after rain- ಮಳೆ ನಿಂತು ಹೋದ ಮೇಲೆ-೦೧-ಮಳೆಯ ನಂತರ ಕಪ್ಪು-ಬಿಳಿ ಬಹಿರಂಗವಾದ ಬಗೆ

ನಿರಂತರ ಮಳೆಯಿಂದ ಕಂಗಾಲಾದ ಜನರು ನಿಟ್ಟುಸಿರು ಬಿಟ್ಟಂತಾಗಿದೆ. ಕಳೆದ ಎರಡು ತಿಂಗಳ ಮಳೆ ಮಾಡಿದ ಅನಾಹುತ ಅಷ್ಟಿಷ್ಟಲ್ಲ. ವಯನಾಡ್‌ ನಲ್ಲಿ ಆದ ಸಾವು ನೋವು, ಉತ್ತರ ಕನ್ನಡ ಜಿಲ್ಲೆಯ ಶಿರೂರಿನ ದುರಂತ ಮಳೆಯ ಅಪಾಯಗಳಿಗೆ ಕೈಗನ್ನಡಿ.

ಕಳೆದ ಎರಡು ವರ್ಷಗಳ ಮಳೆ ಕೊರತೆ ನೀರಿನ ಮಹತ್ವ ಪರಿಚಯಿಸಿದರೆ ಈ ವರ್ಷದ ಮಳೆ ಮಳೆ ಮತ್ತು ಪ್ರವಾಹದ ತೊಂದರೆ ತಿಳಿಸಿವೆ.

ಈ ವರ್ಷದ ಮಳೆಯಲ್ಲಿ ದೇಶದ ನೂತನ ಸಂಸತ್‌ ಭವನ ಸೋರಿದ್ದು, ನೂತನ ರಾಮ ಮಂದಿರ ಸೋರಿದ್ದು ಪ್ರಾಮಾಣಿಕರೆನ್ನುವ ಮತಾಂಧರ ಮುಖವಾಡ ಕಳಚಲು ಸಹಾಯ ಮಾಡಿದೆ.

ಈಗ ದೇಶದಲ್ಲಿ ದೇವಮಾನವರ ವೈಭವೀಕರಣ ಕಡಿಮೆಯಾಗಲು ಕಾರಣ ಈ ವರ್ಷದ ಚುನಾವಣೆಯ ಫಲಿತಾಂಶ. ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸೋತಿರುವ ಬಿ.ಜೆ.ಪಿ., ಸೋತು ಗೆದ್ದಿರುವ ಕಾಂಗ್ರೆಸ್‌ ಈ ದೇಶಕ್ಕೆ ಉತ್ತಮ ಆಯ್ಕೆಗಳಿಲ್ಲ ಎಂಬುದನ್ನು ಸಾಬೀತು ಮಾಡಿವೆ.

ಶಿರೂರು ದುರಂತದಲ್ಲಿ ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಿದೆ. ಸ್ಥಳೀಯ ಶಾಸಕ ಸತೀಶ್‌ ಶೈಲ್‌ ಕೇರಳದ ಸಚಿವರು, ಶಾಸಕರು ಮಳೆಯಲ್ಲಿ ನಡುಗುತ್ತಾ ಸಂತ್ರಸ್ತರ ಪರವಾಗಿ ನಿಂತಿದ್ದಾಗ ಉತ್ತರ ಕನ್ನಡ ಕ್ಷೇತ್ರದ ಸಂಸದರು ಸಂಸತ್‌ ನಲ್ಲಿ ರಾಜ್ಯದ ಮುಡಾ ಹಗರಣದ ಬಗ್ಗೆ ಚರ್ಚಿಸುತಿದ್ದರು!. ಹಿಂದೆ ಇವರ ಜಾಗದಲ್ಲಿದ್ದ ಹಿಂದುತ್ವವಾದಿ ತನ್ನ ಕ್ಷೇತ್ರದ ಅರಣ್ಯ ಅತಿಕ್ರಮಣ ವಿಚಾರ ಚರ್ಚೆಯಾಗುತಿದ್ದಾಗ ಎಲ್ಲೋ ಮಲಗಿದ್ದರಂತೆ!

ದೇವರು ಧರ್ಮ ಬಳಸಿ ಅಧಿಕಾರಕ್ಕೆ ಬಂದವರು ರಾಜ್ಯದಲ್ಲಿ ದೇಶದಲ್ಲಿ ಏನು ಮಾಡುತಿದ್ದಾರೆಂದು ನೋಡುತಿದ್ದೇವೆ. ಹಿಂದೆ ಮಳೆಯ ತೊಂದರೆಯಾದಾಗ ಇದ್ದ ಬಿ.ಜೆ.ಪಿ. ಸರ್ಕಾರ ಸಂಪೂರ್ಣ ಕುಸಿದ ಮನೆಗಳಿಗೆ ೫ ಲಕ್ಷ ಪರಿಹಾರ ಘೋಶಿಸಿತ್ತಂತೆ ಆದರೆ ಯಾರಿಗೂ ಹಣ ಮಂಜೂರಿ ಆಗಿರಲಿಲ್ಲ!. ಈ ವರ್ಷದ ಭೀಕರ ಮಳೆಗೆ ಹಾನಿಗೆ ಒಳಗಾದ ಮನೆಗಳ ಸಂತ್ರಸ್ತರಿಗೆ ಆಯಾ ಶಾಸಕರ ವೈಯಕ್ತಿಕ ನೆರವು, ಸರ್ಕಾರದ ನೆರವು ದೊರೆತಿದೆ.

ಸ್ಥಳೀಯವಾಗಿ ದೇವರು, ಧರ್ಮ ಬಳಸಿ ರಾಜಕಾರಣ ಮಾಡುವವರು ಪ್ರತಿಭಟನೆ, ಮನವಿ ನೀಡುತಿದ್ದಾರೆ. ಆದರೆ ಅವರಿಗೆ ವಾಸ್ತವದ ಅರಿವೇ ಇಲ್ಲ. ಈ ಶತಮಾನದಲ್ಲಿಈ ವರ್ಷ ತೊಂದರೆಯಾದಷ್ಟು ಮಳೆಯ ಅನಾಹುತ ಈತ್ತೀಚಿನ ವರ್ಷಗಳಲ್ಲಿ ಆಗಿದ್ದಿಲ್ಲ. ಕಳೆದ ದಶಕದಲ್ಲಿ ದೇಶ ಆಳಿದ ದೇಶ ಭಕ್ತಿಯ ಸೋಗಿನ ಧಾರ್ಮಿಕ ರಾಜಕಾರಣಿಗಳು ಶ್ರೀಮಂತ ಉದ್ಯಮಿಗಳನ್ನು ಕೊಬ್ಬಿಸಿದ್ದು ಬಿಟ್ಟರೆ ಜನಸಾಮಾನ್ಯರ ಪರವಾಗಿ ಮಾಡಿದ್ದೇನಿಲ್ಲ. ೨೦- ೩೦ ವರ್ಷಗಳ ಜನಪ್ರತಿನಿಧಿಗಳ ನಿರಂತರ ಆಡಳಿತದಲ್ಲಿ ಪ್ರಾಥಮಿಕ ಶಾಲೆಗಳ ಸ್ಥಿತಿ ಹದಗೆಟ್ಟಿತ್ತು. ರಸ್ತೆ,ಕಟ್ಟಡ ನಿರ್ಮಾಣಗಳಾದರೂ ಅವುಗಳ ಗುಣಮಟ್ಟ ಕೇಳುವಂತಿಲ್ಲ. ಶಿರೂರು ದುರಂತಕ್ಕೆ ಕಾರಣವಾದ ಆಯ್.ಆರ್.ಬಿ. ಕೇಂದ್ರ ಸರ್ಕಾರದ ಪ್ರಭಾವಿ ಸಚಿವರ ಒಡೆತನದ ಸಂಸ್ಥೆ ಅದರ ಬಗ್ಗೆ ಮಾತನಾಡುವ ಧೈರ್ಯ, ಪ್ರಾಮಾಣಿಕತೆ ಮಾನ್ಯ ನರೇಂದ್ರ ಮೋದಿಯವರಿಗೇ ಇಲ್ಲ. ಇನ್ನು ಅವರ ಹೆಸರಿನಲ್ಲಿ ಮತ ಕೇಳಿ ಡಮ್ಮಿ ಅಭ್ಯರ್ಥಿಯಾಗಿರುವ ಸಂಸದರಿಗೆ ಆ ಧೈರ್ಯ, ಸಾಮರ್ಥ್ಯ ಬರುವುದು ಹೇಗೆ?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *