ಪ್ರವಾಸಿಗರಿಂದ ತುಂಬಿತುಳುಕುತ್ತಿರುವ ಭೀಮನಗುಡ್ಡ


ಮಳೆಗಾಲದಲ್ಲಿ ಮಲೆನಾಡು ಚೆಂದ ಇಲ್ಲಿಯ ಗುಡ್ಡ,ಬೆಟ್ಟ,ಜಲಪಾತ, ಜಲಧಾರೆಗಳು ಪ್ರಕೃತಿಯ ಸೊಬಗನ್ನು ವಿಜೃಂ ಬಿಸುತ್ತವೆ. ನೀವೀಗ ನೋಡುತ್ತಿರುವ  ಅತಿ ಎತ್ತರದ ಪ್ರದೇಶ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಭೀಮನಗುಡ್ಡ ಈ ಗುಡ್ಡ ಸಮುದ್ರದಿಂದ ೬೩೬ ಮೀಟರ್‌ ಎತ್ತರದಲ್ಲಿದೆ.


ಮಳೆಗಾಲದ ಪ್ರಾರಂಭದಿಂದ ಬೇಸಿಗೆ ಮುಗಿಯುವವರೆಗೆ ಎಲ್ಲಾ ಕಾಲಗಳಲ್ಲೂ ನೋಡಿ ಮೈಮರೆಯಬಹುದಾದ ಈ ಭೀಮನಗುಡ್ಡ ಸಿದ್ಧಾಪುರ ತಾಲೂಕಿನಿಂದ ನಾಲ್ವತ್ತು ಕಿಲೋ ಮೀಟರ್‌ ದೂರದ ನಿಲ್ಕುಂದ ಪಂಚಾಯತ್‌ ವ್ಯಾಪ್ತಿಯಲ್ಲಿದೆ. ನೆರೆಯ ಶಿರಸಿ ತಾಲೂಕುಕೇಂದ್ರದಿಂದ ೩೦ ಕೀಲೋಮೀಟರ್‌ ದೂರದ ಈ ಭೀಮನಗುಡ್ಡ ಸಿದ್ಧಾಪುರ ಮತ್ತು ಕುಮಟಾ ತಾಲೂಕುಗಳ ಗಡಿಗಳಿಗೆ ಹೊಂದಿಕೊಂಡಿದೆ. ಹೆಗ್ಗರಣೆ ಶಿರಸಿ ರಸ್ತೆಇಂದ ಒಂದುಕಿಲೋಮೀಟರ್‌ ದೂರದ ಈ ಭೀಮನಗುಡ್ಡ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರವಾಸಿಗಳನ್ನು ಆಕರ್ಷಿಸುತ್ತಿದೆ.

ಮಳೆಗಾಲದ ನಂತರ ಇಲ್ಲಿಯ  ಪ್ರವಾಸ ಸುರಕ್ಷಿತ, ಅನುಕೂಲಕರವಾದರೂ ಮಲೆನಾಡ ಮಳೆಯ ಸುಬಗು ಕಾಣುವವರು ಮಳೆಯಲ್ಲೇ ಇಲ್ಲಿಗೆ ಬರುತ್ತಾರೆ. ಎತ್ತರದ ಭೀಮಣಗುಡ್ಡ ವೀಕ್ಷಣಾ ಕೇಂದ್ರದಿಂದ ಅಘನಾಶಿನಿ ನದಿ ಹರಿಯುವ ಪಶ್ಚಿಮಘಟ್ಟದ ಕಣಿವೆ ನೋಡಲು ಅದ್ಭುತ ಜಾಗದಂತಿರುವ ಈ ಭೀಮಣಗುಡ್ಡ ಮಂಜಿನಲ್ಲಿ ಮಲಗಿದಾಗ ಇದರ ಸೌಂದರ್ಯ ವರ್ಣಿಸಲಸಾಧ್ಯ ಊಟಿ,ಆಗುಂಬೆಯ ವಾತಾವರಣ ನೆನಪಿಸುವ ಇಲ್ಲಿಯ ಪ್ರಕೃತಿಯ ಸೊಬಗು ಈ ಯುವ ಜನರ ಆಯ್ಕೆಯಾಗಿ ಪ್ರಸಿದ್ಧವಾಗುತ್ತಿದೆ. ಅರಣ್ಯ ಇಲಾಖೆಯ ಕಣ್ಗಾವಲಿನ ರಕ್ಷಿತಾರಣ್ಯ ಪ್ರದೇಶದ ಈ ಭೀಮಣಗುಡ್ಡ ಏರಲು ಅರಣ್ಯ ಇಲಾಖೆಯ ಅನುಮತಿ ಬೇಕು. ಅರಣ್ಯ ಇಲಾಖೆಯ ಪಾಸ್‌ ಪಡೆದು ನಿರ್ಬಂಧಗಳಿಗೊಳಪಟ್ಟು ವೀಕ್ಷಿಸಬೇಕಾದ ಈ ಪ್ರಕೃತಿಯ ಸೊಬಗನ್ನು ನೋಡಲು ಜನ ಸಾಗರದೋಪಾದಿಯಲ್ಲಿ ಬರುತ್ತಿರುವುದು ಇದರ ಪ್ರಸಿದ್ಧಿಗೆ ಸಾಕ್ಷಿ. ಪ್ರವಾಸಿಗರಿಗೆ ಅದರಷ್ಟವಿದ್ದರೆ ಈ ಪ್ರದೇಶದಲ್ಲಿ ವನ್ಯಮೃಗಗಳೂ ಕಾಣಿಸಿಕೊಳ್ಳಬಹುದು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *