

ಕೆಲವು ಹಿರಿಯ ಅಧಿಕಾರಿಗಳ ದೋಸ್ತಿಯ ಫಲಾಭವಿಗಳಾದ ಅಡ್ಡ ಕಸುಬಿ ಪತ್ರಕರ್ತರ ಗಾಳಿಸುದ್ದಿಗೆ ಅಧಿಕಾರಿಗಳು ಹೈರಾಣಾದ ಕತೆ ಇದು. ಆಗಿದ್ದೇನೆಂದರೆ….

ಸಿದ್ದಾಪುರ ನಿಡಗೋಡು ವ್ಯಾಪ್ತಿಯ ಐಗೋಡು ಅರಣ್ಯ ವ್ಯಾಪ್ತಿಯಲ್ಲಿ ವಾಮಾಚಾರ ಮಾಡಿದಂತೆ ಕಾಣಬಹುದಾದ ದೃಶ್ಯವೊಂದು ಸೃಷ್ಟಿಯಾಗಿತ್ತು. ಇದು ಅಧ್ಯಾಗೋ ಹಿರಿಯ ಅಧಿಕಾರಿಗಳ ಕಾಲು ಹಿಡಿಯುವ ಅಡ್ಡಕಸುಬಿ ಪತ್ರಕರ್ತನಿಗೆ ತಿಳಿದು ಹೋಯಿತು… ಆ ನಾರದ ಭಟ್ಟ ಸುದ್ದಿ ಚಚ್ಚಿ ಯೇ ಬಿಟ್ಟ….!!
ಕಂಗಾಲಾಗುವ ಸರದಿ ಅರಣ್ಯ & ಪೊಲೀಸ್ ಇಲಾಖೆಗಳದ್ದು ಸುಳ್ಳುಸುದ್ದಿ public ಮಾಡುವ ಭಟ್ಟನ ಮೂರ್ಖತನದಿಂದಾಗಿ ಪೊಲೀಸರು ಸ್ಥಳಕ್ಕೆ ಧಾವಿಸಿದರು.. ಗಾಳಿ ಸುದ್ದಿ ಭಟ್ಟನ ಬಾನಗಡಿಯಿಂದಾಗಿ ವಾಮಾಚಾರ ಎನ್ನುವ ವೈದಿಕ ಅಪದ್ಧ ದ ಜಾಡು ಹಿಡಿದು ಕಾರ್ಯಾಚರಣೆಗೆ ಇಳಿದ ಪೊಲೀಸ್ ರಿಗೆ ತಮ್ಮ ಇಲಾಖೆ & ಮಾಧ್ಯಮದ ಮೂರ್ಖ ಭಟ್ಟರ ಅವಿವೇಕ ಅರ್ಥವಾಗುವ ವೇಳೆಗೆ ಕೊಡ ಗಟ್ಟಲೆ ಬೆವರು ಬಸಿದು ಹೋಗಿತ್ತು….


ವಾಸ್ತವವೇನೆಂದರೆ… ಸಿದ್ದಾಪುರ ನಿಡ್ಗೋಡಿನ ವ್ಯಕ್ತಿಯೊಬ್ಬ ದೇವರಿಗೆ ಹರ್ಕೆಗಾಗಿ ಕುರಿಯೊಂದನ್ನು ಸಾಕಿಕೊಂಡಿದ್ದ ಮಳೆಯಿಂದಾಗಿ ಗೊರಸು ರೋಗದಿಂದ ಸೊರಗಿದ್ದ ಕುರಿ ಪ್ರಾಣಬಿಟ್ಟಿತ್ತು. ದೇವರ ಹರಕೆಯ ಕುರಿ ಹೀಗೆ ಅನಾರೋಗ್ಯದಿಂದ ಸತ್ತಿರುವುದರಿಂದ ಆತ ಪೂಜೆ ಮಾಡಿ ದೇವರಿಗೆ ಹರಕೆ ಅರ್ಪಿಸುವಂತೆ ವಿಧಿ ವಿಧಾನ ಪೂರೈಸಿ ಸತ್ತ ಕುರಿ ಹೂತು ಹೋಗಿದ್ದ ..
ಈ ಸತ್ಯ ಅರಿಯದ ಕೆಲವರು ಸುಳ್ಳು ಸುದ್ದಿ ಪಬ್ಲಿಕ್ ಮಾಡುವ ಭಟ್ಟನಿಗೆ ಈ ವಿಚಾರ ತಿಳಿಸಿದ್ದಾರೆ. ಇವನ ರಾತ್ರಿ ದೋಸ್ತಿಯ ಅಧಿಕಾರಿಯ ಸಲಹೆ ಪಡೆದನೋ? ತನ್ನ ಮೂರ್ಖತನ ದಿಂದ ಮೊಸಹೋದನೋ ಗೊತ್ತಿಲ್ಲ.. ಸುಳ್ಳು ಭಟ್ಟ ಸುದ್ದಿ ಮಾಡಿ ವಾಮಾಚಾರ ಎಂದು ಬೋoಗು ಬಿಟ್ಟ …
ಈ ಸುಳ್ಳು ಸುದ್ದಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯ ನಿದ್ದೆ ಗೆಡಿಸಿತು. ಕುಳಿ ಅಗೆದು ಕುರಿಯ ಶವ ಎತ್ತಿದ ಪೊಲೀಸರು ಊಟ – ತಿಂಡಿ ಬಿಟ್ಟು ಗೋಳಾಡಿ ಮಂಗನಂತಾದರು! ಮೂರ್ಖ ಸುಳ್ಳು ಭಟ್ಟ ಮತ್ತಾತನ ಜಾತ್ಯಾಂಧ ಅಧಿಕಾರಿಯ ಶತಮೂರ್ಖತನಗಳಿಂದಾಗಿ ಪೊಲೀಸರು ಗೇಲಿಗೊಳಗಾಗುವಂತಾಯಿತು. ….!
ಈ ಸುಳ್ಳುಭಟ್ಟನ ವೈದಿಕ ಕರ್ಮಾಚಾರದ ಜೋಡಿ ಇಂಥ ಅವಿವೇಕಗಳಿಂದಾಗಿ ಉತ್ತರ ಕನ್ನಡಕ್ಕೆ ಶಾಪವಾಗಿದೆ. ಇಂಥವರಿಂದ ಪೊಲೀಸರು ಪೆಂಗಾಗುತ್ತಾರೆಂದರೆ….ಯಾರಿಗೇಳೋಣ… ನಾವು ಮುಂದಕ್ಕೊಗೋಣ…. ಈ ವೈದಿಕ ಅವಿವೇಕಿಗಳ ಜಾತ್ಯಾಂಧತನಕ್ಕಷ್ಟು! ಎಂದು ಉಗಿಯುವುದಾಯಿತು… ಈ ವಾಮಾಚಾರಿ ಮೂರ್ಖರ ಜೋಡಿಗೆ ಉತ್ತರ ಕನ್ನಡ ಕಂಗಾಲಾಗುತ್ತಿರುವುದು ಇದೇ ಮೊದಲಂತೂ ಅಲ್ಲ…

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
