ಸುರಿಯುವ ಮಳೆ ಲೆಕ್ಕಿಸದೇ ಗುರುಗಳಿಗೆ ಗೌರವ ಸಲ್ಲಿಸಲು ಬಂದ ಜನಸಮೂಹ!


ಕಾಲು ಶತಮಾನ ಒಂದೇ ಶಾಲೆಯಲ್ಲಿ ಸೇವೆಗೆ ಗ್ರಾಮಸ್ಥರ ಪ್ರೀತಿಯೇ ಕಾರಣ- ಉಮೇಶ ನಾಯ್ಕ.
ಸಿದ್ದಾಪುರ:
ಆದರ್ಶ ಶಿಕ್ಷಕ ಉಮೇಶ‌ ನಾಯ್ಕ 31 ರಂದು ಸೇವಾನಿವೃತ್ತರಾಗಿದ್ದು ಇಂದು ತಾಲೂಕಿನ ನೆಜ್ಜೂರಿನ ಸ.ಕಿ.ಪ್ರಾ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು, ಪಾಲಕರು, ಗ್ರಾಮಸ್ಥರು, ಹಳೆವಿದ್ಯಾರ್ಥಿಗಳೆಲ್ಲರೂ ಸೇರಿ ಅದ್ದೂರಿಯಾಗಿ ಉಮೇಶ ನಾಯ್ಕ ಮತ್ತು ನೀಲಾ ನಾಯ್ಕ ದಂಪತಿಗಳನ್ನು ಗೌರವಿಸಿ ಗುರುನಮನ ಸಲ್ಲಿಸಿ ಬೀಳ್ಕೊಟ್ಟರು. ಹಾರೆಕೊಪ್ಪ ಶಾಲಾ ಆವರಣದ ಸಭಾಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಹಲವಾರು ಹಳೆ ವಿದ್ಯಾರ್ಥಿಗಳು ಹತ್ತಿರ ಬಂದು ಪಾದಮುಟ್ಟಿ ನಮಸ್ಕರಿಸಿ ಸಂತೃಪ್ತಿ ಪಟ್ಟರು.


ಗೌರವ ಸ್ವೀಕರಿಸಿದ ಉಮೇಶ ನಾಯ್ಕ ನೆಜ್ಜೂರಿನ ಜನರು ಆರ್ಥಿಕವಾಗಿ ಬಡವರಾಗಿದ್ದರೂ ಹೃದಯಶೀಮಂತಿಕೆಯಲ್ಲಿ ತುಂಬಾ ದೊಡ್ಡವರು.ಇದರಿಂದಾಗಿ ನನ್ನ ವೃತ್ತಿ ಜೀವನದ ಸುಮಾರು ಕಾಲು ಶತಮಾನ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಯುತೆಂದು ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅನೇಕ ಹಳೆವಿದ್ಯಾರ್ಥಿ/ ನಿಯರು ತಮ್ಮ ಅನಿಸಿಕೆಯಲ್ಲಿ ಇಂದಿನ ತಮ್ಮ ಉನ್ನತ ಬದುಕಿಗೆ ಉಮೇಶ ಸರ್ ಅವರೇ ಕಾರಣರೆಂದು ನುಡಿದಾಗ ಉಮೇಶ ಗುರುಗಳ ಕಂಗಳು ಧನ್ಯತಾಭಾವದಿಂಧ ತೇವವಾದವು.

ತೀರಾ ಹಿಂದುಳಿದ ಪ್ರದೇಶದ, ಅನಕ್ಷರಸ್ಥ ಪಾಲಕರು, ಹಾಗೂ ವಿದ್ಯಾರ್ಥಿಗಳೆಲ್ಲರ ಹೃದಯಾಳದ ಮಾತಿನ ಮುಂದೆ ಸದಾ ಹಣದಾಹದ ಹಿಂದೆ ಬಿದ್ದ ಉನ್ನತರೆನೆಸಿಕೊಂಡವರೂ ಸಹ ನಾಚಿಸುವಂತಿತ್ತು.
ಇಡೀ ಊರಿಗೆ ಊರೇ ಭಾನುವಾರವಾದರೂ ಸುರಿಯುವ ಮಳೆಯನ್ನೂ ಲೆಕ್ಕಿಸದೇ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಹಬ್ಬದ ಸಂಭ್ರಮಾಚರಣೆ ಮಾಡಿದರು. ಯುವಜನತೆ ಇಡೀ ಊರಿಗೆ ರಸದೂಟ ಬಡಿಸಿ ಸಂಭ್ರಮಿಸಿ ಸಾರ್ಥಕ್ಯ ಪಡೆದರು.
ಎಸ್ ಡಿ ಎಮ್ ಸಿ ಅಧ್ಯಕ್ಷ ಲಿಂಗರಾಜ ಭೋವಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಮಾತನಾಡಿ ಉಮೇಶ ನಾಯ್ಕ ಅವರು ಒಂದೇ ಶಾಲೆಯಲ್ಲಿ ಸುಮಾರು 25 ವರ್ಷ ಅತ್ಯಂತ ಪ್ರಾಮಾಣಿಕವಾಗಿ ಸಲ್ಲಿಸಿದ್ದರ ಪ್ರತಿಬಿಂಭವೇ ಇಂದಿನ ಸಮಾರಂಭದಲ್ಲಿ ಸೇರಿದ ಜನಮನ್ನಣೆಗೆ ಸಾಕ್ಷಿ ಎಂದರು.

ಶಿಕ್ಷಕ ಸಂಘದ ಮಾಜಿ ಅಧ್ಯಕ್ಷ ಎಮ್.ಕೆ. ನಾಯ್ಕ ಮಾತನಾಡಿ ಇವರ ಸೇವಾ ಬದ್ಧತೆ, ತಾಳ್ಮೆ, ಪ್ರಾಮಾಣಿಕತೆ ಎಲ್ಲಾ ಶಿಕ್ಷಕರಿಗೂ ಮಾದರಿ ಎಂದರು. ಮುಖ್ಯ ಅತಿಥಿಯಾಗಿ ಉರ್ದು ಶಾಲೆ ಎಸ್ ಡಿ ಎಮ್ ಸಿ ಅಧ್ಯಕ್ಷ ಅಫಾನ್ ಮಿಯಾ ಸಾಬ್, ಗ್ರಾ ಪಂ ಸದಸ್ಯ ಫಕ್ಕೀರ ಭೋವಿ, ಫಯಾಜ್ ಖಾನ್, ರೇಷ್ಮೆ ಇಲಾಖೆ ನಿವೃತ್ತ ಅಧಿಕಾರಿ ಉಮೇಶ‌ ಟಪಾಲ,ಮಹೇಶ ಶೇಟ್, ಎಮ್.ಎಮ್. ಅಂಬಿಗ, ಬಾಬು ನಾಯ್ಕ ಹಾಗೂ ಎಸ್ ಡಿಎಮ್ ಸಿ ಮಾಜಿ ಅಧ್ಯಕ್ಷ ರಮೇಶ ಚಲವಾದಿ ಹಾಗೂ ಮಾಜಿ ಮತ್ತು ಹಾಲಿ ಪದಾಧಿಕಾರಿಗಳು ಉಪಸ್ಥಿತರಿದ್ದು ಉಮೇಶ ನಾಯ್ಕರ ಸೇವೆಯನ್ನು ಶ್ಲಾಘಿಸಿದರು.

ಕೆ.ಪಿ.ರವಿ, ಜನಾರ್ಧನ ಗೌಡ, ಬಾಬು ನಾಯ್ಕ, ಪಿ.ಜಿ.ನಾಯ್ಕ, ಸುಧಾರಾಣಿ ನಾಯ್ಕ, ಕವಿತಾ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿಗಳಾದ ಸಂಗೀತಾ ಗೌಡರ, ಪಲ್ಲವಿ ಭೋವಿ, ಕವಿತಾ ಭೋವಿ ಮತ್ತಿತರರು ಉಮೇಶ‌ ನಾಯ್ಕ ಗುರುಗಳ ಸೇವೆ ಸ್ಮರಿಸಿ ಶುಭಾಶಯ ಕೋರಿದರು. ಹಳೆವಿದ್ಯಾರ್ಥಿ ರಮ್ಯಾ ಸಂಗಡಿಗರು ಪ್ರಾರ್ಥನೆ ಹಾಡಿದರು. ಗಣೇಶ ಕೆ.ಟಿ ಸ್ವಾಗತಿಸಿದರು. ‌ಶಿಕ್ಷಕಿ ಸುಧಾರಾಣಿ ನಾಯ್ಕ ನಿರೂಪಿಸಿದರು. ಕವಿತಾ ಹೆಗಡೆ ವಂದಿಸಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *