


ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ) ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು ಥಳಿಸಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದ ಮಾಹಿತಿ ಬಹಿರಂಗವಾಗಿದೆ.

ನಾಣಿಕಟ್ಟಾ ಪ್ರದೇಶದಲ್ಲಿ ಆಗಂತುಕರು ಕಡವೆಯನ್ನು ಕೊಂದು ಪರಾರಿಯಾಗಿದ್ದರು. ಈ ಭೇಟೆ ಪ್ರಕರಣದ ಜಾಡು ಹಿಡಿದ ಅರಣ್ಯ ಅಧಿಕಾರಿಗಳಿಗೆ ಶ್ವಾನದಳದ ಕಾರ್ಯಾಚರಣೆ ಆಧರಿಸಿ ಅಪರಾಧಿ ಸಿಗುವ ಬದಲು ಅಧಿಕಾರಿಗಳ ಮೇಲೇ ದೌರ್ಜನ್ಯದ ಪ್ರಕರಣ ದಾಖಲಾಗುವಂತಾಗಿದೆ.
ನಡೆದಿದ್ದೇನೆಂದರೆ…. ಭೇಟೆಗಾರರ ಬೇಟೆಯಾಡುವ ರಣ ಬೇಟೆಗಾರರಾದ ಅರಣ್ಯ ಅಧಿಕಾರಿಗಳು ಕಡವೆ ಕೊಂದವರ ಪತ್ತೆಗೆ ಜಾಲ ಬೀಸಿದ್ದಾರೆ. ಬೇಟೆಗಾರನನ್ನು ಪತ್ತೆ ಮಾಡಲು ಬಂದ ನಾಯಿ ವಾಸನೆ ಆಧರಿಸಿ ನಾಗರಾಜ್ ಬಂಗಾರ್ಯ ಚೆನ್ನಯ್ಯ ಎನ್ನುವವರ ಮನೆಗೆ ತೆರಳಿದೆ. ಹಸಿದು ಕೂತಂತಿದ್ದ ಅರಣ್ಯ ಅಧಿಕಾರಿಗಳಿಗೆ ಇಷ್ಟು ಸಾಕಾಗಿತ್ತು ಅಮಾಯಕ ನಾಗರಾಜ್ ಚೆನ್ನಯ್ಯರನ್ನು ರುಬ್ಬಿದ್ದಾರೆ, ತಾನು ಮಾಡದ ತಪ್ಪಿಗೆ ಭಯಂಕರ ಹೊಡೆತ ತಿಂದು ಗಾಯಗೊಂಡ ಈತ ತನ್ನ ಪರಿಚಿತರು, ಸಂಘಟನೆಯ ಮೂಲಕ ದಲಿತ ದೌರ್ಜನ್ಯದ ಕೇಸು ಹಾಕಿ ಅರಣ್ಯಾಧಿಕಾರಿಗಳ ತಪ್ಪಿಗೆ ಶಿಕ್ಷೆ ವಿಧಿಸಿದ್ದಾನೆ.


ಬಡ ಕೂಲಿಕಾರನಾದ ನಾಗರಾಜ್ ಎಂದಿನಂತೆ ತನ್ನ ಮುಂಜಾನೆಯ ಸೌದೆ ತರುವ ಕೆಲಸಕ್ಕೆಂದು ಹೋಗಿದ್ದಾಗ ಬೆಟ್ಟದಲ್ಲಿ ಕಡವೆ ಸತ್ತು ಬಿದ್ದಿರುವುದನ್ನು ನೋಡಿದ ಆತನ ಸಾಕು ನಾಯಿ ಕಡವೆಯನ್ನು ಕಚ್ಚಿ ಎಳೆದಿದೆ. ಸಾಕುನಾಯಿ ಕಡವೆ ಸತ್ತ ಪ್ರದೇಶಕ್ಕೆ ತೆರಳಿದ್ದರಿಂದ ಅಪರಾಧಿ ಶೋಧಕ್ಕೆ ಬಂದಿದ್ದ ಸರ್ಕಾರಿ ನಾಯಿಗೆ ನಾಗರಾಜ್ ಮನೆಯ ವೆರೆಗೆ ಬರುವ ಅನಿವಾರ್ಯತೆಯಾಗಿರಬೇಕು ಈ ಬೆಳವಣಿಗಳ ನಂತರ ವಿಚಾರ ಮಾಡದ ಅರಣ್ಯ ಅಧಿಕಾರಿಗಳು ನಾಗರಾಜ್ ರಿಗೆ ಮನಬಂದಂತೆ ಥಳಿಸಿ ಸತ್ಯ ಬಾಯಿ ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಶಂಕಿತ ಆರೋಪಿಯ ಮೇಲೆ ದರ್ಪ ತೋರಿದ್ದಲ್ಲದೆ ಅಪರಾಧಿಯಲ್ಲದ ಸಾಮಾನ್ಯ ಪ್ರಜೆಗೆ ಥಳಿಸಿ ದೌರ್ಜನ್ಯ ಮಾಡಿದ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳ ನೆರವಿನಿಂದ ನಾಗರಾಜ್ ಚೆನ್ನಯ್ಯ ಅರಣ್ಯ ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿ ಪರಿಹಾರ ಕೇಳಿದ್ದಾನೆ ಎನ್ನುವ ಮಾಹಿತಿ ಸಮಾಜಮುಖಿ ಡಾಟ್ ನೆಟ್ ಗೆ ದೊರೆತಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






