪ್ರತಿಮ ಕಲಾವಿದರಾದ,ಯಕ್ಷಸಾಧಕರಾದ,ರಾಜ್ಯ ಯಕ್ಷಗಾನ ಅಕಾಡೆಮಿಯಿಂದ ನೀಡುವ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಕೃಷ್ಣಾಜಿ(ಬೆಡ್ಕಣಿ) ನಾಣಿಕಟ್ಟಾ ಮತ್ತು ಕಲಾ ಆರಾಧಕರಾದ “ಕಲಾಭಾಸ್ಕರ” ಮಹಾಬಲೇಶ್ವರ ಭಟ್ ಇಟಗಿ ಇವರಿಗೆ ಗಣ್ಯರ ಸಮ್ಮುಖದಲ್ಲಿ ಸಂಘಟಕರಿಂದ ಗೌರವ ಸನ್ಮಾನ ನಡೆಯಿತು.
ಈ ಸಂದರ್ಭದಲ್ಲಿ ವೇ. ಮೂ.ವಿನಾಯಕ ಭಟ್ಟ ಮತ್ತೀಹಳ್ಳಿ,ಉಪೇಂದ್ರ ಪೈ ಸೇವಾ ಟ್ರಸ್ಟ್ ನ ಅಧ್ಯಕ್ಷ,ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರೂ ಆದ ಶ್ರೀ ಉಪೇಂದ್ರ ಪೈ ಶಿರಸಿ, ಜಿಲ್ಲಾ ಸಹಕಾರಿಗಳಾದ ತ್ಯಾಗಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ  ಶ್ರೀ ಎನ್‌.ಬಿ.ಹೆಗಡೆ ಮತ್ತಿಹಳ್ಳಿ, ಉದ್ಯಮಿಗಳಾದ ಆರ್.ಜಿ. ಹೆಗಡೆ ವಾಜಗದ್ದೆ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಸುಭಾಸ್ ನಾಯ್ಕ ಕಾನ್ಸೂರು,ಪ್ರಭಾಕರ್ ಹೆಗಡೆ, ಎಂ.ಎಂ. ಹೆಗಡೆ,ಉಮೇಶ್ ಹೆಗಡೆ, ರವಿ ಹೆಗಡೆ, ಹಾಗೂ ಸಂಘಟಕರಾದ ನಟರಾಜ ಹೆಗಡೆ, ಆರ್.ಟಿ. ನಾಯ್ಕ್, ರಮೇಶ್ ಬಾಳೆಕೈ ಶಶಿಧರ ಹೆಗಡೆ,ಉಮೇಶ ಹೆಗಡೆ,ಗಣಪತಿ ಹೆಗಡೆ , ಮಂಜುನಾಥ ಎಮ್ ಹೆಗಡೆ, ಹಾಗೂ ಐನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಲಾಪ್ರೇಮಿಗಳು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಆರ್. ಟಿ. ನಾಯ್ಕ ಹಂಗಾರಖಂಡ, ಪ್ರಸ್ಥಾವನೆ ಮತ್ತು ಸ್ವಾಗತವನ್ನು ನಟರಾಜ್ ಎಮ್ ಹೆಗಡೆ, ಪ್ರಾರ್ಥನೆಯನ್ನು ಕುಮಾರಿ ಅರ್ಚನಾ ಆರ್ ಹೆಗಡೆ ಹಾಗೂ ಶ್ರೀ ಶಶಿಧರ್ ಹೆಗಡೆ ತ್ಯಾಗಲಿ ಮತ್ತು ಶ್ರೀ ರಮೇಶ ನಾಯ್ಕ ಬಾಳೇಕೈ ಸನ್ಮಾನ ಪತ್ರವನ್ನು ವಾಚಿಸಿದರು. ವಂದನಾರ್ಪಣೆಯನ್ನು ರಮೇಶ್ ನಾಯ್ಕ್ ಬಾಳೆಕೈ ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿಸೂರನ್ ಕುಡುಂಬದ ಏಲ್ಲಾ ಸದಸ್ಯರು,ಸಮಿತಿಯ ಏಲ್ಲಾ ಸದಸ್ಯರು , ಐದನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಕಲಾಪ್ರೇಮಿಗಳು “ಕರ್ಣಾವಸಾನ” ಕ್ಕೆ ಸಾಕ್ಷಿಯಾದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *