


ಸಿದ್ಧಾಪುರ, ಇಲ್ಲಿಯ ಸರ್ಕಾರಿ ಆಸ್ಫತ್ರೆಯ ಐವರು ವೈದ್ಯರು ಒಂದೇ ಕಾರಿನಲ್ಲಿ ಪ್ರಯಾಣಿಸುತಿದ್ದಾಗ ಶಿರಸಿ-ಸಿದ್ಧಾಪುರ ರಸ್ತೆಯ ಕಾನಸೂರು ಮತ್ತು ತ್ಯಾಗಲಿ ನಡುವೆ ನಡುವೆ ಸಂಭವಿಸಿದ ಅಪಘಾತದಲ್ಲಿ ಎರಡು ಜನ ವೈದ್ಯರಿಗೆ ಮಾತ್ರ ಸಣ್ಣ-ಪುಟ್ಟ ಗಾಯಗಳಾಗಿವೆ.

ಸರ್ಕಾರಿ ಆಸ್ಫತ್ರೆಯ ಐದು ಜನ ವೈದ್ಯರು ಇಂದು ಮುಂಜಾನೆ ಸಿದ್ಧಾಪುರ ಕಡೆ ಒಂದೇ ಕಾರಿನಲ್ಲಿ ಬರುತಿದ್ದ ವೇಳೆ ಅಪಘಾತ ಸಂಭವಿಸಿತು. ಕಾರಿನಲ್ಲಿದ್ದ ಡಾ. ಪುರಾಣಿಕ, ಡಾ.ನಾಗರಾಜ್, ಡಾ.ಲೋಕೇಶ್ ನಾಯ್ಕ. ಡಾ.ಉಡುಪ ಸೇರಿದಂತೆ ಒಟ್ಟೂ ಐದು ಜನ ವೈದ್ಯರಿದ್ದರು. ಇವರಲ್ಲಿ ಕಾರು ಚಲಾಯಿಸುತಿದ್ದ ಯುವ ವೈದ್ಯರೊಬ್ಬರಿಗೆ ಹಾಗೂ ಉಡುಪರಿಗೆ ಚಿಕ್ಕ ಗಾಯಗಳಾದವು. ಉಳಿದವರು ಬಚಾವಾದರು.
ಚಿಕ್ಕಪುಟ್ಟ ಗಾಯಗಳಾದ ಉಡುಪ ಮತ್ತು ಯುವವೈದ್ಯರೂ ಸೇರಿ ಐದೂ ಜನ ಅಪಘಾತದಿಂದ ಪಾರಾದುದಕ್ಕೆ ಸಾರ್ವಜನಿಕ ವಲಯ ಖುಷಿ ಪಟ್ಟಿದೆ. ಸಿದ್ಧಾಪುರದ ತಾಲೂಕಾ ಆಸ್ಫತ್ರೆಗೆ ಉತ್ತಮ ಹೆಸರಿದೆ. ಒಳ್ಳೆಯ ವೈದ್ಯರ ಸಮರ್ಪಣಾ ಮನೋಭಾವದ ಸೇವೆಯಿಂದಾಗಿ ಸಿದ್ಧಾಪುರದ ತಾಲೂಕಾ ಆಸ್ಫತ್ರೆ ಸುತ್ತಮುತ್ತಲ ತಾಲೂಕುಗಳಲ್ಲಿಯೂ ಹೆಸರುವಾಸಿ. ಇಂಥ ಉತ್ತಮ ಆಸ್ಫತ್ರೆಯ ವೈದ್ಯರಿಗೆ ರಸ್ತೆಯ ಮೇಲೆ ಚೆಲ್ಲಿದ್ದ ಎಣ್ಣೆಯ ಪರಿಣಾಮ ಕಾರು ಸಮತೋಲನ ತಪ್ಪಿ ಅಪಘಾತವಾದ ಬಗ್ಗೆ ಸುದ್ದಿ ಶೀಘ್ರ ಪಸರಿಸಿತ್ತು ತಮ್ಮ ಪ್ರೀತಿಯ ವೈದ್ಯರೆಲ್ಲರೂ ಯಾವ ತೊಂದರೆ ಇಲ್ಲದೆ ಅಪಘಾತದಿಂದ ಬಚಾವಾದ ಬಗ್ಗೆ ಸಾರ್ವಜನಿಕರು ಹರ್ಷ ಪಟ್ಟಿದ್ದಾರೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






