ವಿಮಾ ಕಂಪನಿ ವಿರುದ್ಧ ಸಿದ್ಧಾಪುರ ರೈತರ ದಿಗ್ವಿಜಯ! ತ್ಯಾಗಲಿ ಸೊ ಸೈಟಿ ಸಾಧನೆ

# ರೈತರು ಕಂಪನಿಗೆ ಪಾವತಿಸಿದ ವಿಮಾ ಕಂತು ಗುಂಟೆಗೆ ರೂ.೬೫,

# ೨೩೨ ರೈತರು ಪ್ರತ್ಯೇಕವಾಗಿ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು.

ಗ್ರಾಹಕರ ನ್ಯಾಯಾಲಯ ವಿಮಾ ಕಂಪನಿಗಳ ಸೇವಾ ನ್ಯೂನ್ಯತೆ ಎತ್ತಿ ಹಿಡಿದಿದೆ.

# ಪಿರ್ಯಾದುದಾರರೆಲ್ಲರಿಗೂ ಗುಂಟೆಗೆ ೫೧೮ ರೂ ಗಳಿಗೆ ಶೇ,೬ ಬಡ್ಡಿದರ ಸೇರಿಸಿ ನೀಡಲು ತೀರ್ಪು.

# ಕಂಪನಿಯ ಸೇವಾನ್ಯೂನ್ಯತೆಗೆ ದಂಡವಾಗಿ ಪ್ರತಿರೈತರಿಗೆ ೨ ಸಾವಿರ ರೂ. ದಂಡವಾಗಿ ನೀಡಲು ಆದೇಶ.

ಭಾರತದ ಬೆನ್ನುಹುರಿ ರೈತರು ಅಸಂಘಟಿತ ಕಾರ್ಮಿಕರು. ರೈತರ ವಿಚಾರದಲ್ಲಿ ಎಲ್ಲರದೂ ಉಪೇಕ್ಷಿತ ದೃಷ್ಟಿ, ಆದರೆ ರೈತರಿರಲಿ ಯಾರೇ ಇರಲಿ ಛಲದಿಂದ ಹೋರಾಟಕ್ಕಿಳಿದರೆ ಯಶಸ್ಸು ಸಾಧ್ಯ ಎಂದು ತೋರಿಸಿಕೊಟ್ಟ ರೈತರ ಸಾಹಸಗಾಥೆಯೇ ಈ ವರದಿಯ ವಸ್ತು.

ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಪ್ರತಿವರ್ಷ ಬೆಳೆವಿಮೆ ಎನ್ನುವುದು ಮರೀಚಿಕೆ. ಹಲವು ವರ್ಷಗಳಿಂದ ಬೆಳೆವಿಮೆ ಕಂತು ತುಂಬಿ ಮೋಸಹೋಗುವ ರೈತರಂತೆ ತ್ಯಾಗಲಿ ಸೇವಾ ಸಹಕಾರಿ ಸಂಘದ ಸದಸ್ಯರು ಪ್ರತಿವರ್ಷ ತಮ್ಮ ಬೆಳೆ ವಿಮೆ ತುಂಬಿ ಸುಮ್ಮನಾಗುತಿದ್ದರು. ಬೇಳೆವಿಮೆ ಮಾಡಿಸಿಕೊಳ್ಳುವ ಕಂಪನಿಗಳು ಪ್ರತಿವರ್ಷ ಒಂದಲ್ಲಾ ಒಂದು ಕಾರಣ ಹೇಳಿ ರೈತರಿಗೆ ಪಂಗನಾಮ ಹಾಕುತಿದ್ದರು.


ಈ ಬಗ್ಗೆ ಬೇಸತ್ತ ಸಿದ್ಧಾಪುರ ತ್ಯಾಗಲಿ ಭಾಗದ ನಾಣಿಕಟ್ಟಾ ಅಡಕೆ ರೈತರು ತಮ್ಮ ಸ್ಥಳಿಯ ತ್ಯಾಗಲಿ ಸೇವಾ ಸಹಕಾರಿ ಸಂಘದ ಮೂಲಕ ಪ್ರತಿಷ್ಟಿತ ಕಂಪನಿ ಬೆಳೆವಿಮೆ ಹಣ ತುಂಬಿಸಿಕೊಂಡು ತಮಗೆ ಮೋಸ ಮಾಡಿದೆ ಎಂದು ಗ್ರಾಹಕರ ವೇದಿಕೆಗೆ ದೂರುಕೊಟ್ಟರು. ೨೦೧೯ ನೇ ಇಸ್ವಿಯಲ್ಲಿ ತ್ಯಾಗಲಿ ಸೇವಾ ಸಹಕಾರಿ ಸಂಘದ ಎರಡು ನೂರಕ್ಕೂ ಹೆಚ್ಚು ರೈತರಿಂದ ಬೆಳೆವಿಮೆ ತುಂಬಿಸಿಕೊಂಡ ಕಂಪನಿ ಬೆಳೆಹಾನಿಗೆ ಪರಿಹಾರ ನೀಡಿರಲಿಲ್ಲ. ಈ ವಿಚಾರವನ್ನು ಗ್ರಾಹಕರ ನ್ಯಾಯಾಲಯಕ್ಕೆ ಒಯ್ದ ಸಂಘ ಬೆಳೆವಿಮೆ ಕಂಪನಿ ವಿರುದ್ಧ ಕಾರವಾರದ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಪರಿಹಾರ ಪಡೆದಿದೆ.


ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಪರಿಹಾರದ ಮೊತ್ತ ಗುಂಟೆಗೆ ೭೦೦ ರೂಪಾಯಿ ಜೊತೆಗೆ ರೈತರಿಗಾದ ಮಾನಸಿಕ ಹಾನಿಗೆ ತಲಾ ಎರಡು ಸಾವಿರ ದಂಡ ಕೊಡಬೇಕೆಂದು ಕಂಪನಿ ವಿರುದ್ಧ ತೀರ್ಪು ನೀಡಿರುವ ನ್ಯಾಯಾಲಯ ಒಂದು ತಿಂಗಳ ಅವಧಿ ಒಳಗೆ ಈ ಪ್ರಕ್ರೀಯೆ ಮುಗಿಸುವಂತೆ ಆದೇಶಿಸಿದೆ. ಭಾರತದಲ್ಲಿ ಬೆಳೆವಿಮೆ ಹೆಸರಲ್ಲಿ ಹಲವು ವರ್ಷಗಳಿಂದ ರೈತರಿಗೆ ಕಂಪನಿಗಳು ಮೋಸ ಮಾಡುತ್ತಿವೆ. ಈ ಮೋಸದ ಜಾಲದ ವಿರುದ್ಧ ಕೆಳಹಂತದಲ್ಲಿ ನ್ಯಾಯ ಪಡೆದಿರುವ ತ್ಯಾಗಲಿ ಸೇವಾ ಸಹಕಾರಿ ಸಂಘ ನಾಣಿಕಟ್ಟಾದ ರೈತರು ಸರ್ಕಾರ ಮತ್ತು ಖಾಸಗಿ ಕಂಪನಿಗಳ ಮೋಸದಾಟವನ್ನು ಬಯಲು ಮಾಡಿದ್ದಾರೆ.


ಈ ವಿಚಾರದಲ್ಲಿ ವಿಮಾ ಕಂಪನಿಯ ಮುಂದಿನ ಕಾರ್ಯತಂತ್ರಗಳ ವಿರುದ್ಧ ಹೋರಾಡುವುದಾಗಿಯೂ ತಿಳಿಸಿದ್ದಾರೆ. ರೈತರು ಸಾಮೂಹಿಕವಾಗಿ ಸಂಘಟಿತರಾಗಿ ತಮಗಾದ ಅನ್ಯಾಯದ ವಿರುದ್ಧ ಹೋರಾಟಮಾಡಿ ಗೆದ್ದ ದೃಷ್ಟಾಂತ ಬಲು ಅಪರೂಪ. ಈ ಸಾಹಸ ಮಾಡಿದ ತ್ಯಾಗಲಿ ಸೇವಾಸಹಕಾರಿ ಸಂಘದ ಎನ್.ಬಿ.ಹೆಗಡೆ ರೈತರ ಹೋರಾಟಕ್ಕೆ ನೇತೃತ್ವ ನೀಡಿರುವ ಸಂಸ್ಥೆ ಸದಾ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದಕ್ಕೆ ಇದೊಂದು ಉದಾಹರಣೆಯಷ್ಟೇ ಎಂದಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *