ಶನಿವಾರ ರಾ.ಸ.ನೌ.ಸಂಘದ ಸರ್ಕಾರಿ ನೌಕರರ ಸಾಂಸ್ಕೃತಿಕ ಸಂಜೆ -2020

ಸಿದ್ಧಾಪುರ ತಾಲೂಕಿನ ಸರ್ಕಾರಿ ನೌಕರರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಸರ್ಕಾರಿ ನೌಕರರ ಸಾಂಸ್ಕೃತಿಕ ಸಂಜೆ ಮೊಟ್ಟ ಮೊದಲ ಬಾರಿ ಇಲ್ಲಿ ನಡೆಯುತ್ತಿದೆ. ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸೇರುವ ಈ ಕಾರ್ಯಕ್ರಮ ಮಾ.14ರ ಶನಿವಾರ ಸಂಜೆ ನಡೆಯಲಿದೆ.
ಈ ಬಗ್ಗೆ ಸರ್ಕಾರಿ ನೌಕರರ ಭವನದಲ್ಲಿ ಮಾಹಿತಿ ನೀಡಿದ ತಾಲೂಕಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸಾರ್ವಜನಿಕರನ್ನು ಮಾಧ್ಯಮಗಳ ಮೂಲಕ ಆಹ್ವಾನಿಸಿದರು.
ಅಂದು ನಡೆಯಲಿರುವ ಕಾರ್ಯಕ್ರಮವನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಉದ್ಘಾಟಿಸಲಿದ್ದಾರೆ. ಇವರ ಆಹ್ವಾನದ ಅಂಗವಾಗಿ ನಗರದಲ್ಲಿ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದ ಸ.ನೌ. ಸಂಘದ ತಾಲೂಕಾಧ್ಯಕ್ಷ ರಾಜೇಶ್ ನಾಯ್ಕ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ನಡುವಿನ ವೇತನ ತಾರತಮ್ಯ ಮತ್ತು ಎನ್.ಪಿ.ಎಸ್. ಯೋಜನೆ ಕೈಬಿಟ್ಟು ಎಲ್ಲಾ ನೌಕರರಿಗೆ ಹಳೆ ಪಿಂಚಣಿ ಯೋಜನೆ ಅನ್ವಯಿಸುವಂತೆ ಕೋರಿ ರಾಜ್ಯಾಧ್ಯಕ್ಷರಿಗೆ ಈ ಕಾರ್ಯಕ್ರಮದಲ್ಲೇ ಮನವಿ ಮಾಡುತ್ತೇವೆ ಎಂದರು.
ಸಭಾ ಕಾರ್ಯಕ್ರಮದ ನಂತರ ಸರ್ಕಾರಿ ನೌಕರರು ಅವರ ಕುಟುಂಬದ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದ್ದು ಇದರ ಮೊದಲು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಸ್.ಎಸ್. ಎಲ್.ಸಿ. ಯಲ್ಲಿ 95% ಮತ್ತು ಪಿ.ಯು.ಸಿ.ಯಲ್ಲಿ 90% ಕ್ಕಿಂತ ಹೆಚ್ಚು ಅಂಕಗಳಿಸಿದ ಸರ್ಕಾರಿ ನೌಕರರ ಮಕ್ಕಳನ್ನು ಅಭಿನಂದಿಸಿ,ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಾ.16 ರ ಸಂಜೆ ಹಕ್ಕಿಕತೆ
ಮೈಸೂರು ರಂಗಾಯಣದ ಹಕ್ಕಿಕತೆ ನಾಟಕ ಪ್ರದರ್ಶನ ಇಲ್ಲಿಯ ಶಂಕರಮಠದಲ್ಲಿ ಮಾ.16 ಸೋಮವಾರ ಸಂಜೆ 7 ಕ್ಕೆ ನಡೆಯಲಿದೆ.ಇಲ್ಲಿಯ ಸಂಸ್ಕøತಿ ಸಂಪದ ಮತ್ತು ಹಿತ್ಲಕೈ ಒಡ್ಡೋಲಗ ಸ್ಥಾನಿಕ ಸಹಕಾರದಲ್ಲಿ ನಡೆಯುವ ಈ ನಾಟಕ ನಾ.ಡಿಸೋಜಾ ರ ಹಕ್ಕಿಗೊಂದು ಗೂಡುಕೊಡಿ ಕತೆ ಆಧರಿಸಿದೆ. ಈ ನಾಟಕ ಪ್ರದರ್ಶನಕ್ಕೆ ನಿಗದಿತ ಸಮಯಕ್ಕಿಂತ 10 ನಿಮಿಷ ಮೊದಲು ಆಗಮಿಸಲು ಸಂಘಟಕರು ಪ್ರೇಕ್ಷಕರಿಗೆ ವಿನಂತಿಸಿದ್ದಾರೆ.

ಪ್ರದೇಶ ಕಾಂಗ್ರೆಸ್ ಸಮೀತಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ನೇಮಕ
ಬೆಂಗಳೂರು,ಮಾ.11- ನಿರೀಕ್ಷೆಯಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೀತಿ ಅಧ್ಯಕ್ಷರಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ ನೇಮಕವಾಗಿದ್ದಾರೆ. ಎ.ಆಯ್.ಸಿ.ಸಿ. ಪರವಾಗಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ನೇಮಕದ ಆದೇಶ ಬಿಡುಗಡೆಮಾಡಿದ್ದು,ಕಾರ್ಯಾಧ್ಯಕ್ಷರನ್ನಾಗಿ ಈಶ್ವರ್ ಖಂಡ್ರೆ ಮತ್ತು ಸತೀಶ್ ಜಾರಕಿಹೊಳೆ ಹಾಗೂ ಸಲೀಂ ಅಹಮ್ಮದ್ ರನ್ನು ನೇಮಿಸಲಾಗಿದೆ.
ಶಾಸಕಾಂಗ ಪಕ್ಷದ ನಾಯಕ ಮತ್ತು ವಿರೋಧ ಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದುವರಿದಿದ್ದಾರೆ. ಎಂ ನಾರಾಯಣಸ್ವಾಮಿ ವಿಧಾನಪರಿಷತ್ ನಾಯಕರಾಗಿದ್ದು ಅಜಯ್‍ಸಿಂಗ್ ರನ್ನು ವಿಧಾನಸಭಾ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಆಯ್ಕೆಯ ಮೂಲಕ ರಾಜ್ಯದ ಕಾಂಗ್ರೆಸ್‍ನಲ್ಲಿ ನೆನಗುದಿಗೆ ಬಿದ್ದಿದ್ದ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ಮುಗಿದಂತಾಗಿದೆ.

ಕರ್ನಾಟಕ ರಾಷ್ಟ್ರ ಸಮೀತಿ ರವಿಕೃಷ್ಣ ರೆಡ್ಡಿಯವರೊಂದಿಗೆ
ಮೂಖಾಮುಖಿ- ಜನ ಇನ್ನೂ ಸಮಾಜಮುಖಿಯಾಗಿ ಯೋಚಿಸುತ್ತಿಲ್ಲ,
ಗೆಲ್ಲುತ್ತೇವೆ ಒಂದುದಿನ ಗೆಲ್ಲಲೇಬೇಕು ಒಳ್ಳೆತನ
ಕರ್ನಾಟಕ ರಾಷ್ಟ್ರ ಸಮೀತಿಯ(ಪಕ್ಷ) ರವಿಕೃಷ್ಣ ರೆಡ್ಡಿ ಕನಸುಗಾರ, 2008 ರಲ್ಲಿ ವಿದೇಶದಿಂದ ಭಾರತಕ್ಕೆ ಬಂದು ಸಮಾಜಮುಖಿಯಾದ ವಾತಾವರಣಕ್ಕೆ ಅಂಥ ಮನೋಭಾವದ ಮಾಧ್ಯಮ,ಪಕ್ಷ, ಆಡಳಿತ, ರಾಜ್ಯ ಬೇಕು ಎಂದು ಕನಸಿದವರು. ಅವರು ಹೊರತರುತ್ತಿದ್ದ ವಿಕ್ರಾಂತ ಕರ್ನಾಟಕ ಕನ್ನಡ ಸಾಪ್ತಾಹಿಕ ಲೋಕದ ವಿಶಿಷ್ಟ ಪ್ರಯೋಗ. ಈ ವಿಕ್ರಾಂತ ಕರ್ನಾಟಕ ಮುಂದುವರಿಸಲಾಗದ ಬಿಕ್ಕಟ್ಟಿಗೆ ಸಿಲುಕಿದ ರವಿಕೃಷ್ಣ ರೆಡ್ಡಿ ರಾಜಕೀಯದಿಂದ ಸಮಾಜಪರಿವರ್ತನೆಯ ಕನಸು ಕಂಡವರು.
ಸಮಾಜಪರಿವರ್ತನಾ ಸಂಸ್ಥೆಯ ಎಸ್.ಆರ್. ಹಿರೇಮಠರೊಂದಿಗೆ ಸಮಸಮಾಜ, ಸಮಾಜಮುಖಿ ಚಿಂತನೆಯ ಆಶಾವಾದದೊಂದಿಗೆ ಕರ್ನಾಟಕ ರಾಷ್ಟ್ರ ಸಮೀತಿ ಕಟ್ಟಿದ್ದಾರೆ. ಕರ್ನಾಟಕ ರಾಷ್ಟ್ರ ಸಮೀತಿ ಹಣ-ಹೆಂಡ,ಮನಿ.ಮಸಲ್‍ಪವರ್ ಗಳನ್ನು ಮೀರಿದ ಸುಧಾರಣಾವಾದಿ ರಾಜಕೀಯದ ಪ್ರಯೋಗ.
ಕರ್ನಾಟಕ ರಾಷ್ಟ್ರ ಸಮೀತಿ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಕಳೆದ ವಾರ ಸಮಾಜಮುಖಿ ಗೆ ಮುಖಾಮುಖಿಯಾದರು ಅವರೊಂದಿಗಿನ ಚುಟುಕು ಸಂದರ್ಶನ ಹೀಗಿದೆ- ಸಮಾಜಮುಖಿ- ಈ ಪ್ರಯೋಗ ಸಾಧ್ಯವೆ?
ರವಿಕೃಷ್ಣರೆಡ್ಡಿ- ನಮ್ಮ ಗುಣ,ಆಶಾವಾದ, ಅಪೇಕ್ಷೆ ವರವೂ ಆಗಬಹುದು, ಶಾಪವೂ ಆಗಬಹುದು. ರಾಜಕೀಯ, ರಾಜಕೀಯ ಬದುಕು ತೀರಾ ಕೆಟ್ಟ ಸಂದರ್ಭದಲ್ಲಿ ನಾವು ಮಾಡುತ್ತಿರುವ ಪ್ರಯೋಗ ಅಪ್ರಾಯೋಗಿಕ ಎನಿಸಬಹುದು. ನಿರಾಶಾವಾದಿಗಳು, ಸಿನಿಕರಿಗೆ ಇದು ಕೆಟ್ಟ ಕಾಲ ಇದನ್ನು ಯಾರೂ ಸರಿಪಡಿಸಲು ಸಾಧ್ಯವಿಲ್ಲ ಎನ್ನುವ ಹತಾಸೆ ಇರಬಹುದು. ಆದರೆ ಸಮಾಜಮುಖಿಯಾದ ಸಮಾಜ,ರಾಜಕೀಯ, ಆಡಳಿತದ ಹಿನ್ನೆಲೆಯಲ್ಲಿ ನಮ್ಮ ಪ್ರಯತ್ನಸಾಗಿದೆ. ಕುರುಡರ ರಾಜ್ಯದಲ್ಲಿ ಕಣ್ಣಿದ್ದವನೇ ಪಾಪಿ,ನಮ್ಮ ಸಂಕಲ್ಫ, ಬದ್ಧತೆ ಒಳ್ಳೆಯದರತ್ತ, ಗೆಲ್ಲುತ್ತೇವೆ ಒಂದು ದಿನ ಗೆಲ್ಲಲೇಬೇಕು ಒಳ್ಳೆತನ.
ಸಮಾಜಮುಖಿ-ದೇಶದಲ್ಲಿ ಆದಾಯ, ತೆರಿಗೆ ಸಂಗ್ರಹ ವೃದ್ಧಿಯಾಗುತ್ತಿದೆ. ಆದರೆ ಸಾಮಾಜಿಕ ವ್ಯವಸ್ಥೆ,ಜಿ.ಡಿ.ಪಿ. ಮೇಲೇಳುತ್ತಿಲ್ಲ ಯಾಕೆ?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *