ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರ ಸಭೆ & ಆರ್.ಡಿ.ಹೆಗಡೆಯವರಿಗೆ ಸನ್ಮಾನ

ಟಿ.ಎಮ್.ಎಸ್ ಹಿಂದಿನ ಉಪಾಧ್ಯಕ್ಷಆರ್.ಡಿ ಹೆಗಡೆ ಮತ್ತಿಹಳ್ಳಿ ಅವರಿಗೆ ಸನ್ಮಾನ
ಸಿದ್ದಾಪುರ೨೨ ಸ್ಥಳೀಯ ಟಿ.ಎಂ.ಎಸ್‌ದಲ್ಲಿ ೧೦ ವರ್ಷ ನಿರ್ದೇಶಕರಾಗಿಆರು ವರ್ಷಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಆರ್.ಡಿ..ಹೆಗಡೆ ಮತ್ತೀಹಳ್ಳಿ ಅವರನ್ನು ಸಿದ್ದಾಪುರ ಟಿ.ಎಂ.ಎಸ್‌ಅಧ್ಯಕ್ಷಆರ್ ಎಂ ಹೆಗಡೆ ಬಾಳೇಸರ ಅವರ ಸ್ವನಿವಾಸ ಮತ್ತೀಹಳ್ಳಿಗೆ ತೆರಳಿ ಫೆಬ್ರವರಿ ೨೧ ರಂದು ಸನ್ಮಾನಿಸಿದರು.
ಆರ್.ಡಿ.ಹೆಗಡೆಅವರು ಸಂಘದ ಸಂಕಷ್ಟಕಾಲದಲ್ಲಿಎನ್‌ಎನ್‌ಭಟ್ಟಗುಡ್ಡೇಕೊಪ್ಪಅವರಅಧ್ಯಕ್ಷೀಯಅವಧಿಯಲ್ಲಿಉಪಾಧ್ಯಕ್ಷರಾಗಿ ಸೇವೆ ನೀಡಿ ಸಂಘದಅಭಿವೃದ್ಧಿಗೆ ಶ್ರಮಿಸಿದರು. ಅವರ ಶಿಸ್ತು ಆಡಳಿತದ ಅನುಭವದಿಂದಾಗಿ ಸಂಘಕ್ಕೆ ಹೆಚ್ಚಿನ ಪ್ರಯೋಜನವಾಗಿದೆಎಂದುಅವರನ್ನು ಅಭಿನಂದಿಸಿ ನುಡಿದರು. ಈ ಸಂದರ್ಭದಲ್ಲಿ ಸಾಹಿತಿ ಜಿ.ಜಿ.ಹೆಗಡೆ ಬಾಳಗೋಡ ಹಾಗೂ ಇತರಗಣ್ಯರು ಉಪಸ್ಥಿತರಿದ್ದರು.

ಸಿದ್ದಾಪುರ: ಪಟ್ಟಣದ ಟಿಎಂಎಸ್ ಸಭಾಂಗಣದಲ್ಲಿ ಧಾರವಾಡ ಹಾಲೂ ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ ಅಧ್ಯಕ್ಷತೆಯಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರ ಹಾಗೂ ಮುಖ್ಯ ಕಾರ್ಯನಿರ್ವಾಹಕ ಸಭೆ ಸೋಮವಾರ ನಡೆಯಿತು.
ತಾಲೂಕಿನ ಶಿರಳಗಿ ಸಮೀಪದ ಬಾಳೆಕೊಪ್ಪ-ಒಡಗೇರಿಯಲ್ಲಿರುವ ಕೆಎಫ್‌ಡಿಸಿ ಜಾಗದಲ್ಲಿ ಹಸಿ ಮೇವನ್ನು ಬೆಳೆಸಿ ಹಾಲು ಸಂಘಗಳಿಗೆ ಧಾರವಾಡ ಹಾಲು ಒಕ್ಕೂಟ ಪೂರೈಕೆ ಮಾಡಬೇಕು. ಇದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸುವುದರ ಜೊತೆಗೆ ಹಾಲು ಉತ್ಪಾದಕರ ಸಹಕಾರಿ ಸಂಘಗಳು ನಿರಂತರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಾಲೂಕಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ಸಂಘದ ಮುಖ್ಯಕಾರ್ಯನಿರ್ವಾಹಕರು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.


ಸುಮಾರು ಒಂದುಸಾವಿರ ಏಕರೆಯಷ್ಟು ಜಾಗ ಇದ್ದು ಈ ಮೊದಲು ಕೆಎಫ್‌ಡಿಸಿ ಈ ಜಾಗದಲ್ಲಿ ಹಸಿರು ಮೇವನ್ನು ಬೆಳೆದು ಜಿಲ್ಲೆಯ ಹೈನುಗಾರರಿಗೆ ಒದಗಿಸುತ್ತಿತ್ತು. ಅನಿವಾರ್ಯಕಾರಣಗಳಿಂದ ಅದು ಈಗ ಸ್ಥಗಿತಗೊಂಡಿದೆ. ಈಗ ಹಲವು ಕಾರಣಗಳಿಂದ ಹಾಗೂ ಮೇವಿನ ಕೊರತೆಯಿಂದ ಮತ್ತು ಪಶು ಆಹಾರಗಳ ಧರ ಏರಿಕೆಯಿಂದಾಗಿ ರೈತರು ಹೈನುಗಾರಿಕೆಯನ್ನೆ ಬಿಡುತ್ತಿದ್ದಾರೆ. ಹೈನುಗಾರಿಕೆ ಉಳಿಯಬೇಕಾದರೆ ಧಾರವಾಡ ಹಾಲು ಒಕ್ಕೂಟ ಈ ಕುರಿತು ಶೀಘ್ರ ತೀರ್ಮಾನತೆಗೆದುಕೊಂಡು ಕಾರ್ಯೋನ್ಮುಖರಾಗಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡದ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ ಈ ಕುರಿತು ಒಕ್ಕೂಟದ ಸಭೆಯಲ್ಲಿ ಹಾಗೂ ಕೆಎಫ್‌ಡಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.


ಹಲವು ಕಾರಣಗಳಿಂದ ಎಲ್ಲ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಹಾಲು ಶೇಖರಣೆ ಕಡಿಮೆ ಆಗುತ್ತಿದೆ, ಹಾಲು ಶೇಖರಣೆ ಹೆಚ್ಚಿಸುವುದಕ್ಕೆ ಒಕ್ಕೂಟಗಳು ಹಾಲು ಉತ್ಪಾದಕರಿಗೆ ಹೆಚ್ಚಿನ ಸಹಕಾರ ನೀಡಬೇಕು. ಸಂಘದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಗೌರವಧನ ನೀಡಬೇಕು ಸೇರಿದಂತೆ ಮತ್ತಿತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಜಿಲ್ಲಾ ಮುಖ್ಯಸ್ಥ ಎಸ್.ಎಸ್.ಬಿಜ್ಜೂರು ಮಾತನಾಡಿ ಎಲ್ಲ ಕಡೆಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆ ಆಗಿದೆ. ಈ ಕುರಿತು ಒಕ್ಕೂಟ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಹಾಗೂ ಹಾಲು ಉತ್ಪಾದನೆ ಹೆಚ್ಚು ಮಾಡುವುದಕ್ಕೂ ಯೋಚಿಸುತ್ತಿದೆ. ಇತ್ತೀಚನ ದಿನಗಳಲ್ಲಿ ಜಾನುವಾರುಗಳಿಗೆ ಅಂಟಿರುವ ಚರ್ಮಗಂಟು ರೋಗದಿಂದ ಹಲವು ಆಕಳುಗಳು ಮೃತಪಟ್ಟಿದೆ. ಹೈನುಗಾರರು ತಮ್ಮ ಆಕಳಿಗೆ ರಾಸು ವಿಮೆಯನ್ನು ಕಡ್ಡಾಯವಾಗಿ ಮಾಡಿಸಬೇಕೆಂದರು.


ಕಡಕೇರಿ ಸಂಘದ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಮಗೇಗಾರ, ಬಿಳಗಿ ಹಾಲು ಸಂಘದ ಅಧ್ಯಕ್ಷ ವಿಜಯಕುಮಾರ ಭಟ್, ಬಾಳೇಸರ ಹಾಲು ಸಂಘದ ಅಧ್ಯಕ್ಷ ವಿ.ಎಸ್.ಭಟ್ಟ, ತಾಲೂಕು ವ್ಯವಸ್ಥಾಪಕ ಡಾ, ವಿನಾಯಕ ಇತರರಿದ್ದರು.
ವಿಸ್ತರಣಾಧಿಕಾರಿಗಳಾದ ಪ್ರಕಾಶ ಕೆ ಹಾಗೂ ಚಂದನ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *