ಮತ್ತೆ ಬರುತಿದ್ದಾರೆ ಶಂಕರ್!

ಶಂಕರ್ ಸಿ.ಎ. 30 ವರ್ಷಗಳ ಹಿಂದಿನ ದೊಡ್ಡ ಹೆಸರು.

ಸಿದ್ಧಾಪುರದಂಥ ಸಾಂಪ್ರದಾಯಿಕ ಹಳ್ಳಿಯಂಥ ತಾಲೂಕಿನಲ್ಲಿ ಆ ಕಾಲದಲ್ಲೇ ಡಿ.ಎಸ್.ಎಸ್. ನ ಪ್ರತಿಭಟನೆಗಳು ನಡೆಯುತಿದ್ದವು. ಚಳವಳಿ ಕಾವೇರುತಿದ್ದ ಕಾಲದಲ್ಲಿ ಹೋರಾಟವನ್ನು ಹತ್ತಿಕ್ಕಿದ ರಾಮಕೃಷ್ಣ ಹೆಗಡೆಯಂಥ ಮುಖ್ಯಮಂತ್ರಿಯವರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟಿಸಿದ್ದ ಯುವಕ ಸಿ.ಎ.ಶಂಕರ್ ಈ ಹೋರಾಟ, ಚಳವಳಿಗಳಿಂದ ಹಿಂದೆ ಸರಿದು ಶಿಕ್ಷಕರಾಗಿಬಿಟ್ಟಿದ್ದರು.

ಶಿಕ್ಷಕರಾಗುವ ಮೊದಲು ಪ್ರಗತಿಪರರ ವೇದಿಕೆ ಕಟ್ಟಿಕೊಂಡು ಪಟ್ಟಭದ್ರರಿಗೆ ಸಿಂಹಸ್ವಪ್ನವಾಗಿರುತಿದ್ದ ಕಾವಂಚೂರು ಹಿತ್ತಲಕೊಪ್ಪದ ಶಂಕರ್ ನೀನಾಸಂಗೆ ನಡೆದರು. ನೀನಾಸಂ ನಲ್ಲಿ ಕೂಡಾ ಬಂಡಾಯದಿಂದಲೇ ಹೆಸರಾಗಿದ್ದ ಶಂಕರ್ ಸಿದ್ಧಾಪುರದಲ್ಲಿ ಮುನಿವೆಂಕಟಪ್ಪನವರ ನೇತೃತ್ವದಲ್ಲಿ ನಡೆದ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನಕ್ಕೂ ದುಡಿದಿದ್ದರು.

ಡಿ.ಎಸ್.ಎಸ್. ನ ಹಾಡು, ರೈತ ಸಂಘ, ಪ್ರಗತಿಪರ ಸಂಘಟನೆಗಳ ಹೋರಾಟ, ಚಳವಳಿಯ ಎಳೆಯ ಹುಡುಗನಾಗಿದ್ದ ಶಂಕರ್ ಸರಳವಿವಾಹದ ಮೂಲಕ 30 ವರ್ಷಗಳ ಹಿಂದೇ ಸುದ್ದಿಮಾಡಿದ್ದರು. ಹೀಗೆ ಬಂಡಾಯ, ಹೋರಾಟಗಳ ಮೂಲಕ ಜನಪರವಾಗಿ, ಜನಸಾಮಾನ್ಯನ ಪರವಾಗಿ ಧ್ವನಿ ಮಾಡುತಿದ್ದ ಶಂಕರ್ ಶಿಕ್ಷಕರಾಗಿ ತೆರೆಯಿಂದ ಮರೆಯಾಗಿದ್ದರು.

ಮೊನ್ನೆ ಜುಲೈ ಕೊನೆಗೆ ಶಂಕರ್ ಸಾಗರದಲ್ಲಿ ನಿವೃತ್ತರಾದರು. ಸಾಗರದಿಂದ ಸೇವೆಪ್ರಾರಂಭವಾಗಿ ಸಾಗರದಲ್ಲಿ ನಿವೃತ್ತರಾಗುವ ನಡುವಿನ ಻ಅವಧಿಯಲ್ಲಿ ಶಂಕರ್ ಸಿ.ಎ. ದಾಂಡೇಲಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. ಸೇವೆಯಲ್ಲಿನ ಕಟ್ಟುಪಾಡುಗಳ ನಡುವೆ ದೀನ, ದಲಿತರು,ದುರ್ಬಲವರ್ಗದವರು, ಅಸಹಾಯಕರ ನೆರವಿಗೆ ಧಾವಿಸುತಿದ್ದ ಶಂಕರ್ ಈಗ ತಮ್ಮ ಸೇವೆಯಿಂದ ನಿವೃತ್ತರಾಗಿದ್ದು ಮತ್ತೆ ಸಿದ್ಧಾಪುರ, ಉತ್ತರ ಕನ್ನಡದಲ್ಲಿ ದಲಿತಸಂಘರ್ಷ ಸಮೀತಿ,ಪ್ರಗತಿಪರರ ಒಕ್ಕೂಟ ಕಟ್ಟುವ ಉತ್ಸಾಹದಲ್ಲಿದ್ದಾರೆ.

ಕಲೆ,ಸಂಸ್ಕೃತಿ, ಸಾಹಿತ್ಯ,ಸಾಮಾಜಿಕ ಬದುಕಿನ ನಿರಂತರ ಹೋರಾಟಗಾರರಾಗಿರುವ ಶಂಕರ್ ಅವರಿಗೆ ಈಗ ಸರ್ಕಾರ, ವ್ಯವಸ್ಥೆಯ ಬಂಧನ ಕಳಚಿಕೊಂಡ ಻಻ಅನುಭವ. ಅವರ ಆಗಮನ,ಅಭಿಲಾಷೆ, ಹೋರಾಟದ ಬದ್ಧತೆಗಳನ್ನು ಕಂಡಿರುವ ಻ಅವರ ಻ಅನೇಕ ಸ್ನೇಹಿತರು ಅವರ ಸೇವಾ ನಿವೃತ್ತಿಗೆ ಶುಭಕೋರಿ ಕಾಲುಶತಮಾನದ ನಂತರದ ಹೋರಾಟದ ಬದುಕಿಗೆ ಶುಭ ಹಾರೈಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು ಥಳಿಸಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದ ಮಾಹಿತಿ ಬಹಿರಂಗವಾಗಿದೆ. ನಾಣಿಕಟ್ಟಾ ಪ್ರದೇಶದಲ್ಲಿ ಆಗಂತುಕರು ಕಡವೆಯನ್ನು ಕೊಂದು ಪರಾರಿಯಾಗಿದ್ದರು. ಈ ಭೇಟೆ ಪ್ರಕರಣದ ಜಾಡು ಹಿಡಿದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *