ಲಂಬಾಣಿ, ಬಂಜಾರ ಸಮೂದಾಯದ ʼಭಯ್ಯʼ ಸಂತ ಸೇವಾಲಾಲ್

ಬಂಜಾರ ಸಮೂದಾಯ ಎನ್ನುವ ಲಂಬಾಣಿ ಅಲೆಮಾರಿ ಸಮೂದಾಯ ರಾಜಸ್ಥಾನ ಮೂಲದ್ದು ಎನ್ನಲಾಗುತ್ತದೆ. ಅವರ ಕರಕುಶಲತೆ,ಜೀವನಶೈಲಿ ಉತ್ತರ ಭಾರತೀಯರ ಬದುಕಿಗೆ ಸಾಮ್ಯತೆ ಹೊಂದಿದೆ. ಮೂಲತ: ವ್ಯಾಪಾರಿಗಳಾಗಿ ಅಲೆಮಾರಿ ಬದುಕುಕಂಡುಕೊಂಡಿದ್ದ ಈ ಸಮೂದಾಯ ಧಾಡಸಿತನ ಮತ್ತು ಧೈರ್ಯಕ್ಕೆ ಹೆಸರುವಾಸಿ. ಅಲೆಮಾರಿಗಳಾದ ಬಂಜಾರರು ಎರಡು ಶತಮಾನಗಳ ಹಿಂದೆ ಸರಕು ಸಾಗಾಣಿಕೆ ಮಾಡುವ ಕೆಲಸ ಮಾಡುತಿದ್ದ ಪ್ರಮುಖ ಸಮೂದಾಯ. ಬೆನ್ನು, ತಲೆಯ ಮೇಲೆ ಸರಕು ಹೊತ್ತು ಸಾಗುತ್ತಾ, ಸರಕುಸಾಗಾಣಿಕೆಗೆ ಎತ್ತು ದನಗಳನ್ನು ಬಳಸುತ್ತಾ ಬದುಕಿನೊಂದಿಗೆ ಪಶುಪಾಲನೆಯನ್ನೂ ಮಾಡುತ್ತಾ ಜೀವನ ಸಾಗಿಸುತಿದ್ದ ಈ ಸಮೂದಾಯಕ್ಕೆ ಬ್ರೀಟಿಷರ ಆಳ್ವಿಕೆಯಲ್ಲಿ ವ್ಯಾಪಾರದ ಸ್ಫರ್ಧೆ ಏರ್ಪಟ್ಟು ಬ್ರಟೀಷರು ಇವರ ಮೇಲೆ ಕಾನೂನುಕ್ರಮಕ್ಕೆ ಮುಂದಾದಾಗ ಸಾಮಂತ ಅರಸರನ್ನು ಯುದ್ಧದಲ್ಲಿ ಗೆಲ್ಲುತ್ತಾ ತಮ್ಮ ಸಾಗಾಣಿಕೆ ಬದುಕನ್ನು ಉಳಿಸಿಕೊಂಡು ಅಲೆಮಾರಿಗಳಾಗಿ ಮುಂದುವರಿದರು ಎನ್ನಲಾಗುತ್ತದೆ.

ಹೈದರಾಬಾದ್‌ ನಿಜಾಮ, ದೆಹಲಿಸುಲ್ತಾನರೊಂದಿಗೆ ಕಾದುತ್ತಾ ತಮ್ಮ ವೃತ್ತಿ-ಬದುಕು ಉಳಿಸಿಕೊಂಡ ಈ ಬಂಜಾರ ಸಮೂದಾಯ ವ್ಯಾಪಾರಕ್ಕಾಗಿ ಬ್ರಟೀಷರೊಂದಿಗೆ ಸಮರ ಸಾರುತ್ತಾ ಮೊಗಲರು ಮತ್ತು ಬ್ರಟೀಷರ ವಿರುದ್ಧ ಧರ್ಮಯುದ್ಧ ನಡೆಸಿದರು ಎನ್ನುವುದು ಬಂಜಾರರ ಹೆಗ್ಗಳಿಕೆ.

ಪ್ರಕೃತಿ ಆರಾಧಕರಾದ ಲಮಾಣಿ, ಬಂಜಾರರು ನಾಟಿವಿದ್ಯೆ ಬಲ್ಲ ವೈದ್ಯರು, ದೈಹಿಕಶ್ರಮದ ಈ ಸಮೂದಾಯ ಸಾಹಸಿ, ಪರಾಕ್ರಮಿಗುಂಪು ಎಂಬುದು ಇವರ ಚರಿತ್ರೆಯ ವಿಶೇಶ ಅಂಶ. ಲಮಾಣಿಗಳು ತಮ್ಮ ಸಾಹಸ, ಧೈರ್ಯ,ಸೇವಾ ಕೆಲಸ,ಗಿಡಮೂಲಕೆ ಪಾಂಡಿತ್ಯದಿಂದ ಬಂಜಾರ ಹಿಲ್ಸ್‌ ಇನಾಮು ಪಡೆದಿದ್ದು ಇವರ ವೈಶಿಷ್ಟ್ಯ.

ತಂಡಗಳಾಗಿ, ತಾಂಡಗಳಲ್ಲಿ ವಾಸಿಸುತಿದ್ದ ಈ ಬಂಜಾರರಿಗೆ ಸೇವಾಲಾಲರು ಮೌಢ್ಯ, ವ್ಯಸನ, ತ್ಯಜಿಸಿ ಕಾಡುಬದುಕಿನಿಂದ ಮುಖ್ಯ ವಾಹಿನಿಗೆ ಬರುವ ಹೊಸ ದಾರಿ ಪರಿಚಯಿಸಿದರು. ಇಂದಿನ ದಾವಣಗೆರೆ ಜಿಲ್ಲೆಯ ಕುಗ್ರಾಮದ ಸೇವಾಲಾಲ್‌ ದೇವರ ಕೃಪೆಯಿಂದಲೇ ಜನಿಸಿ ಮುಂದೆ ಮಾರಿಯಮ್ಮನ ಭಕ್ತನಾಗಿ ನಂತರ ಸಮಾಜಸುಧಾರಣೆಯ ದಾರಿ ಹಿಡಿದು ಸಂತರಾದರು ಎನ್ನುವುದು ಇವರ ಚರಿತ್ರೆ.

ಅಲೆಮಾರಿ ವ್ಯಾಪಾರಿ ಸರಕು-ಸಾಗಾಣಿಕೆಯ ಕೆಲಸ ಮಾಡುತ್ತಲೇ ಮನುಷ್ಯನಿಂದಾಗದ ಕೆಲವು ಪವಾಡಗಳನ್ನು ಮಾಡುತ್ತಾ ಸೇವಾ ಭಯ್ಯ ನಾಗಿ ಸೇವಾಲಾಲ ಎಲ್ಲರ ಅಣ್ಣನಾಗಿರುವುದು ಅವರ ನಿಸ್ವಾರ್ಥ, ತ್ಯಾಗದ ಬದುಕಿಗೆ ಸಾಕ್ಷಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *