samajamukhi.net news… ಸಂಪಾದಕೀಯ.. ಆರೆಸ್ಸೆಸ್‌ ಮತ್ತದರ ಅಂತರಂಗ! ಭಾಗ -೦೧-

ಪತ್ರಿಕೆಯೊಂದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಬರೆದಲೇಖನ ಒಂದಕ್ಕೆ ಪ್ರತಿಕ್ರೀಯೆ ನೀಡಿದ ಓದುಗರೊಬ್ಬರು ಆರೆಸ್ಸೆಸ್‌ ಮನಸ್ಸುಗಳು ತಮ್ಮಪ್ರತಿಭೆ ಬಗ್ಗೆ ಎಂಥಾ ಗೌರವ-ಮರ್ಯಾದೆ ನೀಡಿದ್ದರು! ಎಂದು ಬರೆದಿದ್ದಾರೆ. (ಕ.ಮು.-೭-೧೦-೨೫ ಸೋಮುವಾರ ಮೂರನೇ ಪುಟ)

ಇದು ಒಂದು ಸ್ಯಾಂಪಲ್‌ ಈ ಪ್ರತಿಕ್ರೀಯೆಗೆ ಸಂಬಂಧಿಸಿದ ಹಿರಿಯ ಪತ್ರಕರ್ತರ ಅಂಕಣ ನಾನು ಓದಿಲ್ಲ. ಆದರೆ ಆರೆಸ್ಸೆಸ್‌ ಗೆ ೧೦೦ ವರ್ಷ ಎಂದು ಸಂಭ್ರಮಿಸುವವರು ತಿಳಿಯಬೇಕಾದ, ಆರೆಸ್ಸೆಸ್‌ ಬಗ್ಗೆ ಸಕಾರಣ ತಕಾರುಗಳುಳ್ಳ ನನ್ನಂಥ ಅನೇಕರಿಗೆ ಉತ್ತರಿಸಲೇಬೇಕಾದ ನೂರಾರು ಪ್ರಶ್ನೆಗಳಿವೆ. ಅವುಗಳಲ್ಲಿ ಕೆಲವು ಹೀಗಿವೆ. ….

  • ಸ್ವಾತಂತ್ರ್ಯ ಹೋರಾಟದ ಮಹತ್ವದ ಸಮಯದಿಂದ ಉಚ್ಛಾಯ ಸ್ಥಿತಿಯ ವರೆಗೆ ಎಳೆಯ ಸಂಸ್ಥೆಯಾಗಿದ್ದ ಆರೆಸ್ಸೆಸ್‌ ಯಾಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ?
  • ಮಹಾತ್ಮಾಗಾಂಧಿ ಸೇರಿದಂತೆ ಸಮಾಜಸುಧಾರಣೆ ಆ ಮೂಲಕ ಮಾನವ, ಭಾರತದ ಅಭಿವೃದ್ಧಿಗೆ ಶ್ರಮಿಸಿದ ಅಸ್ಪೃಶ್ಯತೆ ನಿವಾರಣೆ, ವರ್ಣಭೇದ ನೀತಿಗಳಂಥ ಅಮಾನವೀಯ ಆಚರಣೆಗಳ ವಿರುದ್ಧ ಆರೆಸ್ಸೆಸ್‌ ಕೈ ಜೋಡಿಸಿಲ್ಲ ಯಾಕೆ?
  • ಭಾರತದ ಸ್ವಾತಂತ್ರ್ಯ ಹೋರಾಟದ ಅವಧಿಯಿಂದ ಪ್ರಾರಂಭವಾಗಿ ಸ್ವಾತಂತ್ರ್ಯೋತ್ತರ ಕಾಲಗಳಲ್ಲಿ ಅಸಮಾನತೆ, ಗೇಣಿ ಪದ್ಧತಿ ನಿರ್ಮೂಲನೆ, ರೈತ ಚಳವಳಿ ಗಳು ಸೇರಿದ ಜನಸಾಮಾನ್ಯ ಬಡ ಭಾರತೀಯ ಬಹುಸಂಖ್ಯಾತರ ಪರ ಇದ್ದ ಅನೇಕ ಸಮಾನತೆಯ, ಮಾನವೀಯತೆ ಯ ಅಸಂಖ್ಯ ಹೋರಾಟಗಳಲ್ಲಿ ಆರೆಸ್ಸೆಸ್‌ ಎಷ್ಟು ಹೋರಾಟಗಳಲ್ಲಿ ಪಾಲ್ಗೊಂಡಿದೆ?. ಪಾಲ್ಗೊಳ್ಳದಿರಲು ಕಾರಣವೇನು?

ಆರೆಸ್ಸೆಸ್‌ ಮತ್ತವರ ಪರಿವಾರದ ಸಂಘಟನೆಗಳು ರಾಷ್ಟ್ರೀಯತೆ, ಹಿಂದುತ್ವ, ದೇಶಪ್ರೇಮಗಳ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡುತ್ತವೆ. ಆದರೆ ಅವರೇ ಹೇಳುವಂತೆ ಅವರ ಹೋರಾಟ, ಧ್ಯೇಯ ಹಿಂದೂಗಳ ಪರವಾದರೆ… ಸ್ವಾತಂತ್ರ್ಯ ಹೋರಾಟ, ರೈತ ಹೋರಾಟಗಳು, ಕಾಗೋಡು, ದಲಿತ ಚಳವಳಿಯಂಥ ಚಳವಳಿಗಳು ಹಿಂದೂ ಪರ ಅಲ್ಲವೆ?

  • ಕಾಗೋಡು ಹೋರಾಟ ಸಾಂಕೇತಿಕ, ಕಾಗೋಡು ಹೋರಾಟ ಸೇರಿದಂತೆ ಅನೇಕ ಜನಪರ ಚಳವಳಿಗಳು ಜನಸಾಮಾನ್ಯ ಬಡ ಹಿಂದೂಗಳ ಪರವೇ ನಡೆದವುಗಳು.ಇವುಗಳಲ್ಲಿ ಕಾಗೋಡು ಚಳವಳಿಯಂಥ ರೈತ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯವೊಂದರಲ್ಲೇ ಲಕ್ಷಾಂತರ ಬಡ ಗೇಣಿದಾರರು ಭೂಮಾಲಿಕರಾದರು. ಇಂಥ ಹೋರಾಟಗಳಲ್ಲಿ ಆರೆಸ್ಸೆಸ್‌ ಪಾತ್ರವಿಲ್ಲ, ಹಾಗಾದರೆ ನೀವು ಭೂಮಾಲಿಕರು, ಜಮೀನ್ಧಾರರು, ಮೇಲ್ವರ್ಗದವರ ಪರವಾಗಿದ್ದು ಬಡ ಹಿಂದೂಗಳ ವಿರುದ್ಧ ಅಂತಾಗಲಿಲ್ಲವೆ? ಹಾಗಾದರೆ ನೀವು ಪ್ರತಿಪಾದಿಸುವ ಹಿಂದುತ್ವ ಭಾರತೀಯ ಬಹುಸಂಖ್ಯಾತ ಮೂಲನಿವಾಸಿ ಬಡಜನರ ವಿರುದ್ಧವಲ್ಲವೆ?
  • ಆರೆಸ್ಸೆಸ್‌ ಸೇರಿದಂತೆ ಅವರ ಪರಿವಾರದ ಸಂಘಟನೆಗಳು ಕೆಳವರ್ಗದ ಹಿಂದೂಗಳನ್ನು ಕಾರ್ಯಕರ್ತರಾಗಿ, ಸ್ವಯಂ ಸೇವಕರಾಗಿ ದುಡಿಸಿಕೊಳ್ಳುತ್ತಾರೆ ಆದರೆ ಅವರ ಸರಸಂಘಚಾಲಕ, ಅವರ ನೆಚ್ಚಿನ ಪಕ್ಷದ ಪ್ರಮುಖ ಹುದ್ದೆಗಳಲ್ಲಿ ಯಾಕೆ ನೇಮಿಸುವುದಿಲ್ಲ.?
  • ರೈತರು, ಕಾರ್ಮಿಕರು, ದುಡಿಯುವ ವರ್ಗದ ಹಿಂದೂ ಗಳ ಪರ ಎಂದೂ ವಕಾಲತ್ತು ವಹಿಸದ ಸಂಘ ದೇವರು, ದೇವಸ್ಥಾನ, ದೇವರು-ಮಠಗಳ ಪೂಜಾರಿಗಳ ವಿಚಾರ ಬಂದಾಗ ಮಾತ್ರ ಉಗ್ರವಾಗಿ ಹೋರಾಟ, ಸಂಘಟನೆ, ಹಕ್ಕೊತ್ತಾಯ ಮಾಡುವುದೇಕೆ?
  • ಮುಗ್ಧ ಬಡ ಕೆಳವರ್ಗದ ಹಿಂದೂಗಳಲ್ಲಿ ಹಿಂದುತ್ವ, ರಾಷ್ಟ್ರೀಯತೆಗಳ ವಿಚಾರ ತುಂಬುವ ಸಂಘ ಅವರನ್ನು ಪೊಸ್ಟರ್‌ ಹಚ್ಚಲು, ಜಗಳವಾಡಲು, ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ, ಅವಾಚ್ಯವಾಗಿ ಅನ್ಯರನ್ನು ನಿಂದಿಸಲು ಬಳಸುವ ಸಂಘ ಅಂಥವರಿಗೆ ಸಂಘದ ಸಹ ಪರಿವಾರಗಳಲ್ಲೂ ಮಹತ್ವದ ಹುದ್ದೆಗಳು, ಸ್ಥಾನಮಾನ ಕೊಡದಿರಲು ಕಾರಣವೇನು? ಇಂಥವರಿಗೆ ಸಂಘ ನೀಡುವ ತರಬೇತಿ- ಉತ್ತೇಜನ ಯಾವ ಮಾದರಿಯದ್ದು?
  • * ಸಂಘದಲ್ಲಿ ದೇಶಪ್ರೇಮ, ರಾಷ್ಟ್ರೀಯತೆ, ಶಿಸ್ತು ಬೆಳೆಸಲಾಗುತ್ತದೆ ಎಂದು ವ್ಯಾಪಕ ಪ್ರಚಾರವಿದೆ. ಇದು ಸತ್ಯ, ವಾಸ್ತವ, ನಿಜಗಳಾದಲ್ಲಿ ನಿಮ್ಮ ಪರಿವಾರದ ರಾಜಕೀಯ ಪಕ್ಷದ ಮುಖಂಡರು, ಜನಪ್ರತಿನಿಧಿಗಳು ಕಡುಬ್ರಷ್ಟರಾಗುವುದು ಹೇಗೆ? ನಿಮ್ಮ ಸಂಘ ಬ್ರಷ್ಟಚಾರದ ವಿರುದ್ಧವಿದ್ದರೆ… ಪ್ರತಿಶತ ೯೯ ರಷ್ಟು ಬ್ರಷ್ಟರಾಗಿರುವ ನೀವು ಬೆಂಬಲಿಸುವ ಪಕ್ಷದ ಮುಖಂಡರ ಜೊತೆ ಸಂಘಕ್ಕ್ಯಾಕೆ ತಕರಾರಿಲ್ಲ?.
  • (ಸಶೇಶ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *