ನಿಜಜೀವನದ ಅಮೀರ್ ಆಗುವುದು ಸುಲಭವೆ?

ಪ್ರೀತಿ-ಪ್ರೇಮದ ಘಮ ನಮ್ಮ ಮೂಗಿಗೂ ತಾಕತೊಡಗಿದಾಗಲೇ ಬೆಳ್ಳಿತೆರೆಯಲ್ಲಿ ಹೊಸ ಜೋಡಿಗಳು ಧೂಳೆಬ್ಬಿಸತೊಡಗಿದ್ದರು!.
ಅಂಥ ಜೋಡಿಗಳಲ್ಲಿ ನಾಗಾರ್ಜುನ,ಅಮಲಾ,ಅಂಬಿಕಾ. ಅರ್ಜುನಸರ್ಜಾ ಆಶಾರಾಣಿ, ಶಿವರಾಜ್‍ಕುಮಾರ ಸುಧಾರಾಣಿ, ಕಾಜಲ್-ಶಾರುಖ್ ಖಾನ್, ಅಮೀರ್ಖಾನ್-ಮೊನಿಷಾ, ಮಾಧುರಿ ದೀಕ್ಷಿತ್-ಅನಿಲಕಪೂರ್, ಮಾಲಾಶ್ರೀ-ಸುನಿಲ್, ಚಿರಂಜೀವಿ-ದಿವ್ಯಾಭಾ ರತಿ, ಇತ್ಯಾದಿ….
ಇದೇ ಕಾಲದಲ್ಲಿ ಜೋಡಿ ಹೀರೋಗಳ ಸಿನೆಮಾ ಯುಗವೂ ಪ್ರಾರಂಭವಾಗಿತ್ತು. ಅನಿಲ್ ಕಪೂರ್,ನಾನಾ ಪಾಟೇಕರ್, ರಜನಿಕಾಂತ್-ಅರವಿಂದಸ್ವಾಮಿ, ಶಿವರಾಜ್ ಕುಮಾರ-ರಮೇಶ್,ಉಪೇಂದ್ರ-ಶಿವರಾಜ್ ಕುಮಾರ, ಅಂಬರೀಷ್-ರಾಜ್ ಕುಮಾರ, ಕುಮಾರ ಗೋವಿಂದ್-ರಮೇಶ ಮುಂತಾದವರು.
ಇಷ್ಟೆಲ್ಲಾ ಹೀರೋ,ಹಿರೋಯಿನ್ ಗಳಲ್ಲಿ ಈಗಲೂ ಫಾರ್ಮ್ ನಲ್ಲಿರುವ ನಾಯಕ ನಟರು ಶಿವರಾಜ್ ಕುಮಾರ, ಶಾರುಖ್ ಖಾನ್, ನಾಗಾರ್ಜುನ, ಅಮೀರ್ ಖಾನ್‍ರಂಥ ಕೆಲವರು ಮಾತ್ರ,

ಇವರನ್ನು ಬಿಟ್ಟು ಬೇರೆಯವರು ನೆನಪಾಗದಿರಲು ಕಾರಣ ಅವರು ಬೆಳ್ಳಿಪರದೆಯಲ್ಲಿ,ಸಾಮಾಜಿಕ ಜೀವನದಲ್ಲಿ ಮಹತ್ವ ಕಳೆದುಕೊಂಡಿದ್ದಾರೆ.
ಇಂಥ ಪರದೆ ಹೀರೋಗಳಲ್ಲಿ ದಕ್ಷಿಣದಲ್ಲೊಬ್ಬ ಕಮಲ್‍ಹಾಸನ್ ಇದ್ದಾರಲ್ಲ ಅವರಂಥ ಪ್ರಯೋಗಶೀಲ ನಟ ಭಾರತದಲ್ಲಿಲ್ಲ, ಈಗವರು ಸಿನೆಮಾಕ್ಕಿಂತ ರಾಜಕೀಯದತ್ತ ದೃಷ್ಟಿ ನೆಟ್ಟಿದ್ದಾರೆ. ಇವರೊಂದಿಗೆ ಉಲ್ಲೇಖಿಸಲೇಬೇಕಾದ ಭಾರತ ಚಿತ್ರರಂಗದ ಜೀವಂತ ದಂತಕತೆ ಪ್ರಕಾಶ ರೈ. ಪ್ರಕಾಶ ರಾಜ್ ಹೆಸರಿನಿಂದ ಪ್ರಸಿದ್ಧರಾಗಿ ಈಗಲೂ ವೃತ್ತಿ-ಪ್ರವೃತ್ತಿಗಳ ಮೂಲಕ ಸಮಾಜಮುಖಿಯಾಗಿರುವ ರಾಕ್ಷಸ ನಟ.
ಮೊನ್ನೆ ಲಾಕ್‍ಡೌನ್ ಘೋಷಣೆಯಾಗುತ್ತಲೇ ತನ್ನ ನೌಕರರಿಗೆ ಎರಡು ತಿಂಗಳ ಮುಂಗಡ ವೇತನ ಕೊಟ್ಟು ರಜೆ ನೀಡಿದಾತ, ಪ್ರತಿದಿನ 250 ಜನರಿಗೆ ಊಟಹಾಕುತ್ತಿರುವ ಅನ್ನದಾತ ನಮ್ಮ ಪ್ರಕಾಶ ರಾಜ್.

ಇವರೆಲ್ಲರ ಪ್ರಭಾವಳಿಯಲ್ಲಿ ನಲಿದ ನಮಗೆ ಇತ್ತೀಚಿನ ದಶಕಗಳ ಹೀರೋಗಳಲ್ಲಿ ಅಮೀರ್ ಖಾನ್ ಕಾಡುತ್ತಾರೆ.
ಮೊದಮೊದಲು ಅಮೀರ್ ಬಾಲನಟನಾಗಿ,ಪ್ರೇಮಚಿತ್ರಗಳಿಂದ ಪ್ರಾರಂಭವಾಗಿ ಪರದೇಶಿ, ಸರ್ಫರೋಶ್, ತ್ರೀ ಈಡಿಯಟ್ಸ್,ಲಗಾನ್ ಅವರ ಚಿತ್ರಗಳ ಖದರ್ರೆ ಬೇರೆ. ರಂಗೀಲಾ,ತಾರೆ ಜಮೀನ್ ಪರ್, ಮಂಗಲ್ಪಾಂಡೆ, ಗಜನಿ ವಿಭಿನ್ನ ಚಿತ್ರ, ಸವಾಲಿನ ಪಾತ್ರಗಳನ್ನು ಆಯ್ದುಕೊಳ್ಳುವ ಅಮೀರ್ ಚಿತ್ರರಂಗದ ನಂಟಿನ ಮೂಲಕವೇ ಬೆಳ್ಳಿಪದರೆಗೆ ಬಂದು ಕಯಾಮತ್ ಸೆ ಕಯಾಮತ್ ತಕ್, ದಿಲ್,ಮನ್, ಪ್ಯಾರ್ ಹ್ಐ ಕಿ ಮಾನತಾ ನಹೀ, ಜೋ ಜೀತಾ ವಹೀ ಸಿಕಂದರ್ ಚಿತ್ರಗಳ ಮೂಲಕ ಬಾಲಿವುಡ್ ನಲ್ಲಿ ಭದ್ರನೆಲೆ ಕಂಡುಕೊಂಡವರು.
4 ದಶಕಗಳ ಚಿತ್ರರಂಗದ ಸವಾಲು, ಸಾಧನೆಗಳಿಗಾಗಿ ಅಮೀರ್ ಪಡೆಯದ ಪ್ರಶಸ್ತಿಗಳೇ ವಿರಳ.
ಪದ್ಮಶ್ರೀ, ಪದ್ಮಭೂಷಣ ಪುರಸ್ಕಾರ ಪಡೆದಿರುವ ಅಮೀರ್ ಖಾನ್ ಚಿತ್ರರಂಗದಲ್ಲಿ ನಟ,ನಿರ್ದೇಶಕ,ನಿರ್ಮಾಪಕ,ಕಥೆಗಾರ, ಹಿನ್ನೆಲೆಗಾಯಕ ಹೀಗೆ ಅವರ ವೈವಿಧ್ಯತೆ ಅವರ ಬಹುಮುಖಿತ್ವಕ್ಕೆ ಸಾಕ್ಷಿ.
ಇಂಥ ಅಸಾಧಾರಣ ಯಶಸ್ವಿ ನಟ,ನಿರ್ಧೇಶಕ, ನಿರ್ಮಾಪಕ ಕಳೆದ ವಾರ ಮುಂಬೈನ ಸ್ಲಂ ಒಂದಕ್ಕೆ ಲಾರಿಯೊಂದರಲ್ಲಿ ಮೈದಾಹಿಟ್ಟಿನ ಚೀಲ ಕಳುಹಿಸಿ, ಬಹಿರಂಗ ಘೋಷಣೆ ಮಾಡಿಸಿದರು. ‘ಅಮೀರ್ ಖಾನ್ ನಿಮಗೆ ತಲಾ ಒಂದು ಕೇ.ಜಿ.ಯ ಮೈದಾ ಹಿಟ್ಟು ಕಳುಹಿಸಿದ್ದಾರೆ. ಅಗತ್ಯವಿದ್ದವರು ಶಿಸ್ತಿನಿಂದ ತಲಾ ಒಂದು ಚೀಲ ಪಡೆಯಬೇಕು ಎಂದು ತಿಳಿಸಿದ್ದಾರೆ.ಅಗತ್ಯವಿದ್ದವರು ಸ್ವೀಕರಿಸಿ’
ಒಂದು ಕೇಜಿ ಮೈದಾಹಿಟ್ಟಿನ ಬಗ್ಗೆ ಉಪೇಕ್ಷೆ ಮಾಡಿದ ಕೆಲವರ ನಡುವೆ ಅನೇಕರು ಚೀಲ ಪಡೆದು ಮನೆಗೊಯ್ದು ಸುರಿದಾಗ ಆಶ್ಚರ್ಯ ಕಾದಿತ್ತು. ತಲಾ ಎರಡು ಸಾವಿರ ರೂಪಾಯಿಗಳ ಏಳೆಂಟು ನೋಟು ಎಣಿಸಿದ ಬಡವರು ಅಮೀರ್ ರಿಗೆ ಕೃತಜ್ಞತೆ ಹೇಳದೆ ಇರಲಿಲ್ಲ.
ಬದುಕು, ಚಿತ್ರ, ಚಿತ್ರರಂಗಗಳಲ್ಲಿ ಮಾಂತ್ರಿಕನಾಗಿ ಗೆದ್ದ ಅಮೀರ್ ಕರೋನಾ ಅವಧಿಯಲ್ಲಿ ಪ್ರಚಾರವಿಲ್ಲದೆ ತಮ್ಮ ಅಳಿಲುಸೇವೆ ಮಾಡಿ ಮಾದರಿಯಾಗಿದ್ದಾರೆ. ಚಿತ್ರರಂಗದಲ್ಲಿ ಉದಾರಿ, ಚಿತ್ರದಲ್ಲಿ ತ್ಯಾಗಿ, ಪ್ರಯೋಗಶೀಲ,ಕಠಿಣಪರಿಶ್ರಮಿ ಎಂದೆಲ್ಲಾ ಮಾದರಿ ಆಗಿದ್ದ ಅಮೀರ್ ನಿಜಜೀವನದಲ್ಲೂ ಹೀರೋ ಆಗುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಸರ್ವರ ಸುಖ-ಖುಷಿಯ ಪ್ರೇರಕ ಅಮೀರ್ ಖಾನ್ ಮುಸ್ಲಿಂ ಎನ್ನುವ ಕಾರಣಕ್ಕೆ ಅವರನ್ನು ಜನ ವಿರೋಧಿಸಿದರೆ ಅಂಥವರನ್ನು ಮೂರ್ಖರೆನ್ನದೆ ಮತ್ತೇನೆಂದು ಕರೆದು ಗೌರವಿಸಬೇಕು?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *