

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮೂಲದ ಇಬ್ಬರು ಮಹಿಳೆಯರು ಸಂಶಯಾಸ್ಪದವಾಗಿ ಬೆಂಗಳೂರಿನಲ್ಲಿ ಸಾವಿಗೀಡಾದ ಬಗ್ಗೆ ಪಕ್ಕಾ ಮಾಹಿತಿ ದೊರೆತಿದ್ದು ಎರಡು ಪ್ರತ್ಯೇಕ ಪ್ರಕರಣಗಳ ಈ ಸಾವುಗಳು ರಾಜ್ಯವ್ಯಾಪಿ ಚರ್ಚೆ ಗೆ ಒಳಗಾಗಿವೆ…

ಈತ ಕಾಣೆಯಾಗಿದ್ದಾನೆ….

ಬೆಂಗಳೂರು ಮುನಿಸುಬ್ಬಾರೆಡ್ಡಿ ಲೇಔಟ್ ನ ಪ್ಲಾಟ್ ಒಂದರಲ್ಲಿ ವಾಸವಾಗಿದ್ದ ಸಿದ್ಧಾಪುರ ಕಡಕೇರಿ ಮೂಲದ ಮಹಿಳೆ ಪ್ರಮೋದಾ ಪತಿಯಿಂದ ಪರಿತ್ಯಕ್ತ ಳಾಗಿ ಇಬ್ಬರು ಮಕ್ಕಳೊಂದಿಗೆ ವಾಸವಿದ್ದವಳು ಒಂಟಿಯಾಗಿದ್ದಾಗ ಆಗಂತುಕರಿಂದ ಹತ್ಯೆ ಯಾಗಿದ್ದಾಳೆ. ಇಬ್ಬರು ಸಹೋದರಿಯರು ಒಬ್ಬನನ್ನೇ ಮದುವೆಯಾಗಿದ್ದ ಪ್ರಮೋದಾ ಮತ್ತ ವಳ ತಂಗಿ ಗಾರ್ಮೆಂಟ್ ಉದ್ಯೋಗಿ ಗಳಾಗಿದ್ದು ಅಸಹ್ಯ ಸಂಬಂಧ ಈ ಭೀಕರ ಕೊಲೆಗೆ ಕಾರಣ ವಾಗಿರಬಹುದೆಂದು ಶoಕಿಸಲಾಗಿದೆ…


ಶಿರಳಗಿ ಮಹಿಳೆ ಸಾವು..
ಸಿದ್ದಾಪುರ ಶಿರಳಗಿಯ ವೃದ್ಧ ಮಹಿಳೆ ಬೆಂಗಳೂರು ಮಾರತನಹಳ್ಳಿ ಕೆರೆಯಲ್ಲಿ ಶವವಾಗಿ ಪತ್ತೆ ಯಾಗಿರುವ ಘಟನೆ ಇಂದು ನಡೆದಿದೆ. ಮೂರು ಗಂಡು ಮಕ್ಕಳ ತಾಯಿ ಗೀತಾ ನಾರಾಯಣ ನಾಯ್ಕ ಬೆಂಗಳೂರಿನಲ್ಲಿರುವ ಮಗನ ಮಗನನ್ನು ಅಂದರೆ ಮೊಮ್ಮಗುವನ್ನು ನೋಡಿ ಬರಲು ಹೋದವರು ಸಂಶಯಾಸ್ಪದ ವಾಗಿ ಸಾವು ಕಂಡಿರುವ ಮಾಹಿತಿ ಲಭ್ಯವಾಗಿದೆ. ಶಿರಳಗಿಯಲ್ಲಿ ಗಂಡನೊಂದಿಗೆ ವಾಸವಾಗಿದ್ದ ಈ ತಾಯಿ ಮೊಮ್ಮಗುವನ್ನು ನೋಡಲು ಬೆಂಗಳೂರಿಗೆ ತೆರಳಿ ರವಿವಾರ ಗ್ರಾಮಕ್ಕೆ ಮರಳಬೇಕಿತ್ತು… ರವಿವಾರ ಮಧ್ಯಾನ್ಹ ಬೆಗಳೂರಿನಿಂದ
ಹೊ ರಡಬೇಕಿದ್ದವರು… ಸೋಮುವಾರ ರಾತ್ರಿ ವೇಳೆ ಹೇಗೆ ಕೆರೆಗೆ ಹಾರವಾದರು ಎನ್ನುವ ಸಂಶಯಗಳಿವೆ. ಪುಟ್ಟ ಊರಿನ ಪ್ರತ್ಯೇಕ ಗ್ರಾಮಗಳ ಇಬ್ಬರು ಹೆಂಗಳೆಯರು ಒಂದೇ ದಿನ ಬೆಂಗಳೂರಿನಲ್ಲಿ ಪ್ರತ್ಯೇಕ ಪ್ರದೇಶಗಳಲ್ಲಿ ಸಾವನ್ನ ಪ್ಪಿದ್ದು ರಾಜ್ಯವ್ಯಾಪಿ ಸುದ್ದಿಯಾಗಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






