ಸಿದ್ಧಾಪುರದ ಮೊದಲ ಕರೋನಾ ಪ್ರಕರಣದ ಪ್ರವಾಸಕತೆ

ಇಂದು ಮತ್ತೆ ನಾಲ್ಕು ಹೊಸ ಕರೋನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಉತ್ತರಕನ್ನಡ ಜಿಲ್ಲೆಯ ಕೋವಿಡ್ ಸಂಖ್ಯೆ ಏರಿದೆ. ಜಿಲ್ಲೆಯ ಸಿದ್ಧಾಪುರ ಮತ್ತು ಅಂಕೋಲಾಗಳಲ್ಲಿ ಪತ್ತೆಯಾಗದ ಕರೋನಾ ಪ್ರಕರಣಗಳ ಮಧ್ಯೆ ಇಂದು ಸಿದ್ಧಾಪುರದ ಒಬ್ಬ ವ್ಯಕ್ತಿಯಲ್ಲಿ ಕರೋನಾ ದೃಢ ಪಡುವ ಮೂಲಕ ಸಿದ್ಧಾಪುರ ಕರೋನಾ ಮುಕ್ತ ತಾಲೂಕೆಂಬ ಹೆಗ್ಗಳಿಕೆಯಿಂದ ದೂರಾದಂತಾಗಿದೆ.
ಸಿದ್ಧಾಪುರ ಮೂಲದ ಮಹಾರಾಷ್ಟ್ರ ಠಾಣಾದಲ್ಲಿರುತ್ತಿದ್ದ ಕುಟುಂಬವೊಂದು ಮೇ 17 ರಂದು ಠಾಣಾದಿಂದ ಹೊರಟು 18 ರಂದು ಶಿರಸಿಯ ನೀಲೇಕಣಿ ತಪಾಸಣಾ ಗೇಟ್ ಬಳಿ ಜಿಲ್ಲಾಡಳಿತದ ವಶಕ್ಕೆ ಸಿಕ್ಕಿದ್ದರು.

ಈ ಕುಟುಂಬ ಮೇ 19 ರಂದು ಕಾವಂಚೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಾರಂಟೈನ್ ಆಗಿತ್ತು. ಮೂರು ಮಕ್ಕಳ ಜೊತೆಗಿನ ಈ ಕುಟುಂಬ ಕಿ.ರಾ.ಚೆ. ವಸತಿ ಶಾಲೆಯ ಒಂದೇ ಕೋಣೆಯಲ್ಲಿ ಕಾರಂಟೈನ್ ಆಗಿತ್ತು. ಇವರ ಗಂಟಲು ದೃವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಕೋವಿಡ್ ಸೋಂಕು ದೃಢವಾದ ಈ ವ್ಯಕ್ತಿ ತನ್ನ ಕುಟುಂಬದೊಂದಿಗೆ ಮಹಾರಾಷ್ಟ್ರದಿಂದ ಬಾಡಿಗೆ ಕಾರಿನಲ್ಲಿ ಹುಟ್ಟೂರು ಪ್ರವೇಶಿಸಿತ್ತು.
ಇವರನ್ನು ಸಿದ್ಧಾಪುರಕ್ಕೆ ತಲುಪಿಸಿದ ಕಾರಿನ ಚಾಲಕ ಮರಳಿ ಠಾಣಾ ತಲುಪಿದ್ದಾನೆ. ಈ ಕುಟುಂಬದ 5 ಜನರ ಗಂಟಲುದೃವದ ಮಾದರಿಗಳಲ್ಲಿ ಕುಟುಂಬದ ಮುಖ್ಯಸ್ಥರ ಮಾದರಿಯಲ್ಲಿ ಕರೋನಾ ಸೋಕು ದೃಢಪಟ್ಟಿದ್ದು ಉಳಿದ ನಾಲ್ವರ ವರದಿಗೆ ಕಾಯಲಾಗುತ್ತಿದೆ. ಸಿದ್ಧಾಪುರದ ಗ್ರಾಮೀಣ ಪ್ರದೇಶದ ಈ ಕುಟುಂಬ ಮಹಾರಾಷ್ಟ್ರದಿಂದ ಮರಳಿ ಮನೆ ತಲುಪುವ ಮಾರ್ಗ ಮಧ್ಯದಲ್ಲಿ ಜಿಲ್ಲಾಡಳಿತದ ಕೈ ಗೆ ಸಿಕ್ಕು ಸಂಭಾವ್ಯ ಅಪಾಯವನ್ನು ತಪ್ಪಿಸಿದಂತಾಗಿದೆ.

ಕಾರಂಟೈನ್ ನಲ್ಲಿರುವ ಅನೇಕರಲ್ಲಿ ಕೋವಿಡ್ ಶಂಕೆ, ಉತ್ತರಕನ್ನಡ-ಶಿವಮೊಗ್ಗ ಗಳಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳು
ಉತ್ತರಕನ್ನಡ ಜಿಲ್ಲೆಯ 6 ಸಾವಿರ ಜನರು ಸೇರಿ ಕರ್ನಾಟಕದೆಲ್ಲೆಡೆ ಕಾರಂಟೈನ್ ಆಗಿರುವ ಲಕ್ಷಾಂತರ ಜನರಲ್ಲಿ ಸಾವಿರಾರು ಜನರು ಕರೋನಾ ಕ್ಕೆ ತುತ್ತಾಗಿರುವ ಬಗ್ಗೆ ಈಗ ಶಂಕೆ ವ್ಯಕ್ತವಾಗಿದೆ.
ಮೊದಮೊದಲು ಉತ್ತರ ಕನ್ನಡ ಜಿಲ್ಲೆಗೆ ಬಂದ ಹೊರದೇಶಗಳ ಉದ್ಯೋಗಿಗಳು ಕೋವಿಡ್ ಪ್ರಾರಂಭಕ್ಕೆ ಕಾರಣವಾದರು. ನಂತರ ತಬ್ಲಿಘಿಗಳ ಓಡಾಟ,ಒಡನಾಟದಿಂದ ಕರೋನಾ ದೇಶ ಸುತ್ತತೊಡಗಿತ್ತು.
ಈಗ ಮಹಾರಾಷ್ಟ್ರ,ಗುಜರಾತ್, ಚಿನ್ನೈಗಳಿಂದ ಬಂದ ಜನರು ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಕರೋನಾ ಹಬ್ಬಿಸುತಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ದೃಢಪಟ್ಟ ಎರಡು ಕರೋನಾ ಪಾಸಿಟಿವ್ ಪ್ರಕರಣಗಳು ಮಹಾರಾಷ್ಟ್ರದಿಂದ ಬಂದ ವ್ಯಕ್ತಿಗಳ ಪ್ರಕರಣಗಳು. ಮಹಾರಾಷ್ಟ್ರದಿಂದ
ಶಿವಮೊಗ್ಗ ಜಿಲ್ಲೆ ಸೊರಬಾ ಕ್ಕೆ ಹೊರಟಿದ್ದ ಈ ಕುಟುಂಬವನ್ನು ಪೊಲೀಸರು ಯಲ್ಲಾಪುರದಲ್ಲಿ ತಡೆದು ಕಾರಂಟೈನ್ ಮಾಡಿದ್ದರು. ಈ ಎರಡೂ ಪ್ರಕರಣಗಳಂತೆ ಉತ್ತರಕನ್ನಡದ 6 ಸಾವಿರ ಕಾರಂಟೈನ್ ಆದ ಜನರು ಹಾಗೂ ರಾಜ್ಯದ ಲಕ್ಷಾಂತರ ಜನರಲ್ಲಿ ಕರೋನಾ ಕಾಣಿಸಿಕೊಳ್ಳುವ ಅಪಾಯದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ.
ಬಸ್ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡುವುದು, ಹೊರ ರಾಜ್ಯಗಳಿಂದ ಬಂದ ಜನರ ತಪಾಸಣೆ, ಕಾರಂಟೈನ್ ಕ್ರಮಗಳ ನಡುವೆ ನುಸುಳುಕೋರರು ಸುದ್ದಿಮಾಡದೆ ಗ್ರಾಮ, ನಗರ ಸೇರಿಕೊಂಡಿರುವ ಅನೇಕ ಉದಾಹರಣೆಗಳೂ ಇವೆ.
ಈ ವಿಶೇಶ ಪ್ರಕರಣಗಳ ಹಿನ್ನೆಲೆಯಲ್ಲಿ ಒಬ್ಬೊಬ್ಬ ವ್ಯಕ್ತಿ ನೂರಾರು ಜನರಿಗೆ ಕರೋನಾ ವಿಸ್ತರಿಸುವ ಅಪಾಯವಿರುವುದರಿಂದ ಸಾರ್ವಜನಿಕರು ಓಡಾಟ, ವಹಿವಾಟು ನಿಲ್ಲಿಸಿ ಮನೆಯಲ್ಲೇ ಉಳಿಯುವುದು ಮತ್ತು ಕರೋನಾ ನಿರ್ಬಂಧದ ಉಪಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸಂಕಷ್ಟದಿಂದ ಪಾರಾಗಬೇಕಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *