ಭಾರತದಲ್ಲಿ ಮೊಟ್ಟಮೊದಲು ಅಹಿಂದ ಕಲ್ಫನೆ ಕೊಟ್ಟವರು ಗಂಡುಗಲಿಕುಮಾರರಾಮ

ಭಾರತ ಕಂಡ ಅಪ್ರತಿಮ ವೀರ ಗಂಡುಗಲಿ ಕುಮಾರ ರಾಮ. ಕುಮಾರರಾಮ ಕರ್ನಾಟಕದಲ್ಲಿ ಅಹಿಂದ ಚಳವಳಿ ಹುಟ್ಟುಹಾಕಿದ ಅರಸು ಆ ಮೂಲಕ ಭಾರತದಲ್ಲಿ ಅಹಿಂದ ರಚಿಸಿದ ಮೊದಲ ವ್ಯಕ್ತಿ ಎಂದು ಪತ್ರಕರ್ತ ಕನ್ನೇಶ್‌ ಕೋಲಶಿರ್ಸಿ ಪ್ರತಿಪಾದಿಸಿದರು. ಶಿವಮೊಗ್ಗ ಪೊಲೀಸ್‌ ಸಭಾಭವನದಲ್ಲಿ ನಡೆದ ದೀವರು ಮತ್ತು ಕುಮಾರ ರಾಮ ಸಂವಾದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಮಾತನಾಡಿದ ಅವರು ಮೊಗಲರಿಂದ ದಕ್ಷಿಣ ಭಾರತ ರಕ್ಷಿಸಿದ ಕುಮಾರ ರಾಮನ ತಂದೆ ವೀರ ಕಂಪಿಲರಾಯ ದೇಶದಲ್ಲಿ ರಾಜ ಮನೆತನ, ಸಾಂಮ್ರಾಜ್ಯಗಳು ಕುಸಿಯುತ್ತಿರುವುದನ್ನು ನೋಡಿ ಕೆಳವರ್ಗದ ಪರಿಶಿಷ್ಟರು, ಇತರ ಹಿಂದುಳಿದವರು ಅನ್ಯಧರ್ಮೀಯರನ್ನು ಸೇರಿಸಿಕೊಂಡು ಕಂಪಿಲರಾಜ್ಯ ಸ್ಥಾಪಿಸುತ್ತಾನೆ. ನಂತರ ಕುಮಾರ ರಾಮ ಈ ಸಾಮ್ರಾಜ್ಯವನ್ನು ಮೊಗಲರಿಂದ ಸಂರಕ್ಷಿಸಿ ಭಾರತದ ಮೊದಲ ಅಹಿಂದ ರಾಜನಾಗಿ ಆರಾಧಿಸಲ್ಪಡುತ್ತಾನೆ ಎಂದರು.

ಸಾರ್ವಜನಿಕರೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಮೋಹನ ಚಂರ್ದಗುತ್ತಿ, ನಾಗರಾಜ ಕಲಕೊಪ್ಪ, ಕನ್ನೇಶ್‌ ಕೋಲಶಿರ್ಸಿ ಕುಮಾರ ರಾಮ ಎಲ್ಲಾ ಕೆಳವರ್ಗದವರನ್ನೂ ಸೇರಿಸಿಕೊಂಡು ಸರ್ವರಿಗೂ ಆರಾಧ್ಯ ಆಗುವ ಹಿಂದೆ ಆತನ ಚರಿತ್ರೆ, ಹಿರಿಮೆಗಳ ಹಿನ್ನೆಲೆ ಇದೆ. ರಾಜ್ಯದಲ್ಲಿ ಕುಮಾರ ರಾಮನ ಧೀಮಂತಿಕೆ ಪರಿಚಯಿಸುವ ಮೂಲಕ ಕನ್ನಡ ನಾಡನ್ನು ರಕ್ಷಿಸಿದ ಕುಮಾರರಾಮ ದೊರೆ ಎಲ್ಲರ ಸಾಸ್ಕೃತಿಕ ನಾಯಕನಾದ ಬಗ್ಗೆ ಸಂಶೋಧನೆ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದೀವರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.‌ ನಾಗರಾಜ್‌ ಅಧ್ಯಕ್ಷತೆ ವಹಿಸಿದ್ದರು. ಮಂಜಪ್ಪ, ಕುಪ್ಪಯ್ಯ, ಎಸ್.ಜಿ.ನಾಯ್ಕ ಸೇರಿದಂತೆ ಅನೇಕರುಭಾಗವಹಿಸಿದ್ದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *