
public voice-
ಆಯುಷ್ಮಾನ ಭಾರತದ ಎಡವಟ್ಟು ವಾಹನ ಹತ್ತಿದರೆ ದಂಡ ಕಟ್ಟು
ಸಾರ್ವಜನಿಕರ ಅನಾರೋಗ್ಯ ಸಮಸ್ಯೆಗಳಿಗೆ ಸ್ಫಂದಿಸುವ ಆಯುಷ್ಮಾನ್ ಭಾರತ ಯೋಜನೆ ಕೇಂದ್ರದ ಅನೇಕ ಯೋಜನೆಗಳಂತೆ ಬರೀ ಘೋಷಣೆಯಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಆರೋಗ್ಯ ಕರ್ನಾಟಕ ಯೋಜನೆಯನ್ನು ಆಯುಷ್ಮಾನ್ ಭಾರತ ಯೋಜನೆಯೊಂದಿಗೆ ವಿಲೀನ ಮಾಡುವ ಬಿ.ಜೆ.ಪಿ ಮಾಧ್ಯಮಗಳ ವರದಿಗೆ ರಾಜ್ಯ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅದು ಉದ್ಧೇಶಪೂರ್ವಕ ಸುದ್ದಿ, ಆ ಸುದ್ದಿಗೆ ಅದನ್ನು ಬರೆದ, ಪ್ರಸಾರಮಾಡಿದ ಮಾಧ್ಯಮಗಳ ವಿಶ್ವಾಸಾರ್ಹತೆಯಷ್ಟೇ ಬೆಲೆ ಎಂದು ಪ್ರತಿಕ್ರೀಯೆ ನೀಡಿದ್ದಾರೆ.!
ಅದೇನೆ ಇರಲಿ, ಆಯುಷ್ಮಾನ ಭಾರತವೋ, ಆರೋಗ್ಯ ಕರ್ನಾಟಕವೋ ಯಾವುದೋ ಒಂದು ಯೋಜನೆಯ ಉಪಯೋಗವಾದರೂ ಫಲಾನುಭವಿಗಳಿಗೆ ದಕ್ಕಬೇಕು. ಆದರೆ ಆಯುಷ್ಮಾನ್ ಭಾರತ ಅನುಕೂಲಕ್ಕೆ ಇರುವ ಕಠಿಣ ನಿಯಮಗಳು ಅವೈಜ್ಞಾನಿಕ, ಅಪ್ರಾಯೋಗಿಕ ಎನ್ನುವ ಆರೋಪ ವ್ಯಕ್ತವಾಗಿದೆ. ರೋಗಿ ಕಡ್ಡಾಯವಾಗಿ ಸರ್ಕಾರಿ ಆಸ್ಫತ್ರೆಯಲ್ಲಿ ನೋಂದಣಿ ಮಾಡಿಸಿರಬೇಕು ಎನ್ನುವ ನಿಯಮ ಸೇರಿದಂತೆ ವೈದ್ಯರ ನೋಂದಣಿ ಸಂಖ್ಯೆ ಇತ್ಯಾದಿ ನಿಯಮಗಳು ಬಡವರಿಗೆ ವಂಚಿಸಲು ಬೇಕಾದ ಅನಾವಶ್ಯಕ ನಿಯಮ, ನಿಬಂಧನೆಗಳು ಎಂದು ಜನತೆ ಗೋಳಾಡುತ್ತಾ ಶಾಪ ಹಾಕುತಿದ್ದಾರೆ. ಆದರೆ ಈಗಿನ ಬಿ.ಜೆ.ಪಿ. ಗುಲಾಮಿ ಸರ್ಕಾರ ಬಡಜನರ ಈ ದುಖ: ತೊಂದರೆ ಕೇಳುತ್ತಿಲ್ಲ ಈ ಬಗ್ಗೆ ಸಂಘಟಿತ ಪ್ರತಿಭಟನೆ, ಹೋರಾಟದಿಂದ ಮಾತ್ರ ಬಡವರ ಜೇಬಿನ ಲೂಟಿ ತಡೆಯಬಲ್ಲದು.
ಮೋಟಾರ್ ವಾಹನ ಕಾಯಿದೆ- ಕೇಂದ್ರದ ಹೊಸ ಮೋಟಾರ್ ವಾಹನ ಕಾಯಿದೆ ಜಾರಿ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದೆ. ಸಾರ್ವಜನಿಕರ ಹಿತಕ್ಕಾಗಿ ದಂಡ ಹಾಕುವುದಾದರೆ ನ್ಯಾಯಾಲಯಗಳು ದಂಡ ವಿಧಿಸಿದಂತೆ ನಾಮಕಾವಾಸ್ಥೆ ಆಗಿರಬೇಕು, ಆದರೆ ಸರ್ಕಾರ ಕಠಿಣ ನಿಯಮಗಳನ್ನು ಮಾಡಿ, ಹೆಚ್ಚಿನ ದಂಡ ವಿಧಿಸಿ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ಶ್ರೀಮಂತರು, ಸ್ಥಿತಿವಂತರಿಗೆ ಕಾನೂನು ಪಾಲನೆ ಕಷ್ಟವಲ್ಲ, ಅವರು ಕಾನೂನು ಪಾಲನೆ ಮಾಡುತ್ತಾರೆ ಇಲ್ಲವೆ ಕಾನೂನು ಮುರಿದು ಬಚಾವಾಗುತ್ತಾರೆ. ಆದರೆ ಕಠಿಣ ಕಾನೂನು ಪಾಲನೆ ಮಾಡಲಾರದ ಬಡವರು, ಕಾನೂನನ್ನು ಬಗ್ಗಿಸಲಾಗದೆ, ಜಾರಿಗೆ ತರದೆ ಮಾರ್ಗಮಧ್ಯದಲ್ಲಿ ಗೋಳಾಡುತ್ತಾರೆ. ಈ ಬಗ್ಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗುತಿದ್ದು ಈ ಕಾನೂನಿನ ಲೋಪ. ತೊಂದರೆ ಬಗ್ಗೆ ಸಾಮೂಹಿಕ ವಿರೋಧದ ಅಲೆ ಏಳದಿದ್ದರೆ ಭವಿಷ್ಯ ಭೀಕರವಾಗುವುದು, ಬಡವರು ತೊಂದರೆಗೆ ಒಳಗಾಗುವುದು ನಿಶ್ಚಿತ.
ಬ್ಯಾಂಕ್ ವಿಲೀನ-
ಈ ಹಿಂದೇ ಕೆಲವು ಬ್ಯಾಂಕ್ಗಳನ್ನು ದೊಡ್ಡಬ್ಯಾಂಕ್ಗಳ ಜೊತೆಗೆ ವಿಲೀನ ಮಾಡಿದ ಕೇಂದ್ರ ಸರ್ಕಾರ ಮತ್ತೆ ಕೆಲವು ಬ್ಯಾಂಕ್ಗಳನ್ನು ವಿಲೀನ ಮಾಡಿ ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ಮುಂದಾಗಿದೆ.
ಜನಸಾಮಾನ್ಯರಿಗೆ ಬ್ಯಾಂಕ್ ಅನಿವಾರ್ಯತೆಯನ್ನು ಹೆಚ್ಚಿಸಿ,ಬ್ಯಾಂಕ್ ಮತ್ತು ಹಣಕಾಸಿನ ಸೇವೆ ಕಡಿತ ಮಾಡುವ ಹಿಂದೆ ಸದುದ್ದೇಶಕ್ಕಿಂತ ಕೇಂದ್ರದ ಸರ್ವಾಧಿಕಾರಿಗಳ ದುರುದ್ದೇಶವೇ ಎದ್ದು ಕಾಣುತ್ತಿದೆ. ಬ್ಯಾಂಕ್ ವಿಲೀನದ ಬಗ್ಗೆ ಸಾಂಕೇತಿಕ ಪ್ರತಿಭಟನೆ, ವಿರೋಧಗಳಾದರೂ ವ್ಯಕ್ತವಾಗಿವೆ. ಆದರೆ ಆರೋಗ್ಯ ಯೋಜನೆ ಲೋಪ, ಸಾರಿಗೆ ನಿಯಮಗಳ ಮೋಸಗಳ ಬಗ್ಗೆ ಜನತೆ ಕನಿಷ್ಟ ಪ್ರತಿಭಟನೆಯ ಧ್ವನಿಯನ್ನೂ ಎತ್ತಿಲ್ಲ. ಒಪ್ಪಿತ ಸಮ್ಮತಿ, ಒಪ್ಪಿತ ಸೌಹಾರ್ದತೆಯ ನೀತಿ ಜಾರಿ ಮಾಡುತ್ತಿರುವ ಕೇಂದ್ರದ ಬಿ.ಜೆ.ಪಿ. ಸರ್ಕಾರ ಈ ಮೂರು ಯೋಜನೆ,ಕಾರ್ಯಕ್ರಮ, ನಿಯಮಗಳ ಹೊರತಾಗಿ ನೂರಾರು ಕಾನೂನು, ಯೋಜನೆ, ಕಾರ್ಯಕ್ರಮಗಳಲ್ಲಿ ಉಳ್ಳವರ ಪರ, ಇಲ್ಲದವರ ವಿರೋಧ ಮಾಡುತ್ತಿರುವ ವಿದ್ಯಮಾನಕ್ಕೆ ಅಂಗೈ ಹುಣ್ಣಿಗೆ ಕನ್ನಡಿ ಬೇಡ ಎನ್ನುವ ಸ್ಥಿತಿ. ಈ ಬಗ್ಗೆ ಜನತೆ ಬಂಡೇಳದಿದ್ದರೆ ಕಾಲ ಕಠಿಣವಾಗುತ್ತಾ ಸರ್ವಾಧಿಕಾರ, ಮತವ್ಯಗ್ರತೆ ದೇಶವನ್ನು ತಿಂದುಹಾಕುವುದಂತೂ ಸತ್ಯ.

