ವಿಶ್ವ ಮಾನವ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

ಕನ್ನಡ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ
ವಿಶ್ವ ಮಾನವ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ
“ಮನುಜ ಮತ ವಿಶ್ವ ಪಥ” ದ ತತ್ವವನ್ನು ಪತ್ರಿಪಾದಿಸಿದ ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನವಾದ ಡಿಸೆಂಬರ್ 29ನ್ನು “ವಿಶ್ವ ಮಾನವ ದಿನ”ವಾಗಿ ನಾಡಿನಲ್ಲಿ ಆಚರಿಸಲಾಗುತ್ತಿದೆ.
ಹಾಗಾಗಿ ಎಂ.ಜಿ.ಸಿ. ಮಹಾವಿದ್ಯಾಲಯದ ಕನ್ನಡ ಸಂಘ ಮತ್ತು ಎನ್.ಎಸ್.ಎಸ್. ಕೂಡ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಭಾಗವಾಗಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಮತ್ತು ಪದವಿ ತರಗತಿಗಳ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
ಆಸಕ್ತ ವಿದ್ಯಾರ್ಥಿಗಳಿಂದ ‘ಕುವೆಂಪು ಅವರು ನೀಡಿದ ವೈಚಾರಿಕ ಸಂದೇಶ’ ಅಥವಾ ‘ಕುವೆಂಪು ಅವರ ಸಾಹಿತ್ಯದಲ್ಲಿ ಮಲೆನಾಡು’ ಎನ್ನುವ ವಿಷಯದಲ್ಲಿ ಯಾವುದಾದರೂ ಒಂದರ ಕುರಿತು ಪ್ರಬಂಧವನ್ನು ದಿನಾಂಕ 26-12-2019 ರೊಳಗೆ ಆಹ್ವಾನಿಸಿದೆ. ತಾಲೂಕಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರಾಚಾರ್ಯರಾದ ಪ್ರೊ. ಜಯಂತಿ ಶಾನಭಾಗ ಕೋರಿದ್ದಾರೆ.
ಸೂಚನೆಗಳು:
1) ಪ್ರಬಂಧವು ಕೈಬರಹದಲ್ಲಿದ್ದು ಂ4 ಹಾಳೆಯಲ್ಲಿ ಕನಿಷ್ಟ 5 ಪುಟ ಹೊಂದಿರಬೇಕು.
3) ಪ್ರತಿ ವಿಭಾಗದಲ್ಲಿ ಮೂರು ಬಹುಮಾನವನ್ನು ಪುಸ್ತಕದ ರೂಪದಲ್ಲಿ ನೀಡಲಾಗುವುದು.
4) ಪ್ರಬಂಧವನ್ನು ಮುಖ್ಯಸ್ಥರು, ಕನ್ನಡ ವಿಭಾಗ, ಎಂ.ಜಿ.ಸಿ. ಕಲಾ, ವಾಣಿಜ್ಯ ಹಾಗೂ ಜಿ.ಎಚ್.ಡಿ. ವಿಜ್ಞಾನ ಪದವಿ ಕಾಲೇಜು, ಸಿದ್ದಾಪುರ. (ಉ.ಕ.) 581355 ಇವರಲ್ಲಿ ನೀಡಬೇಕು.
ಹೆಚ್ಚಿನ ವಿವರಕ್ಕೆ ಸಂಪರ್ಕಿಸಬಹುದು.(ಮೊಬೈಲ್ ನಂ. 9448729359 )

ಪೌರತ್ವಮಸೂದೆ
ರಾಷ್ಟ್ರಪತಿಗಳಿ
ಗೊಂದು ಮನವಿ
ಮಾನ್ಯ ರಾಷ್ಟ್ರಪತಿಗಳು
ಭಾರತ ಸರ್ಕಾರ, ನವದೆಹಲಿ
(ತಹಶಿಲ್ದಾರರು, ಸಿದ್ದಾಪುರ ರವರ ಮೂಲಕ)

ವಿಷಯ: ಡಿಸೆಂಬರ್ 19, 2019 ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಅಖಿಲ ಭಾರತ ಪ್ರತಿಭಟನೆ: ಎನ್.ಆರ್.ಸಿ ಮತ್ತು ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿರುವ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಅಂಶಗಳನ್ನು ಕೈಬಿಡಲು, ಜನರ ಪ್ರತಿಭಟನಾ ಹಕ್ಕಿನ ಮೇಲಿನ ದಾಳಿಯಾಗಿ ನಿಶೇಧಾಜ್ಞೆ ಹೇರಿದ್ದು ವಾಪಸ್ ಪಡೆಯಲು, ಬಂಧಿತ ಎಲ್ಲಾ ಪ್ರತಿಭಟನಾಕಾರ ಬಿಡುಗಡೆಗೆ ಸಿಐಟಿಯು ಆಗ್ರಹ.
ಮಾನ್ಯರೇ,
ಭಾರತದ ಸ್ವಾತಂತ್ರ್ಯವನ್ನು ಗಳಿಸಲು ಮತ್ತು ಅಭಿವೃದ್ಧಿಗೆ ಎಲ್ಲಾ ಪ್ರಜೆಗಳೂ ಹೋರಾಡಿದ್ದಾರೆ. ಜಾತಿ, ಧರ್ಮ ಲಿಂಗಬೇಧವಿಲ್ಲದೇ ಶ್ರಮಿಸಿದ್ದಾರೆ. ಇಂದು ಸ್ವಾತಂತ್ರ್ಯ ಹೋರಾಟದಲ್ಲಿ ಮತೀಯ ನೆಲೆಗಳನ್ನು ಮೀರಿದ ಐಕ್ಯತೆಯನ್ನು ನೆನಪಿಸುವ ದಿನ, 1927ರಲ್ಲಿ ಇದೇ ಡಿಸೆಂಬರ್ 19ರಂದು, ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ “ಸರ್ ಫರೋಶೀ ಕೀ ತಮನ್ನಾ ಅಬ್ ಹಮಾರೇ ದಿಲ್ ಮೇಂ ಹೈ, ದೇಖ್‍ನಾ ಹೈ ಜೋರ್ ಕಿತ್ನಾ ಬಾಜು-ಏ-ಕಾತಿಲ್ ಮೇಂ ಹೈ” ಎಂಬ ಪ್ರಸಿದ್ಧ ಕವನದ ಮೂಲಕ ಇಡೀ ದೇಶದ ಜನತೆಯನ್ನು ಜಾಗೃತಗೊಳಿಸಿದ ರಾಂಪ್ರಸಾದ್ ಬಿಸ್ಮಿಲ್‍ರನ್ನು ಗೋರಖ್‍ಪುರ ಜೈಲಿನಲ್ಲಿ, ಅಶ್ಫಾಖುಲ್ಲ ಖಾನ್‍ರನ್ನು ಫೈಝಾಬಾದ್ ಜೈಲಿನಲ್ಲಿ, ರೋಶನ್ ಸಿಂಗ್‍ರನ್ನು ನೈನಿ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಮತೀಯ ನೆಲೆಗಳನ್ನು ಮೀರಿ ನಿಂತ ಈ ಐಕ್ಯತೆಯಿಂದಲೇ ನಾವು ಬ್ರಿಟೀಶರಿಂದ ನಮ್ಮ ಸ್ವಾತಂತ್ರ್ಯವನ್ನು ಗೆದ್ದುಕೊಂಡಿದ್ದೇವೆ. ಭಾರತವನ್ನು ಪುನಃ ವಿಭಜಿಸುವ ಸಲುವಾಗಿಯೇ ದುಡಿಯುವ ಜನರ ವಿರೋಧಿಯಾದ ಪೌರತ್ವ ತಿದ್ದುಪಡಿ ಮಸೂದೆ(ಸಿ.ಎ.ಬಿ.) (ಈಗ ಸಿಎಎ ಕಾಯ್ದೆ) ಮತ್ತು ರಾಷ್ಟ್ರೀಯ ಪೌರತ್ವ ದಾಖಲಾತಿ (ಎನ್.ಆರ್.ಸಿ.) ಜಾರಿಗೆ ತಂದು ದೇಶಾದ್ಯಂತ ಅಭದ್ರತೆಯ ವಾತಾವರಣ ಸೃಷ್ಟಿಸಲಾಗಿದೆ.
ಇದರ ವಿರುದ್ಧ ಇಂದು ಡಿಸೆಂಬರ್ 19 ರಂದು ದೇಶಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ದಾಳಿ ನಡೆಸಲಾಗಿದೆ, ಬಂಧಿಸಲಾಗಿದೆ. ಇದನ್ನು ಸೆಂಟರ್ ಆಫ್ ಇಂಡಿಯನ್ ಟ್ರೇಡಸ್ ಯೂನಿಯನ್ ಉತ್ತರ ಕನ್ನಡ ಜಿಲ್ಲಾ ಸಮಿತಿಯು ಬಲವಾಗಿ ಖಂಡಿಸುತ್ತದೆ, ಮಾತ್ರವಲ್ಲ, ಈ ಕಾಯ್ದೆಯಲ್ಲಿರುವ ಸಂವಿಧಾನಕ್ಕೆ ಮತ್ತು ಮತಧರ್ಮ ನಿರಪೇಕ್ಷವಾದ ಭಾರತದ ತತ್ವಕ್ಕೆ ವಿರೋಧಿಯಾದ ಅಮಾನವೀಯ ಅಂಶಗಳನ್ನು ಕೈಬಿಡಲು ಆಗ್ರಹಿಸುತ್ತೇವೆ.
ಧರ್ಮದ ಆಧಾರದಲ್ಲಿ ಪೌರತ್ವವನ್ನು ನೀಡಬೇಕೆಂಬ ಈ ಕಾಯ್ದೆಯಿಂದ ದೇಶದಲ್ಲಿ ಕೋಮು ವಿಭಜನೆ ಮತ್ತು ಸಾಮಾಜಿಕ ಧ್ರುವೀಕರಣವನ್ನು ಇನ್ನಷ್ಟು ತೀಕ್ಷ್ಣಗೊಳಿಸುವುದು ಈ ಕಾಯ್ದೆಯ ಉದ್ದೇಶ. ಇದು ನಮ್ಮ ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಅಪಾಯಕಾರಿ ಹಾನಿಯುಂಟು ಮಾಡುತ್ತದೆ. ಇಂತಹ ಮಸೂದೆ ಪಾಸಾಗಿರುವುದು, ಮತ್ತು ಎನ್.ಆರ್.ಸಿ.ಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಗುವುದು ಎಂದು ಸರಕಾರ ಸಾರಿರುವುದು ಭಾರತೀಯ ಗಣತಂತ್ರದ ಸ್ವರೂಪವನ್ನೇ ಬದಲಿಸುವ ಒಂದು ಅವಳಿ ಸಂಯೋಜನೆ. ಇದು ನಮ್ಮ ಜಾತ್ಯತೀತ ಪ್ರಜಾಪ್ರಭುತ್ವ ಗಣತಂತ್ರವನ್ನು ಮನುವಾದಿಯಾಗಿಸುವÀ ರಾಜಕೀಯ ಯೋಜನೆ.
ಪೌರತ್ವ (ತಿದ್ದುಪಡಿ) ಮಸೂದೆ 2019 ಸಂವಿಧಾನದ ಮೂಲ ವೈಶಿಷ್ಟ್ಯಗಳ ಉಲ್ಲಂಘನೆ. ಭಾರತವು ಎಲ್ಲರದ್ದೂ, ಇಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ. ನಮ್ಮ ಸಂವಿಧಾನ ನಮಗೆ ಆ ಹಕ್ಕುಗಳನ್ನು ದಯಪಾಲಿಸಿದೆ. ಆಧಾರ್ ಮತ್ತು ಮತದಾರರ ಫೆÇೀಟೋ ಗುರುತು ಪತ್ರ (ಇಪಿಐಸಿ) ಇರುವಾಗ, ಇದೊಂದು ಅನಗತ್ಯವಾದ, ದುಂದುವೆಚ್ಚದ ಪ್ರಕ್ರಿಯೆ. ಇದು ‘ವಿದೇಶಿಯರು’ ಎಂದು ಹಣೆಪಟ್ಟಿ ಹಚ್ಚಿರುವ ಕೆಲವು ವಿಭಾಗಗಳ ಮೇಲೆ ಗುರಿಯಿಡುವ ಆಳುವ ಪಕ್ಷದ ಅಜೆಂಡಾವನ್ನು ಈಡೇರಿಸಲಿಕ್ಕಾಗಿ ಮಾತ್ರವೇ ತಂದಿದ್ದಾರೆ.
ಕರ್ನಾಟಕ ಸರಕಾರ ರಾಜ್ಯದಾದ್ಯಂತ ಮೂರು ದಿನಗಳ ಕಾಲ ನಿಶೇದಾಜ್ಞೆ ಹೇರುವ ಮೂಲಕ ಜನರ ಪ್ರತಿಭಟನಾ ಹಕ್ಕಿನ ಮೇಲೆ ದಾಳಿ ನಡೆಸಿದೆ. ಜನತೆ ಮತ್ತು ಸಂಘ ಸಂಸ್ಥೆಗಳು ರಾಜಕೀಯ ಪಕ್ಷಗಳು ನಡೆಸುವ ಅವರ ಸಂವಿಧಾನಾತ್ಮಕ ಹಾಗೂ ಪ್ರಜಾಸತ್ತಾತ್ಮಕ ಮತ್ತು ಶಾಂತ ರೀತಿಯ ಪ್ರತಿಭಟನಾ ಹಕ್ಕಿನ ಮೇಲಿನ ನಿಶೇದಾಜ್ಞೆಯನ್ನು ಈ ಕೂಡಲೇ ವಾಪಾಸು ಪಡೆದು ಪ್ರತಿಭಟನಾ ಹಕ್ಕನ್ನು ಎತ್ತಿ ಹಿಡಿಯಲು ಕ್ರಮವಹಿಸಬೇಕೆಂದು ರಾಷ್ಟ್ರಪತಿಗಳಲ್ಲಿ ವಿನಂತಿಸುತ್ತೇವೆ.
ವಂದನೆಗಳು, ಯಮುನಾ ಗಾಂವ್ಕರ್
ಸಿಐಟಿಯು ರಾಜ್ಯ ಕಾರ್ಯದರ್ಶಿ

ಡಿ.22ರಂದುಆಯ್.ಎನ್.ಎಸ್.
ವಿಕ್ರಮಾದಿತ್ಯ ವೀಕ್ಷಣೆಗೆ ಅವಕಾಶ
ಬಹುವೈಶಿಷ್ಟ್ಯ,ಅಸಾಧಾರಣ ಸಾಮಥ್ರ್ಯದ ಆಯ್.ಎನ್.ಎಸ್.ವಿಕ್ರಮಾದಿತ್ಯ ಡಿ.22 ರಂದು ಕಾರವಾರದ ಅರಗಾ ನೌಕಾನೆಲೆಯಲ್ಲಿ ಸಾರ್ವಜನಿಕ ವೀಕ್ಷಣೆಗೆ ದೊರೆಯಲಿದೆ.
ರಷ್ಯಾಮೂಲದ ವಾಯುನೌಕೆ ಕೊಂಡೊಯ್ಯುವ ಬೃಹತ್ ಹಡಗು ಇದಾಗಿದ್ದು ನೌಕಾನೆಲೆಯ ವೀಕ್ಲಿ ಸೆಲಿಬ್ರೇಷನ್ 2019 ರ ಅಂಗವಾಗಿ ಈ ವಾಯುವಾಹಕ ಯುದ್ಧನೌಕೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

Recommended For You

About the Author: Kanneshwar Naik

Leave a Reply

Your email address will not be published. Required fields are marked *