ಚುರುಕಾದ ಪೊಲೀಸರು: ಮಿಂಚಿನ ಕಾರ್ಯಾಚರಣೆಗೆ ಸಿಕ್ಕು ಕಂಗಾಲಾದ ದಂದೆಕೋರರು

ಸಿದ್ಧಾಪುರ ತಾಲೂಕು,ಶಿರಸಿಕ್ಷೇತ್ರ ಉತ್ತರಕನ್ನಡ ಜಿಲ್ಲೆಯಾದ್ಯಂತ ಚುರುಕಾದ ಪೊಲೀಸರು ಅಕ್ರಮ ವ್ಯವಹಾರಿಗಳಿಗೆ ಸಿಂಹಸ್ವಪ್ನರಾದರೆ, ಶಿರಸಿ ಉಪವಿಭಾಗದಲ್ಲಿ ಪೊಲೀಸರ ಕಾರ್ಯಾಚರಣೆಯಿಂದ ಅಕ್ರಮ ವ್ಯವಹಾರಿಗಳು ನಡುಗುವಂತಾಗಿದೆ.
ಜಿಲ್ಲೆಯಲ್ಲಿ ಗಾಂಜಾ-ಅಫೀಮು ಮಾರಾಟಗಾರರ ಜಾಲದ ಬಗ್ಗೆ ಮೇಲಿಂದ ಮೇಲೆ ಸುದ್ದಿಯಾಗುತ್ತಿರುವಂತೆ ಶಿರಸಿಯಲ್ಲಿ ಉಪಪೊಲೀಸ್ ವರಿಷ್ಠ ಗೋಪಾಲಕೃಷ್ಣ ನಾಯಕ ಅಕ್ರಮವ್ಯವಹಾರಿಗಳನ್ನು ಮಟ್ಟಹಾಕುವಕಾರ್ಯಾಚರಣೆ ಕೈಗೊಂಡಿದ್ದಾರೆ.
ಶಿರಸಿಯಲ್ಲಿರುವ ಗಾಂಜಾ-ಅಫೀಮು ಮಾರಾಟಗಾರರು,ಶಂಕಿತರ ಪರೇಡ್ ನಡೆಸಿರುವ ಅವರು ಶಿರಸಿ ಉಪವಿಭಾಗದಲ್ಲಿ ಈ ವ್ಯವಹಾರ ಮತ್ತೆ ತಲೆ ಎತ್ತದಂತೆ ಕಡಕ್ ಎಚ್ಚರಿಕೆ ನೀಡಿದ್ದಾರೆ.
ಶಿರಸಿ ಸಿದ್ಧಾಪುರದಲ್ಲಿ ಸಕಲ ವ್ಯವಹಾರ,ಉದ್ದಿಮೆಗಳ ಮುಖವಾಡದ ಕೆಲವು ಕುಖ್ಯಾತ ಓ.ಸಿ. ಬುಕ್ಕಿಗಳು, ಇಸ್ಪೀಟ್ ಆಡಿಸುವ ಉದ್ಯಮಿಗಳು ಅಮಾಯಕರು, ಅಸಹಾಯಕರನ್ನು ಬಳಸಿ ಕಾನೂನು ಬಾಹೀರ ವ್ಯವಹಾರ ನಡೆಸುತಿದ್ದಾರೆ. ಇಂಥವರ ಕೈ ಕೆಳಗೆ ಕೆಲಸಮಾಡುವ ಅನೇಕರನ್ನು ತಿಂಗಳಿನಿಂದೀಚೆಗೆ ಬಂಧಿಸಿ, ಶಿಸ್ತುಕ್ರಮ ಜರುಗಿಸಿರುವ ಪೊಲೀಸರು ಅವರಿಂದ ನಗದು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಮದ್ಯದ ಅನೇಕ ಪ್ರಕರಣಗಳೂ ಶಿರಸಿ-ಸಿದ್ಧಾಪುರಗಳಲ್ಲಿ ಪತ್ತೆಯಾಗಿವೆ. ಡಿಸೆಂಬರ್, ಜನೇವರಿ ತಿಂಗಳಲ್ಲಿ ಶಿರಸಿ ಉಪವಿಭಾಗದಲ್ಲಿ ಅಕ್ರಮಮದ್ಯ, ಓ.ಸಿ., ಇಸ್ಪೀಟ್ ಗಳ ನೂರಾರು ಪ್ರಕರಣಗಳಲ್ಲಿ ಸಿದ್ಧಾಪುರದ್ದೇ ಸಿಂಹಪಾಲಾಗಿರುವುದು ವಿಶೇಶ.
ಇಲ್ಲಿಯ ಶಾಸಕರು, ಸಂಸದರ ಆಪ್ತ ಮುಖಂಡರು, ಉದ್ಯಮಿಗಳೇ ಇಂಥ ಕಾನೂನುಬಾಹೀರ ಚಟುವಟಿಕೆಗಳಲ್ಲಿರುವ ಬಗ್ಗೆ ಆರೋಪ ವ್ಯಕ್ತವಾಗಿತ್ತು. ಸ್ಥಳಿಯರ ಆಕ್ಷೇಪ, ಪಕ್ಷಗಳು, ಮುಖಂಡರ ವಿರೋಧದಿಂದ ಚುರುಕಾದ ಪೊಲೀಸರು ಶಿರಸಿ ಉಪವಿಭಾಗದಲ್ಲಿ ನೂರಾರು ಪ್ರಕರಣಗಳಲ್ಲಿ ಹಲವರನ್ನು ಬಂಧಿಸಿದ್ದಾರೆ.
ಬಂಧಿತ ಅನೇಕರು ಅಮಾಯಕರಾಗಿದ್ದರೂ ಅವರು ಉದ್ಯಮಿಗಳ ಮುಖವಾಡದ ಕೆಲವು ಅಕ್ರಮ ವ್ಯವಹಾರಿಗಳ ಕೈಕೆಳಗೆ ಕೆಲಸಮಾಡುವ ಜನರು ಎಂಬುದು ಸಾಬೀತಾಗಿದೆ. ಅಕ್ರಮವ್ಯಹಾರಗಳನ್ನು ಪೋಶಿಸಿ,ಉದ್ಯಮಿಗಳ ಮುಖವಾಡದಲ್ಲಿ ಮೆರೆಯುವ ಕೆಲವರನ್ನು ದಾಖಲೆಗಳೊಂದಿಗೆ ಬಂಧಿಸಿದರೆ ಸಿದ್ಧಾಪುರ, ಶಿರಸಿಕ್ಷೇತ್ರದ ಶಾಂತಿ-ಸುವ್ಯವಸ್ಥೆ, ಸ್ವಚ್ಛಂದ ಜನಜೀವನಕ್ಕೆ ಅನುಕೂಲವಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.ಉತ್ತರ ಕನ್ನಡದ ಪೊಲೀಸ್ ವರಿಷ್ಠ ಶಿವಪ್ರಸಾದ್‍ದೇವರಾಜ್ ಈ ಸವಾಲನ್ನು ಎದುರಿಸುವ ಬಗ್ಗೆ ಯಾವ ಅನುಮಾನಗಳೂ ಇಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *