

ಉತ್ತರ ಕನ್ನಡ ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಿಸುತ್ತಿರುವ ಮಂಗನ ಕಾಯಿಲೆ ರೋಗದ ವಿಪರೀತಕ್ಕೆ ಸ್ಥಳೀಯರ ಅಸಹಕಾರ ಕಾರಣ ಎನ್ನುವ ವಾಸ್ತವ ಬೆಳಕಿಗೆ ಬಂದಿದೆ.
ಈ ವರ್ಷ ೨ ಸಾವುಗಳಾದ ಸಿದ್ಧಾಪುರ ತಾಲೂಕಿನ ತಹಸಿಲ್ಧಾರ ಕಛೇರಿಯಲ್ಲಿ ಇಂದು ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು. ಈ ಸಭೆಯ ವೇಳೆ ಪರಿಶೀಲನೆ ಮಾಡಿದ ಅಧಿಕಾರಿಗಳಿಗೆ ಮಂಗನ ಕಾಯಿಲೆ ವ್ಯಾಪಿಸಿದ, ಸಾವುಗಳಾದ ಪ್ರದೇಶಗಳಲ್ಲಿ ತಮ್ಮ ಗ್ರಾಮದಲ್ಲಿ ಮಂಗನ ಕಾಯಿಲೆ ಇದೆ. ಸಾವುಗಳಾಗಿವೆ ಎಂದು ಪ್ರಚಾರ ನಡೆಯುವುದನ್ನು ಸಹಿಸದ ಸ್ಥಳೀಯರು ರೋಗದ ಬಗ್ಗೆ ಮಾಹಿತಿ ನೀಡದಿರುವುದು. ಸಾರ್ವಜನಿಕ ವಲಯದಲ್ಲಿ ತಮ್ಮ ಗ್ರಾಮದ ಬಗ್ಗೆ ಅಪಪ್ರಚಾರ ನಡೆಯಬಹುದೆನ್ನುವ ಅಂಜಿಕೆ, ಆತಂಕಗಳಿಂದ ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡದಿರುವುದು, ರೋಗ ಲಕ್ಷಣಗಳಿರುವವರು ಆಸ್ಫತ್ರೆಗೆ ಬಂದು ಪರೀಕ್ಷೆಗೆ ಒಳಗಾಗದಿರುವುದು ಕೆಲವು ಸಂದರ್ಭ ಗಳಲ್ಲಿ ಅನಾಹುತಕ್ಕೆ ಕಾರಣವಾಗುವ ಬಗ್ಗೆ ಚರ್ಚೆ ನಡೆಯಿತು.
ಈ ವಾಸ್ತವವನ್ನು ಆಲಿಸಿದ ತಾಲೂಕಾ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್ ನಾಯ್ಕ ಮತ್ತು ತಹಸಿಲ್ಧಾರ ವಿಶ್ವಜೀತ ಮೆಹತಾ ಗ್ರಾಮದ ಹೆಸರು ಕೆಡುವ ಆತಂಕ ಅಥವಾ ಇತರ ನಂಬಿಕೆ, ರೂಢಿ ವಿಚಾರಗಳು ಸೇರಿದಂತೆ ಬೇರೆ ಯಾವುದೇ ಅಂಶಗಳು ಮಂಗನ ಕಾಯಿಲೆ ಉಲ್ಬಣ, ಸಾವು- ನೋವುಗಳಿಗೆ ಕಾರಣವಾಗದಂತೆ ಎಚ್ಚರ ವಹಿಸುವಂತೆ ಸ್ಥಳೀಯ ಅಧಿಕಾರಿ ವರ್ಗ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
