ಅಮೇರಿಕಾದ ಬೋಸ್ಟನ್‌ ಗೆ ಹಾರಿದ ಶಾಸಕ ಭೀಮಣ್ಣ

ಅಮೇರಿಕಾದ ಬೋಸ್ಟನ್‌ ನಲ್ಲಿ ಆ.೪ರಿಂದ ೬ ರ ವರೆಗೆ ನಡೆಯಲಿರುವ ಅಂತರಾಷ್ಟ್ರೀಯ ಶೃಂಗಸಭೆಗೆ ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಆಯ್ಕೆಯಾಗಿ ಇಂದು ಪ್ರಯಾಣ ಬೆಳೆಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಗಳನ್ನು ಬಲಪಡಿಸುವ ಮತ್ತು ಉತ್ತಮ ಆಡಳಿತ ಪದ್ಧತಿಗಳನ್ನು ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಬೋಸ್ಟನ್‌ ನಲ್ಲಿ ನಡೆಯಲಿರುವ ೫೦ ನೇ ಅಂತರಾಷ್ಟ್ರೀಯ ರಾಜ್ಯ ಶಾಸಕಾಂಗಗಳ ಶೃಂಗ ಸಭೆಗೆ ಆಯ್ಕೆಯಾದ ರಾಜ್ಯದ ೧೨ ಶಾಸಕರಲ್ಲಿ ಭೀಮಣ್ಣ ನಾಯ್ಕ ಒಬ್ಬರು.

ಮೂರು ದಿವಸಗಳ ಕಾಲ ನಡೆಯಲಿರುವ ಈ ಶೃಂಗಸಭೆಯಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಳಿಸುವುದು ಸೇರಿದಂತೆ ಪ್ರಮುಖ ಹತ್ತು ವಿಷಯಗಳ ಮೇಲೆ ಗೋಷ್ಠಿಗಳು, ವಿಚಾರ ಸಂಕಿರಣಗಳು ನಡೆಯಲಿವೆ.

ರಾಜ್ಯ ವಿಧಾನಸಭಾ ಅಧ್ಯಕ್ಷರ ನೇತೃತ್ವದಲ್ಲಿ ಹೊರಟ ೧೨ ಶಾಸಕರ ತಂಡ ದೇಶದ ಮತ್ತು ಕೆಲವು ಪ್ರಮುಖ ದೇಶಗಳ ಆಹ್ವಾನಿತ ಪ್ರಮುಖರ ಜೊತೆ ಬೋಸ್ಟನ್‌ ನಲ್ಲಿ ಸೇರಿಕೊಳ್ಳಲಿದೆ.

ಗ್ರಾಮೀಣ ಕೃಷಿ ಆಧಾರಿತ ಅವಿಭಕ್ತ ಕುಟುಂಬದಲ್ಲಿ ಹುಟ್ಟಿದ ಭೀಮಣ್ಣ ನಾಯ್ಕ ತಮ್ಮ ನಿರಂತರ ಶ್ರಮದಿಂದ ಕೃಷಿ-ಉದ್ಯಮ, ರಾಜಕಾರಣದಲ್ಲಿ ಹೆಸರು ಮಾಡಿದವರು. ವಿಧಾನಸಭೆಯ ಶಿಸ್ತು, ಸಮಯ ಪಾಲನೆ ಸೇರಿದಂತೆ ಕೆಲವು ವಿಶೇಶಗಳ ಕಾರಣಕ್ಕೆ ಮುಖ್ಯಮಂತ್ರಿಗಳು, ವಿಧಾನಸಭಾ ಅಧ್ಯಕ್ಷರ ಗಮನ ಸೆಳೆದ ಭೀಮಣ್ಣ ಉಚಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದ ಕ್ರೀಯಾಶೀಲರು.

ಕಳೆದ ನಾಲ್ವತ್ತು ವರ್ಷಗಳಿಂದ ರಾಜಕಾರಣದಲ್ಲಿದ್ದು ಒಮ್ಮೆ ಜಿ.ಪಂ. ಸದಸ್ಯ, ಒಂದೇ ಬಾರಿ ಶಾಸಕ ನಾಗಿ ಹಲವು ಸೋಲುಗಳ ನಡುವೆ ಪಕ್ಷ ಸಂಘಟನೆ,ಕ್ಷೇತ್ರದಲ್ಲಿ ದಾನಧರ್ಮ ಕಾರ್ಯಗಳಿಂದಲೇ ಚಲಾವಣೆಯಲ್ಲಿದ್ದ ಇವರು ಮಾಜಿ ವಿಧಾನಸಭಾ ಅಧ್ಯಕ್ಷ ಬಿ.ಜೆ.ಪಿ. ಯ ಹಿರಿಯ ನಾಯಕ ವಿಶ್ವೇಶ್ವರ ಹೆಗಡೆಯವರನ್ನು ಪರಾಭವಗೊಳಿಸಿ ವಿಧಾನಸಭೆಯ ಮೆಟ್ಟಿಲೇರಿದವರು.

ಬಂಗಾರಪ್ಪನವರ ಭಾಮೈದರಾದ ಭೀಮಣ್ಣ ರಾಜಕೀಯ ಅಧಿಕಾರವಿರಲಿ ಇಲ್ಲದಿರಲಿ ಬಂಗಾರಪ್ಪ ಕುಟುಂಬದ ಜೊತೆಗಿದ್ದವರು. ಶರಾವತಿ ದಂತವೈದ್ಯಕೀಯ ಸಂಸ್ಥೆ, ಶಕುಂತಲಾ ಬಂಗಾರಪ್ಪ ಶಿಕ್ಷಣ ಸಂಸ್ಥೆ ಸೇರಿದಂತೆ ಅನೇಕ ಶಿಕ್ಷಣ, ಸಾಮಾಜಿಕ ಸಂಸ್ಥೆಗಳ ಪ್ರಮುಖ ಪದಾಧಿಕಾರಿಯಾಗಿರುವ ಭೀಮಣ್ಣ ಕ್ಷೇತ್ರ ಪರ್ಯಟನೆ, ಅಭಿವೃದ್ಧಿ ವಿಷಯದಲ್ಲೂ ಹೆಸರು ಮಾಡಿದವರು. ಶಾಸಕ ಭೀಮಣ್ಣ ನಾಯ್ಕರ ವಿದೇಶ ಪ್ರಯಾಣ,ಅಧ್ಯಯನ ಪ್ರವಾಸಗಳಿಗೆ ಶುಭ ಕೋರಿರುವ ಕ್ಷೇತ್ರ, ಜಿಲ್ಲೆ ರಾಜ್ಯದ ಅನೇಕ ಪ್ರಮುಖರು ಭೀಮಣ್ಣ ನಾಯ್ಕರ ಶೃಂಗಸಭೆಯ ಅನುಭವ ಅವರ ಮುಂದಿನ ವೈಯಕ್ತಿಕ ರಾಜಕೀಯ ಜೀವನಕ್ಕೆ ಅನುಕೂಲಮಾಡಿಕೊಡಲಿ ಎಂದು ಹಾರೈಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು ಥಳಿಸಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದ ಮಾಹಿತಿ ಬಹಿರಂಗವಾಗಿದೆ. ನಾಣಿಕಟ್ಟಾ ಪ್ರದೇಶದಲ್ಲಿ ಆಗಂತುಕರು ಕಡವೆಯನ್ನು ಕೊಂದು ಪರಾರಿಯಾಗಿದ್ದರು. ಈ ಭೇಟೆ ಪ್ರಕರಣದ ಜಾಡು ಹಿಡಿದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *