crime update of sirsi-ಶಿರಸಿ ಅಪರಾಧ ಸುದ್ದಿ- ಕಾಮದಾಟದಿಂದ ಕಾಂಗ್ರೆಸ್ ಗೆ ತಲೆನೋವಾದ ಅತ್ಯಾಚಾರಿ, ಕರೋನಾ: ಮಾಹಿತಿ ಮುಚ್ಚಿಟ್ಟಿದ್ದಕ್ಕೆ ಪ್ರಕರಣ

ಕಾರವಾರದ ಕರೋನಾ ಸೋಂಕಿತೆಯನ್ನು
ಶಿರಸಿಯಿಂದ ಕಾರವಾರಕ್ಕೆ ಕರೆದೊಯ್ದು ತಲುಪಿಸಿದ ಮುಜಾಮಿಲ್ ನಜೀರ್ ಶೇಖ್ ಎನ್ನುವವರ ಮೇಲೆ ಪೊಲೀಸ್ ದೂರು ದಾಖಲಾಗಿದೆ. ಈ ಶೇಖ್ ಕತಾರ್ ದೇಶದಿಂದ ಹುಬ್ಬಳ್ಳಿಗೆ ಬಂದು ಅಲ್ಲಿಂದ ಶಿರಸಿಯಲ್ಲಿಓಡಾಡಿ, ನಂತರ ಕಾರವಾರಕ್ಕೆ ತೆರಳಿದ್ದರು. ಈ ಮಹಿಳೆ ಶಿರಸಿಯಲ್ಲಿ ಸುತ್ತಾಡಲು ಹಾಗೂ ಕಾರವಾರಕ್ಕೆ ತೆರಳಲು ನೆರವಾಗಿ ಈ ಮಾಹಿತಿಯನ್ನು ಸ್ಥಳೀಯ ಆಡಳಿತಕ್ಕೆ ತಿಳಿಸದ ಹಿನ್ನೆಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಅತ್ಯಾಚಾರಿ ನಗರಸಭೆ ಸದಸ್ಯನ ಕಾಮಪ್ರಕರಣ-
ಶಿರಸಿಯ ನಗರಸಭೆ ಸದಸ್ಯ ಯಶವಂತ್ ಮರಾಠೆ ಅತ್ಯಾಚಾರದ ಆರೋಪದ ಮೇಲೆ ಕಳೆದ ವಾರ ಶಿರಸಿಯಲ್ಲಿ ಬಂಧನಕ್ಕೊಳಗಾಗಿದ್ದಾನೆ. ಇದೇ ವ್ಯಕ್ತಿ ಅಪ್ರಾಪ್ತ ಬಾಲಕಿಯರನ್ನು ಬಳಸಿಕೊಂಡು ಅವರ ಛಾಯಾ ಚಿತ್ರಗಳನ್ನು ಬಳಸಿ ಲಾಭಮಾಡಿಕೊಳ್ಳುತಿದ್ದ ಎನ್ನುವ ಆರೋಪ ಸಾಬೀತು ಮಾಡಲು ಈ ಮರಾಠೆಯ ಘನಂಧಾರಿ ಕೆಲಸದ ಫೋಟೋ ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಯಶವಂತ್ ಮರಾಠೆಯ ಕಾಮದಾಟಕ್ಕೆ ಸಾಕ್ಷಿ ಒದಿಸಲಾಗಿದೆ.

ವಿಪರ್ಯಾಸವೆಂದರೆ…. ಯಶವಂತ್ ಮರಾಠೆ ತನ್ನ ತಪ್ಪಿಗಾಗಿ ಕೋರ್ಟ್‍ನಿಂದ ಶಿಕ್ಷೆ ಪಡೆಯುತ್ತಾನೆ. ಆದರೆ ಈ ವ್ಯಕ್ತಿಯ ಅಪರಾಧ ಸಾಬೀತಿ ಮಾಡಲು ಹೋಗಿ ಇವನ ಪೋಟೋದೊಂದಿಗೆ ಅಪ್ರಾಪ್ತಬಾಲಕಿಯ ಫೋಟೋ ಪ್ರದರ್ಶಿಸಿದ ಆರೋಪದಡಿ ಫೋಟೋ ಅಪ್ಲೋಡ್ ಮಾಡಿದವನೂ ಶಿಕ್ಷೆಗೊಳಗಾಗುತ್ತಾನೆ. ಈ ಯಶವಂತ್ ಮರಾಠೆಯ ಬಾರಾ ಬಾನಗಡಿ ಅಮಾಯಕರಿಗೆ, ಕಾಂಗ್ರೆಸ್ ಪಕ್ಷಕ್ಕೂ ಈಗ ತಲೆನೋವಾಗಿ ಪರಿಣಮಿಸಿದೆ.

(related ) ಕಾರವಾರದ ಕೋವಿಡ್ ಸೋಕಿತೆ ಶಿರಸಿಗೂ ಬಂದಿದ್ದರು!
ಇಂದು ಉತ್ತರಕನ್ನಡ ಜಿಲ್ಲೆಯ ಕರೋನಾ ಸೋಂಕಿತರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ ಕಾರವಾರದ ಕೋವಿಡ್ -19
ಸೋಕಿತ ಇಬ್ಬರಲ್ಲಿ ಒಬ್ಬರು ಮಹಾರಾಷ್ಟ್ರದಿಂದ ಬಂದವರಾಗಿದ್ದರೆ ಇನ್ನೊಬ್ಬರು ಕತಾರ್ ದೇಶದಿಂದ ಬೆಂಗಳೂರು-ಹುಬ್ಬಳ್ಳಿ ಮಾರ್ಗವಾಗಿ ಕಾರವಾರಕ್ಕೆ ಬಂದವರು. ಮಹಾರಾಷ್ಟ್ರದಿಂದ ಬಂದ ಮಹಿಳೆ ರೈಲುಪ್ರಯಾಣದಿಂದ ಕಾರವಾರಕ್ಕೆ ಬಂದವರು. ಇನ್ನೊಬ್ಬರು ಕತಾರ್ ನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಖಾಸಗಿ ಬಸ್ ನಲ್ಲಿ ಹುಬ್ಬಳ್ಳಿ ಅಲ್ಲಿಂದ ಶಿರಸಿ ಮಾರ್ಗವಾಗಿ ಕಾರವಾರಕ್ಕೆ ತೆರಳಿದ್ದವರು. ಈ ಇಬ್ಬರ ಗಂಟಲುದ್ರವ ಪರೀಕ್ಷೆಯ ವರದಿ ಇಂದು ಬಂದಿದ್ದು ಈ ಇಬ್ಬರಲ್ಲೂ ಕರೋನಾ ದೃಢಪಟ್ಟಿದೆ. ವಿದೇಶದಿಂದ ಬಂದ ಮಹಿಳೆ ಹುಬ್ಬಳ್ಳಿ-ಶಿರಸಿಗಳಲ್ಲೆಲ್ಲಾ ಸುತ್ತಾಡಿ ಕಾರವಾರ ಸೇರಿದ್ದು ಫಜೀತಿಗೆ ಕಾರಣವಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *