



ಸುಳ್ಳು ಮತ್ತು ಅಹಂಕಾರದಿಂದ ಮೋದಿ ಜನರಿಗೆ ದ್ರೋಹ ಮಾಡುತಿದ್ದಾರೆ ಎಂದು ಆರೋಪಿಸಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಮೋದಿ ನಮಸ್ಕಾರ ಈ ದೇಶಕ್ಕೆ ಗಂಡಾಂತರಕಾರಿಯಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ. ಸಿದ್ಧಾಪುರದ ಹೊಸೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದ ಅವರು ನಮ್ಮ ಸಮಸ್ಯೆಗಳಿಗೆ ಸ್ಫಂದಿಸದೆ ಜನರ ದಿಕ್ಕು ತಪ್ಪಿಸುತ್ತಿರುವ ಬಿ.ಜೆ.ಪಿ. ಬೆಲೆ ತೆರಲಿದೆ. ಮೋದಿ ತಮ್ಮ ವೈಭವೀಕರಣಕ್ಕಾಗಿ ದೇಶ,ದೇವರು, ಜನರ ಮುಗ್ಧತೆ ಬಳಸಿಕೊಳ್ಳುತಿದ್ದಾರೆ, ಇದು ಈಗ ಜನರಿಗೆ ಅರ್ಥವಾಗುತ್ತಿದ್ದು ಮೋದಿ ನಮಸ್ಕಾರಕ್ಕೆ ಜನರ ಧಿಕ್ಕಾರ ಸಿಗಲಿದೆ ಎಂದರು.
ಮೂವತ್ತು ವರ್ಷ ಜನಪ್ರತಿನಿಧಿಯಾದವರು ಮೋದಿ ನೋಡಿ ಮತ ಕೊಡಿ ಅನ್ನುವುದಾದರೆ ಅವರ ಸಾಧನೆ ಶೂನ್ಯ ಎಂಬುದು ಅವರೇ ಒಪ್ಪಿಕೊಂಡಂತಾಗಿದೆ. ಜನರ ಭಾವನೆ, ಅಸಹಾಯಕತೆ ಬಳಸಿಕೊಂಡು ರಾಜಕೀಯ ಲಾಭ ಮಾಡಿಕೊಳ್ಳುವ ಬಿ.ಜೆ.ಪಿ., ಕಾಗೇರಿ ಕಾಂಗ್ರೆಸ್ ಟೀಕಿಸುವುದೇ ಅವರ ಸೋಲಿಗೆ ಕಾರಣವಾಗಲಿದೆ ಎಂದು ವಿವರಿಸಿದರು.
