exclusive shocking story in samajamukhi.net only- ಕೋವಿಡ್ ಪರಿಣಾಮ- ಹೆಣ ತರಲು ಹೆಣಗಾಡುತ್ತಿರುವ ಜನ!

ಕರೋನಾ ಮಾಡಿದ ಪರಣಾಮ ವಿಪರೀತ, ಬದುಕಿದ್ದವರನ್ನು ಗೋಳಾಡಿಸುತ್ತಿರುವ ಕರೋನಾ ಸತ್ತವರಿಗೆ ಕಂಟಕವಾಗಿರುವ ವಿದ್ಯಮಾನ ಬಯಲಾಗಿದೆ.
ಕೋವಿಡ್ ದೇಶ,ರಾಜ್ಯ ಪ್ರವೇಶಿಸಿ ಎರಡು ತಿಂಗಳುಗಳಾಗಿವೆ ಆದರೆ ಆಳುವವರ ನಿರ್ಲಕ್ಷ,ಬೇಜಬಾಬ್ಧಾರಿಯಿಂದಾಗಿ ಕೋವಿಡ್ ಪರೀಕ್ಷೆಯ ಅನುಕೂಲಗಳಿಲ್ಲದೆ ಜನಸಾಮಾನ್ಯರು ಬವಣೆ ಪಡುವಂತಾಗಿದೆ.

 


ಉದಾಹರಣೆ -01- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ 12 ಜನರಿಗೆ ಕರೋನಾ ವಕ್ಕರಿಸಿ ಅವರಲ್ಲಿ 11 ಜನ ಗುಣಮುಖರಾಗಿರುವುದು ಹಳೆಯ ವಿದ್ಯಮಾನ. ಹೊಸ ಆತಂಕದ ವರ್ತಮಾನವೆಂದರೆ….

ಉತ್ತರ ಕನ್ನಡ ಸೇರಿದ ಮಲೆನಾಡು, ಕರಾವಳಿಯ ಒಟ್ಟೂ ನಾಲ್ಕೈದು ಜಿಲ್ಲೆಗಳಿಗೆ ಶಿವಮೊಗ್ಗದಲ್ಲಿರುವ ಕರೋನಾ ಲ್ಯಾಬ್ ಈ ಎಲ್ಲಾ ಜಿಲ್ಲೆಗಳ ರೋಗಿಗಳ ಕೋವಿಡ್ ಪತ್ತೆ ಕೆಲಸ ಮಾಡಬೇಕು. ಸರ್ಕಾರ ರಗಳೆಗಳ ಮಧ್ಯೆ ಒಂದೇ ಕರೋನಾ ಪರೀಕ್ಷಾ ಲ್ಯಾಬ್ ಮೂಲಕ ನಾಲ್ಕೈದು ಜಿಲ್ಲೆಗಳ ಜನರ ಕೋವಿಡ್ ಪರೀಕ್ಷೆ ನಡೆಸುತ್ತಿರುವುದರಿಂದ ಪ್ರತಿದಿನ ಬರುತ್ತಿರುವ ನೂರಾರು ಮಾದರಿಗಳಲ್ಲಿ ಮೂವತ್ತು ಮಾದರಿಗಳನ್ನು ಮಾತ್ರ ಆ ಲ್ಯಾಬ್ ಪರೀಕ್ಷಿಸಲು ಸಾಧ್ಯ. ಈ ದುರ್ವ್ಯವಸ್ಥೆಯಿಂದಾಗಿ ಕರೋನಾ ಬಾಧಿತರಿಗೆ ಕರೋನಾ ದೃಢ ಪಟ್ಟ ವರದಿ ಸಿಗಲು ನಾಲ್ಕೈದು ದಿನ ಕಳೆದು ಹೋಗುತ್ತದೆ. ಇಂಥ ಅನಿವಾರ್ಯತೆಯಿಂದಾಗಿ ಸಹಜವಾಗಿ ಸತ್ತ ಅಥವಾ ಕರೋನಾ ಬಾಧಿತರಲ್ಲದ ಸಾವುಗಳ ಶವ ಕೂಡಾ ಸಂಬಂಧಿಸಿದವರಿಗೆ ಸಿಗದ ಅವ್ಯವಸ್ಥೆ ಮಲೆನಾಡು-ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿದೆ.
ಉ.ಕ. ಜಿಲ್ಲೆಯ ಸಿದ್ಧಾಪುರ ಹೆಗ್ಗೇರಿಯ ಗಣಪತಿ ತಿಮ್ಮ ನಾಯ್ಕ ಎನ್ನುವ ವ್ಯಕ್ತಿಯೊಬ್ಬ ಕಳೆದ ಶನಿವಾರ ತೀವೃ ಅನಾರೋಗ್ಯಕ್ಕೀಡಾಗಿ ರವಿವಾರ ಮುಂಜಾನೆ ಮಣಿಪಾಲದಲ್ಲಿ ಮೃತರಾಗುತ್ತಾರೆ. ಈ ವ್ಯಕ್ತಿ ಸಾವನ್ನಪ್ಪಿದ್ದು ಲಿವರ್ ತೊಂದರೆಯಿಂದ ಎನ್ನುವುದು ಮೇಲ್ನೋಟದ ವರದಿ, ಹಳದಿರೋಗ ಅಥವಾ ಜಾಂಯಡೀಸ್ ನಿಂದ ಸಾವನ್ನಪ್ಪಿರಬಹುದಾದ ಈ ವ್ಯಕ್ತಿಯ ಶವವನ್ನು ಎರಡು ದಿವಸಗಳಾದರೂ ಸರ್ಕಾರ ಸಂಬಂಧಿಸಿದವರಿಗೆ ಹಸ್ತಾಂತರಿಸಿಲ್ಲ! ಯಾಕೆಂದರೆ ಕೋವಿಡ್ ಪರೀಕ್ಷೆ.
ಈ ವ್ಯಕ್ತಿ ಕೋವಿಡ್ ನಿಂದ ಸತ್ತಿಲ್ಲ ಎನ್ನುವುದನ್ನು ದೃಢೀಕರಿಸುವ ವರೆಗೆ ಅವರ ಶವವನ್ನು ವಾರಸುದಾರರಿಗೆ ನೀಡುವಂತಿಲ್ಲ, ಆದರೆ ಕರೋನಾ ಪರೀಕ್ಷೆಯ ವರದಿ ಅಷ್ಟುಬೇಗ ಬರುವುದಿಲ್ಲ. ಈ ಗಣಪತಿಯಂಥ ಕನಿಷ್ಟ 4-5 ಜನರ ಶವಗಳು ಕೋವಿಡ್ ಪರೀಕ್ಷೆಯಾಗದೆ ಮಂಗಳೂರು, ಕರಾವಳಿಯಲ್ಲಿ ಕೊಳೆಯುತ್ತಿವೆ!! ಎನ್ನುವ ಸತ್ಯ ಎಂಥವರನ್ನೂ ತಬ್ಬಿಬ್ಬು ಮಾಡುವಂಥದ್ದು.
ಆದರೆ ಏನು ಮಾಡುವುದು ಕೋವಿಡ್ ಪರೀಕ್ಷೆಯ ವಿನ: ಶವವನ್ನು ನೀಡುವಂತಿಲ್ಲ. ಜನಪ್ರತಿನಿಧಿಗಳು, ವೈದ್ಯರು, ಅಧಿಕಾರಿಗಳು ಹಾಗಿರಲಿ ಸರ್ಕಾರವೇ ಇಂಥ ನತದೃಷ್ಟರ ಶವಗಳ ಮುಂದೆ ಮಂಡಿಯೂರಿ ಕುಳಿತಿದೆ. ಆದರೂ ನಾವು ವಿಶ್ವಗುರುವಾಗುವ ಭ್ರಾಂತಿಯಲ್ಲದ್ದೇವೆ. ಜನ, ಆಡಳಿತ ಸರ್ಕಾರ ಇಷ್ಟು ಅಸಹಾಯಕವಾಗುವಂತೆ ಮಾಡಿರುವ ಕರೋನಾ ಆಳುವವರ ಸಾಮರ್ಥ್ಯ ,ಮುನ್ನೆಚ್ಚರಿಕೆಗಳಿಗೆ ಸವಾಲು ಒಡ್ಡಿದೆ. ಈ ಸಂದಿಗ್ಧತೆ ಅನಿವಾರ್ಯತೆ ಅರಿತವರ ಭಾವನೆಗಳನ್ನೇ ನಿಯಂತ್ರಿಸುವುದು ಸವಾಲಿನ ಸಮಯವಾಗಿರುವ ಈ ದುರಿತ ಕಾಲದಲ್ಲಿ ಈ ಸಕಲೆಂಟು ವ್ಯವಸ್ಥೆ, ಅವ್ಯವಸ್ಥೆಗಳ ಅರಿವಿರದ ಮುಗ್ಧ, ಬಡವರು, ಅಸಹಾಯಕರಿಗೆ ಸಾಂತ್ವನ ಹೇಳುವವರಾರು?
ಛೆ, ಆಳುವವರು ಇಷ್ಟು ಅಸಹಾಯಕರಾದ ದುಸ್ಥಿತಿಯನ್ನು ನಮ್ಮ ತಲೆಮಾರು ನೋಡಿಲ್ಲ, ಮುಂದೆ ನೋಡಲೂ ಬಾರದು. ದೇಶಪ್ರೇಮವೆಂದರೆ ಭಾಷಣ, ಪ್ರಚಾರ, ಅಬ್ಬರದ ರಾಜಕೀಯ ಭರಾಟೆಯಲ್ಲ ದೇಶ, ದೇಶವನ್ನು ಉಳಿಸಬಲ್ಲ ತಾಕತ್ತಿನ ಎಂಟೆದೆ. ಈ ದುರಂತ ಆಳುವವರ ಭಟ್ಟಂಗಿ ಮಾಧ್ಯಮ ಪಡೆ, ರಾಷ್ಟ್ರೀಯ ಸುಳ್ಳುಗಾರರ ಸಂಘಟನೆಗಳಿಗೆ ಅರ್ಥವಾದರೆ ಈ ದೇಶ ಕರೋನಾದ ಮೊದಲ ಹಂತವನ್ನು ಗೆದ್ದಂತೆ. ಬಾಧಿತರೆ ಕ್ಷಮಿಸಿ ಈ ದೇಶದ ಪಥವನ್ನು ಬದಲಿಸಿದ ಮತಗಳನ್ನು ಕೊಟ್ಟವರು ನೀವೆ.

ಉ.ಕ. ಭಟ್ಕಳ ಹೊರತು ಪಡಿಸಿ ನಗರ 7 ರಿಂದ 1 (3) ಗ್ರಾಮೀಣ 7 ರಿಂದ 7 ಅಗತ್ಯ ಸೇವೆ -ಶಿವರಾಮ್ ಹೆಬ್ಬಾರ್ ಪ್ರಕಟಣೆ
ಕರೋನಾ ಹಿನ್ನೆಲೆಯಲ್ಲಿ ಮೇ 17 ರ ವರೆಗೆ ಲಾಕ್‍ಡೌನ್ ವಿಸ್ತರಣೆಯಾಗಿರುವುದರಿಂದ ಅಲ್ಲಿವರೆಗೆ ಅಥವಾ ಮುಂದಿನ ಆದೇಶದ ವರೆಗೆ ಭಟ್ಕಳ ಹೊರತುಪಡಿಸಿ ಜಿಲ್ಲೆಯಾದ್ಯಂತ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಗರದಲ್ಲಿ ಅಗತ್ಯ ಸೇವೆ ಒದಗಿಸಬಹುದು, ಮದ್ಯದಂಗಡಿಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರ ವರೆಗೆ ಹಾಗೂ ಗ್ರಾಮೀಣ ಭಾಗಗಳಲ್ಲಿ ಈ ಸೇವೆಗಳನ್ನು ಬೆಳಿಗ್ಗೆ 7 ರಿಂದ ಸಂಜೆ 7 ರ ವರೆಗೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಶಿವರಾಮ್ ಹೆಬ್ಬಾರ್ ಪ್ರಕಟಿಸಿದರು.
ಕಾರವಾರದಲ್ಲಿ ಮಾಧ್ಯಮಪ್ರತಿನಿಧಿಗಳಿಗೆ ಈ ಮಾಹಿತಿ ನೀಡಿದ ಅವರು ಕರೋನಾ ಭಯ, ಲಾಕ್‍ಡೌನ್ ನಿಯಮಗಳಿಂದ ಮುಕ್ತವಾಗುವುದು ಕಷ್ಟ ಪರಿಸ್ಥಿತಿ ಜನರ ಅನುಕೂಲತೆ, ಎಲ್ಲಾ ಅಂಶಗಳನ್ನು ಪರಿಗಣಿಸಿ ಕೆಲವು ರಿಯಾಯತಿ, ವಿನಾಯಿತಿಗಳನ್ನು ನೀಡಿದ್ದೇವೆ ಅವಕ್ಕೂ ನಿಯಮ,ನಿಬಂಧನೆಗಳ ಕಡಿವಾಣ ಇದ್ದೇ ಇದೆ ಎಂದರು. ಅಗತ್ಯ, ಅನಿವಾರ್ಯವಾದವರಿಗೆ ಜಿಲ್ಲಾಡಳಿತ ವಿನಾಯಿತಿ ನೀಡಲಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸೇರಿದಂತೆ ಅನೇಕ ನಿಯಮ-ನಿಬಂಧನೆಗಳಿಗೊಳಪಟ್ಟು ಅವಕಾಶ, ಅನುಕೂಲಗಳನ್ನು ಪಡೆಯಬೇಕು ಎಂದು ವಿನಂತಿಸಿದರು.

ಮದ್ಯಮಾರಾಟದೊಂದಿಗೆ ಎಲ್ಲವೂ ಮುಕ್ತವಾಗಿಲ್ಲ, ಮದ್ಯ,ಪಡಿತರಕ್ಕಾಗಿ ಬಂದು ಹೊಡೆತ ತಿಂದರು!
ರಾಜ್ಯದಾದ್ಯಂತ ಮದ್ಯ ಮಾರಾಟಕ್ಕೆ ಮುಕ್ತ ಅವಕಾಶ ನೀಡಿದ್ದನ್ನೇ ಪರವಾನಗಿ ಎಂದು ಭಾವಿಸಿ ಫಜೀತಿ ಮಾಡಿಕೊಂಡ ವಿದ್ಯಮಾನ ರಾಜ್ಯದ ಕೆಲವೆಡೆ ನಡೆದಿದೆ.
ಮದ್ಯ ಖರೀದಿಗಾಗಿ ಸಾರ್ವಜನಿಕರು ಮುಗಿಬಿದ್ದು ಶಾಂತಿ-ಸುವ್ಯವಸ್ಥೆಗೆ ಅಡ್ಡಿಯಾಗುವಂತಾಗಿದ್ದು ಇಂದಿನ ಮಾದ್ಯಮದ ಪ್ರಮುಖ ಸುದ್ದಿ ಇದರೊಂದಿಗೆ ರೇಷನ್ ಗಾಗಿ ಜನರು ಮುಗಿಬಿದ್ದು ಪೊಲೀಸರಿಗೆ ಫಜೀತಿ ಉಂಟುಮಾಡಿರುವುದೂ ಕೆಲವೆಡೆ ಸುದ್ದಿಯಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

teachers elc results… ಶಿಕ್ಷಕರ ಸಂಘ: ಮತ್ತೆ ಗೆದ್ದ ಹಳೆ ತಂಡ

ಸಿದ್ದಾಪುರ, ಇಲ್ಲಿಯ ಶಿಕ್ಷಕರ (ಕ.ರಾ.ಪ್ರಾ.ಶಿ.ಸಂಘ ದ ಸಿದ್ಧಾಪುರ ತಾಲೂಕಾ ಶಾಖೆ) ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಸಂಘದ ನಿರ್ಧೇಶಕರಲ್ಲಿ ಹೆಚ್ಚಿನವರನ್ನು ಸೋಲಿಸಿ ಹಳೆ ತಂಡ...

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

Latest Posts

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ ಕುಡಿಯಾಗಿದ್ದ ರಮಾನಂದ ನಾಯಕ ಸಾಹಿತ್ಯ-ಸಾಂಸ್ಕೃತಿಕ ಮನಸ್ಸಿನ ತೂಕದ ವ್ಯಕ್ತಿಯಾಗಿದ್ದರು. ವಯೋಸಹಜ ಅನಾರೋಗ್ಯದಿಂದ ಇಂದು ಬೆಂಗಳೂರಿನಲ್ಲಿ ನಿಧನರಾದ ಅವರ ಶವ ಸಂಸ್ಕಾರ ಅವರ ಹುಟ್ಟೂರು ಹಿಚ್ಕಡದಲ್ಲಿ ಶುಕ್ರವಾರ ನಡೆಯಲಿದೆ. ಹಿರಿಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *