

ಕರೋನಾ ವಿಶ್ವಕ್ಕೇ ಬಂದಿರುವ ಆಪತ್ತಾಗಿದ್ದು ಕರೋನಾ ಹೆಸರಲ್ಲಿ ಕೋಮುಗಲಭೆ,ವಿಭಜನೆ,ಕೋಮುಪ್ರಚೋದನೆ ಮಾಡಬಾರದು ಎಂದು ಬಿ.ಜೆ.ಪಿ.ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸ್ವ ಪಕ್ಷದ ನಾಯಕರನ್ನು ಎಚ್ಚರಿಸಿದ್ದಾರೆ.

ಗುರುವಾರ ಬಿ.ಜೆ.ಪಿ. ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಕರೋನಾ ಸಂಕಟ ಎದುರಾಗಿದೆ. ಈ ವಿಚಾರದಲ್ಲಿ ಕೆಲವರು ಕೋಮುಪ್ರಚೋದನೆ ಮಾಡುವ ವಿಷಯ ಗಮನಕ್ಕೆ ಬಂದಿದೆ. ಇದು ಸದುಭಿರುಚಿಯಲ್ಲ, ರಾಷ್ಟ್ರೀಯ ಆಪತ್ತಿನ ಸಮಯದಲ್ಲಿ ಕೋಮುಪ್ರಚೋದನೆ ಮಾಡುವುದನ್ನು ಯಾರೂ ಸಹಿಸಲ್ಲ. ಆಡಳಿತಪಕ್ದವರೇ ಇರಲಿ, ಯಾರೇ ಇರಲಿ ಕರೋನಾ ವಿಷಯದಲ್ಲಿ ವಿಭಜನೆ,ಕೋಮುಪ್ರಚೋದನೆ ಮಾಡಿದರೆ ಸಹಿಸುವುದಿಲ್ಲ ಎಂದರು.
ಬಿ.ಜೆ.ಪಿ. ಯ ಕಾರ್ಯಕರ್ತರು ಬಹುತೇಕ ಕಡೆ ಅಲ್ಫಸಂಖ್ಯಾತ ಸಮೂದಾಯವನ್ನು ಉದ್ದೇಶಿಸಿ ಮರ್ಕಜ್ ಪಿತೂರಿ, ಕರೋನಾ ಜಿಹಾದ್ ಎಂದು ಸಾಮಾಜಿಕ ಜಾಲತಾಣದಲ್ಲಿ ಕೋಮುಪ್ರಚೋದನೆ ಮಾಡಿದ್ದರು.
ಇನ್ಫೆಕ್ಟರ್ ಗಳನ್ನು ಕತ್ತಲೆಕೋಣೆಗೆ ತಳ್ಳಿದ ರವಿ
ಸಾಹಸಿ ಎಸ್.ಪಿ. ರವಿ ಚೆನ್ನಣ್ಣನವರ್ ಮಾರುವೇಷದ ಕಾರ್ಯಚರಣೆಗೆ ಸಿಕ್ಕು ಅಮನತ್ತಾದ ಎರಡುಜನ ಇನ್ಫೆಕ್ಟರ್ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಸರಕು-ಸಾಗಾಣಿಕೆ ವಾಹನಗಳಿಂದ ಅಧಿಕಾರಿಗಳು ಲಂಚ ಪಡೆಯುತಿದ್ದಾರೆ ಎನ್ನುವ ಆರೋಪದ ಮೇಲೆ ಬೆಂಗಳೂರು ಗ್ರಾಮಾಂತರ ಎಸ್.ಪಿ. ರವಿ ಚೆನ್ನಣ್ಣನವರ್ ಕಳೆದ ಗುರುವಾರ ಲಾರಿ ಚಾಲಕರಾಗಿ ಮಾರುವೇಷ ಹಾಕಿಕೊಂಡು ಅತ್ತಿಬೆಲೆ ಚೆಕ್ ಪೋಸ್ಟ್ ಗೆ ಬಂದರು. ನಿರೀಕ್ಷೆಯಂತೆ ಹೊಸೂರು ಅತ್ತಿಬೆಲೆ ತಪಾಸಣಾ ನಾಕೆಯಲ್ಲಿದ್ದ ಕರಿಯಪ್ಪ ಮತ್ತು ಜಯಣ್ಣ ಎನ್ನುವ ಇಬ್ಬರು ಇನ್ಪೆಕ್ಟರ್ ಗಳು ಲಂಚಕ್ಕಾಗಿ ಬೇಡಿಕೆ ಇಟ್ಟರು…………………read ಇನ್ಫೆಕ್ಟರ್ ಗಳನ್ನು ಕತ್ತಲೆಕೋಣೆಗೆ ತಳ್ಳಿದ ರವಿ




_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






