


ಬೂಕರ್ ಅಂಗಳಕ್ಕೆ ಕನ್ನಡದ ಸೊಗಡನ್ನು ತಲುಪಿಸಿದ ಬಾನು ಮುಸ್ತಾಕ್ ಕನ್ನಡ ಮತ್ತು ಕನ್ನಡನಾಡಿನ ಹಿರಿಮೆ ಎಂದು ಪತ್ರಕರ್ತ ಕೋಲಶಿರ್ಸಿ ಕನ್ನೇಶ್ ಬಣ್ಣಿಸಿದರು. ಸಿದ್ಧಾಪುರ ತಾಲೂಕಾ ಕ.ಸಾ.ಪ. ಆಯೋಜಿಸಿದ್ದ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಸರಣಿಯ ಸಂವಾದ ಕಾರ್ಯಕ್ರಮದಲ್ಲಿ ಬಾನು ಮಸ್ತಾಕರ ಎದೆಯ ಹಣತೆ ಕೃತಿ ಅವಲೋಕನದಲ್ಲಿ ಅವರು ಮಾತನಾಡಿದರು.


ಕೃ.ಉ.ಮಾ. ಪ್ಯಾಡಿಸೊಸೈಟಿ ಸಭಾಂಗಣ ದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎದೆಯ ಹಣತೆ ಬಗ್ಗೆ ವಿವರವಾಗಿ ಚರ್ಚಿಸಿದ ಅವರು ಕನ್ನಡ ಮತ್ತು ಕನ್ನಡ ನಾಡಿನ ವೈಶಿಸ್ಟ್ಯವನ್ನು ಶುದ್ಧ ಕನ್ನಡದಲ್ಲಿ ಅದ್ಬುತವಾಗಿ ಚಿತ್ರಿಸಿದ ಮುಸ್ತಾಕ್ ತಮ್ಮ ಬರವಣಿಗೆಗೆ ಅನ್ಯ ಭಾಷೆಗಳನ್ನು ಅವಲಂಬಿಸಿದ್ದರೆ ಕನ್ನಡಕ್ಕೆ ಬೂಕರ್ ಪ್ರಶಸ್ತಿಯ ಗೌರವ ತಪ್ಪತಿತ್ತೇನೋ ಎಂದು ಅನುಮಾನಿಸಿದರು.

ಯಾವ ಕತೆಯೂ ಚಿಕ್ಕದಲ್ಲ ಎನ್ನುವ ಬಾನು ಮುಸ್ತಾಕರ ಕನ್ನಡ ಮತ್ತು ಸಾಹಿತ್ಯ ಪ್ರೀತಿಗೆ ಅವರ ಜೀವನಾನುಭವ ಕೊಟ್ಟ ಕಾಣಿಕೆ ಅನುಪಮ ಎಂದ ಅವರು ಒಂದೊಂದು ಕತೆಯಲ್ಲೂ ಸಂದರ್ಭ, ಕೋಟ್ ವಿಶೇಶವಾಗಿ ಕೊನೆಯ ಸಂದೇಶ ಅವರ ಕತೆಗಳ ವೈಶಿಷ್ಟ್ಯ ಎಂದರು.


ಕಾರ್ಯಕ್ರಮದ ಅಧ್ಯಕ್ಷ ಕ.ಸಾ.ಪ. ತಾಲೂಕಾಧ್ಯಕ್ಷ ಚಂದ್ರಶೇಖರ್ ಕುಂಬ್ರಿಗದ್ದೆ ಪ್ರಾಸ್ಥಾವಿಕ ನುಡುಗಳನ್ನಾಡಿದರು.
ಸಂವಾದದಲ್ಲಿ ಪಾಲ್ಗೊಂಡ ಹಲವರು ಚರ್ಚೆ ನಡೆಸಿದರು. ಮುಖ್ಯ ಅತಿಥಿಗಳಾಗಿದ್ದ ಸುರೇಂದ್ರ ದಫೇದಾರ್,ಜಿ.ಜಿ. ಹೆಗಡೆ ಮತ್ತು ಆರ್.ಕೆ.ಹೊನ್ನೆಗುಂಡಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






