ಉತ್ತರ ಕನ್ನಡದಲ್ಲಿ ಅವ್ಯಾಹತ ಗಣಿಗಾರಿಕೆ… ಕಾಲ ಎಣಿಸುತ್ತಿರುವ ಪೊಲೀಸ್‌ & ಗಣಿ ಇಲಾಖೆ! ಕಾನೂನು-ಸುವ್ಯವಸ್ಥೆಗೇ ಸವಾಲು!!?

ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವ ಕಲ್ಲು-ಮರಳು ಗಣಿಗಾರಿಕೆಯಿಂದ ಪ್ರಯಾಣ ದುಸ್ತರತೆ ಜೊತೆಗೆ ಕಾನೂನು-ಸುವ್ಯವಸ್ಥೆ ಮೇಲೆ ಕೂಡಾ ಕೆಟ್ಟ ಪರಿಣಾಮ ಆಗುತ್ತಿರುವುದು ಅಸಹನೀಯ ಎನಿಸುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ-ಕುಮಟಾ ರಸ್ತೆ ದುರಸ್ತಿ ನಡೆಯುತ್ತಿರುವುದರಿಂದ ಆ ಮಾರ್ಗದಲ್ಲಿ ವಾಹನ ಸಂಚಾರ ಮುಕ್ತವಾಗಿಲ್ಲ. ಉತ್ತರ ಕರ್ನಾಟಕ ಕರಾವಳಿ ಭಾಗದಿಂದ ಸಂಚರಿಸುವ ವಾಹನಗಳು ಒಂದೋ ಯಲ್ಲಾಪುರ- ಅಂಕೋಲಾ ಮಾರ್ಗದಲ್ಲಿ ಸಾಗಬೇಕು, ಇಲ್ಲ ಶಿರಸಿ-ಮಾವಿನಗುಂಡಿ ಭಾಗದಲ್ಲಿ ಸಂಚರಿಸಬೇಕು. ಈ ವಾಹನ ಸಂಚಾರ ಮತ್ತು ವಿಪರೀತ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟಿರುವುದು ಬೇರೆ ವಿಚಾರ.

ಈಗ ಮಳೆ ಮುಕ್ತಾಯವಾಗುತ್ತಿರುವಂತೆಯೆ… ಪ್ರಾರಂಭವಾಗಿರುವ ಹೊಸ ಸಮಸ್ಯೆ ಎಂದರೆ… ನೂರಾರು ಲಾರಿಗಳು ತಡರಾತ್ರಿ-ಮುಂಜಾನೆ ವೇಳೆ ಸಾಗುತ್ತಿರುವುದು! ಹೊನ್ನಾವರ ತಾಲೂಕಿನ ಶರಾವತಿ- ನದಿ ತೀರದಲ್ಲಿ ದಿನದ ೨೪ ಗಂಟೆ ಮರಳು ತೆಗೆದು ನೈಸರ್ಗಿಕ ಮರಳನ್ನು ದೋಚುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ಈ ಮರಳನ್ನು ಮಾವಿನಗುಂಡಿ ಸಾಗರ-ಶಿರಸಿ-ಸಿದ್ಧಾಪುರ ರಸ್ತೆಗಳಿಂದ ಹೊತ್ತೊಯ್ಯುತ್ತಿರುವ ನೂರಾರು ಲಾರಿಗಳು ಈ ಭಾಗದ ಜನರ ನಿದ್ದೆ ಕೆಡಿಸುತ್ತಿವೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರದಿಂದ ಘಟ್ಟದ ಮೇಲೆ ಪ್ರತಿವರ್ಷ ಸಾವಿರಾರು ಕೋಟಿ ಮೌಲ್ಯದ ಮರಳು ಸಾಗಾಟ ನಡೆಯುತ್ತಿದೆ ಎನ್ನುವ ಅಂಕಿ ಅಂಶಗಳಿವೆ. ಇದರಲ್ಲಿ ಒಂದೆರಡು ಪ್ರತಿಶತ ಕಾನೂನು ಬದ್ಧವಾದರೆ ೯೭-೯೮% ಕಾನೂನು ಬಾಹೀರ, ಅಕ್ರಮ.!

ಈ ಮರಳುಸಾಗಾಣಿಕೆ ಅಕ್ರಮ ವ್ಯವಹಾರದಲ್ಲಿ ಕಂದಾಯ, ಗಣಿ ಮತ್ತು ಪೊಲೀಸ್‌ ಇಲಾಖೆಗಳ ಶಾಮೀಲಾತಿ ಇದೆ ಎನ್ನುವುದು ೧೦೦ ಕ್ಕೆ ನೂರು ಬಹಿರಂಗ ಗುಟ್ಟು.

ಈ ವ್ಯವಹಾರವನ್ನು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತರೇ ನಿರ್ವಹಿಸುತಿದ್ದು ಹಾಗಾಗಿ ಅಧಿಕಾರಿಗಳೆಲ್ಲಾ ಕಣ್ಣಿಗೆ ಕಪ್ಪು ಬಟ್ಟೆ ತೊಟ್ಟಿದ್ದಾರೆ ಎನ್ನುವ ಗುರುತರ ಆರೋಪಗಳಿವೆ. ಒಂದೆಡೆ ಸರ್ಕಾರಕ್ಕೆ ವಂಚಿಸುತ್ತಾ ಹಗಲು-ರಾತ್ರಿ ದರೋಡೆ ಮಾಡುವ ಉಸ್ತುವಾರಿಗಳಿಂದಾಗಿ ಸರ್ಕಾರಕ್ಕೆ ನೂರಾರು ಕೋಟಿ ರಾಯಧನ ವಂಚನೆಯಾಗುತ್ತಿದ್ದರೆ….. ಇನ್ನೊಂದೆಡೆ ಘಟ್ಟದ ಮೇಲಿನ ಜನರು ಲಾರಿಗಳ ಓಡಾಟದ ರಗಳೆಯಿಂದ ಭಯ ಭೀತಿಯಿಂದ ಬದುಕುವಂತಾಗಿದೆ.

ಈ ಬಗ್ಗೆ ವರದಿ ಮಾಡಿದ್ದ ಸಮಾಜಮುಖಿ ಡಾಟ್‌ ನೆಟ್‌ ನ್ಯೂಸ್ ಅಕ್ರಮ ಮರಳುಗಣಿ ಗಾರಿಕೆಯಿಂದ ಆಗುತ್ತಿರುವ ಅಪಾಯ ಬಹಿರಂಗ ಪಡಿಸುತ್ತಲೇ ಎಚ್ಚೆತ್ತ ಕೆಲವು ಸಾರ್ವಜನಿಕರು ರಾತ್ರಿ ವೇಳೆ ಸಂಚರಿಸುವ ವಾಹನ ತಡೆದು ಎಚ್ಚರಿಕೆ ನೀಡಿದ್ದಾರೆ.

ಜನವಿರೋಧದ ನಡುವೆ ನಡೆಯುತ್ತಿರುವ ಜಿಲ್ಲಾಡಳಿತದ ಸಹಭಾಗಿತ್ವದ ಅಕ್ರಮ ಮರಳು ಸಾಗಾಣಿಕೆ ವಿರುದ್ಧ ಹೋರಾಡಿ ನ್ಯಾಯ ಒದಗಿಸುವವರ್ಯಾರು ಎನ್ನುವುದು ಈಗ ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳು samajamukhi.net news portal, samaajamukhi youtube, samaajamukhi.net & ಸಮಾಜಮುಖಿ fb page ಗಳಲ್ಲಿ ಲಭ್ಯವಿವೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *