ರಂಗದ ಮೇಲೆ ಸದ್ದು ಮಾಡಿದ ದೀವರ ಕನ್ನಡ!


(ಆಧಾರ-ಪ್ರಜಾವಾಣಿ)

ಕನ್ನಡದ ವೈವಿಧ್ಯತೆ ಅಪಾರ, ಉತ್ತರ ಕರ್ನಾಟಕ , ಹಳೆಮೈಸೂರು ಭಾಗ, ಮಲೆನಾಡು,ಕರಾವಳಿ ಹೀಗೆ ರಾಜ್ಯದಲ್ಲಿ ಪ್ರಾದೇಶಿಕ ವೈವಿಧ್ಯತೆಗಳಿಗನುಗುಣವಾಗಿ ಭಾಷಾ ವೈವಿಧ್ಯತೆ ಕನ್ನಡದ ಸೊಬಗು. ಇಂಥ ಭಾಷಾ ವೈವಿಧ್ಯತೆ ನಡುವೆ ಕೆಲವು ಪ್ರದೇಶ, ಜನಾಂಗ, ಸಮೂದಾಯಗಳೂ ವಿಶಿಷ್ಟವಾಗಿ ತಮ್ಮದೇ ಕನ್ನಡ ಮಾತನಾಡುತ್ತವೆ ಅವುಗಳಲ್ಲಿ ಹವ್ಯಕ, ದೀವರು/ನಾಮಧಾರಿ, ನಾಡವ, ಹಾಲಕ್ಕಿ ಒಕ್ಕಲಿಗ, ಖರೆ,ಕೊಟ್ಟೆ ಒಕ್ಕಲಿಗ, ಹಸ್ಲರ್,ಕೊಮಾರಪಂಥ ಸೇರಿದ ವಿಶಿಷ್ಟ ಕನ್ನಡಗಳಿವೆ. ಇವುಗಳಲ್ಲಿ ಮಲೆನಾಡಿನ ದೀವರ ಕನ್ನಡ ಆಡುಭಾಷೆ ತನ್ನ ಅನನ್ಯತೆಯಿಂದ ವೈಶಿಷ್ಟ್ಯಪರ‍್ಣ ಎನಿಸಿದೆ. ‌


ಈ ಭಾಷೆಯ ರಂಗಪ್ರಯೋಗವೊಂದು ಈಗ ಹೆಸರು ಮಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ರಂಗಸೌಗಂಧ ಪ್ರಸ್ತುತಪಡಿಸಿದ ಕ್ರಾಂತಿಯ ಕಿಡಿ ನಾಟಕ ಕೆಲವು ವೈಶಿಷ್ಟ್ಯತೆಗಳಿಂದ ಮಹತ್ವದ ರಂಗಪ್ರಸ್ತುತಿಯಾಗಿ ಗಮನಸೆಳೆಯುತ್ತಿದೆ. ಈ ರಂಗಪ್ರಸಂಗದ ವಿಷಯವಸ್ತು ಸ್ವಾತಂತ್ರ‍್ಯ ಹೋರಾಟ.


ಸಿದ್ಧಾಪುರದ ಸಾವಿರಾರು ಸ್ವಾತಂತ್ರ‍್ಯ ಹೋರಾಟಗಾರರಲ್ಲಿ ಅಗ್ರಗಣ್ಯರೂ, ಮೊದಲ ರಾಜಖೈದಿಯೂ ಆಗಿದ್ದ ಚೌಡಾ ನಾಯ್ಕ ಬೇಡ್ಕಣಿ ರಾವ್‌ ಬಹದ್ದೂರ್‌ ಆಗಿದ್ದ ಅಪ್ಪ ಕನ್ನಾ ನಾಯ್ಕರ ದರ್ಪ-ದೌಲತ್ತು ಬ್ರಿಟೀಷ್ ಪರ ವಕಾಲತ್ತಿನ ನಡುವೆ ಸ್ವಾತಂತ್ರ‍್ಯ ಹೋರಾಟಕ್ಕಿಳಿದು ಅಪ್ಪನ ವಿರೋಧ ಕಟ್ಟಿಕೊಳ್ಳುತ್ತಾರೆ. ನಂತರದ್ದು ದುರಂತ ಕತೆ. ಈ ಕಥಾ ಹಂದರದೊಂದಿಗೆ ಈ ಭಾಗದ ಸ್ವಾತಂತ್ರ‍್ಯ ಹೋರಾಟದ ಕಿಚ್ಚನ್ನು ಪರಿಚಯಿಸುವಲ್ಲಿ ಎಸ್. ವಿ.ಹೆಗಡೆ ಮಘೇಗಾರರ ಮೂಲ ನಾಟಕ ಕ್ರಾಂತಿಯ ಕಿಡಿ ಯಶಸ್ವಿ ಯಾಗಿದೆ.


ಈ ಕತೆ ಆಧಾರಿತ ಕ್ರಾಂತಿಯ ಕಿಡಿ ನಾಟಕ ನಿರ್ಧೇಶಿಸಿರುವ ರಂಗಕರ್ಮಿ ಗಣಪತಿಹೆಗಡೆ ಹುಲಿಮನೆ ಮೂಲಕತೆಗೆ ತೊಂದರೆಯಾಗದಂತೆ ಇದೇ ಕೃತಿಕಾರರ ಇನ್ನೊಂದು ನಾಟಕದ ಅಂಕವೊಂದನ್ನು ಸೇರಿಸಿ ಈ ರಂಗಪ್ರಯೋಗದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಒಂದು ಅಂಕದಲ್ಲಿ ಬರುವ ಪುರಾಣಿಕರ ಸ್ವಾತಂತ್ರ‍್ಯ ಹೋರಾಟದ ಕತೆ ಬಿಟ್ಟರೆ ಇಡೀ ನಾಟಕದ ಹೈಲೈಟ್‌ ದೀವರ ಗ್ರಾಮ್ಯ ಭಾಷೆ. ಅಪ್ಪಟ ಸ್ಥಳಿಯ ಕಮಟಿನ ದೀವರ ಭಾಷೆ ಮಾತನಾಡುವ ಪಾತ್ರಗಳು

ʼಇದೇ ಮಾತನ….., ಅದಕ್ಕೆ ಉತ್ತರವಾಗಿ ʼಹೂಂ…ವಾ…,ʼ
“ಮನಿಂದ ಹೊರಗ ಹಾಕಬೈದು ದೇಸದಿಂದ ಹೊರಗಹಾಕಕಾಕೈತನʼ
ʼಏ ಹುಡ್ಗ,ಯಾರಹತ್ರ ಮಾತಾಡಕಿಡದಿಯೆ ಗೊತೈತ, ನಾಕಕ್ಷರ ಕಲ್ತು ಇಂಗ್ಲೀಸಗೆ ಟಸ್-ಪುಸ್‌ ಅಂತ ಚೊಗರಹಾರಸಬಡ…ʼ
ಎನ್ನುವ ನೆಲಮೂಲದ ಭಾಷೆ, ಭಾವನೆಗಳ ಪ್ರತಿಬಿಂಬದ ತೀವ್ರತೆಯನ್ನು ಹೆಚ್ಚಿಸಿದೆ.


ಹಾಗೆ ನೋಡಿದರೆ ಈ ನಾಟಕದ ತಂಡದ ನಿರ್ಧೇ ಶಕರಾಗಲಿ, ನಟರಾಗಲಿ ಯಾರೂ ದೀವರ ಸಮೂದಾಯದವರೇ ಅಲ್ಲ, ಆದರೆ ದೀವರ ಭಾಷೆಯ ಪ್ರಯೋಗದಲ್ಲಿ ಇಡೀತಂಡ ಹೊಸದೊಂದು ದಾಖಲೆಗೆ ಕಾರಣವಾಗಿದೆ. ಇದು ಮೊಟ್ಟ ಮೊದಲಿಗೆ ದೀವರ ಭಾಷೆ ಪ್ರಯೋಗಿಸಲ್ಪಟ್ಟ ಆಧುನಿಕ (ಹೊಸ ಅಲೆ) ನಾಟಕದ ದಾಖಲೆಯೂ ಹೌದು. (ಹೌದೇನೊ?)


ಇಂಥ ಐತಿಹಾಸಿಕ ಕತೆಯ, ಕೃಷಿಸಂಸ್ಕೃತಿಯ ದೀವರ ಭಾಷೆಯ ನಾಟಕ ಪ್ರಸಂಗವನ್ನು ಕೈಗೆತ್ತಿಕೊಂಡ ರಂಗಸಂಸ್ಥೆಯ ನಿರ‍್ಧೇಶಕ, ಕಲಾವಿದರ ಹಿನ್ನೆಲೆ ಸಣ್ಣದಲ್ಲ. ಉತ್ತರ ಕನ್ನಡ ಜಿಲ್ಲೆಯ ಮೊದಲ ಮತ್ತು ಕೊನೆಯ ಏಕೈಕ ವೃತ್ತಿ ನಾಟಕ ಕಂಪನಿ ಶ್ರೀ ಜಯಕರ‍್ನಾಟಕ ನಾಟಕ ಸಂಘ ದ ಪ್ರಸಿದ್ಧ ನಾಟಕಕಾರ ದಿ. ಸೀತಾರಾಮ ಶಾಸ್ತ್ರಿ ಹುಲಿಮನೆಯವರ ಸ್ಮರಣೆಯಲ್ಲಿ ಹುಟ್ಟಿಕೊಂಡ ರಂಗಸೌಗಂಧ. ಪ್ರತಿ ವರ್ಷ ನಾಟಕೋತ್ಸವ,ವಿಚಾರ ಸಂಕಿರಣ, ಮಕ್ಕಳ ರಂಗ ತರಬೇತಿ ಶಿಬಿರ ನಡೆಸುವ ಸಂಸ್ಥೆ. ಈ ಸಂಸ್ಥೆ ರಂಗಭೂಮಿ ಇತಿಹಾಸದ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಶ್ರೀಧರ ಹೆಗಡೆ ಹುಲಿಮನೆ ಮಾರ್ಗದರ್ಶನದಲ್ಲಿ ಕ್ರೀಯಾಶೀಲ ಕೃಷಿಕ ಗಣಪತಿ ಹೆಗಡೆ ಹುಲಿಮನೆಯವರ ನೇತೃತ್ವದಲ್ಲಿ ನಡೆಯುತ್ತಿದೆ.


ರಂಗಭೂಮಿಗಾಗಿ ಸಮರ್ಪಿಸಿಕೊಂಡ ಹುಲಿಮನೆ ಕುಟುಂಬದ ಕುಡಿ ಗಣಪತಿ ಹೆಗಡೆ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಂಸ್ಥೆಯ ಕಲಾವಿರ‍್ಯಾರೂ ವೃತ್ತಿಪರ ನಾಟಕಕಾರರು, ಕಲಾವಿದರಲ್ಲ ಮಲೆನಾಡಿನ ಕೃಷಿ- ಕೃಷಿಸಂಬಂಧಿತ ಕೆಲಸಗಳು, ಮನೆ ವಾರ‍್ತೆ, ವೈದಿಕ ವೃತ್ತಿ, ಸರ‍್ಕಾರಿ ನೌಕರಿ ಸೇರಿದಂತೆ ನಾನಾ ಕ್ಷೇತ್ರಗಳ ವೈವಿಧ್ಯಮಯ ವ್ಯಕ್ತಿ- ವ್ಯಕ್ತಿತ್ವಗಳನ್ನು ಸೇರಿಸಿ ರಂಗತಂಡ ಕಟ್ಟಿಕೊಂಡಿರುವ ಹುಲಿಮನೆ ಕುಟುಂಬ ಈ ಭಾಗದಲ್ಲಿ ಪ್ರಸಿದ್ಧವಾಗಿರುವ ಸಾಮಾಜಿಕ ನಾಟಕಗಳಿಗೆ ಪರ‍್ಯಾಯವಾಗಿ ಐತಿಹಾಸಿಕ, ಪೌರಾಣಿಕ, ನವೀನ ಸಾಹಿತ್ಯ ಪ್ರಕಾರಾಧಾರಿತ ರಂಗವಸ್ತುಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದೆ. ನಾನಾ ಭಾಷಾ ಸೊಗಡಿನ ಹಲವು ನಾಟಕಗಳನ್ನು ಅಭಿನಯಿಸಿ ಪ್ರೇಕ್ಷಕರಿಂದ ಭೇಷ್‌ ಎನಿಸಿಕೊಂಡಿರುವ ರಂಗಸೌಗಂಧದ ಈ ದೀವರ ಭಾಷೆಯ ʼ ಕ್ರಾಂತಿಯ ಕಿಡಿʼ ನಾಟಕ ಈ ಸಂಸ್ಥೆಯ ಪ್ರಯೋಗಶೀಲತೆಯ ವೈಶಿಷ್ಟ್ಯಕ್ಕೂ ಕನ್ನಡಿ ಹಿಡಿದಿದೆ ಎಂದರೆ ಉತ್ಪ್ರೇಕ್ಷೆಯಲ್ಲ.
–ಕನ್ನೇಶ್‌ ಕೋಲಶಿರ‍್ಸಿ ಸಿದ್ಧಾಪುರ (ಉ.ಕ.)
ಮೊ-೯೭೪೦೫೯೮೮೮೪ ((Kanneshwar ganapati naik 9740598884 sa*****************@***il.com))

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *