




ಸಿದ್ದಾಪುರ: ಉತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ಸಿದ್ದಾಪುರ ತಾಲೂಕ ಬೇಡ್ಕಣಿಯ ಶ್ರೀ ಶನೇಶ್ವರ ದೇವರ ಜಾತ್ರಾ ಮಹೋತ್ಸವವು ಮಾರ್ಚ್ 28 ರ ಶನಿವಾರದಂದು ವಿಜೃಂಭಣೆಯಿಂದ ನಡೆಯಲಿದೆ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಿ ಯಶಸ್ವಿಗೊಳಿಸುವಂತೆ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮಾ. 26 ರಂದು ದೇವಾಲಯದಲ್ಲಿ ದೇವನಾಂದಿ,ಶನೇಶ್ವರ ಕಲಶಸ್ಥಾಪನೆ ಪೂಜೆ,ಜಪ,27 ರಂದು ಕಲಾವೃದ್ಧಿ,ಮೃತ್ಯುಂಜಯ ಹೋಮ,ಪೂರ್ಣಹುತಿ,ಅಲಂಕಾರ, ನೈವೇದ್ಯ,ರಾಜೋಪಚಾರ ಪೂಜೆ, ಹಾಗೂ 28 ರ ಶನಿವಾರ ಸುಪ್ರಭಾತ, ಊರಿನಲ್ಲಿ ಪಲ್ಲಕ್ಕಿ ಉತ್ಸವ,ಹಣ್ಣುಕಾಯಿ, ಮಹಾಮಂಗಳಾರತಿ,ಅನ್ನಸಂತರ್ಪಣೆ,ಸಂಜೆ ಸಂಸ್ಕೃತಿಕ ಕಾರ್ಯಕ್ರಮ,ಶ್ರೀ ಶನೇಶ್ವರ ಮಹಾತ್ಮೆ ಬಯಲಾಟ ಮುಂತಾದ ಕಾರ್ಯಕ್ರಮಗಳು ಜರುಗಲಿವೆ. ಈ ಎಲ್ಲ ಕಾರ್ಯಕ್ರಮಗಳು ಹಾಗೂ ಉತ್ಸವದಲ್ಲಿ ಭಕ್ತರು ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ನಾಯ್ಕ್, ಉಪಾಧ್ಯಕ್ಷ ಜಿ. ಎಂ. ನಾಯ್ಕ್ ವೆಂಕ್ಟ್ರಿ,ಕಾರ್ಯದರ್ಶಿ ಟಿ. ಕೆ. ಮಡಿವಾಳ,ಮತ್ತು ಸದಸ್ಯರು, ಅರ್ಚಕರು,ಸಿಬ್ಬಂದಿಗಳು ಹಾಗೂ ಊರ ನಾಗರಿಕರು ಮನವಿ ಮಾಡಿದ್ದಾರೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________





