ಭಾರತೀಯ ಶುಗರ್ ಮಿಲ್ ಅವಾರ್ಡ್ ಬೆಸ್ಟ್ ಜನರಲ್ ಮ್ಯಾನೇಜರ್ ಕರ್ನಾಟಕ ಸಿದ್ಧಾಪುರದ ದಿನೇಶ ಶರ್ಮಾ

ಶುಗರ್ ಇಂಡಸ್ಟ್ರಿಯಲ್ಲಿ ಮಾಡಿದ ಅಪ್ರತಿಮ ಸಾಧನೆಗಾಗಿ ಕೊಡಮಾಡುವ ರಾಷ್ಟ್ರಮಟ್ಟದ ಪ್ರತಿಷ್ಠಿತ ಭಾರತೀಯ ಶುಗರ್ ಮಿಲ್ ಅವಾರ್ಡ್ ಬೆಸ್ಟ್ ಜನರಲ್ ಮ್ಯಾನೇಜರ್ ಕರ್ನಾಟಕ ಸಿದ್ದಾಪುರದ ದಿನೇಶ ಶರ್ಮಾರಿಗೆ ದೊರೆತಿದ್ದು ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ತರುವ ಸಂಗತಿಯಾಗಿದೆ.
ದಿನೇಶ ಶರ್ಮಾ ಪ್ರಸ್ತುತ ಬಾಗಲಕೋಟ ಜಿಲ್ಲೆಯ ಸಮೀರವಾಡಿ ಸೋಮಯ್ಯಾ ಗ್ರೂಪ್‍ನ ಗೋದಾವರಿ ಬಯೋ ರಿಫೈನರೀಸ್‍ನಲ್ಲಿ ಉತ್ಪಾದನಾ ವಿಭಾಗದ ಜನರಲ್ ಮ್ಯಾನೇಜರ್ ಆಗಿ ಪ್ರತಿಷ್ಠಿತ ಹುದ್ದೆ ಅಲಂಕರಿಸಿದ್ದಾರೆ.
ಎಸ್‍ಎಸ್‍ಎಲ್‍ಸಿಯ ವರೆಗೆ ಸಿದ್ದಾಪುರದಲ್ಲಿ ನಂತರ ಮಂಡ್ಯ ಹಾಗೂ ಮೈಸೂರಿನಲ್ಲಿ ಶಿಕ್ಷಣ ಪಡೆದಿರುವ ಶರ್ಮಾ ಭಾರತದಲ್ಲಿ ಪ್ರಥಮ ಬಾರಿಗೆ ಪ್ರಾರಂಭವಾದ ಶುಗರ್ ಟೆಕ್ನಾಲಜಿಯ ಸ್ನಾತಕೋತ್ತರ ಮೊದಲನೇ ಬ್ಯಾಚ್‍ನಲ್ಲಿ ಎಂಎಸ್‍ಸಿಯಲ್ಲಿ ವಿಶ್ವವಿದ್ಯಾಲಯಕ್ಕೆ ಎರಡನೇ ರ್ಯಾಂಕ್ ಪಡೆದವರು. ಆಂಧ್ರಪ್ರದೇಶದಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ (1996-2006) ಕರ್ನಾಟಕ ಸಮೀರವಾಡಿಯ ಗೋದಾವರಿ ಬಯೋ ರಿಫೈನರೀಸ್ ಲಿಮಿಟೆಡ್‍ನಲ್ಲಿ ಅತ್ಯಂತ ಕಿರಿಯ ದರ್ಜೆಯ ಉತ್ಫಾದನಾ ವಿಭಾಗದ ಜ್ಯೂನಿಯರ್ ಮೋಸ್ಟ್ ಆಫೀಸರ್ ಇನ್ ಪ್ರೊಡಕ್ಶನ್ ಹುದ್ದೆ ಪಡೆದವರು. ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ಕೇವಲ ಹನ್ನೆರಡು ವರ್ಷಗಳಲ್ಲಿ ಜನರಲ್ ಮ್ಯಾನೇಜರ್ ಹುದ್ದೆ ಅಲಂಕರಿಸಿದ ಹಿರಿಮೆ ದಿನೇಶ ಶರ್ಮಾ ಅವರದು.
2015 ರಲ್ಲಿ ಜರ್ಮನಿಯಲ್ಲಿ ಜರುಗಿದ ಕೆಮಿಕಲ್ ಇಂಡಸ್ಟ್ರಿ ಇಂಟರ್‍ನ್ಯಾಶನಲ್ ಇವೆಂಟ್‍ನಲ್ಲೂ ಶರ್ಮಾ ತಮ್ಮ ಕಂಪನಿಯನ್ನು ಪ್ರತಿನಿಧಿಸಿದ್ದರು.
ಗೋದಾವರಿ ಬಯೋ ರಿಫೈನರೀಸ್ ಮುಂಬೈ ಮೂಲದ ಅತಿದೊಡ್ಡ ಕಂಪನಿಯಾಗಿದ್ದು ಜಾಗತಿಕ ಮಟ್ಟದಲ್ಲಿ ಸಕ್ಕರೆಯ ವಹಿವಾಟು ನಡೆಸುತ್ತಿದೆ. ಕೋಕಾಕೋಲಾ, ನೆಸ್ಲೆ, ಕ್ಯಾಡ್‍ಬರಿ, ಪೆಪ್ಸಿಕೋ, ಹಲ್ದಿರಾಮ ಇಂತಹ ಕಂಪನಿಗಳು ಗೋದಾವರಿ ಬಯೋ ರಿಫೈನರೀಸ್‍ನ ಗ್ರಾಹಕರಾಗಿದ್ದಾರೆ. ಪ್ರಪಂಚದ ಅನೇಕ ದೇಶಗಳಿಗೂ ಗೋದಾವರಿ ಬಯೋ ರಿಫೈನರೀಸ್‍ನಿಂದ ಸಕ್ಕರೆ ರಫ್ತಾಗುತ್ತಿದೆ. ಇಂತಹ ಹೆಸರಾಂತ ಕಂಪನಿಯಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಿರುವ ಪ್ರತಿಭಾವಂತರಾದ ದಿನೇಶ ಶರ್ಮಾ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ. ದಿನೇಶ ಶರ್ಮಾ ಅವರು ಸಿದ್ದಾಪುರದ ಎಸ್‍ಎಸ್‍ಪಿ ಸಮಿತಿ ಪ್ರೌಢಶಾಲೆಯ ಅಧ್ಯಾಪಕರಾಗಿದ್ದ ದಿವಂಗತ ಎನ್. ಪರಮೇಶ್ವರ ಶರ್ಮಾ ಹಾಗೂ ಶ್ರೀಮತಿ ಮಹಾಲಕ್ಷ್ಮೀ ಶರ್ಮಾರ ಸುಪುತ್ರರು. ಇತ್ತೀಚೆಗಷ್ಟೆ ಕೊಲ್ಲಾಪುರದಲ್ಲಿ ಜರುಗಿದ ವರ್ಣರಂಜಿತ ಸಮಾರಂಭದಲ್ಲಿ ದಿನೇಶ ಶರ್ಮಾರಿಗೆ ಪ್ರಶಸ್ತಿ ಪ್ರದಾನ ಜರುಗಿದೆ.
ಕಾನಪುರದ ನ್ಯಾಶನಲ್ ಶುಗರ್ ಇನ್ಸಟ್ಯಿಟೂಟ್‍ನ ಡೈರೆಕ್ಟರ್ ನರೇಂದ್ರ ಮೋಹನ ಹಾಗೂ ಉದ್ಯಮ ಕ್ಷೇತ್ರದ ಅನೇಕ ಗಣ್ಯರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ದಿನೇಶ ಶರ್ಮಾರಿಗೆ ಪ್ರದಾನ ಮಾಡಿದ್ದಾರೆ.

ಸಮಾಜಮುಖಿ ವರದಿಗಳ ಫಲಶೃತಿ
ಶೀರಲಗದ್ದೆ ಜಲಪಾತದ ರಸ್ತೆಗೆ 4ಲಕ್ಷ, ಅರೆಹಳ್ಳ ಮತ್ತು ಹಕ್ಕಲಮನೆ ರಸ್ತೆಗಳಿಗೆ ಅನುದಾನ ಮಂಜೂರಿ
ಸಿದ್ಧಾಪುರ ತಾಲೂಕಿನ ಶೀರಲಗದ್ದೆ ಜಲಪಾತದ ರಸ್ತೆಗೆ ಶಾಸಕರ ನಿಧಿಯಿಂದ ನಾಲ್ಕು ಲಕ್ಷ ರೂಪಾಯಿ ಮತ್ತು ಗವಿನಸರ, ಹಕ್ಕಲಮನೆ ಹಾಗೂ ಅರೆಹಳ್ಳ ರಸ್ತೆಗಳಿಗೆ ಅನುದಾನ ನೀಡಬೇಕೆಂದು ತಾ.ಪಂ.ಸ್ಥಾಯಿ ಸಮೀತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಸಂಬಂಧಿಸಿದವರಿಗೆ ಮನವಿ ಮಾಡಿರುವ ವರ್ತಮಾನ ಸಮಾಜಮುಖಿ ಪ್ರತಿನಿಧಿಗೆ ದೊರೆತಿದೆ.
ಸಮಾಜಮುಖಿ ಪತ್ರಿಕೆ ಮತ್ತು ಸುದ್ದಿಪೋರ್ಟಲ್ ನಲ್ಲಿ ತಾಲೂಕಿನ ತ್ಯಾಗಲಿ ಶೀರಲಗುಂಡಿ ಜಲಪಾತದ
ರಸ್ತೆ ಅವ್ಯವಸ್ಥೆ ಬಗ್ಗೆ ಬರೆದು ಗಮನ ಸೆಳೆದಿತ್ತು.
ಸಮಾಜಮುಖಿ ವರದಿಗಳ ನಂತರ ಸಿದ್ಧಾಪುರದ ಮಾಧ್ಯಮ ಪ್ರತಿನಿಧಿಗಳು ಈ ಜಲಪಾತ ಮತ್ತು ಶಿವರಾತ್ರಿಗುಂಡಿಗೆ ಹೋಗುವ ರಸ್ತೆಗಳ ದುವ್ರ್ಯವಸ್ಥೆಗಳ ಬಗ್ಗೆ ವರದಿ ಮಾಡಿದ್ದರು. ಈ ವರದಿಗಳ ನಂತರ ಶಾಸಕರ ಅನುದಾನದಲ್ಲಿ 4 ಲಕ್ಷ ರೂಪಾಯಿಗಳನ್ನು ಮಂಜೂರುಮಾಡಲು ಶಾಸಕರು ಅನುಮತಿ ನೀಡಿರುವುದಾಗಿ ಮಹಾಬಲೇಶ್ವರ ಹೆಗಡೆ ತಿಳಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *