ಕುಮಟಾ ತಾಲೂಕಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಕೂಜಳ್ಳಿಯ ಡಾ.ಎಂ.ಎಚ್.ನಾಯ್ಕ ಆಯ್ಕೆ

ಕುಮಟಾ ತಾಲೂಕಾ ಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕೂಜಳ್ಳಿಯ ಡಾಕ್ಟರ್ ಎಂ.ಎಚ್. ನಾಯ್ಕರನ್ನು ಕಾರ್ಯಕಾರಿ ಸಮಿತಿಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಸುಬ್ಬಯ್ಯ ನಾಯ್ಕ ತಿಳಿಸಿದ್ದಾರೆ.

ಇತ್ತೀಚೆಗೆ ಕುಮಟಾದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸಲಾಯಿತು. ಫೆಬ್ರವರಿ 28ರಂದು ಕೋನಳ್ಳಿಯಲ್ಲಿ ನಡೆಯುವ ತಾಲೂಕಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಪಿ.ಆರ್. ನಾಯ್ಕ ಉಪಸ್ಥಿತರಿದ್ದು,ಆಯ್ಕೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. ಪರಿಷತ್ತಿನ ನಿಯಮದಂತೆ ತಾಲೂಕಿನ ಹಿರಿತನ ಮತ್ತು ಸಾಹಿತ್ಯ ಸೇವೆಯನ್ನು ಆಧರಿಸಿ ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದಾಗ ಸರ್ವಾನುಮತದಿಂದ ಡಾಕ್ಟರ್ ಎಂ. ಎಚ್.ನಾಯ್ಕರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಡಾ. ಶ್ರೀಧರ್ ಗೌಡ ಉಪ್ಪಿನಗಣಪತಿ, ಕಸಾಪ ಕಾರ್ಯದರ್ಶಿಗಳಾದ ಪ್ರಮೋದ ನಾಯ್ಕ,ಪ್ರದೀಪ ನಾಯಕ, ಪದಾಧಿಕಾರಿಗಳಾದ ನಾಗರಾಜ ಶೆಟ್ಟಿ, ಸಂಧ್ಯಾ ಭಟ್ಟ, ಸುರೇಶ ಭಟ್ಟ, ಮಾಲಾ ನಾಯ್ಕ, ಪ್ರಕಾಶ ನಾಯ್ಕ, ವಿಜಯ ಗುನಗ,ಎಂ.ಎಂ.ಚಂದಾವರ ಮುಂತಾದವರು ಉಪಸ್ಥಿತರಿದ್ದರು.

*ಡಾ. ಎಮ್. ಎಚ್ ನಾಯ್ಕ*: ಮಂಜುನಾಥ ಹೊಸಬಯ್ಯ ನಾಯ್ಕರವರು1956ರಲ್ಲಿ ತಾಲೂಕಿನ ಕೂಜಳ್ಳಿ ಗ್ರಾಮದಲ್ಲಿ ಜನಿಸಿದರು.ಪ್ರಾಥಮಿಕ ಶಿಕ್ಷಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಜಳ್ಳಿಯಲ್ಲಿಯೂ, ಪ್ರೌಢ ಶಿಕ್ಷಣ ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯಲ್ಲಿಯೂ, ಕುಮಟಾದ ಎ.ವಿ. ಬಾಳಿಗಾ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಮ್. ಎ.ಪದವಿ ಪಡೆದರು.1979 ರಲ್ಲಿ ಕಾರವಾರದ ಕೆನರಾ ವೆಲ್ಫೇರ್ ಟ್ರಸ್ಟಿನ ದಿವೇಕರ ವಾಣಿಜ್ಯ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಪ್ರಾರಂಭಿಸಿದರು. ನಂತರ ಇಂಗ್ಲಿಷ್ ಚಿಂತಕ, ಕಾದಂಬರಿಕಾರ, ಹೋರಾಟಗಾರ ಜಾರ್ಜ್ ಆರ್ವೆಲ್ ಕುರಿತು, ಸುಧಾರಣಾ ವಾದಿ ವ್ಯಕ್ತಿ ನಿಷ್ಠವಾದ ಒಂದು ಅಧ್ಯಯನ ಎನ್ನುವ ಪ್ರಬಂಧ ಮಂಡಿಸಿ 1995 ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಸಹಾಯಕ ಪ್ರೊಫೆಸರ್ ಆಗಿ ಬಡ್ತಿ ಹೊಂದಿ ಪ್ರಾಂಶುಪಾಲರಾಗಿ ಮೂರು ವರ್ಷ ಸೇವೆ ಸಲ್ಲಿಸಿ 2016ರಂದು ನಿವೃತ್ತಿಯಾಗಿರುತ್ತಾರೆ.

ಮಾಜಿ ಸಂಸದ ದಿ. ಬಿ. ವಿ. ನಾಯಕ ಮತ್ತು ದಿ.ಎಸ್.ಆರ್. ನಾರಾಯಣ್ ರಾವ್ ಮುಂತಾದವರನ್ನೊಳಗೊಂಡ ಗಿಬ್ ಎನ್ನುವ ಚಿಂತನ ವೇದಿಕೆ ಸದಸ್ಯರಾಗಿಯೂ, ಸಂಚಾಲಕರಾಗಿಯೂ ಸುಮಾರು ಮೂರು ದಶಕಗಳ ಕಾಲ ನಿರ್ವಹಣೆ ಮಾಡಿ ಪಕ್ವ ಅನುಭವ ಹೊಂದಿರುತ್ತಾರೆ. ದಿ ಟೈಮ್ಸ್ ಆಫ್ ಇಂಡಿಯಾ ವೃತ್ತ ಪತ್ರಿಕೆಯ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಸಂಯುಕ್ತ ಕರ್ನಾಟಕ,ಮುಂಗಾರು, ಸಂಕ್ರಮಣ, ಕರಾವಳಿ ಮುಂಜಾವು ಮುಂತಾದ ಪತ್ರಿಕೆಗಳಲ್ಲಿ ಪ್ರಚಲಿತ ವಿಷಯಗಳ ಕುರಿತು ಲೇಖನಗಳು ಪ್ರಕಟವಾಗಿವೆ. ಕರಾವಳಿ ಮುಂಜಾವು ದಿನಪತ್ರಿಕೆಯಲ್ಲಿ ಮುಕ್ತ ಚಿಂತಕ ಅಂಕಣದಲ್ಲಿ ಸುಮಾರು ಏಳು ವರ್ಷಗಳ ಕಾಲ ಮುಕ್ತ ಚಿಂತನ ಅಂಕಣ ಬರಹ 350ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ.

ಪ್ರಕಟಿತ ಕೃತಿ: ವಿಮೋಚನೆ- (ವೈಚಾರಿಕ ಲೇಖನಗಳ ಸಂಗ್ರಹ)1990, ಚಿರಂತನ (ಆಯ್ದ ಲೇಖನಗಳ ಸಂಗ್ರಹ)2010

ಪರಿವರ್ತನ ಪಯಣ (2012)

ಚೈತನ್ಯ ಜ್ಯೋತಿ (2021)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

Recommended For You

About the Author: Kanneshwar Naik

Leave a Reply

Your email address will not be published. Required fields are marked *